Asianet Suvarna News Asianet Suvarna News

ಮಗುಗೆ ಓದಿನಲ್ಲಿ ಆಸಕ್ತಿ ಇಲ್ವಾ? ಸ್ಟಡಿ ರೂಂ ವಾಸ್ತು ಬದಲಿಸಿ..

ವಾಸ್ತು ಶಾಸ್ತ್ರವು ಮಾನವನ ಬದುಕನ್ನು ಸುಲಭ ಹಾಗೂ ಚೆಂದಗೊಳಿಸುವ ಪ್ರತಿಯೊಂದಕ್ಕೂ ಸಂಬಂಧಿಸಿದೆ. ಅಂತೆಯೇ ಮಕ್ಕಳ ಓದಿಗೆ ಕೂಡಾ. ಮಕ್ಕಳು ಓದಿನಲ್ಲಿ ಆಸಕ್ತಿ ತೋರುತ್ತಿಲ್ಲವೆಂದರೆ ಅವರ ಓದಿನ ಕೊಠಡಿಯ ವಾಸ್ತು ಬದಲಿಸಿ. ಏನು ಮಾಡಬೇಕು ನಾವ್ ಹೇಳ್ತೀವಿ ಕೇಳಿ. 

vastu tips for your child's study room at home skr
Author
Bangalore, First Published Jun 12, 2022, 4:00 PM IST

ಯಾರೇ ಆಗಲಿ ಓದುವಾಗ ಶಾಂತ, ಸ್ವಚ್ಛ ಹಾಗೂ ಸುಂದರ ವಾತಾವರಣವಿರಬೇಕು. ಮನಸ್ಸು ಧನಾತ್ಮಕ(Positive)ವಾಗಿರಬೇಕು. ಗುರಿ ಇರಬೇಕು. ಆಗಲೇ ಏಕಾಗ್ರತೆ(concentration) ಸಾಧಿಸಲು ಸಾಧ್ಯ. ಇದಕ್ಕೆ ನಿಮ್ಮ ಮಕ್ಕಲೂ ಹೊರತಲ್ಲ. ಅವರಿಗೆ ಓದುವ ಕೊಠಡಿ(Study room)ಯಲ್ಲಿ ಡಿಸ್ಟರ್ಬೆನ್ಸ್ ಜಾಸ್ತಿ ಇದ್ದರೆ ಮನಸ್ಸನ್ನು ಓದಿನಲ್ಲಿ ನೆಲೆಸುವುದು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ವಾಸ್ತುವಿನಲ್ಲಿ ಹೇಳಿದ ಕೆಲ ವಿಷಯಗಳು ನಿಮ್ಮ ಸಹಾಯಕ್ಕೆ ಬರಬಹುದು. ಮಕ್ಕಳ ಓದಿನ ಕೊಠಡಿಯನ್ನು ವಾಸ್ತುವಿನ ಅನುಸಾರ ಜೋಡಿಸುವುದರಿಂದ ಅವರಲ್ಲಿ ಓದುವ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ(Memory power) ಎಲ್ಲವೂ ಹೆಚ್ಚುತ್ತದೆ. ಇದು ಅವರ ಫಲಿತಾಂಶದ ಮೇಲೆ, ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಕ್ಕಳು ಚೆನ್ನಾಗಿ ಓದಬೇಕು ಎಂದರೆ ಅವರು ಓದುವ ಕೋಣೆಯ ವಾಸ್ತು(vastu)ವನ್ನು ಹೀಗೆ ಬದಲಾಯಿಸಿ. 

