Asianet Suvarna News Asianet Suvarna News

Hanuman Chalisa ಪಠಿಸುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ತುಳಸಿದಾಸ ರಚಿತ ಹನುಮಾನ್ ಚಾಲೀಸಾ ಪರಮ ಪವಿತ್ರ ಮಂತ್ರ. ಇದರ ಪಠಣ ಆಂಜನೇಯನನ್ನು ಒಲಿಸಲು ಅತ್ಯಂತ ಶಕ್ತಿಶಾಲಿಯಾಗಿದೆ. ಆದರೆ, ಹನುಮಾನ್ ಚಾಲೀಸಾ ಓದುವಾಗ ಕೆಲ ತಪ್ಪುಗಳನ್ನು ಮಾಡುವುದರಿಂದ ಯೋಜಿತ ಫಲ ದಕ್ಕದೆ ಹೋಗಬಹುದು. ಆ ತಪ್ಪುಗಳು ಯಾವೆಲ್ಲ ನೋಡೋಣ. 

While reciting Hanuman Chalisa do not commit these mistakes skr
Author
First Published Nov 29, 2022, 11:27 AM IST

ಹನುಮ ಜಯಂತಿಗೆ ಇನ್ನೊಂದು ವಾರವಿದೆ. ಹನುಮಂತನನ್ನು ಪೂಜಿಸುವವನು ಸಮೃದ್ಧಿ, ಸಂಪತ್ತು, ಸಾಮರಸ್ಯ ಮತ್ತು ಸಕಾರಾತ್ಮಕ ಶಕ್ತಿಯಿಂದ ಆಶೀರ್ವದಿಸಲ್ಪಡುತ್ತಾನೆ. ಹೀಗಾಗಿ, ಡಿಸೆಂಬರ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬೇಗ ಹನುಮನನ್ನು ಒಲಿಸಿಕೊಳ್ಳಬಹುದು. ಆತನನ್ನು ಪೂಜಿಸುವುದರಿಂದ ಎಲ್ಲ ಇಷ್ಟಾರ್ಥಗಳು ನೆರವೇರುತ್ತದೆ ಮತ್ತು ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಹನುಮಾನ್ ಚಾಲೀಸಾ(Hanuman Chalisa)ವನ್ನು ತುಳಸೀದಾಸರು ರಚಿಸಿದ್ದಾರೆ. ಇದರ ಪಠಣದಿಂದ ಆಂಜನೇಯನ ಕೃಪಾಶೀರ್ವಾದ ಸದಾ ಕಾಯುತ್ತದೆ ಎಂದು ಸ್ವತಃ ಅವರೇ ಹೇಳಿದ್ದಾರೆ. 

ನಿಯಮಿತವಾಗಿ ಚಾಲೀಸಾವನ್ನು ಪಠಿಸುವುದರಿಂದ ದೇವರು ಪ್ರಸನ್ನನಾಗುತ್ತಾನೆ ಮತ್ತು ಎಲ್ಲ ತೊಂದರೆಗಳನ್ನು ತೊಡೆದುಹಾಕುತ್ತಾನೆ ಎಂದು ನಂಬಲಾಗಿದೆ. ಹನುಮಾನ್ ಚಾಲೀಸಾ ಸುಮಾರು 40 ಚೌಪಾಯಿಗಳನ್ನು ಒಳಗೊಂಡಿದೆ. ವ್ಯಕ್ತಿಯು ಹನುಮಾನ್ ಚಾಲೀಸಾವನ್ನು ಪಠಿಸುವಾಗ ಎಲ್ಲ ನಿಯಮಗಳನ್ನು(rules) ಅನುಸರಿಸದಿದ್ದರೆ, ಅವನು ಪೂಜೆಯ ಪೂರ್ಣ ಫಲಿತಾಂಶವನ್ನು ಪಡೆಯುವುದಿಲ್ಲ. ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವಾಗ ನೀವು ಯಾವೆಲ್ಲ ತಪ್ಪುಗಳನ್ನು ತಪ್ಪಿಸಬೇಕು ಎಂದು ತಿಳಿಸುತ್ತೇವೆ.

1. ಮಧ್ಯದಿಂದ ಓದಬೇಡಿ
ಚಾಲೀಸಾವನ್ನು ಅರ್ಧದಿಂದ ಪಠಿಸಬಾರದು. ನೀವು ಹನುಮಾನ್ ಚಾಲೀಸಾವನ್ನು ಓದಲು ಹೊರಟಿದ್ದರೆ, ಅದನ್ನು ಸಂಪೂರ್ಣವಾಗಿ ಕ್ರಮಬದ್ಧವಾಗಿ ಆರಂಭದಿಂದ ಕೊನೆಯ ತನಕ ಓದಿದ ನಂತರವೇ ನೀವು ಆ ಸ್ಥಳದಿಂದ ಎದ್ದೇಳಬೇಕು. ಯಾವುದೇ ಮಧ್ಯಮ ಪದ್ಯದಿಂದ ಮಂತ್ರ ಪಠಿಸಬೇಡಿ.

