ಸಾಮಾನ್ಯವಾಗಿ, ಬಾಲಿವುಡ್‌ನ ಹಾಗೂ ನಮ್ಮದೇ ಸ್ಯಾಂಡಲ್‌ವುಡ್‌ನ ಹಲವು ನಟರು, ನಟಿಯರು, ತಮ್ಮ ಪ್ರತಿಭೆ ಹಾಗೂ ನಟನಾ ಚಾತುರ್ಯದಿಂದ ಜನರ ಮನಸ್ಸನ್ನು ಸೆಳೆಯುತ್ತಾರೆ. ಹಾಗಾದರೆ, ಇವರೆಲ್ಲರೂ ದೊಡ್ಡ ಸ್ಟಾರ್‌ಗಳಾಗಿ ಕೋಟಿ ಕೋಟಿ ರೂಪಾಯಿ ಹಣ ಗಳಿಸಬೇಕಿತ್ತಲ್ಲ. ಆದರೆ ಹಾಗಾಗುತ್ತಿಲ್ಲ ಯಾಕೆ? ಯಾಕೆಂದರೆ ಇವರ ಜಾತಕದ ಕೆಲವು ಮನೆಗಳಲ್ಲಿ ಸಣ್ಣಪುಟ್ಟ ದೋಷ ಇರಬಹುದು. ಅಥವಾ ಇವರ ಜನ್ಮರಾಶಿ, ನಕ್ಷತ್ರದಲ್ಲಿ ಕೆಲವು ತೊಡಕಾದ ಅಂಶಗಳಿರಬಹುದು. ಅಥವಾ ಅವರು ವಾಸಿಸುತ್ತಿರುವ ಮನೆಯಲ್ಲಿ ಅವರ ಯಶಸ್ಸಿಗೆ ತೊಡಕಾದ ಯಾವುದಾದರೂ ಅಂಶಗಳಿರಬಹುದು. ಇದನ್ನು ಸರಿಪಡಿಸದೆ ಅವರು ಸ್ಟಾರ್‌ಗಳಾಗಲು ಸಾಧ್ಯವಿಲ್ಲ.

ಬಾಲಿವುಡ್‌ನ ಕೆಲವು ನಟರು ಹೀಗೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗ ತಲುಪಲು ತಮ್ಮ ಜಾತಕ, ವಾಸ್ತು, ಜ್ಯೋತಿಷ್ಯ ಇತ್ಯಾದಿಗಳ ಮೊರೆ ಹೋಗಿದ್ದಾರೆ. ಅವರಲ್ಲಿ ಅದೃಷ್ಟದ ಹರಳುಗಳ ಮೊರೆ ಹೋದ ಈ ಮೂರು ಸೆಲೆಬ್ರಿಟಗಳ ಜತೆ ನೋಡೋಣ.

 

ಅಮಿತಾಭ್‌ ಬಚ್ಚನ್‌

ಬಾಲಿವುಡ್‌ನ ಶೆಹನ್‌ಶಹಾ ಅನಿಸಿಕೊಂಡಿರುವ ಅಮಿತಾಬ್‌ ಬಚ್ಚನ್‌ ಅವರು ತಮ್ಮ ಮೊದಲ ಚಲನಚಿತ್ರ ಆನಂದ್‌ ಕಾಲದಿಂದಲೇ ಬಾಲಿವುಡ್ಡನ್ನು ಆಳಲು ಶುರು ಮಾಡಿದರು. ಒಂದೊಂದಾಗಿ ಯಶಸ್ಸಿನ ಮೆಟ್ಟಿಲು ಏರುತ್ತ ಹೋದರು. ಆದರೆ ಅವರ ವೃತ್ತಿ ಜೀವನದ ಮಧ್ಯದಲ್ಲಿ, ಅಂದರೆ ಸುಮಾರು 2000ನೇ ಇಸವಿಯಲ್ಲಿ, ಅವರು ತಮ್ಮದೇ ಕಂಪನಿ ಎಬಿಸಿಎಲ್‌ ಅನ್ನು ಸ್ಥಾಪಿಸಿದರು. ಆದರೆ ವ್ಯವಹಾರ ನೆಲಕಚ್ಚಿತು. ಬಚ್ಚನ್‌ ದಿವಾಳಿಯಾದರು. ಇಡೀ ಜಗತ್ತೇ ಹೊಸ ಶತಮಾನವನ್ನು ಎದುರಾಗುತ್ತಿರುವ ಸಂದರ್ಭದಲ್ಲಿ ಬಚ್ಚನ್‌ ಮಾತ್ರ ದಿವಾಳಿಯಾಗಿದ್ದರು, ಅವರ ಬಳಿ ಫಿಲಂಗಳಿರಲಿಲ್ಲ, ಮನೆಯಿರಲಿಲ್ಲ, ಹಣವಿರಲಿಲ್ಲ. ನೂರಾರು ಕೋರ್ಟ್ ಕೇಸುಗಳು. ಈ ದುಃಸ್ಥಿತಿಯಿಂದ ಅಮಿತಾಭ್ ಅವರನ್ನು ಪಾರು ಮಾಡಿದ್ದು ಅದೃಷ್ಟದ ಹರಳುಗಳ ಮೇಲೆ ಅವರು ಇಟ್ಟಿದ್ದ ನಂಬಿಕೆ, ಅವರು ಅಂದಿನಿಂದಲೇ ಪ್ರಖ್ಯಾತ ಜ್ಯೋತಿಜ್ಞರ ಮೊರೆ ಹೊಕ್ಕು ಅವರು ಹೇಳಿದಂತೆ ಎಮೆರಾಲ್ಡ್ (ಪಚ್ಚೆ ಅಥವಾ ಮರಕತ), ಬ್ಲೂ ಸಫೈರ್‌ (ನೀಲಮಣಿ) ಮತ್ತು ಒಪಲ್ (ಕ್ಷೀರಸ್ಫಟಿಕ) ಹರಳುಗಳನ್ನು ಕೈ ಬೆರಳುಗಳ ಉಂಗುರದಲ್ಲಿ ಧರಿಸತೊಡಗಿದರು. ಈ ಮೂರೂ ಹರಳುಗಳು ಕ್ರಮವಾಗಿ ಶುಕ್ರ, ಬುಧ ಹಾಗೂ ಶನಿಯ ಪ್ರತಿನಿಧಿಗಳಾಗಿವೆ. ಇದರಿಂದ ಎಂಥ ಅದ್ಭುತ ಬದಲಾವಣೆ ಆಯಿತೆಂದರೆ ಕೆಲವೇ ವರ್ಷದಲ್ಲಿ ಅವಕಾಶಗಳು ಅಮಿತಾಭ್‌ರನ್ನು ಹುಡುಕಿಕೊಂಡು ಬಂದವು. ಬಚ್ಚನ್‌ ಬಾಲಿವುಡ್‌ನ ಕಿಂಗ್‌ ಎನಿಸಿಕೊಂಡರು.

 

ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ?

 