  • ಅಧ್ಯಯನ ಕೊಠಡಿಯು ಉತ್ತರ(North), ಈಶಾನ್ಯ ಅಥವಾ ಪೂರ್ವದಲ್ಲಿ ಸೂಕ್ತವಾಗಿ ನೆಲೆಗೊಂಡಿರಬೇಕು. ಕೋಣೆಯ ಪಶ್ಚಿಮ(west) ಮತ್ತು ನೈಋತ್ಯ ದಿಕ್ಕು ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ. ಎಲ್ಲಾ ಇತರ ದಿಕ್ಕುಗಳು ಮಗುವಿನಲ್ಲಿ ಸೋಮಾರಿತನ(laziness), ಚಡಪಡಿಕೆ ಮತ್ತು ಉದ್ವೇಗದ ಭಾವನೆಯನ್ನು ಉಂಟುಮಾಡುತ್ತವೆ.
  • ಅಧ್ಯಯನ ಕೊಠಡಿಯಲ್ಲಿ ಸರಸ್ವತಿ ದೇವಿಯ (ಜ್ಞಾನ) ಮತ್ತು ಭಗವಾನ್ ಗಣೇಶನ (ಅದೃಷ್ಟ) ಚಿತ್ರಗಳನ್ನು ಇರಿಸಿ. ಇದು ಮಗುವಿನ ಟೇಬಲ್ ಮುಂಭಾಗದಲ್ಲಿರಬೇಕು.
  • ವಿದ್ಯಾರ್ಥಿಗಳು ಪೂರ್ವ(east)ದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಅವರು ಧಾರ್ಮಿಕ ಕಾರ್ಯಗಳಲ್ಲಿ ಜ್ಞಾನ ಪಡೆಯುತ್ತಾರೆ. ಗ್ರಹಿಸುವ ಶಕ್ತಿ, ಸ್ಮರಣ ಶಕ್ತಿ ಹೆಚ್ಚುತ್ತದೆ.
  • ನೆನಪಿನ ಶಕ್ತಿ, ಸಾಮರ್ಥ್ಯ ಹೆಚ್ಚಬೇಕಾದರೆ ಓದುವ ಜಾಗದಲ್ಲಿ ವಾಶಿಂಗ್‌ಮಷಿನ್(washing machine) ಯಾವತ್ತೂ ಇಡಬಾರದು.
  • ಅಧ್ಯಯನ ಕೊಠಡಿಯ ಮಧ್ಯದಲ್ಲಿ ಶೇಖರಣಾ ಕ್ಯಾಬಿನೆಟ್‌(Storage cabinet)ಗಳನ್ನು ಇರಿಸಬೇಡಿ. ತೆರೆದ ಶೇಖರಣಾ ಸ್ಥಳಗಳಿಗಿಂತ ಮುಚ್ಚಿದ ಶೇಖರಣಾ ಸ್ಥಳಗಳನ್ನು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

    ಈ ಹೆಸರಿನವರಿಗೆ ವಿದೇಶ ಯೋಗ ಹೆಚ್ಚು!
     
