Asianet Suvarna News Asianet Suvarna News

ಚಿಕ್ಕಮಗಳೂರು: ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟ ಹೆಚ್ಚಾಗಲಿವೆ: ಕಾರ್ಣಿಕದ ಭವಿಷ್ಯ ನುಡಿ..!

ಈ ವರ್ಷವೂ ಅಂತಹದ್ದೇ ಕಾರ್ಣಿಕ ನುಡಿಯುತ್ತಿದ್ದಂತೆ ಜೈಘೋಷ ಹಾಕಿ ಸಂಭ್ರಮಿಸಿದ ಭಕ್ತರು 

Fight for Power Will Increase in Karnataka Says Mylara Karnika grg
Author
First Published Oct 6, 2022, 11:30 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.06):  ಕಾಫಿನಾಡಿನ ಮೈಲಾರಲಿಂಗ ಸ್ವಾಮಿಯ ಕಾಲ ಕಾರ್ಣಿಕದ ನುಡಿಯ ಕ್ಷಣಕ್ಕಾಗಿ ಕಾತುರದಿಂದ ಕಾಯ್ತಾರೆ. ಆ ನುಡಿ ದೇಶದ ಆಗುಹೋಗುಗಳಿಗೆ ಸಾಕ್ಷಿಯಾಗುತ್ತೇ ಅನ್ನೋ ನಂಬಿಕೆಯು ಇದೆ. ಈ ವರ್ಷವೂ ಅಂತಹದ್ದೇ ಕಾರ್ಣಿಕ ನುಡಿಯುತ್ತಿದ್ದಂತೆ ಭಕ್ತರು ಜೈಘೋಷ ಹಾಕಿ ಸಂಭ್ರಮಿಸಿದ್ರು.

ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ಭವಿಷ್ಯ ನುಡಿ

ಭೂಮಿಗೆ ವರುಣನ ಸಿಂಚನವಾಯಿತು, ಕುರುಪಾಂಡವರು ಕಾದಾಡಿದರು, ಧರ್ಮದ ಜ್ಯೋತಿ ಬೆಳಗಿದರು, ಇದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನ ಮೈಲಾರಲಿಂಗ ಸ್ವಾಮೀಯ ಕಾರ್ಣಿಕ ನುಡಿಗಳಿವು. ವಿಜಯದಶಮಿ ಮರುದಿನ ಸೂರ್ಯೋದಕ್ಕೂ ಮುನ್ನ ನುಡಿಯೋ ಕಾರ್ಣಿಕ ನುಡಿ ದೇಶದ ಆಗುಹೋಗುಗಳ ಬಗ್ಗೆ ಮುನ್ನುಡಿ ಯಾಗುತ್ತೆ ಅನ್ನೋ ನಂಬಿಕೆ ಭಕ್ತರದ್ದು. ಅದ್ರಂತೆ ಇಲ್ಲಿನ ಕಾರ್ಣಿಕ ನುಡಿಯೂ ಅಗಿರೋ ಹಲವು ಉದಾಹರಣೆಯೂ ಭಕ್ತರಲ್ಲಿದೆ .ಈ ವರ್ಷವೂ ಮೈಲಾರಲಿಂಗ ಸ್ವಾಮೀಯ ಕಾರ್ಣಿಕದ ನುಡಿಗಾಗಿ ಭಕ್ತರು ಕಾದಿದ್ರು..ಮುಂಜಾನೆ 5:17 ಕ್ಕೆ ಬಯಲಿನಲ್ಲಿ ಬೆಣ್ಣೆ ಮೆತ್ತಿದ್ದ ಬಿಲ್ಲನೇರಿ ದಶರತ ಪೂಜಾರ್ ಮೈಲಾರ ಲಿಂಗಸ್ವಾಮಿಯ ಕಾರ್ಣಿಕ ನುಡಿಗಳು ಹೊರ ಬಿದ್ವು..

ಹಾವೇರಿ: ಯುವಕನಿಗೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ, ಕಾರ್ಣೀಕನ ಭವಿಷ್ಯ ವಾಣಿ..!

ಕಾರ್ಣಿಕ ನುಡಿ ಕೇಳೋಕೆ ಸಾವಿರಾರು ಭಕ್ತರು

ಇನ್ನೂ ವರ್ಷದ ಮೈಲಾರಲಿಂಗ ನ ಕಾರ್ಣಿಕ ನುಡಿ ಕೇಳೋಕೆ ಸಾವಿರಾರು ಭಕ್ತರು ಅಗಮಿಸಿದ್ರು ರಾತ್ರಿಯಿಂದಲೇ ದೇವಸ್ಥಾನದಲ್ಲಿ ವಿಶೇಷ‌ಪೂಜೆ  ನಡೆಯಿತು.ನಗರದ ಕೆಲ ರಸ್ತೆಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯ್ತು. ಕಾರ್ಣಿಕದ ನುಡಿ ದಶರತ ಪೂಜಾರ್ ಬಾಯಲಿ ಹೊರಬಿಳುತ್ತಿದ್ದಂತೆ ಭಕ್ತರು ಸಂಭ್ರಮಿಸಿದ್ರು ಪಟಾಕಿ ಸಿಡಿಸಲಾಯ್ತು. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ. ಈ ಹಿಂದೆ ಸುರಿದ ಮಳೆಯಿಂದ ಅನಾಹುತವೇ ಜಾಸ್ತಿ ಆಯ್ತು. ಈಗ ಬರುವ ಮಳೆ ರೈತರಿಗೆ ಅನುಕೂಲವಾಗಲಿದೆ."ಕುರು ಪಾಂಡವರು ಕಾದಾಡಿದರು"(ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟಗಳು ಹೆಚ್ಚಾಗಲಿವೆ. ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಕಿತ್ತಾಟಗಳು ಹೆಚ್ಚಾಗಲಿವೆ)"ಧರ್ಮದ ಜ್ಯೋತಿ ಬೆಳಗಿದರು".ಸರ್ವರು ಎಚ್ಚರದಿಂದರಬೇಕು ಎಂಬ ನುಡಿ ಹಲವು ರೀತಿ ಅರ್ಥಯೈಸಲಾಗುತ್ತಿದೆ. ಇನ್ನೂ ಇಲ್ಲಿನ ಕಾರ್ಣಿಕದ ನುಡಿ ಆ ವರ್ಷದೊಳಗೆ ಅಗುತ್ತೇ ಅನ್ನೋ ನಂಬಿಕೆಯೂ ಇದೆ. ರಾಜಕಾರಣದಲ್ಲಿ ಏಳು ಬಿಳುಗಳು ಅಗಿರೋ ಹಲವು ನಿದರ್ಶನಗಳಿದ್ದು ನುಡಿಯಂತೆ ನಡೆಯುತ್ತೆ ಅನ್ನೋದು ಭಕ್ತರ ಮಾತು.

ಒಟ್ಟಾರೆ, ನಾಲ್ಕೈದು ಶತಮಾನಗಳಿಂದ ಸುಳ್ಳಾಗಂತ ಕಾರ್ಣಿಕ ಭವಿಷ್ಯ ಕಳೆದ ವರ್ಷವೂ ಸತ್ಯವಾಗಿತ್ತು. ಅತಿಯಾದ ಮಳೆ, ಆಗುವ ಬಗ್ಗೆ ಭವಿಷ್ಯವಿತ್ತು. ಈ ವರ್ಷವೂ ಮಳೆ ಬರಲಿದೆ, ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟಗಳು ಹೆಚ್ಚಾಗಲಿವೆ. ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಕಿತ್ತಾಟಗಳು ಹೆಚ್ಚಾಗಲಿದೆ ಎನ್ನವ ನುಡಿ ಇದೆ.
 

Follow Us:
Download App:
  • android
  • ios