ಸಲ್ಮಾನ್‌ ಖಾನ್‌

ಬಹುತೇಕರು ನಂಬಲಿಕ್ಕಿಲ್ಲ; ಆದರೆ ಸಲ್ಮಾನ್‌ ಒಳಗೆ ಒಂದು ದೈವಭಕ್ತಿಯ ಕಿಡಿ ಇದೆ. ಮುಂಬಯಿಯ ದೊಡ್ಡ ಗಣೇಶ ಹಬ್ಬ ಲಾಲ್‌ಬಾಗ್‌ ಚಾ ರಾಜಾಗೆ ದೊಡ್ಡ ಮೊತ್ತ ವಂತಿಗೆ ಕೊಡುವಾತನೇ ಸಲ್ಲು ಭಾಯ್‌. ಈತನಿಗೂ ಅದೃಷ್ಟದ ಹರಳುಗಳ ಕ್ರೇಜ್‌ ಇದೆ. ಈತ ಧರಿಸುವುದು ವೈಢೂರ್ಯದ (ಟರ್ಕಾಯಿಸ್‌) ಕಲ್ಲನ್ನು. ಇದು ಸಲ್ಮಾನ್‌ಗೆ ಕೊಡಲ್ಪಟ್ಟದ್ದು ಅವರ ತಂದೆ ಸಲೀಂ ಖಾನ್‌ ಅವರಿಂದ, ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ. ಅಲ್ಲಿಂದಾಚೆಗೆ ಸಲ್ಮಾನ್‌ ವೃತ್ತಿಜೀವನದಲ್ಲಿ ಮುಗ್ಗರಿಸಿದ್ದೇ ಇಲ್ಲ, ಅವನ ಯಾವ ಫಿಲಂಗಳೂ ಅವರೇಜ್‌ಗಿಂತ ಕಡಿಮೆ ಗಳಿಕೆ ಮಾಡಿದ್ದೇ ಇಲ್ಲ. ವೈಢೂರ್ಯದ ಕಲ್ಲಿಗೆ ಅಪೂರ್ವವಾದ ಒಂದು ಶಕ್ತಿ ಇದೆ. ಅದು ಅದನ್ನು ಧರಿಸುವಾತನ ಮೇಲೆ ಇರಬಹುದಾದ ಕೆಡುಕಿನ ಯಾವುದೇ ಶಕ್ತಿಗಳ ಪ್ರಭಾವವನ್ನೂ ತಾನು ಹೀರಿಕೊಂಡು, ಆತನನ್ನು ರಕ್ಷಿಸುತ್ತದೆ. ತನ್ನನ್ನ ಹೊಂದಿದಾತನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ರಕ್ಷಿಸುವುದರಲ್ಲಿ ಈ ಕಲ್ಲಿಗೆ ತುಂಬಾ ಹೆಸರಿದೆ. ಆ ವ್ಯಕ್ತಿ ಒಂದು ವೇಳೆ ವ್ಯಗ್ರ ಸ್ವಭಾವದನೇ ಆಗಿದ್ದರೂ ಈ ಹರಳೂ ಧರಿಸುವುದರಿಂದ ಕೂಲ್‌ ಕೂಲ್‌ ಆಗುತ್ತಾನಂತೆ.

 

ಅಮಿತಾಭ್‌ ಬಚ್ಚನ್‌ ಲಕ್ಕಿ: ಅಷ್ಟಕ್ಕೂ ಅವರ ಮನೆ ವಾಸ್ತು ಹೇಗಿದೆ?

 

ರಾಣಿ ಮುಖರ್ಜಿ

ರಾಣಿ ಮುಖರ್ಜಿ ಕೈಯಲ್ಲಿ ಸದಾ ಕಾಲ ಒಂದು ಬೆರಳಲ್ಲಿ ಎಮೆರಾಲ್ಡ್ ಹಾಕಿದ ಉಂಗುರ ಇರುತ್ತದೆ. ಇದು ತನ್ನು ಅದೃಷ್ಟದ ಕಲ್ಲು ಎಂದು ರಾಣಿ ನಂಬಿದ್ದಾರೆ. ಇದು ವ್ಯಕ್ತಿಯ ಮಾತಿನ ಮೇಲೆ ಪ್ರಭಾವ ಬೀರುತ್ತದೆ. ರಾಣಿ ಮುಖರ್ಜಿಯ ಧ್ವನಿ ಸ್ವಲ್ಪ ಗಂಡಸಿನಂತಿದೆ ಅಲ್ಲವೇ? ಈಕೆಯ ವೃತ್ತಿ ಜೀವನದ ಆರಂಭದಲ್ಲಿ, ಈ ಧ್ವನಿ ಆಕೆಗೆ ನೆಗೆಟಿವ್‌ ಪರಿಣಾಮ ಬೀರಬಹುದು ಎಂದು ಅಲ್ಲರೂ ತರ್ಕಿಸಿದ್ದರು. ಆದರೆ ಹಾಗಾಗಲಿಲ್ಲ.