ಉದ್ಯೋಗ ಸಿಗ್ತಿಲ್ವಾ? ಅಥವಾ ಸಿಕ್ಕ ಉದ್ಯೋಗದಲ್ಲಿ ನೆಮ್ಮದಿ ಇಲ್ವಾ? ಪ್ರತಿ ದಿನ ಕೆಲಸದಲ್ಲಿ ತಪ್ಪುಗಳಾಗುತ್ತಿದ್ದರೆ, ಅಥವಾ ವರ್ಷಗಳಿಂದ ಬಯಸಿದ ಸ್ಥಾನಮಾನ, ಸಂಬಳ ಸಿಗದಿದ್ದರೆ- ಈ ಎರಡೂ ವಿಷಯದಲ್ಲಿ ಯಶಸ್ಸನ್ನು ಪಡೆಯಲು ಈ ಜ್ಯೋತಿಷ್ಯ ಪರಿಹಾರಗಳನ್ನು ಮಾಡಿ.
ಸಂತೋಷ ಮತ್ತು ಸುಸ್ಥಿರ ಜೀವನವನ್ನು ನಡೆಸಲು, ಒಬ್ಬರು ಯಶಸ್ವಿ ಮತ್ತು ಸ್ಥಿರವಾದ ಉದ್ಯೋಗ(job) ಮತ್ತು ವೃತ್ತಿಜೀವನ(career)ವನ್ನು ಹೊಂದಿರಬೇಕು. ಆದರೆ, ಕೆಲವೊಮ್ಮೆ ಅಗತ್ಯವಿರುವ ಎಲ್ಲ ಕಠಿಣ ಕೆಲಸ ಮತ್ತು ಪ್ರಯತ್ನಗಳನ್ನು ಮಾಡಿದರೂ, ನಾವು ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಅಥವಾ, ಉದ್ಯೋಗ ದೊರೆತರೂ ಅದರಲ್ಲಿ ಯಶಸ್ಸು ಲಭಿಸುವುದಿಲ್ಲ. ಬಹಳಷ್ಟು ಕಿರಿಕಿರಿ, ಮಾಡುವ ಕೆಲಸಕ್ಕೆ ತಕ್ಕ ಫಲವಿಲ್ಲದಿರುವುದು ನೆಮ್ಮದಿಯನ್ನೇ ಕಸಿಯುತ್ತದೆ. ಇದಕ್ಕೆ ಜಾತಕದಲ್ಲಿ ದೋಷಪೂರಿತ ಗ್ರಹಗಳ ದುರ್ಬಲ ಮತ್ತು ಕೆಟ್ಟ ಸ್ಥಾನಗಳು ಕಾರಣವಿರಬಹುದು. ಉದ್ಯೋಗವನ್ನು ಪಡೆಯಲು ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಕೆಲವು ಪರಿಣಾಮಕಾರಿ ಜ್ಯೋತಿಷ್ಯ ಪರಿಹಾರಗಳು(astrological remedies) ಇಲ್ಲಿವೆ.
ಕಾಗೆಗಳಿಗೆ ಆಹಾರ
ಜ್ಯೋತಿಷ್ಯ ಸಿದ್ಧಾಂತಗಳ ಪ್ರಕಾರ, ಶನಿಯು ವ್ಯಕ್ತಿಯ ವೃತ್ತಿಜೀವನದ ಮೇಲೆ ಆಳ್ವಿಕೆ ನಡೆಸುವಾಗ ಆತ ವೃತ್ತಿಯಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ನಿರುದ್ಯೋಗ ಸಮಸ್ಯೆ ಎದುರಾಗುತ್ತದೆ. ಅಂಥ ಸಂದರ್ಭದಲ್ಲಿ ಕಾಗೆಗಳಿಗೆ ಬೇಯಿಸಿದ ಅನ್ನ(boiled rice to crows)ವನ್ನು ನೀಡುವುದು ಸುಲಭವಾದ ಜ್ಯೋತಿಷ್ಯ ಪರಿಹಾರವಾಗಿದೆ. ಶನಿ ಗ್ರಹ(planet Saturn)ದ ದುಷ್ಪರಿಣಾಮಗಳನ್ನು ಶಮನಗೊಳಿಸಲು ಈ ಪರಿಹಾರವು ಸಹಾಯ ಮಾಡುತ್ತದೆ.
ಗಾಯತ್ರಿ ಮಂತ್ರ(Gayatri mantra)
ನಿಮ್ಮ ಕೆಲಸದಲ್ಲಿ ಸ್ಥಿರವಾಗಿರಲು ಮತ್ತು ನೀವು ಸೂಕ್ತವಾದ ವೃತ್ತಿಜೀವನದ ಅವಕಾಶವನ್ನು ಹುಡುಕುತ್ತಿದ್ದರೆ ಅದನ್ನು ಗಳಿಸಲು, ಪ್ರತಿದಿನ ಕನಿಷ್ಠ 31 ಬಾರಿ ಗಾಯತ್ರಿ ಮಂತ್ರ(Gayatari Mantra) ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.
ಮಗುಗೆ ಓದಿನಲ್ಲಿ ಆಸಕ್ತಿ ಇಲ್ವಾ? ಸ್ಟಡಿ ರೂಂ ವಾಸ್ತು ಬದಲಿಸಿ..
