Asianet Suvarna News Asianet Suvarna News

2022ರಲ್ಲಿ ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡಿದ Astro remedies ಇಲ್ಲಿವೆ!

ಉತ್ತಮ ಆರೋಗ್ಯದಿಂದ ಉತ್ತಮ ಉದ್ಯೋಗದವರೆಗೆ, ಪ್ರತಿಯೊಬ್ಬರೂ ಜೀವನದಲ್ಲಿ ಎಲ್ಲ ವಿಷಯಗಳನ್ನು ಉತ್ತಮವಾಗಿ ಹೊಂದಲು ಬಯಸುತ್ತಾರೆ. ಇದಕ್ಕಾಗಿ, 2022ರಲ್ಲಿ ಅತ್ಯಂತ ಪರಿಣಾಮಕಾರಿ ಫಲಿತಾಂಶ ನೀಡಿದ ಜ್ಯೋತಿಷ್ಯ ಪರಿಹಾರಗಳು ಇಲ್ಲಿವೆ. ಇದನ್ನು ನೀವು ಕೂಡಾ ಪ್ರಯತ್ನಿಸಬಹುದು.

From good job to early marriage Most Effective Astro Remedies 2022 skr
Author
First Published Nov 29, 2022, 12:55 PM IST

ಈ ವರ್ಷ, ನೀವು ಅನೇಕ ಜನರ ಅದೃಷ್ಟವನ್ನು ಬದಲಿಸಿದ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು. ಶ್ರೀಮಂತರಾಗುವುದರಿಂದ ಉದ್ಯೋಗದಲ್ಲಿ ಬಡ್ತಿ ಪಡೆಯುವವರೆಗೆ, ಶೀಘ್ರ ವಿವಾಹದಿಂದ ಅಡಚಣೆಗಳಿಂದ ಮುಕ್ತರಾಗಿ ಆರೋಗ್ಯ ಗಳಿಸುವವರೆಗೂ 2022ರ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ವರ್ತಿಸಿದ ಜ್ಯೋತಿಷ್ಯ ಪರಿಹಾರಗಳನ್ನು ಇಲ್ಲಿ ಕೊಡಲಾಗಿದೆ. 

ಶ್ರೀಮಂತರಾಗಲು ಜ್ಯೋತಿಷ್ಯ ಪರಿಹಾರಗಳು(astro remedies for money)
ಜನರು ಯಾವಾಗಲೂ ತಮ್ಮ ಸಂಪತ್ತನ್ನು ಹೆಚ್ಚಿಸಲು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ ಮತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಿಕ್ಕ ಸಿಕ್ಕ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಹಲವು ಬಾರಿ ಹಣವಿದ್ದರೂ ಅನುಪಯುಕ್ತ ಕೆಲಸಗಳಲ್ಲಿ ವ್ಯಯಿಸಿ ಆರ್ಥಿಕ ಸ್ಥಿತಿ ಕ್ರಮೇಣ ಹದಗೆಡಲಾರಂಭಿಸುತ್ತದೆ. ಹೀಗಾಗಿ, ಹಣದ ಹರಿವು ಹೆಚ್ಚಿಸಲು ಜನರು ಕಠಿಣ ಪರಿಶ್ರಮದ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಟ್ರೈ ಮಾಡಬಹುದು. 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಮನೆಯಲ್ಲಿ ಶ್ರೀ ಯಂತ್ರವನ್ನು ಇರಿಸಿದರೆ ಮತ್ತು ಮನೆಯ ಕಮಾನುಗಳಲ್ಲಿ ಕೆಲವು ಕರ್ಪೂರವನ್ನು ಇರಿಸಿದರೆ, ಮನೆಯಲ್ಲಿ ಎಂದೂ ಹಣದ ಕೊರತೆ ಇರುವುದಿಲ್ಲ.

ಉತ್ತಮ ಆರೋಗ್ಯಕ್ಕಾಗಿ ಜ್ಯೋತಿಷ್ಯ ಪರಿಹಾರಗಳು(astro remedies for good health)
ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಆಹಾರಕ್ರಮ ಎಷ್ಟು ಮುಖ್ಯವೋ, ಕೆಲವು ಸುಲಭವಾದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸುವುದು ಅಷ್ಟೇ ಮುಖ್ಯ. ಈ ವರ್ಷ, ನೀವೆಲ್ಲರೂ ಕೆಲವು ಸುಲಭವಾದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಿದ್ದೀರಿ, ಅದರಲ್ಲಿ ಧ್ಯಾನ ಮಾಡುವುದು ಉತ್ತಮ ಪರಿಹಾರವಾಗಿ ಕಂಡುಬಂದಿದೆ.

