ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂಬುದು ವ್ಯಕ್ತಿಯ ಬಹುದೊಡ್ಡ ಆಸೆ ಮತ್ತು ಕನಸು. ಮನೆಯಲ್ಲಿ ಧನ-ಧಾನ್ಯಗಳಾವುದಕ್ಕೂ ಕೊರತೆಯಾಗದೇ ಇರಲಿ. ಆದರೆ, ಕೆಲವು ಬಾರಿ ಇದಕ್ಕೆಲ್ಲ ಸಮಸ್ಯೆಯಾದಾಗ ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಪರಿಹಾರವಿದೆ. ಅಂತಹ ಸಮಸ್ಯೆಗಳನ್ನು ಕೃಷ್ಣ ಪರಿಹಾರ ಮಾಡುತ್ತಾನೆ. ಕೃಷ್ಣನಿಗೆ ಸಂಬಂಧಪಟ್ಟ ಕೆಲವು ಉಪಾಯಗಳಿಂದ ವಾಸ್ತು ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಅವು ಯಾವುವು ಎಂಬುದನ್ನು ನೋಡೋಣ…

ನಮಗೆ ಎಲ್ಲವೂ ವಾಸ್ತು ಪ್ರಕಾರವಾಗಿಯೇ ಇರಬೇಕು ಎಂದು ಬಯಸುತ್ತೇವೆ. ಕೆಲವೊಂದು ಸಂದರ್ಭದಲ್ಲಿ ಹಾಗಾಗುವುದಿಲ್ಲ. ಕೆಲವೊಮ್ಮೆ ಮನೆ ಕಟ್ಟಿಸುವಾಗ ವಾಸ್ತುವನ್ನು ನೋಡಿಸಿ ಕಟ್ಟಿಸಿದರೂ ಮತ್ಯಾರೋ ಸರಿಯಿಲ್ಲ ಎಂದು ಹೇಳಿದಾಗ ಗೊಂದಲವುಂಟಾಗುವುದು ಸಹಜ. ಈ ಎಲ್ಲ ಗೊಂದಲಗಳು ಪ್ರಾರಂಭವಾಗುವುದು ಕಷ್ಟಗಳು ಪ್ರಾರಂಭವಾದಾಗ ಎಂಬುದು ಸಹಜ ವಿಷಯವೇ ಸರಿ. ಆಗ ವಾಸ್ತು ದೋಷ ಗಮನಕ್ಕೆ ಬರುತ್ತದೆ.

ಇಲ್ಲಿ ಸ್ವಂತ ಮನೆಯಾಗಿದ್ದರೆ, ಅದರಲ್ಲೂ ಕೈಯಲ್ಲಿ ದುಡ್ಡಿದ್ದರೆ ವಾಸ್ತು ದೋಷ ನಿವಾರಣೆಗೆ ಬೇಕಿದ್ದಲ್ಲಿ ಮನೆಯ ಸ್ವರೂಪವನ್ನು ಬದಲಿಸಬಹುದು. ಆದರೆ, ಕೆಲವೊಮ್ಮೆ ಹಣವೂ ಇರುವುದಿಲ್ಲ, ಮನೆಯನ್ನೇ ಕಷ್ಟದಲ್ಲಿ ಕಟ್ಟಿರುತ್ತಾರೆ. ಆಗೇನು ಮಾಡುವುದು? ಇನ್ನು ಕೆಲವರು ಬಾಡಿಗೆ ಮನೆಯಲ್ಲಿರುತ್ತಾರೆ ಅಂಥವರ ಕತೆ ಏನು? ಬೇರೆ ಬಾಡಿಗೆ ಮನೆ ಹುಡುಕು ಪರಿಸ್ಥಿತಿಯಲ್ಲೂ ಅವರು ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಗುವ ಕಾಲ ಬಂದಿದೆ. 



ಇದೇ ಆಗಸ್ಟ್ 11ರ ಮಂಗಳವಾರ ಆಚರಿಸಲ್ಪಡುವ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಾಸ್ತು ದೋಷ ನಿವಾರಿಸಿಕೊಳ್ಳುವ ಸುಸಂದರ್ಭ ಬಂದೊದಗಿದೆ. ಭಗವಾನ್ ಶ್ರೀ ಕೃಷ್ಣನ ಈ ಫೋಟೋಗಳನ್ನು ತಂದು ಮನೆಯಲ್ಲಿಟ್ಟುಕೊಂಡರೆ ಎಲ್ಲ ವಾಸ್ತು ದೋಷವೂ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಹಾಗಾದರೆ ಯಾವ ಫೋಟೋಗಳನ್ನು ಮನೆಯಲ್ಲಿ ತಂದಿಡಬೇಕು ಎಂಬ ಬಗ್ಗೆ ನೋಡೋಣ.

ಇದನ್ನು ಓದಿ: ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

ಸತಿ-ಪತಿ ಕಲಹವೇ, ಹೀಗೆ ಮಾಡಿ…
ಮನೆಯಲ್ಲಿ ಗಂಡ-ಹೆಂಡತಿ ಯಾವಾಗಲೂ ಜಗಳ ಮಾಡಿಕೊಳ್ಳುತ್ತಲೇ ಇದ್ದರೆ, ಅದಕ್ಕೆ ವಾಸ್ತು ದೋಷವೂ ಒಂದು ಕಾರಣ ಇರಬಹುದು. ಮನೆಯ ಉತ್ತರ ದಿಕ್ಕಿನಲ್ಲಿ ಕುಣಿದಾಡುವ ನವಿಲಿನ ಅಥವಾ ಆಲಿಂಗನ ಮಾಡಿಕೊಂಡ ರಾಧಾಕೃಷ್ಣನ ಫೋಟೋವನ್ನು ಹಾಕಬೇಕು. ಇದು ವೈವಾಹಿಕ ಜೀವನದಲ್ಲಿ ಮಧುರತೆಯನ್ನು ಹುಟ್ಟುಹಾಕುತ್ತದೆ.

ಸಂತಾನ ಪ್ರಾಪ್ತಿಗೆ ಈ ಫೋಟೋ ಹಾಕಬೇಕು
ಎಷ್ಟು ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗಿರುವುದಿಲ್ಲ. ಇದಕ್ಕಾಗಿ ದೇವರಿಗೆ ಹರಕೆ ಹೊತ್ತಾಗಿರುವುದಲ್ಲದೆ, ವೈದ್ಯರ ಬಳಿಯೂ ಸಾಕಷ್ಟು ಬಾರಿ ಪರೀಕ್ಷೆ ಮಾಡಿಸಿಕೊಂಡಾಗಿರುತ್ತದೆ. ಆದರೂ ಸಂತಾನವಾಗಿರುವುದಿಲ್ಲ. ಇಂಥವರು ಮನೆಯ ಮಲಗುವ ಕೋಣೆಯಲ್ಲಿ ದನ-ಕರು ಅಥವಾ ಬಾಲಕೃಷ್ಣನ ಫೋಟೋವನ್ನು ಹಾಕಿಕೊಳ್ಳಬೇಕು.