ಸೂರ್ಯನಿಗೆ ಅರ್ಘ್ಯ
ಪ್ರತಿದಿನ ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿ ಸೂರ್ಯ(Lord Sun)ನಿಗೆ ಬೆಲ್ಲವನ್ನು ಸೇರಿಸಿದ ನೀರನ್ನು ಅರ್ಪಿಸುವುದು ಯಶಸ್ವಿ ವೃತ್ತಿ ಮತ್ತು ಉದ್ಯೋಗ ಜೀವನಕ್ಕಾಗಿ ಅತ್ಯಂತ ಸಾಮಾನ್ಯ ಮತ್ತು ಪರಿಣಾಮಕಾರಿ ಜ್ಯೋತಿಷ್ಯ ಪರಿಹಾರವಾಗಿದೆ.
ಅಂಗೈ ನೋಡಿ ಏಳುವುದು
ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ, ಮೊದಲು ಎರಡು ಅಂಗೈಗಳನ್ನು ನೋಡಬೇಕು. ದುಡಿವ ಕೈಗಳ ಮೇಲೆ ಲಕ್ಷ್ಮಿ ದೇವಿಯು ನೆಲೆಸಿದ್ದಾಳೆ. ಕೈಯ ಮೂಲೆಯಲ್ಲಿ ಗೋವಿಂದನಿದ್ದಾನೆ. ಹೀಗಾಗಿ, ಎದ್ದೊಡನೆ ಕೈ ನೋಡಿಕೊಂಡು 'ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೇ ಸರಸ್ವತಿ, ಕರಮೂಲೇತು ಗೋವಿಂದ, ಪ್ರಭಾತೇ ಕರದರ್ಶನಂ' ಮಂತ್ರವನ್ನು ಪಠಿಸಬೇಕು.
ಗಣೇಶ ಬೀಜಮಂತ್ರ
ವಿಘ್ನ ವಿನಾಶಕ ಎಂದು ಕರೆಯಲ್ಪಡುವ ಗಣೇಶ(Lord Ganesh)ನ ಬೀಜ ಮಂತ್ರವನ್ನು ಪಠಿಸುವುದು ಉದ್ಯೋಗ ಪಡೆಯುವಲ್ಲಿ ನಿರಂತರ ವಿಳಂಬ ಮತ್ತು ಅಡೆತಡೆಗಳನ್ನು ಎದುರಿಸುತ್ತಿರುವವರಿಗೆ ಅಪಾರ ಪ್ರಯೋಜನಕಾರಿಯಾಗಿದೆ. ಈ ಜ್ಯೋತಿಷ್ಯ ಪರಿಹಾರವು ವ್ಯಕ್ತಿಯ ವೃತ್ತಿಜೀವನವನ್ನು ಸ್ಥಿರಗೊಳಿಸಲು ಸಹ ಸಹಾಯ ಮಾಡುತ್ತದೆ. ಬೀಜ ಮಂತ್ರದ ಪರಿಚಯವಿಲ್ಲದಿದ್ದರೆ, 'ಓಂ ಗನ್ ಗಣಪತ್ಯೇ ನಮಃ' ಮಂತ್ರವನ್ನು ಸಹ ಪಠಿಸಬಹುದು.
ನಿಂಬೆ ಲವಂಗ
ವೃತ್ತಿಜೀವನದಲ್ಲಿ ಯಶಸ್ಸಿಗೆ ಮತ್ತೊಂದು ಪರಿಣಾಮಕಾರಿ ಪರಿಹಾರವೆಂದರೆ ನಿಂಬೆ(lemon)ಯನ್ನು ತೆಗೆದುಕೊಂಡು ಅದರಲ್ಲಿ ನಾಲ್ಕು ಲವಂಗ(cloves)ವನ್ನು ಚುಚ್ಚುವುದು. ನಂತರ ಅದನ್ನು ಬಲಗೈಯಲ್ಲಿ ತೆಗೆದುಕೊಂಡು ಅತ್ಯಂತ ಭಕ್ತಿಯಿಂದ, 'ಓಂ ಶ್ರೀ ಹನುಮತೇ ನಮಃ' ಎಂಬ ಮಂತ್ರವನ್ನು 21 ಬಾರಿ ಪಠಿಸಿ. ಈ ವಿಧಾನವನ್ನು ಪೂರ್ಣಗೊಳಿಸಿದ ಬಳಿಕ, ನಿಂಬೆಹಣ್ಣನ್ನು ಎಸೆಯಬೇಡಿ. ಬದಲಿಗೆ ಅದನ್ನು ನಿಮ್ಮ ಪಾಕೆಟ್ ಅಥವಾ ಪರ್ಸ್‌ನಲ್ಲಿ ಇರಿಸಿ. ಪ್ರತಿಯೊಂದು ಪ್ರಮುಖ ಕಾರ್ಯದಲ್ಲಿ ಯಶಸ್ವಿಯಾಗಲು ಈ ಪರಿಹಾರವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ನೀವು ಸಂದರ್ಶನಕ್ಕೆ ಹೋಗುತ್ತಿರುವಾಗ ಅಥವಾ ವ್ಯವಹಾರ ಸಂಬಂಧಿತ ಕೆಲಸಕ್ಕಾಗಿ ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಲು ಹೋಗುವಾಗ ಈ ಪರಿಹಾರ ಅನುಸರಿಸಿ.
ಈ ಹೆಸರಿನವರಿಗೆ ವಿದೇಶ ಯೋಗ ಹೆಚ್ಚು!
ಬಾದಾಮಿ ದಾನ
ಬಾದಾಮಿಯನ್ನು ಬಡವರು ಮತ್ತು ನಿರ್ಗತಿಕರಿಗೆ ಪ್ರತಿ ದಿನ ಮತ್ತು ವಿಶೇಷವಾಗಿ ಭಾನುವಾರದಂದು ದಾನ ಮಾಡುವುದು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವ ಜ್ಯೋತಿಷ್ಯ ಪರಿಹಾರಗಳಲ್ಲಿ ಒಂದಾಗಿದೆ.
