ಈ ಹೆಸರಿನವರಿಗೆ ವಿದೇಶ ಯೋಗ ಹೆಚ್ಚು!
ಪ್ರತಿಯೊಬ್ಬರಿಗೂ ಅವರ ಜೀವನದ ಮೇಲೆ ಹೆಸರಿನ ಪ್ರಭಾವ ಬಹಳ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಹೆಸರಿಟ್ಟಿದ್ದರೆ, ಈ ಅಕ್ಷರಗಳಿಂದ ಹೆಸರು ಆರಂಭವಾಗುವವರಿಗೆ ವಿದೇಶದಲ್ಲಿ ಹೋಗಿ ನೆಲೆಸುವ ಯೋಗ ಹೆಚ್ಚಿರುತ್ತದೆ.
ಹೆಸರಿನ ಪ್ರಭಾವ ಎಲ್ಲದರ ಮೇಲಿರುವಂತೆ ವೃತ್ತಿಜೀವನದ ಯಶಸ್ಸಿನ ಮೇಲೆ ಕೂಡಾ ಇರುತ್ತದೆ. ಪ್ರಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಲು ಬಯಸುತ್ತಾನೆ, ಇದಕ್ಕಾಗಿ ಅವನು ಎಲ್ಲ ಪ್ರಯತ್ನಗಳನ್ನು ಮತ್ತು ಕಠಿಣ ಪರಿಶ್ರಮವನ್ನು ಮಾಡುತ್ತಾನೆ. ಇದಕ್ಕಾಗಿ, ವ್ಯಕ್ತಿ ಏಳು ಸಮುದ್ರಗಳನ್ನು ದಾಟಲು ಸಿದ್ಧವಾಗಿರುತ್ತಾನೆ. ಚಾಣಕ್ಯ ನೀತಿ ಹೇಳುತ್ತದೆ ಯಶಸ್ವಿ ವ್ಯಾಪಾರಿ ಎಂದರೆ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ವ್ಯಾಪಾರ ಮತ್ತು ವಿದೇಶಿ ಪ್ರಯಾಣದ ಯಶಸ್ಸಿನ ಗುಟ್ಟು ಕೂಡ ಹೆಸರಿನ ಅಕ್ಷರಗಳಲ್ಲಿ ಅಡಗಿದೆ.
ಈಗಂತೂ ಪ್ರತಿಯೊಬ್ಬರಿಗೂ ವಿದೇಶ ಸುತ್ತುವ ಆಸೆ. ಅದರಲ್ಲೂ ಕಚೇರಿಯ ಮೂಲಕ ವಿದೇಶಕ್ಕೆ ಹೋಗಿ ನೆಲೆಸುವ ಅವಕಾಶ ಸಿಗುವುದು ಕೂಡಾ ಒಂದು ಯಶಸ್ಸಿನಂತೆ ಭಾವಿಸುತ್ತಾರೆ. ಹೀಗೆ ವಿದೇಶದಲ್ಲಿ ದುಡಿದಾಗ ದುಡಿಮೆಯೂ ಜಾಸ್ತಿ ಎನ್ನುವುದು ಒಂದು ಕಾರಣವಾದರೆ, ಬೇರೆ ದೇಶ, ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎನ್ನುವುದು ಮತ್ತೊಂದು ಕಾರಣ. ಯಾವೆಲ್ಲ ಅಕ್ಷರದಿಂದ ಹೆಸರು ಆರಂಭವಾಗುವವರು ವಿದೇಶಕ್ಕೆ ಹೋಗಿ ನೆಲೆಸುವ, ಜೊತೆಗೆ ವೃತ್ತಿಜೀವನದಲ್ಲಿ ಯಶಸ್ವಿಯಾಗುವ ಸಂಭಾವ್ಯತೆ ಹೊಂದಿರುತ್ತಾರೆ ನೋಡೋಣ.
ಪ(Letter P)
'ಪಿ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ವಿದೇಶ ಪ್ರವಾಸ ಮಾಡುತ್ತಾರೆ. ಅಂಥವರು ಸಾಮಾನ್ಯವಾಗಿ ಶಿಕ್ಷಣ ಪಡೆಯಲು ಮತ್ತು ವ್ಯಾಪಾರ ಮಾಡಲು ಪರದೇಶಗಳಿಗೆ ಪ್ರಯಾಣಿಸುತ್ತಾರೆ. ಅವರು ಕೊಂಚ ಹೆಚ್ಚಿನ ಪ್ರಯತ್ನ ಹಾಕಿದರೆ, ವಿದೇಶದಲ್ಲಿ ಉತ್ತಮ ಹಣವನ್ನು ಗಳಿಸುತ್ತಾರೆ. ಇವರು ತಮ್ಮ ಪ್ರತಿಭೆ ಮತ್ತು ಕೆಲಸ ಮಾಡುವ ಕೌಶಲ್ಯ(talent and skill)ದಿಂದ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ.
ಸ(Letter S)
'ಎಸ್' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು, ತಮ್ಮ ಸಾಮರ್ಥ್ಯದಿಂದ ವಿದೇಶಿ ನೆಲದಲ್ಲಿ ಯಶಸ್ಸಿನ ಶಿಖರವನ್ನು ತಲುಪುತ್ತಾರೆ. ಇವರು ಯಾವಾಗಲೂ ಹೊಸದನ್ನು ಪ್ರಯತ್ನಿಸಲು ಸಿದ್ಧರಿರುತ್ತಾರೆ. ಇವರು ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ಕಷ್ಟಪಟ್ಟು ಕೆಲಸ ಮಾಡಲು ಹೆದರುವುದಿಲ್ಲ. ಅವರು ಖಂಡಿತವಾಗಿಯೂ ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಇವರ ಮೇಲೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಕೃಪೆಯೂ ಇರುತ್ತದೆ.
ಕ(Letter K)
'ಕೆ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಗಂಭೀರವಾಗಿರುತ್ತಾರೆ ಮತ್ತು ತಮ್ಮ ಗುರಿಗಳ ಬಗ್ಗೆ ತಿಳಿದಿರುತ್ತಾರೆ. ಅಂಥ ಜನರು ವಿದೇಶಿ ಸಂಪರ್ಕ ಮತ್ತು ಸಂಬಂಧಗಳಿಂದ ಹಣವನ್ನು ಪಡೆಯುತ್ತಾರೆ. ಅಂಥವರಿಗೆ ವಿದೇಶದಲ್ಲಿ ಅನೇಕ ಸ್ನೇಹಿತರು ಮತ್ತು ಮಿತ್ರರು ಇರುತ್ತಾರೆ. ಇಂಥವರು ಹಲವು ದೇಶಗಳಿಗೆ ಪ್ರವಾಸ ಮಾಡಿ ಹಲವು ದೇಶಗಳ ವ್ಯಾಪಾರದ ಮೂಲಕ ಹಣ ಗಳಿಸುತ್ತಾರೆ. ಅಷ್ಟೇ ಅಲ್ಲ, ಈ ಅಕ್ಷರದ ಹೆಸರಿನ ಹುಡುಗಿಯರಿಗೆ ಪತಿಯ ಕೆಲಸದ ಕಾರಣದಿಂದಾಗಿ ವಿದೇಶ ಸುತ್ತುವ ಅವಕಾಶಗಳು ಸಿಗುತ್ತವೆ.