Asianet Suvarna News Asianet Suvarna News

ಉದ್ಯೋಗದಲ್ಲಿ ಪ್ರಮೋಶನ್‌ಗೆ ಹೀಗೆ ಮಾಡಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಉಲ್ಲೇಖಿಸಿದ್ದಾರೆ. ವೈದಿಕ ಜ್ಯೋತಿಷ್ಯದಲ್ಲಿ, ಮನೆಯಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆ, ಆರ್ಥಿಕ ತೊಂದರೆ ಹೀಗೆ ಹತ್ತು ಹಲವಾರು ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಸಿದ್ದಾರೆ. ಜಾತಕದಲ್ಲಿರುವ ಗ್ರಹ, ನಕ್ಷತ್ರಗಳ ಸ್ಥಿತಿಗತಿಗಳಿಂದ ವ್ಯಕ್ತಿಯ ಭವಿಷ್ಯದ ವಿಚಾರವನ್ನು ತಿಳಿಯಬಹುದು, ಅದರಲ್ಲಿ ಗೋಚರಿಸುವ ಸಮಸ್ಯೆಗಳ ಪರಿಹಾರವನ್ನು ತಿಳಿಸಲಾಗಿದೆ. ಹಾಗಾಗಿ ಉದ್ಯೋಗ ಅಥವಾ ಪ್ರಮೋಶನ್ ಪಡೆಯಲು ಹೇಳಿರುವ ಪರಿಹಾರಗಳ ಬಗ್ಗೆ ತಿಳಿಯೋಣ..

For job promotion follow these tips and get success
Author
Bangalore, First Published Aug 11, 2020, 5:48 PM IST
  • Facebook
  • Twitter
  • Whatsapp

ಉದ್ಯೋಗದಲ್ಲಿ ಎತ್ತರೇಕ್ಕೆರುತ್ತಾ ಉತ್ತಮ ಪದವಿಯನ್ನು ಪಡೆಯುವುದು ಸುಲಭದ ಮಾತಲ್ಲ. ಬುದ್ಧಿವಂತರಾಗಿದ್ದು, ಕೆಲಸದ ಬಗ್ಗೆ ಎಲ್ಲವನ್ನು ತಿಳಿದಿದ್ದರೂ ಯಶಸ್ಸಿನ ಮೆಟ್ಟಿಲೇರಲು ಸತತ ಪರಿಶ್ರಮಪಡಬೇಕಾಗುತ್ತದೆ. ಕೆಲವೊಮ್ಮೆ ಎಲ್ಲ ರೀತಿಯಿಂದಲೂ ಯೋಗ್ಯತೆ ಇದ್ದರೂ ಅದೃಷ್ಟವು ಕೈ ಹಿಡಿಯುವುದಿಲ್ಲ. ಒಂದು ಉತ್ತಮ ಕೆಲಸ ಸಿಗಲೆಂದು ಅಥವಾ ಕೆಲಸದಲ್ಲಿ ಬಡ್ತಿ ಸಿಗಲೆಂದು ದೇವರ ಸ್ತೋತ್ರ, ಹರಕೆ ಹೀಗೆ ಹಲವು ತರಹದ ಪರಿಹಾರ ಮಾರ್ಗವನ್ನು ಹಿಡಿಯುತ್ತೇವೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ವ್ಯಕ್ತಿಯು ಶ್ರದ್ಧಾಭಕ್ತಿಯಿಂದ ಭಗವಂತನನ್ನು ಆರಾಧಿಸಿದರೆ ಸಕಲ ಕಷ್ಟವನ್ನು ಸಹಿಸುವ ಶಕ್ತಿಯನ್ನು ಮತ್ತು ಅದರಿಂದ ಮುಕ್ತಿ ಹೊಂದುವ ಬಗೆಯನ್ನು ತಿಳಿಯಬಹುದಾಗಿದೆ. ಹಾಗಾಗಿ ಪಡೆಯಬೇಕಾದರೆ ಶಾಸ್ತ್ರ ಹೇಳಿದ ಕೆಲವು ಪರಿಹಾರವನ್ನು ಮಾಡುವುದರಿಂದ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದಾಗಿದೆ.

ಇದನ್ನು ಓದಿ: ಕೃಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ..!

ಉದ್ದು ಮತ್ತು ಗೋಧಿ ಹಿಟ್ಟಿನಿಂದ ಹೀಗೆ ಮಾಡಿ
ಕೆಲಸ ಸಿಗುತ್ತಿಲ್ಲ ಅಥವಾ ಪ್ರಮೋಶನ್ ಸಿಗದೆ ಒದ್ದಾಡುತ್ತಿದ್ದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಈ ಉಪಾಯವನ್ನೊಮ್ಮೆ ಮಾಡಿ. ಮುನ್ನೂರು ಗ್ರಾಂ ಕಪ್ಪು ಉದ್ದಿನ ಕಾಳು ಮತ್ತು ಗೋಧಿ ಹಿಟ್ಟನ್ನು ಸೇರಿಸಿ ಕಲಸಿ. ನಂತರ ಅದರಿಂದ ರೊಟ್ಟಿಯನ್ನು ಮಾಡಿ ಮಧ್ಯಮ ಉರಿಯಲ್ಲಿ ನಂತರ ಉಂಡೆ ಮಾಡಲು ಬರುವಷ್ಟು ಹದಕ್ಕೆ ಬೇಯಿಸಿ, ನಂತರ ಕಾಲು ಭಾಗವನ್ನು ಮುರಿದು ಕಪ್ಪು ಬಣ್ಣದ ಬಟ್ಟೆಯಲ್ಲಿ ಸುತ್ತಿಡಿ. 

ಉಳಿದ ಮುಕ್ಕಾಲು ಭಾಗದಲ್ಲಿ 101 ಉಂಡೆಯನ್ನು ಮಾಡಿ, ಒಂದೊಂದಾಗಿ ಮೀನುಗಳಿಗೆ ತಿನ್ನಲು ಹಾಕಿ. ಬಟ್ಟೆಯಲ್ಲಿ ಸುತ್ತಿದ ಉಂಡೆಯನ್ನು ಮೀನಿಗೆ ತೋರಿಸಿ ನದಿಯಲ್ಲಿ ಬಿಡಿ. ಈ ಉಪಾಯವನ್ನು ನಿಯಮಿತವಾಗಿ 40 ದಿನ ಮಾಡಬೇಕು. ಇದು ಉದ್ಯೋಗ ಮತ್ತು ಪ್ರಮೋಶನ್‌ ಪಡೆಯಲು ಜ್ಯೋತಿಷ್ಯದಲ್ಲಿ ಹೇಳಿದ ಉತ್ತಮ ಪರಿಹಾರ ಮಾರ್ಗವಾಗಿದೆ.

ಇದನ್ನು ಓದಿ: ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣ ಈ ಫೋಟೋಗಳ ತನ್ನಿ ವಾಸ್ತು ದೋಷ ನಿವಾರಿಸಿಕೊಳ್ಳಿ…!

ಸ್ಪಟಿಕ ಮಣಿಮಾಲೆ ಜಪ
ವಿದ್ಯೆಗೆ ಅಧಿದೇವತೆಯಾದ ಸರಸ್ವತಿ ದೇವಿಯನ್ನು ನಿಯಮಬದ್ಧವಾಗಿ ಸ್ತೋತ್ರ ಮಾಡಿದಲ್ಲಿ ಕಾರ್ಯಸಿದ್ಧಿಸುವುದು ಖಂಡಿತ. ಇದಕ್ಕೆ ಸ್ಪಟಿಕಮಾಲೆಯನ್ನು ಉಪಯೋಗಿಸಿ ಸರಸ್ವತಿ ಮಂತ್ರವನ್ನು ಜಪಿಸಬೇಕು. ಸರಸ್ವತಿ ಜಪವನ್ನು 108 ಮಣಿಯ ಪೂಜಿಸಲ್ಪಟ್ಟ ಸ್ಫಟಿಕಮಾಲೆಯಿಂದ 11 ಅಥವಾ 21 ಬಾರಿ ಸರಸ್ವತಿ ಮಂತ್ರವನ್ನು ಜಪಿಸಬೇಕು. ಇದನ್ನು ಹನ್ನೊಂದು ದಿನಗಳ ಕಾಲ ಮಾಡಬೇಕು. ಸರಸ್ವತಿಯಲ್ಲಿ ಉತ್ತಮ ಉದ್ಯೋಗಕ್ಕಾಗಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು.