2. ಸ್ವಚ್ಛ ದೇಹ ಮತ್ತು ಮನಸ್ಸಿನೊಂದಿಗೆ ಪಠಿಸಿ
ನೀವು ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದಾದರೆ, ಶುದ್ಧ ದೇಹ ಮತ್ತು ಮನಸ್ಸಿನಿಂದ(clean body and mind) ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸುವ ಮೂಲಕ ಶ್ಲೋಕ ಆರಂಭಿಸಿ. ಚಾಲೀಸಾ ಪಠಣ ಮಾಡುವಾಗ ಮನಸ್ಸಿನಲ್ಲಿ ಬೇಡದ ಯೋಚನೆಗಳು ಸಲ್ಲ. ಹಾಗೆಯೇ ತಾಮಸಿಕ ಆಹಾರ ಹಾಗೂ ಮದ್ಯ ಸೇವಿಸಿ ಹನುಮಾನ್ ಚಾಲೀಸಾ ಪಠಣ ಮಾಡಬೇಡಿ. 

ಈ ರಾಶಿಗಳಿಗೆ Difficult December, ಈ ಪರಿಹಾರಗಳ ಮೂಲಕ ಸಮಸ್ಯೆಯಿಂದ ಬಚಾವಾಗಿ..

3. ಅನಾವಶ್ಯಕ ಜಗಳ ಬೇಡ
ನೀವು ಹನುಮಾನ್ ಚಾಲೀಸಾವನ್ನು ಪಠಿಸುವಿರಾದರೆ ಯಾವುದೇ ದುರ್ಬಲ ವ್ಯಕ್ತಿಯನ್ನು ಹಿಂಸಿಸಬಾರದು ಮತ್ತು ವ್ಯರ್ಥವಾಗಿ ಯಾರೊಂದಿಗೂ ಜಗಳವಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಜೊತೆಗೆ ಯಾರನ್ನೂ ನಿಂದಿಸಬಾರದು ಮತ್ತು ಯಾರಿಗೂ ಕೆಟ್ಟ ಪದಗಳನ್ನು ಬಳಸಬಾರದು.

4. ಅನೈತಿಕ ಸಂಬಂಧ ಸಲ್ಲ
ನೀವು ವಿವಾಹಿತರಾಗಿದ್ದರೆ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರೆ, ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆ ಯಾರೊಂದಿಗೂ ನೀವು ಸಂಬಂಧವನ್ನು ಹೊಂದಲು ಯೋಚಿಸಬಾರದು. ಹೀಗೆ ಮಾಡುವವರಿಗೆ ಹನುಮಾನ್ ಚಾಲೀಸಾದ ಶುಭ ಫಲಗಳು ಸಿಗುವುದಿಲ್ಲ.

5. ಬಡವರು ಮತ್ತು ಪ್ರಾಣಿಗಳನ್ನು ಹಿಂಸಿಸಬಾರದು
ಮನೆಯ ಸಮೃದ್ಧಿಗಾಗಿ ನೀವು ಹನುಮಾನ್ ಚಾಲೀಸಾವನ್ನು ಪಠಿಸುವಾಗ, ಯಾವುದೇ ಪ್ರಾಣಿ ಅಥವಾ ಬಡವರಿಗೆ ತಪ್ಪಾಗಿಯೂ ತೊಂದರೆ ಕೊಡಬೇಡಿ. ಹೀಗೆ ಮಾಡುವುದರಿಂದ ಪೂಜೆಯ ಫಲ ಸಿಗುವುದಿಲ್ಲ ಮತ್ತು ಮನೆಯಲ್ಲಿ ದುಃಖಗಳು ಹೆಚ್ಚುತ್ತವೆ.

6. ಅಪರಾಧ ಮಾಡಬೇಡಿ ಮತ್ತು ಸುಳ್ಳು ಹೇಳಬೇಡಿ
ಯಾರಿಗೋ ಮೋಸ ಮಾಡಿದ್ದರೆ, ಸುಳ್ಳು ಹೇಳುತ್ತಿದ್ದರೆ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಆಗ ಪವಿತ್ರ ಹನುಮಾನ್ ಚಾಲೀಸಾ ಹೇಳುವ ತಪ್ಪು ಮಾಡಬೇಡಿ. ಹೇಳಿದರೂ ನಿಮಗೆ ಫಲ ದಕ್ಕದು. 

ಸಾಲಮುಕ್ತರಾಗಲು 10 vastu ಸಲಹೆಗಳು

7.  ಆತುರ ಪಡಬೇಡಿ
ನೀವು ಹನುಮಾನ್ ಚಾಲೀಸಾವನ್ನು ಪಠಿಸುವಾಗ ಎಂದಿಗೂ ಓದಿ ಮುಗಿಸಲು ಆತುರ ಪಡಬಾರದು ಮತ್ತು ಅದರ ಯಾವುದೇ ಪದ್ಯಗಳನ್ನು ತಪ್ಪಾಗಿ ಉಚ್ಚರಿಸಬಾರದು. ಅದನ್ನು ಯಾವಾಗಲೂ ತಾಳ್ಮೆಯಿಂದ ಓದಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios