ಶನಿ ದೇವರ ಕೃಪೆಗೆ ಪಾತ್ರರಾಗುವುದು ತುಂಬಾ ಕಠಿಣ. ಶನಿಯ ಬೀರುವ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಶನಿಯನ್ನು ಪ್ರಸನ್ನಗೊಳಿಸಲು ಕೆಲವು ಕ್ರಮಗಳನ್ನು ಅನುಸರಿಸಿ ನಡೆದರೆ ಆಗ
ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು. ಮತ್ತು ಶನಿಯ ದಯೆಯಿಂದ ಧನವಂತರೂ ಆಗಬಹುದು. ಮಾನವರನ್ನು ಧನಿಕನನ್ನಾಗಿ ಮಾಡುವುದು, ಬಡವನನ್ನಾಗಿ ಮಾಡುವುದು ಶನಿ ದೇವನ
ಕೈಯಲ್ಲಿರುತ್ತದೆ. ಕರ್ಮದ ಅನುಸಾರ ಫಲವನ್ನು ನೀಡುತ್ತಾನೆ. ಉತ್ತಮ ಕರ್ಮಗಳನ್ನು ಮಾಡಿದರೆ ಶನಿ ದೇವರು ಪ್ರಸನ್ನನಾಗಿ ಧನವಂತರಾಗುವಂತೆ ಮಾಡುತ್ತಾನೆ.

ಧನಯೋಗಕ್ಕೂ ಶನಿಗೂ ಇರುವ ಸಂಬಂಧವನ್ನು ತಿಳಿಯೋಣ
ಶನಿ ಜೀವನದ ಪ್ರತಿ ಶುಭ-ಅಶುಭ ಕರ್ಮಗಳ ಕಾರಕನೂ ಹೌದು,  ಫಲವನ್ನು ದಯಪಾಲಿಸುವವನೂ ಹೌದು. ಅವರವರ ಕರ್ಮಗಳಿಗೆ ಅನುಸಾರವಾಗಿ ಕೆಲವರು ಧನವಂತರಾದರೆ, ಮತ್ತೆ ಕೆಲವರು ದಾರಿದ್ರ್ಯವನ್ನು ಹೊಂದುತ್ತಾರೆ. ಆಯಾ ಕಾರ್ಯಕ್ಕೆ ತಕ್ಕ ಫಲವನ್ನು ಶನಿ ನೀಡುತ್ತಾನೆ. ಜಾತಕದಲ್ಲಿ ಶನಿ ಇರುವ ಸ್ಥಿತಿಯನ್ನು ನೋಡಿ ಧನ ಪ್ರಾಪ್ತಿ ಸರಳ ಅಥವಾ ಕಠಿಣವೆಂದು ನಿರ್ಧರಿಸಬಹುದು. 

ಶನಿ ದಶೆಯು ಹತ್ತೊಂಭತ್ತು ವರ್ಷಗಳವರೆಗೆ ನಡೆಯುತ್ತದೆ. ನಕಾರಾತ್ಮಕ ಪ್ರಭಾವವಿದ್ದಾಗ ಶನಿ ತುಂಬಾ ಸಮಯದವರೆಗೆ ಕಾಡುತ್ತಾನೆ ಮತ್ತು ಆರ್ಥಿಕ ಸ್ಥಿತಿಯು ಹದಗೆಡುತ್ತದೆ. ನಕಾರಾತ್ಮಕ ಪ್ರಭಾವವಿದ್ದಾಗ
ಸಾಡೇಸಾತ್ ಶನಿದಶೆಯಲ್ಲಿ ದಟ್ಟದರಿದ್ರವನ್ನು ಎದುರಿಸ ಬೇಕಾಗುತ್ತದೆ. ಜಾತಕದಲ್ಲಿ ಉತ್ತಮ ಯೋಗಗಳಿದ್ದರೂ ಕರ್ಮ ಶುಭವಾಗಿರದಿದ್ದರೆ ಆಗ ಹಣಕ್ಕೆ ಹಾನಿಯನ್ನುಂಟಾಗುತ್ತದೆ.

ಜಾತಕದಲ್ಲಿ ಶನಿಯ ಸ್ಥಾನವನ್ನು ನೋಡಿಯೇ ಆ ವ್ಯಕ್ತಿಯ ಹಣದ ಸ್ಥಿತಿಯನ್ನು ನಿರ್ಧರಿಸಲಾಗುವುದು. ಶನಿಯ ಪ್ರಭಾವದಿಂದ ಕೆಲವು ಬಾರಿ ಅಚಾನಕ್ ಹಣ ಪ್ರಾಪ್ತಿಯಾದರೆ, ಇನ್ನು ಕೆಲವು ಬಾರಿ ಬಾರಿ ಧನಹಾನಿ ಆಗುತ್ತದೆ. ಉತ್ತಮ ಕರ್ಮಗಳ ಜೊತೆಗೆ ಜಾತಕದಲ್ಲಿ ಶನಿಯ ಸ್ಥಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕ.

ಇದನ್ನು ಓದಿ; ನಿಮ್ಮ ಜಾತಕದ ಲಗ್ನ ಇದಾಗಿದ್ದರೆ ಏನೇನು ಲಾಭ ಅಂತ ಗೊತ್ತೇ?...