ಗುರುವಾರ ಹೀಗೆ ಮಾಡಿ ಪ್ರಮೋಶನ್‌ಗಳಿಸಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರದ ದಿನ ಕಾಗೆಗೆ ಅನ್ನ, ನೀರು ಆಹಾರವನ್ನು ನೀಡಬೇಕು. ಭಾನುವಾರ ಬೆಳಗ್ಗೆ ಮೊಸರಿನಲ್ಲಿ ಸಕ್ಕರೆಯನ್ನು ಹಾಕಿ ಕಾಗೆಗೆ ತಿನ್ನಲು ಇಡಬೇಕು ಮತ್ತು ಮಧ್ಯಾಹ್ನ ಅನ್ನಕ್ಕೆ ಹಾಲು ಹಾಗೂ ಮೊಸರನ್ನು ಕಲಸಿ ತಿನ್ನಲು ಇಡಬೇಕು. ಇಷ್ಟು ಮಾಡಿದ ನಂತರ ಕಚೇರಿಗೆ ಹೋಗುವಾಗ ಮನೆಯ ಮುಖ್ಯದ್ವಾರದಲ್ಲಿ ಎಡಗಾಲನ್ನು ಮೊದಲು ಹೊರಗಿಡಬೇಕು, ಇದರಿಂದ ಪ್ರಮೋಶನ್ ಅಷ್ಟೇ ಅಲ್ಲದೇ ಗೌರವವೂ ಸಿಗುತ್ತದೆ.

ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...

ಶುಕ್ರವಾರ ಹೀಗೆ ಮಾಡಿದರೆ ಉದ್ಯೋಗ ಪ್ರಾಪ್ತಿ
ಉದ್ಯೋಗ ಸಿಗದೇ ಕಷ್ಟ ಪಡುತ್ತಿದ್ದರೆ ಯಾವುದಾದರೊಂದು ಶುಕ್ರವಾರದ ದಿನ ಬೆಳಗ್ಗೆ ಯಾರೊಂದಿಗೂ ಮಾತನಾಡದೇ ಐದೂಕಾಲು ಪಾವು ಉದ್ದಿನ ಹಿಟ್ಟಿನಿಂದ ರೊಟ್ಟಿಯನ್ನು ಮಾಡಿ ನಾಲ್ಕು ಭಾಗಮಾಡಿ, ಒಂದು ತುಂಡನ್ನು ನದಿಯಲ್ಲಿ ಹಾಕಿ, ಮತ್ತೊಂದು ಭಾಗವನ್ನು ಶ್ವಾನಕ್ಕೆ ತಿನ್ನಲು ಕೊಡಿ, ಮೂರನೇ ಭಾಗವನ್ನು ಕಾಗೆಗೆ ನೀಡಿ ಉಳಿದ ಇನ್ನೊಂದು ಭಾಗವನ್ನು ರಸ್ತೆಯಲ್ಲಿ ಎಸೆಯಬೇಕು. ಹೀಗೆ ನಲವತ್ತು ಶುಕ್ರವಾರ ಈ ರೀತಿ ಮಾಡಿದರೆ ಪ್ರಮೋಶನ್ ಮತ್ತು ಉದ್ಯೋಗ ದೊರಕುತ್ತದೆ.

Follow Us:
Download App:
  • android
  • ios