ಶಿವ ದೇವಾಲಯಕ್ಕೆ ಹೋಗುತ್ತೀರಾ? ನಂದಿಯನ್ನು ಮೊದಲು ನಮಸ್ಕರಿಸುವುದು, ಅವನ ಕಿವಿಯಲ್ಲಿ ನಿಮ್ಮ ಬಯಕೆಗಳನ್ನು ತಿಳಿಸುವುದನ್ನು ಮರೆಯಬೇಡಿ. ಅಂದಹಾಗೆ, ಯಾಕೆ ನಂದಿಗೆ ಈ ಪ್ರಾಮುಖ್ಯತೆ? 

ಯಾವುದೇ ಈಶ್ವರ ದೇವಾಲಯಕ್ಕೆ ಹೋಗಿ, ಅಲ್ಲಿ ನಂದಿಯನ್ನು ನೀವು ನೋಡಬಹುದು. ಗರ್ಭಗುಡಿಯಲ್ಲಿರುವ ಈಶ್ವರನಿಗೆ ಮುಖ ಮಾಡಿ, ದೇವಾಲಯದ ಮುಖದ್ವಾರದ ಹೊರಗೆ ನಂದಿಯ ಪ್ರತಿಮೆಯನ್ನು ಸ್ಥಾಪಿಸಿರುತ್ತಾರೆ. ಅಥವಾ ನವರಂಗದಲ್ಲಿಯೂ ನಂದಿ ಇರುವುದುಂಟು. ಶಿವ ದೇವಾಲಯದಲ್ಲಿ ನಂದಿ ಏಕೆ? ಏಕೆಂದರೆ ನಂದಿ ಶಿವನ ವಾಹನ, ಶಿವಗಣಗಳಲ್ಲಿ ಒಬ್ಬ ಎಂಬುದು ಪ್ರಮುಖ ಕಾರಣ. ಇನ್ನು ಭಕ್ತರು ತಮ್ಮ ಇಷ್ಟಾರ್ಥಗಳನ್ನು ನಂದಿಯ ಕಿವಿಯಲ್ಲಿ ಹೇಳಿದರೆ ಅವರ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯೂ ಇದೆ. ಇದು ಸ್ವತಃ ಶಿವನೇ ನಂದಿಗೆ ನೀಡಿದ ವಾಗ್ದಾನವಂತೆ. 

ನೀವು ಶಿವ ದೇವಾಲಯಕ್ಕೆ ಹೋದರೆ ನಂದಿಗೆ ಮೊದಲ ನಮಸ್ಕರಿಸಬೇಕು. ಅದಕ್ಕೆ ಕಾರಣಗಳಿವೆ. ನಂದಿ ಶಿವನ ದ್ವಾರಪಾಲಕನೂ ಹೌದು. ನಂದಿಯ ಅನುಮತಿಯ ನಂತರವೇ ನಿಮ್ಮ ಇಚ್ಛೆಗಳು ಮತ್ತು ಪ್ರಾರ್ಥನೆಗಳು ಮಹಾದೇವನನ್ನು ತಲುಪುತ್ತವೆ. ನಂದಿ ಅವಕಾಶ ನೀಡಿದರೆ ಮಾತ್ರ ನೀವು ಕೈಲಾಸದಲ್ಲಿ ಒಳಹೋಗಲು ಸಾಧ್ಯ. ಶಿವ ದೇವಸ್ಥಾನಕ್ಕೆ ಹೋದಾಗ ಶಿವನನ್ನು ಪೂಜಿಸಿ, ನಂದಿಯನ್ನು ಪೂಜಿಸದೇ ಹಿಂದಿರುಗಿ ಬರುವುದು ನಿಮಗೆ ಪೂಜೆಯ ಯಾವುದೇ ಶುಭ ಫಲವನ್ನು ನೀಡುವುದಿಲ್ಲ.

ಶಿವನನ್ನು ಪೂಜಿಸುವ ಮೊದಲು ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥವನ್ನು ಹೇಳುವುದರ ಹಿಂದೆ ಒಂದು ಕಥೆಯೂ ಇದೆ. ಈ ಕಥೆಯ ಪ್ರಕಾರ, ಶಿವನು ಒಮ್ಮೆ ನಂದಿಗೆ ತಾನು ಧ್ಯಾನದಲ್ಲಿರುವಾಗಲೆಲ್ಲಾ ತನ್ನ ಭಕ್ತರ ಇಷ್ಟಾರ್ಥಗಳನ್ನು ನೀನು ಕೇಳಬೇಕೆಂದು ಹೇಳಿದನು. ಯಾವುದೇ ಭಕ್ತ ತನ್ನ ಇಷ್ಟಾರ್ಥಗಳನ್ನು ನಿನ್ನ ಕಿವಿಯಲ್ಲಿ ಹೇಳಿದಾಗ ಅದನ್ನು ನೇರವಾಗಿ ನನಗೆ ಒಪ್ಪಿಸಬೇಕು ಎಂದ. ಅಂದಿನಿಂದ ಶಿವನು ತಪಸ್ಸು ಮತ್ತು ಧ್ಯಾನದಲ್ಲಿ ತೊಡಗಿದಾಗಲೆಲ್ಲಾ ಶಿವನ ಭಕ್ತರು ಮಾತ್ರವಲ್ಲದೇ, ತಾಯಿ ಪಾರ್ವತಿಯೂ ಕೂಡ ನಂದಿಯ ಕಿವಿಯಲ್ಲಿ ತನ್ನ ಇಷ್ಟಾರ್ಥಗಳನ್ನು ಹೇಳುತ್ತಿದ್ದರು ಎನ್ನುವ ನಂಬಿಕೆಯಿದೆ.

ಭಗವಾನ್ ಶ್ರೀರಾಮನ ಆಶೀರ್ವಾದ ಪಡೆಯಬೇಕಿದ್ದರೆ ಆತನ ಸೇವಕನಾದ ಹನುಮಂತನ ಆರಾಧನೆ ಮಾಡಬೇಕು. ಅದೇ ರೀತಿಯಲ್ಲಿ ಶಿವನ ಆಶೀರ್ವಾದವನ್ನು ಪಡೆಯಲು ಮೊದಲು ನಂದಿಯನ್ನು ಪೂಜಿಸುವ ನಿಯಮವಿದೆ. 

ಕಾಗೆಯ ದ್ವೇಷ 17 ವರುಷ! ಸುದೀರ್ಘ ಅಧ್ಯಯನ ರೋಚಕ ವರದಿ ಇಲ್ಲಿದೆ...

ನಂದಿ ಶಿವನ ಗಣ ಆದದ್ದು ಹೇಗೆ? ಅಸುರರು ಮತ್ತು ದೇವತೆಗಳು ಅಮೃತಕ್ಕಾಗಿ ಸಾಗರ ಮಂಥನ ಮಾಡಿದಾಗ ಹಾಲಾಹಲ ಎನ್ನುವ ವಿಷ ಹೊರಬಂದಿತು. ವಿಷದ ಪ್ರಭಾವದಿಂದ ಬ್ರಹ್ಮಾಂಡವನ್ನು ಉಳಿಸಲು ಭಗವಾನ್‌ ಶಿವನು ಆ ಕಾರ್ಕೋಟಕ ವಿಷವನ್ನು ಕುಡಿಯಲು ಮುಂದಾದ. ವಿಷವನ್ನು ಕುಡಿಯುವಾಗ ಅದರ ಕೆಲವು ಹನಿಗಳು ಭೂಮಿಯ ಮೇಲೆ ಬಿದ್ದವು. ಅದೇ ಸಮಯದಲ್ಲಿ ನಂದಿ ತಕ್ಷಣವೇ ತನ್ನ ನಾಲಿಗೆಯಿಂದ ಅದನ್ನು ಸ್ವಚ್ಛಗೊಳಿಸಿದ. ಭಗವಾನ್‌ ಶಿವನು ನಂದಿಯ ಈ ಸಮರ್ಪಣೆಯನ್ನು ನೋಡಿ ಬಹಳ ಸಂತೋಷಪಟ್ಟನು. ಮತ್ತು ಅವನಿಗೆ ದೊಡ್ಡ ಶಿವಭಕ್ತ ಎನ್ನುವ ಬಿರುದನ್ನು ನೀಡಿದ. ಶಿವನಿಗೆ ನಂದಿಯೆಂದರೆ ಅತ್ಯಂತ ಪ್ರಿಯ. ಆತನ ಗಣಗಳಲ್ಲೇ ನಂದಿಗೆ ಶಿವನು ಮಹತ್ತರ ಸ್ಥಾನವನ್ನು ನೀಡಿದ್ದಾನೆ. 

ಶಿವನಿಗೆ ಈ 5 ರಾಶಿ ಮೇಲೆ ತುಂಬಾ ಪ್ರೀತಿ, ಸಂಪತ್ತು, ಅದೃಷ್ಟ ಹುಡುಕಿಕೊಂಡು ಬರುತ್ತೆ