 ಯಾವ ಸಂದರ್ಭದಲ್ಲಿ ಶನಿ ಧನಹಾನಿಯನ್ನು ಮಾಡಿಸುತ್ತಾನೆ.
ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದಾಗ ಧನಹಾನಿಯಾಗುತ್ತದೆ.ಶನಿ ನೀಚ ರಾಶಿಯಲ್ಲಿದ್ದರೆ, ಸೂರ್ಯನ ಜೊತೆಗಿದ್ದರೆ ಹಣ ವ್ಯಯವಾಗುತ್ತದೆ. ಯಾವುದೋ ಹರಳಿನ ಉಂಗುರ ಹಾಕೋದು ಡೇಂಜರ್!
ಸಾಡೇಸಾಥಿ ಅಥವಾ ಅರ್ಧಾಷ್ಟಮ ನಡೆಯುತ್ತಿದ್ದರೆ ಧನಹಾನಿ ಆಗುವುದು ನಿಶ್ಚಿತ ಎಂದೇ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನೊಂದು ಪ್ರಮುಖ ವಿಚಾರವೆಂದರೆ, ಶನಿಯಿಂದ ತಪ್ಪಿಸಿಕೊಳ್ಳಬೇಕು ಎಂದು  ಯಾವುದೇ ಜ್ಯೋತಿಷಿಗಳಿಂದ ತಿಳಿಯದೇ, ಸರಿಯಾಗಿ ಗೊತ್ತು ಮಾಡಿಕೊಳ್ಳದೆ ಯಾವುದಾದರೂ ಹರಳುಗಳುಳ್ಳ ಉಂಗುರಗಳನ್ನು ತೊಟ್ಟರೆ ಒಳ್ಳೆಯದ್ದಕ್ಕಿಂತ ತೊಡಕಾಗುವುದೇ ಹೆಚ್ಚು. ಶುದ್ಧ ಆಚಾರ-ವಿಚಾರಗಳನ್ನು ಮಾಡದಿದ್ದರೆ ಧನಹಾನಿಯಾಗುತ್ತದೆ. 

ಇದನ್ನು ಓದಿ; ನಿಮ್ಮ ರಾಶಿಯ ಅಧಿಪತಿ ಗ್ರಹ ಪೂಜಿಸಿ ಸುಖ-ಸಮೃದ್ಧಿ ಪಡೆಯಿರಿ!...

 ಶನಿಯಿಂದ ಯಾವಾಗ ಧನಪ್ರಾಪ್ತಿ
ಶನಿ ಅನುಕೂಲನಾಗಿದ್ದು, ಮೂರನೇ, ಹನ್ನೊಂದನೇ, ಆರನೇ ಮನೆಯಲ್ಲಿದ್ದರೆ ಧನಪ್ರಾಪ್ತಿಯಾಗಿ, ಸ್ಥಿತಿವಂತರಾಗುವ ಸಾಧ್ಯತೆ ಇರುತ್ತದೆ. ಶನಿ ಉಚ್ಛ ಸ್ಥಿತಿಯಲ್ಲಿದ್ದು, ಅವನದ್ದೇ ಮನೆಯಲ್ಲಿದ್ದರೂ ಧನಲಾಭ ಆಗುತ್ತದೆ ಎನ್ನುತ್ತದೆ ಜ್ಯೋತಿಷ್ಯ. ಶನಿ ಮಹಾದೆಶೆ, ಸಾಡೇಸಾಥ್, ಅರ್ಧಾಷ್ಟಮ ಇದ್ದಾಗ ಧನಲಾಭವಾಗುತ್ತದೆ. ಶುದ್ಧ ಆಚಾರ-ವಿಚಾರವಿದ್ದು, ಸಾತ್ವಿಕ ಆಹಾರ ಸೇವನೆ ಮಾಡುತ್ತಿದ್ದರೂ ಲಾಭವನ್ನುಂಟು ಮಾಡುತ್ತದೆ. ತಂದೆ-ತಾಯಿ, ಹಿರಿಯರ ಆಶೀರ್ವಾದ ಇದ್ದರೆ, ಶಿವ, ಕೃಷ್ಣನ ಭಕ್ತರಾಗಿದ್ದರೂ ಇಂಥವರಿಗೆ ಧನಲಾಭವಾಗುವಂತೆ ಶನಿ ಆಶೀರ್ವದಿಸುತ್ತಾನೆ.

ಇದನ್ನು ಓದಿ; ದೇವರ ಪ್ರದಕ್ಷಿಣೆ ಹೀಗೆ ಮಾಡಿ, ದೌರ್ಭಾಗ್ಯ ದೂರ ಮಾಡಿಕೊಳ್ಳಿ!...

 ಶನಿಯನ್ನು ಪ್ರಸನ್ನಗೊಳಿಸಿಕೊಳ್ಳುವುದು ಹೇಗೆ?
ಶನಿಯನ್ನು ಎಲ್ಲರೂ ಭಯದಿಂದಲೇ ನೋಡುತ್ತಾರೆ. ಆದರೆ, ಆತ ಪ್ರಸನ್ನನಾದರೆ ಆಗುವ ಲಾಭದ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಶನಿವಾರದಂದು ಅರಳೀಮರದ ಕೆಳಗೆ ಸಾಸಿವೆ ಎಣ್ಣೆಯಿಂದ
ದೀಪಹಚ್ಚಬೇಕು. ನಂತರ ಮೂರು ಪ್ರದಕ್ಷಿಣೆ ಹಾಕಬೇಕು. ಶನಿದೇವರ ಸ್ಮರಣೆ ಮಾಡಿ, 108 ಜಪವನ್ನು ಮಾಡಬೇಕು. ನಿರ್ಗತಿಕರಿಗೆ ನಾಣ್ಯಗಳನ್ನು ದಾನ ಮಾಡಿದರೆ ಇನ್ನೂ ಒಳ್ಳೆಯದು ಎಂದು ಜ್ಯೋತಿಷ್ಯ
ಹೇಳುತ್ತದೆ.