  • ದಕ್ಷಿಣ(South), ನೈಋತ್ಯ ಅಥವಾ ಪಶ್ಚಿಮದ ಗೋಡೆಗಳ ಮೇಲೆ ಪುಸ್ತಕಗಳು ಮತ್ತು ಇತರ ಅಧ್ಯಯನ-ಸಂಬಂಧಿತ ವಸ್ತುಗಳ ಸಂಗ್ರಹಣೆ ಬೀರು ಇರಿಸಿ. 
  • ಮಗು ಓದುವಾಗ ಅದರ ತಲೆಯ ಮೇರಕ್ಕೆ ಓವರ್‌ಹೆಡ್ ಬೀಮ್ ಇರಕೂಡದು. ಅದು ಗಮನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗೊಂದಲವನ್ನು ಉಂಟುಮಾಡುತ್ತದೆ.
  • ಪಶ್ಚಿಮದತ್ತ ಮುಖ ಮಾಡಿ ಅಭ್ಯಾಸ ಮಾಡಿದರೆ ಮಕ್ಕಳು ಗಣಿತ ಮತ್ತು ವಿಜ್ಞಾನ(Science) ವಿಷಯಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. 
  • ಕೋಣೆಯ ದಕ್ಷಿಣ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಭಾಷಣ ಮಾಡುವ ಸಾಮರ್ಥ್ಯ, ಉದ್ಯಮಿಯಾಗುವ ಮುನ್ಸೂಚನೆಗಳು ಕಂಡು ಬರುತ್ತವೆ.
  • ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರದಿದ್ದಲ್ಲಿ ಆ ವಿದ್ಯಾರ್ಥಿಗಳು ಪಶ್ಚಿಮ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುವಂತೆ ಸಲಹೆ ನೀಡಬೇಕು.
  • ಸ್ಟಡಿ ರೂಮ್ ಬಣ್ಣ(wall colour) ಪಿಂಕ್‌ ಇದ್ದರೆ ಉತ್ತಮ. ವಾಸ್ತು ಶಾಸ್ತ್ರದ ಪ್ರಕಾರ ತಿಳಿ ಬಣ್ಣಗಳು ವಿದ್ಯಾರ್ಥಿಗಳ ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ. ತಿಳಿ ಹಳದಿ, ತಿಳಿ ಹಸಿರು, ತಿಳಿ ನೀಲಿಯೂ ಉತ್ತಮ.
  • ಸುತ್ತಲಿನ ಶಕ್ತಿಯನ್ನು ಸಂಪೂರ್ಣವಾಗಿ ಸಮತೋಲನಗೊಳಿಸಲು ಮತ್ತು ಉತ್ತಮ ಫಲಿತಾಂಶಗಳನ್ನು ನೀಡಲು, ಅಧ್ಯಯನದ ಮೇಜಿನ ಮೇಲೆ ಸ್ಫಟಿಕ(crystal) ಅಥವಾ ತಾಮ್ರದ ಪಿರಮಿಡ್(pyramid) ಮತ್ತು/ಅಥವಾ ಸ್ಪಷ್ಟವಾದ ಸ್ಫಟಿಕ ಶಿಲೆಯನ್ನು ಇರಿಸಿ. ಈಶಾನ್ಯ ಮೂಲೆಯಲ್ಲಿ ಸ್ಫಟಿಕ ಗೋಳವನ್ನು ಇರಿಸಿ.
  • ಸ್ಟಡಿ ಟೇಬಲ್ ಎಲ್ಲ ಸಮಯದಲ್ಲೂ ಅಚ್ಚುಕಟ್ಟಾಗಿ, ಸ್ವಚ್ಛವಾಗಿ ಇರಬೇಕು.
  • ಸ್ಟಡಿ ಟೇಬಲ್‌ನ ಆಗ್ನೇಯ ಮೂಲೆಯಲ್ಲಿ ಟೇಬಲ್ ಲ್ಯಾಂಪ್ ಮತ್ತು ಕಂಪ್ಯೂಟರ್ (ಯಾವುದಾದರೂ ಇದ್ದರೆ) ಮತ್ತು ಕೋಣೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಲೋಲಕದ ಗೋಡೆ ಗಡಿಯಾರವನ್ನು ಇರಿಸಿ.

    ಪ್ರೀತಿಯನ್ನು ಆಕರ್ಷಿಸುವುದು ಹೇಗೆ? ಫೆಂಗ್ ಶುಯ್‌ನಲ್ಲಿ ಟ್ರಿಕ್ಸ್ ಇವೆ!
     
  • ಅಧ್ಯಯನ ಕೊಠಡಿಯು ಸಾಕಷ್ಟು ಪ್ರಮಾಣದ ನೈಸರ್ಗಿಕ ಬೆಳಕನ್ನು(Sun light) ಪಡೆಯಬೇಕು. ಅದಕ್ಕಾಗಿ ಉತ್ತರ, ಪೂರ್ವ ಅಥವಾ ಈಶಾನ್ಯ(North east)ದಲ್ಲಿ ಕಿಟಕಿಗಳನ್ನು ಇರಿಸಿ. ಬೆಳಗಿನ ಹೊತ್ತಿನಲ್ಲಿ ಸದಾ ಅವು ತೆರೆದಿರಬೇಕು. 
  • ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ ಮಕ್ಕಳು ಎಂದಿಗೂ ಖಾಲಿ ಗೋಡೆಯತ್ತ ಮುಖ ಹಾಕಿ ಕೂರಬಾರದು. ಬದಲಾಗಿ, ಉತ್ತರ/ಪೂರ್ವದ ಗೋಡೆಯಲ್ಲಿ ಅವರ ಎಲ್ಲ ಟ್ರೋಫಿಗಳು, ಪ್ರಮಾಣಪತ್ರಗಳು ಇದ್ದರೆ ಒಳಿತು. ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಪೂರ್ತಿದಾಯಕ ವ್ಯಕ್ತಿಗಳ ಫೋಟೋಗಳನ್ನು ಸಹ ಬಳಸಬಹುದು.
  • ಅಧ್ಯಯನ ಕೊಠಡಿ ಯಾವಾಗಲೂ ನಾಲ್ಕು ಮೂಲೆಗಳನ್ನು ಹೊಂದಿರಬೇಕು.
Follow Us:
Download App:
  • android
  • ios