-ಡಾ| ಹರಿಶ್ಚಂದ್ರ .ಪಿ. ಸಾಲಿಯಾನ್ ಮೂಲ್ಕಿ

ಮೇಷ ಲಗ್ನ : ಮೇಷ ಲಗ್ನದಲ್ಲಿ ಹುಟ್ಟಿದವರಿಗೆ ಶನಿಯು ಬಾಧಕಾಧಿಪತಿ. ಈ ಲಗ್ನದವರಿಗೆ ಭಾನುವಾರ, ಸೋಮವಾರ, ಶುಕ್ರವಾರ, ಶನಿವಾರ ಒಳ್ಳೆಯ ದಿನ. ಇವರಿಗೆ ಅದೃಷ್ಟದ ಹರಳು ವಜ್ರ ಮತ್ತು ನೀಲ. ಅದೃಷ್ಟದ ಬಣ್ಣ ನೀಲಿ, ನಸು ಹಳದಿ. ಅದೃಷ್ಟ ಸಂಖ್ಯೆ:  6,8,9

ವೃಷಭ ಲಗ್ನ : ವೃಷಭ ಲಗ್ನದಲ್ಲಿ ಹುಟ್ಟಿದವರಿಗೆ ಶನಿಯು ಬಾಧಕಾಧಿಪತಿ. ಈ ಲಗ್ನದವರಿಗೆ ಬುಧವಾರ ಮತ್ತು ಗುರುವಾರ, ಶುಕ್ರವಾರ ಒಳ್ಳೆಯ ದಿನ. ಇವರ ಅದೃಷ್ಟದ ಹರಳು ವಜ್ರ ಹಾಗೂ ಬ್ರಹ್ಮ ಪಚ್ಚೆ. ಅದೃಷ್ಟದ ಬಣ್ಣಗಳು ತಿಳಿ ಕೆಂಪು, ಹಸಿರು ಮತ್ತು ಬಿಳುಪು. ಅದೃಷ್ಟ ಸಂಖ್ಯೆ:  5,6,8

ಮಿಥುನ ಲಗ್ನ: ಮಿಥುನ ಲಗ್ನದಲ್ಲಿ ಹುಟ್ಟಿದವರಿಗೆ ಗುರು ಬಾಧಕಾಧಿಪತಿ. ಈ ಲಗ್ನದವರಿಗೆ ಬುಧವಾರ ಮತ್ತು ಗುರುವಾರ ಒಳ್ಳೆಯದಿನ. ಇವರ ಅದೃಷ್ಟದ ಹರಳು ಪಚ್ಚೆ ಮತ್ತು ಕನಕ ಪುಷ್ಯರಾಗ ಅದೃಷ್ಟದ ಬಣ್ಣಗಳು ತೆಳು ಹಳದಿ ಮತ್ತು ಬಿಳುಪು. ಅದೃಷ್ಟ ಸಂಖ್ಯೆ:  3,5,6 

ಕೆಟ್ಟದ್ದನ್ನು ಮಾತ್ರವಲ್ಲ, ಒಳ್ಳೇದನ್ನೂ ಮಾಡ್ತಾನೆ ಈ ಶನಿ!

ಕರ್ಕಾಟಕ ಲಗ್ನ: ಕರ್ಕಾಟಕ ಲಗ್ನದಲ್ಲಿ ಹುಟ್ಟಿದವರಿಗೆ ಶುಕ್ರನು ಬಾಧಕಾಧಿಪತಿ. ಈ ಲಗ್ನದವರಿಗೆ ಮಂಗಳವಾರ, ಶುಕ್ರವಾರ ಒಳ್ಳೆಯದಿನ. ಇವರ ಅದೃಷ್ಟದ ಹರಳು ಹವಳ, ವಜ್ರ ಮತ್ತು ಕೆಂಪು. ಅದೃಷ್ಟದ ಬಣ್ಣಗಳು ನಸು ಹಳದಿ, ಕೆಂಪು ಮತ್ತು ಬಿಳುಪು. ಅದೃಷ್ಟ ಸಂಖ್ಯೆ:  1,2,6,9