Durva Vastu: ಮನೆಯಲ್ಲಿ ದೂರ್ವೆ ಸಸ್ಯ ಯಾವ ದಿಕ್ಕಲ್ಲಿದ್ದರೆ ಸಮೃದ್ಧಿ?

ನೀವು ಶಾಂತಿಯುತ ಸ್ಥಳದಲ್ಲಿ ಕುಳಿತು ಧ್ಯಾನಿಸಬೇಕು ಮತ್ತು ನಿಮ್ಮ ಗುರಿಗಳ ಬಗ್ಗೆ ಮನನ ಮಾಡಿಕೊಳ್ಳಬೇಕು. ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯು ಹರಿಯುವಂತೆ ನಿಮ್ಮ ತಲೆಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ಮಲಗುವುದು ಸಹ ಮುಖ್ಯವಾಗಿದೆ. ನೀವು ಮಲಗುವಾಗ ನಿಮ್ಮ ತಲೆಯನ್ನು ದಕ್ಷಿಣಕ್ಕೆ ಅಥವಾ ಪೂರ್ವಕ್ಕೆ ಮತ್ತು ಪಾದಗಳನ್ನು ಉತ್ತರಕ್ಕೆ ಹಾಗೂ ಪಶ್ಚಿಮಕ್ಕೆ ಇರಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಮತ್ತು ವಿಜ್ಞಾನ ಎರಡರ ಪ್ರಕಾರ, ಇವುಗಳು ನಿಮಗೆ ಪರಿಣಾಮಕಾರಿ ಪರಿಹಾರಗಳೆಂದು ಸಾಬೀತುಪಡಿಸಬಹುದು.

ಸಂತೋಷ ಮತ್ತು ಸಮೃದ್ಧಿಗಾಗಿ ಜ್ಯೋತಿಷ್ಯ ಪರಿಹಾರಗಳು(astro remedies for prosperity)
ಸಂತೋಷ ಮತ್ತು ಸಮೃದ್ಧಿಗಾಗಿ ನೀವು ಕೆಲವು ಸುಲಭವಾದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು. ಸಂತೋಷ ಮತ್ತು ಸಮೃದ್ಧಿಗಾಗಿ, ಪ್ರತಿ ಸೋಮವಾರದಂದು ಶಿವಲಿಂಗಕ್ಕೆ ನೀರನ್ನು ಅರ್ಪಿಸಿ. ಮಂಗಳವಾರ, ಹನುಮನಿಗೆ ಸುಂದರ ಕಾಂಡವನ್ನು ಪಠಿಸಿ. ಬುಧವಾರ ಗಣಪತಿಗೆ 21 ದೂರ್ವೆಯನ್ನು ಅರ್ಪಿಸಿ ಮತ್ತು ಗುರುವಾರ ಬಾಳೆಗಿಡಕ್ಕೆ ನೀರನ್ನು ಅರ್ಪಿಸಿ. ಶುಕ್ರವಾರ ವೈಭವ ಲಕ್ಷ್ಮಿ ಮಾತೆಯನ್ನು ಪೂಜಿಸಿ ಮತ್ತು ಮಾತಾ ಲಕ್ಷ್ಮಿಗೆ ಕೆಂಪು ಹೂವುಗಳನ್ನು ಅರ್ಪಿಸಿ. ಶನಿವಾರದಂದು ಶನಿ ದೇವರಿಗೆ ಎಣ್ಣೆಯನ್ನು ಅರ್ಪಿಸಿ ಮತ್ತು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ದೇಹವನ್ನು ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿರಿಸಲು, ಭಾನುವಾರದಂದು ಸೂರ್ಯನಿಗೆ ಅರ್ಘ್ಯ ಅರ್ಪಿಸಿ. ಇಂತಹ ಕೆಲವು ಸರಳ ಜ್ಯೋತಿಷ್ಯ ಪರಿಹಾರಗಳು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. 

