ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಜಯವಿಲ್ಲ. ಆದರೂ ಜನ ಮಾತ್ರ ಸುಳ್ಳನ್ನು ಹೇಳದೇ ಇರುವುದಿಲ್ಲ. ರಾಶಿಗೆ ಅನುಗುಣವಾಗಿ ಸುಳ್ಳು ಹೇಳುವ ಗುಣ ಬಂದಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. 12 ರಾಶಿಗಳಲ್ಲಿ 4 ರಾಶಿಗಳ ಮಂದಿ ಹೆಚ್ಚಾಗಿ ಸುಳ್ಳುಗಳನ್ನು ಹೇಳುತ್ತಾರೆ. ಹಾಗಾದರೆ ಆ ರಾಶಿಗಳು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…
ಸಮಯಕ್ಕೆ ತಕ್ಕ ಸುಳ್ಳನ್ನು ಹೇಳ್ಬೋದು. ಆದರೆ, ಬಾಯಿಬಿಟ್ಟರೆ ಸುಳ್ಳೇ ಬರುತ್ತಿದ್ದರೆ ಏನು ಕಥೆ. ಸತ್ಯ ಕಹಿಯಾದರೂ ನಂಬಿಕೆಯನ್ನು ಉಳಿಸಿಕೊಳ್ಳಬಹುದು. ಸುಳ್ಳನ್ನು ಪದೇ ಪದೆ ಹೇಳುತ್ತಿದ್ದರೆ ಆ ನಂಬಿಕೆ ಮಾತ್ರ ಹೊರಟು ಹೋಗುತ್ತದೆ. ಈ ಸುಳ್ಳು ಹೇಳುವುದೂ ಒಂದು ಕಲೆ ಎಂದು ಹೇಳುವುದುಂಟು. ಕೆಲವರು ಇದನ್ನು ಅಭ್ಯಾಸ ಮಾಡಿಕೊಂಡರೆ ಮತ್ತೆ ಕೆಲವರಿಗೆ ಹುಟ್ಟಿನ ರಾಶಿಯಿಂದ ಇಂಥ ನಕಾರಾತ್ಮಕ ಚಿಂತನೆಗಳು ಬರುತ್ತವೆ ಎಂದು ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ.
ಅಂದರೆ, ರಾಶಿಗಳ ಆಧಾರದ ಮೇಲೆ ವ್ಯಕ್ತಿಗಳ ಗುಣ, ಸ್ವಭಾವಗಳು ನಿರ್ಧರಿತವಾಗುತ್ತವೆ. 12 ರಾಶಿಯವರ ಗುಣ, ಸ್ವಭಾಗಳು ಬೇರೆ ಇದ್ದರೂ ಈ ನಾಲ್ಕು ರಾಶಿಯವರು ಅತಿ ಸುಳ್ಳುಗಾರರು ಎಂದು ಹೇಳಲಾಗುತ್ತದೆ. ಆದರೆ, ಈ ರಾಶಿಗಳ ಎಲ್ಲರೂ ಸುಳ್ಳುಗಾರರು ಎಂದು ಸಾರಾಸಗಟಾಗಿ ತೀರ್ಮಾನಿಸಲಾಗದಿದ್ದರೂ ಕೆಲವೊಂದು ಪಾದ, ನಕ್ಷತ್ರಗಳ ಆಧಾರದಲ್ಲಿ ಸುಳ್ಳುಗಾರರಾಗಿರುತ್ತಾರಂತೆ. ಹಾಗಾದರೆ ಆ ನಾಲ್ಕು ರಾಶಿಯವರು ಯಾರು..? ಅವರು ನೀವಾಗಿದ್ದೀರಾ.. ನಿಮ್ಮರಿದ್ದಾರಾ..? ಎಂಬುದನ್ನು ನೋಡೋಣ ಬನ್ನಿ…
ಇದನ್ನು ಓದಿ: ಮನೆಯ ನಕಾರಾತ್ಮಕ ಶಕ್ತಿ ಓಡಿಸಲು 'ವಾಸ್ತು' ಉಪಾಯಗಳು…!
ಮಿಥುನ ರಾಶಿ
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮಿಥುನ ರಾಶಿಯ ವ್ಯಕ್ತಿಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಾಯಲ್ಲಿ ಮುತ್ತುಗಳು ಉದುರಿದಂತೆ ಇವರಿಗೆ ಸುಳ್ಳುಗಳು ಉದುರುತ್ತವೆ. ಪ್ರತಿ ವಿಷಯದಲ್ಲಿಯೂ ಇವರು ನೋಡುವ ನೋಟ, ಮಾಡುವ ಚಿಂತನೆ ಬೇರೆಯೇ ಆಗಿರುತ್ತದೆ. ಹಲವಾರು ಬಾರಿ ಬೇರೆಯವರಿಗೆ ಸುಳ್ಳು ಎನ್ನಿಸಿದ ವಿಷಯಗಳು ಇವರ ದೃಷ್ಟಿಯಲ್ಲಿ ಸತ್ಯವಾಗಿರುತ್ತದೆ. ಮತ್ತು ಅವರು ಅದನ್ನೇ ಸಾಧಿಸುತ್ತಾರೆ ಕೂಡ. ಇದು ಕೆಲವರಿಗೆ ಬೇಸರ ತರಿಸುವುದೂ ಉಂಟು. ಆದರೆ, ತಮ್ಮ ಜಾಯಮಾನವನ್ನು ಇವರು ಬಿಡುವವರಲ್ಲ. ಕೊನೇ ತನಕ ಸುಳ್ಳನ್ನೇ ಸತ್ಯ ಎಂದು ನಂಬಿಸಲು ಇವರು ಹೋರಾಡುತ್ತಾರೆ.