ಸಿಂಹ ಲಗ್ನ: ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜನು ಬಾಧಕಾಧಿಪತಿ. ಈ ಲಗ್ನದವರಿಗೆ ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಒಳ್ಳೆಯ ದಿನ. ಇವರ ಅದೃಷ್ಟದ ಹರಳು ಪಚ್ಚೆ ಮತ್ತು ಕೆಂಪು. ಅದೃಷ್ಟದ ಬಣ್ಣಗಳು ಕಂದು ಮತ್ತು ಹಸಿರು. ಅದೃಷ್ಟ ಸಂಖ್ಯೆ: 1,4,6,9 

ಕನ್ಯಾ ಲಗ್ನ: ಕನ್ಯಾ ಲಗ್ನದಲ್ಲಿ ಹುಟ್ಟಿದವರಿಗೆ ಗುರು ಗ್ರಹವು ಬಾಧಕಾಧಿಪತಿ. ಈ ಲಗ್ನದವರಿಗೆ ಬುಧವಾರ, ಶುಕ್ರವಾರ ಒಳ್ಳೆಯ ದಿನಗಳು. ಇವರಿಗೆ ಅದೃಷ್ಟದ ಹರಳು ಕನಕ ಪುಷ್ಯರಾಗ ವಜ್ರ ಮತ್ತು ಪಚ್ಚೆ. ಈ ಲಗ್ನದವರಿಗೆ ಅದೃಷ್ಟದ ಬಣ್ಣಗಳು ಬಿಳುಪು, ಹಸಿರು ಮತ್ತು ಹಳದಿ, ಅದೃಷ್ಟ ಸಂಖ್ಯೆ: 6,8,2 

2020ರಲ್ಲಿ ಸಂಗಾತಿ ಸಿಗೋ ಲಕ್‌ ನಿಮಗಿದ್ಯಾ? ಅದೃಷ್ಟ ರಾಶಿಗಳ ಪಟ್ಟಿ ಇಲ್ಲಿದೆ!

ತುಲಾ ಲಗ್ನ: ತುಲಾ ಲಗ್ನದಲ್ಲಿ ಹುಟ್ಟಿದವರಿಗೆ ರವಿಯು ಬಾಧಕಾಧಿಪತಿ. ಈ ಲಗ್ನದವರಿಗೆ ಸೋಮವಾರ, ಆದಿತ್ಯವಾರ ಒಳ್ಳೆಯ ದಿನ. ಇವರಿಗೆ ಅದೃಷ್ಟದ ಹರಳು ಹವಳ ಮತ್ತು ಬ್ರಹ್ಮ ನೀಲ. ಅದೃಷ್ಟದ ಬಣ್ಣಗಳು ಕಿತ್ತಳೆ, ಕೆಂಪು, ನಸು ಹಳದಿ. ಅದೃಷ್ಟದ ಸಂಖ್ಯೆ: 1,7,2,4 

ವೃಶ್ಚಿಕ ಲಗ್ನ: ವೃಶ್ಚಿಕ ಲಗ್ನದಲ್ಲಿ ಹುಟ್ಟಿದವರಿಗೆ ಚಂದ್ರಗ್ರಹವು ಬಾಧಕಾಧಿಪತಿ. ಈ ಲಗ್ನದವರಿಗೆ   ಸೋಮವಾರ, ಮಂಗಳವಾರ, ಗುರುವಾರ, ಆದಿತ್ಯವಾರ ಒಳ್ಳೆಯದಿನ. ಇವರಿಗೆ ಅದೃಷ್ಟದ ಹರಳು ವಜ್ರ, ಕನಕ, ಪುಷ್ಯ ಮತು ಪಚ್ಚೆ. ಈ ಲಗ್ನದವರಿಗೆ ಕೆಂಪು, ಕಿತ್ತಳೆ, ಹಳದಿ, ನಸುಹಳದಿ ಒಳ್ಳೆಯ ಬಣ್ಣಗಳು. ಅದೃಷ್ಟದ ಸಂಖ್ಯೆ: 3,7,9,1,4