ಈ ರಾಶಿಗಳಿಗೆ Difficult December, ಈ ಪರಿಹಾರಗಳ ಮೂಲಕ ಸಮಸ್ಯೆಯಿಂದ ಬಚಾವಾಗಿ..

ಮದುವೆಗೆ ಜ್ಯೋತಿಷ್ಯ ಪರಿಹಾರಗಳು(astro remedies for marriage)
ಕೆಲವೊಮ್ಮೆ ಮದುವೆಯಲ್ಲಿ ಅಡೆತಡೆಗಳು ಹೆಚ್ಚಿರುತ್ತವೆ. ಸುಖಾಸುಮ್ಮನೆ ವಿಳಂಬವಾಗುತ್ತಿರುತ್ತದೆ. ವಾಸ್ತವವಾಗಿ, ಇದಕ್ಕೆ  ಜ್ಯೋತಿಷ್ಯ ಕಾರಣವಿರಬಹುದು. ನಿಮ್ಮ ಮದುವೆಯೂ ವಿಳಂಬವಾಗುತ್ತಿದ್ದರೆ ನೀವು ಅರಿಶಿನದ ಕೆಲವು ಸುಲಭ ಪರಿಹಾರಗಳನ್ನು ಪ್ರಯತ್ನಿಸಬಹುದು.

ಈ ಪರಿಹಾರದ ಪ್ರಕಾರ, ನೀವು ಹಳದಿ ಬಟ್ಟೆಯನ್ನು ತೆಗೆದುಕೊಂಡು 7 ವೀಳ್ಯದೆಲೆಗಳನ್ನು ಹಾಕಿ, ಅದರೊಂದಿಗೆ 7 ಗಂಟುಗಳನ್ನು ಹಾಕಿ. ಕೆಂಪು ದಾರ, ಸ್ವಲ್ಪ ಬೆಲ್ಲ ಮತ್ತು ಬೇಳೆಯನ್ನು ತೆಗೆದುಕೊಂಡು ಅದನ್ನು ಹಳದಿ ಬಟ್ಟೆಯಲ್ಲಿ ಹಾಕಿ. ಈ ಬಟ್ಟೆಯಲ್ಲಿ 7 ಹಳದಿ ಹೂಗಳನ್ನು ಹಾಕಿ ಒಂದು ಕಟ್ಟು ಮಾಡಿ. ಈ ಕಟ್ಟನ್ನು ಮಾತಾ ದುರ್ಗೆಯ ಚಿತ್ರದ ಬಳಿ ಇರಿಸಿ. ಒಳ್ಳೆಯ ವರ ಅಥವಾ ವಧು ಸಿಗಲಿ ಎಂದು ಕೋರಿಕೊಳ್ಳಿ. ಅರಿಶಿನದ ಈ ಪರಿಹಾರದಿಂದ, ನೀವು ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಗಳನ್ನು ನೋಡುತ್ತೀರಿ. ಈ ಪರಿಹಾರವು ಅನೇಕ ಜನರಿಗೆ ಪರಿಣಾಮಕಾರಿಯಾಗಿದೆ.

Hanuman Chalisa ಪಠಿಸುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ವೃತ್ತಿಯಲ್ಲಿ ಯಶಸ್ಸು ಪಡೆಯಲು ಮಂತ್ರ(astro remedies for career success)
ನಾವೆಲ್ಲರೂ ನಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಲು ಬಯಸುತ್ತೇವೆ ಮತ್ತು ಇದಕ್ಕಾಗಿ ಕೆಲವು ಸರಳ ಜ್ಯೋತಿಷ್ಯ ಪರಿಹಾರಗಳಿವೆ, ಅದು ನಿಮಗೆ ಸಹ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. 
ನಿತ್ಯವೂ ಸೂರ್ಯನಿಗೆ ನೀರನ್ನು ಅರ್ಪಿಸಿ ಮತ್ತು ತುಳಸಿಗೆ ನೀರನ್ನು ಅರ್ಪಿಸಿ. ಶಿವನಿಗೆ ನೀರನ್ನು ಅರ್ಪಿಸುವಾಗ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ಗುರು ಮಂತ್ರ ಪಠಿಸಿ. ಅಡುಗೆ ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಹಸುವಿಗೆ ತಿನ್ನಿಸಿ. ಈ ಎಲ್ಲ ಸರಳ ಪರಿಹಾರಗಳು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಉದ್ಯೋಗವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

Follow Us:
Download App:
  • android
  • ios