ಇದನ್ನು ಓದಿ: ಮನೆ ಸುತ್ತ ಈ ಗಿಡ-ಮರ ಬೆಳೆಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ...
ತುಲಾ ರಾಶಿ
ಈ ರಾಶಿಯವರಿಗೂ ಸುಳ್ಳಿಗೂ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಾಗಲಾರದು. ಜೊತೆಗೆ ಸಂಶಯದ ಹುಳ ಇವರ ತಲೆಯಲ್ಲಿ ಕೊರೆಯುತ್ತಲೇ ಇರುತ್ತದೆ. ಇಂಥ ಸಂಶಯಗಳನ್ನು ನಿವಾರಿಸಿಕೊಳ್ಳಲು ಇವರು ಯಾರ ಮೇಲೆ ಸಂಶಯವಿದೆಯೋ, ಯಾವುದರ ಮೇಲೆ ಸಂಶಯವಿದೆಯೋ ಆ ಬಗ್ಗೆ ಸತ್ಯವನ್ನು ಹೊರತೆಗೆಯುವ, ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಸುಳ್ಳಿನ ಮೊರೆ ಹೋಗುತ್ತಾರೆ. ಕೆಲವು ಬಾರಿ ಸತ್ಯವನ್ನು ಹೇಳಲು ಆಗದೆ ಸುಳ್ಳನ್ನು ಹೇಳಿಕೊಂಡುಬಿಡುತ್ತಾರೆ. ಬಳಿಕ ಆ ಸುಳ್ಳುಗಳ ಸಂಕೋಲೆಯಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡುತ್ತಾರೆ. ಹೀಗಾಗಿ ಈ ರಾಶಿಯವರಿಗೆ ಸುಳ್ಳು ಹೇಳುವುದು ಅತಿ ಸುಲಭವಾಗಿರುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಸತ್ಯವನ್ನು ಒಪ್ಪಿಕೊಳ್ಳುವುದು, ಕೇಳುವುದು ಹಾಗೂ ಹೇಳುವುದರ ಬಗ್ಗೆ ಹಿಂಜರಿಕೆ ಇದೆ. ಹೀಗಾಗಿ ಇವರಿಗೆ ಸುಳ್ಳೇ ಪ್ರಿಯವಾದ ಸಂಗಾತಿ. ಎದುರಿನಲ್ಲಿ ಯಾರೇ ಇದ್ದರೂ ಸುಳ್ಳನ್ನು ಇವರು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಸತ್ಯ ಬಾಯಿಬಿಟ್ಟರೆ ಜನರ ಎದುರು ಅವಮಾನ ಅನುಭವಿಸಬೇಕಾದೀತೆಂಬ ಆತಂಕದಿಂದಲೇ ಇವರು ಸುಳ್ಳಿನ ಆಶ್ರಯವನ್ನು ಹೊಂದಿರುತ್ತಾರೆ.
ಇದನ್ನು ಓದಿ: ಈ ರಾಶಿಗೆ ಶನಿ ಸಾಡೇಸಾತ್‌ನಿಂದ ಮುಕ್ತಿ... ಅಂತಿಮ ಚರಣದಲ್ಲಿದ್ದಾನೆ ಶನಿದೇವ...
ಕುಂಭ ರಾಶಿ
ಈ ರಾಶಿಯ ವ್ಯಕ್ತಿಗಳು ಸಮಯ ಸಾಧಕರು. ಅಂದರೆ, ತಮಗೆ ಕೆಲಸವಾಗಬೇಕು ಎಂದಿದ್ದರೆ ಕಾರ್ಯವಾಸಿ ಕತ್ತೆ ಕಾಲು ಹಿಡಿ ಎಂಬಂತೆ ಸುಳ್ಳಿನ ಅರಮನೆಯನ್ನೇ ಕಟ್ಟಿಬಿಡುತ್ತಾರೆ. ಹೀಗಾಗಿ ಸುಳ್ಳಗಳ ಮೇಲೆ ಸುಳ್ಳುಗಳನ್ನು ಹೇಳಿಕೊಂಡು ತಮ್ಮ ಕೆಲಸವನ್ನು ಆದಷ್ಟು ನಾಜೂಕಾಗಿ ಮಾಡಿಸಿಕೊಂಡು ಬಿಡುತ್ತಾರೆ. ಒಮ್ಮೆ ಕೆಲಸ ಆಯಿತು ಎಂದರೆ ಇವರು ಆ ಕಡೆ ಪತ್ತೆಯೇ ಇರದೆ, ಅಲ್ಲಿಂದ ಕಾಲ್ಕೀಳುತ್ತಾರೆ. ತಮಗೆ ಹೇಳಿರುವುದು ಸುಳ್ಳು ಎಂದು ಗೊತ್ತಾಗುವುದರಲ್ಲಿ ಅವರು ಅಲ್ಲಿ ಇರುವುದಿಲ್ಲ. ಇವರ ಪ್ರಕಾರ, ಯುದ್ಧದಲ್ಲಿ ಹಾಗೂ ಪ್ರೀತಿಯಲ್ಲಿ ಸುಳ್ಳು ಹೇಳುವುದು ತಪ್ಪು ಅಲ್ಲ. ಹಾಗಾಗಿ ಸುಳ್ಳಿಗೆ ಇವರದ್ದೇ ಆದ ಸಮರ್ಥನೆ ಇರುತ್ತದೆ.