ಧನು ಲಗ್ನ : ಧನು ಲಗ್ನದಲ್ಲಿ ಹುಟ್ಟಿದವರಿಗೆ ಬುಧ ಗ್ರಹ ಬಾಧಕಾಧಿಪತಿ. ಈ ಲಗ್ನದವರಿಗೆ ಶುಕ್ರವಾರ, ಶನಿವಾರ, ಗುರುವಾರ ಒಳ್ಳೆಯ ದಿನ. ಇವರಿಗೆ ಅದೃಷ್ಟದ ಹರಳು ಕನಕ ಪುಷ್ಯರಾಗ ಬ್ರಹ್ಮನೀಲ, ಪಚ್ಚೆ, ಈ ಲಗ್ನದವರಿಗೆ ಹಸಿರು, ಕಿತ್ತಳೆ, ತಿಳಿ ನೀಲಿ ಹಾಗೂ ಕೆಂಪು ಒಳ್ಳೆಯ ಬಣ್ಣಗಳು, ಅದೃಷ್ಟ ಸಂಖ್ಯೆ: 3,5 ,6

ಮಕರ ಲಗ್ನ: ಮಕರ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ಗ್ರಹವು ಬಾಧಕಾಧಿಪತಿ. ಈ ಲಗ್ನದವರಿಗೆ ಆದಿತ್ಯವಾರ, ಮಂಗಳವಾರ, ಶುಕ್ರವಾರ ಶುಭ ದಿನ. ಇವರಿಗೆ ಅದೃಷ್ಟದ ಹರಳು ಹವಳ, ವಜ್ರ, ಬ್ರಹ್ಮನೀಲ. ಇವರಿಗೆ ಬಿಳುಪು ಮತ್ತು ನೀಲಿ ಒಳ್ಳೆಯ ಬಣ್ಣಗಳು. ಅದೃಷ್ಟದ ಸಂಖ್ಯೆ : 6,8,9

ಈ ರಾಶಿಯವರೊಡನೆ ಡೇಟ್ ಹೋಗುವ ಮುನ್ನ ಎರಡು ಬಾರಿ ಯೋಚಿಸಿ!

ಕುಂಭ ಲಗ್ನ: ಕುಂಭ ಲಗ್ನದಲ್ಲಿ ಹುಟ್ಟಿದವರಿಗೆ ಶುಕ್ರ ಗ್ರಹವು ಬಾಧಕಾಧಿಪತಿ. ಈ ಲಗ್ನದವರಿಗೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಒಳ್ಳೆಯ ದಿನ. ಇವರಿಗೆ ಅದೃಷ್ಟದ ಹರಳು ಹವಳ ರೂಬಿ, ಕನಕ, ಪುಷ್ಯರಾಗ ಒಳ್ಳೆಯ ಬಣ್ಣಗಳು ಕೆಂಪು, ಹಳದಿ ಮತ್ತು ಬಿಳುಪು. ಅದೃಷ್ಟದ ಸಂಖ್ಯೆ: 3,7,9

ಮೀನ ಲಗ್ನ : ಮೀನ ಲಗ್ನದಲ್ಲಿ ಹುಟ್ಟಿದವರಿಗೆ ಬುಧನು ಬಾಧಕಾಧಿಪತಿ. ಈ ಲಗ್ನದವರಿಗೆ ಆದಿತ್ಯವಾರ, ಮಂಗಳವಾರ, ಗುರುವಾರ ಒಳ್ಳೆಯ ದಿನ. ಇವರಿಗೆ ಅದೃಷ್ಟದ ಹರಳು, ಹವಳ, ಮುತ್ತು, ಕನಕ, ಪುಷ್ಯರಾಗ ಅದೃಷ್ಟದ ಬಣ್ಣಗಳು ಕಿತ್ತಳೆ, ನಸು ಹಳದಿ, ಗುಲಾಬಿ. ಅದೃಷ್ಟ ಸಂಖ್ಯೆ: 3,4,9