Asianet Suvarna News Asianet Suvarna News

Vaastu: ಜಸ್ಟ್ ಮ್ಯಾರೀಡ್ ಕಪಲ್ ಕೋಣೆ ಹೀಗಿರಲಿ..!

ಈಗಂತೂ ಸಾಲು ಸಾಲು ಮದುವೆಗಳು ಆರಂಭವಾಗಿವೆ. ಮದುವೆ ತಯಾರಿಯಲ್ಲಿರುವ ಕುಟುಂಬ ವರ್ಗದವರು, ವಧು – ವರರು ತಮ್ಮ ಕೋಣೆಯ ವಿನ್ಯಾಸದ ಬಗ್ಗೆಯೂ ಸ್ವಲ್ಪ ತಲೆ ಕೆಡಿಸಿಕೊಂಡರೆ ಮುಂದಿನ ಜೀವನ ಆನಂದವಾಗಿರುತ್ತದೆ. ಹಾಗಾದರೆ ಅವುಗಳು ಹೇಗಿರಬೇಕು ಎಂಬುದನ್ನು ನೋಡೋಣ... 

Bedroom decoration of a newly married couple
Author
Bangalore, First Published Jan 1, 2022, 6:28 PM IST

ಮದುವೆ (Marriage) ಎನ್ನುವುದು ಒಂದು ಜೋಡಿಯ ಸಂಭ್ರಮವಾಗಿರದೆ ಇಡೀ ಕುಟುಂಬದ (Family) ಖುಷಿಯಾಗಿರುತ್ತದೆ (Happiness). ಅಲ್ಲದೆ, ನವ ಜೀವನಕ್ಕೆ (New Life) ಕಾಲಿಡುವ ಆ ದಂಪತಿಯ (Couple) ಮುಂದಿನ ಹಾದಿ ಸುಗಮವಾಗಿ ಇರಬೇಕೆಂಬ ನಿಟ್ಟಿನಲ್ಲಿ ನಾನಾ ರೀತಿಯ ಆಚರಣೆಗಳನ್ನು ಸಹ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ವಧುವನ್ನು (Bride) ಲಕ್ಷ್ಮೀ ದೇವಿಯ (Goddess Lakshmi) ರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ವಧುವಿಗೆ ಇಲ್ಲಿ ವಿಶೇಷ ಸ್ಥಾನಮಾನವಿದೆ. ಆಕೆಯನ್ನು ಮನೆತುಂಬಿಸಿಕೊಳ್ಳುವಾಗ ಲಕ್ಷ್ಮೀ ದೇವಿಯೇ ಮನೆಗೆ ಬಂದಂತೆ ಎಂದು ಸಂಭ್ರಮಿಸುತ್ತಾರೆ (Celebration). ಆಕೆಯಿಂದ ಮನೆಗೆ ಸುಖ – ಸಮೃದ್ಧಿ ಹೆಚ್ಚಲಿದೆ ಎಂಬ ಭಾವನೆ ಇದೆ. 

ಇನ್ನು ನವವಿವಾಹಿತರ ಸಹ ಜೀವನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳುವ ನಿಟ್ಟಿನಲ್ಲಿ ಪೂರಕ ವಾತಾವರಣ ಕಲ್ಪಿಸುವ ಅವಶ್ಯಕತೆ ಇರುತ್ತದೆ. ಇದಕ್ಕೆ ಅವರು ಮಲಗುವ  ಕೋಣೆ (Bed Room) ಸಹ ಮುಖ್ಯವಾಗುತ್ತದೆ. ವಾಸ್ತ್ರು ಶಾಸ್ತ್ರದ (Vastu Shatra) ಅನುಸಾರ ನವಜೋಡಿಯು ಮಲಗುವ ಕೋಣೆಯಲ್ಲಿ ಕೆಲವು ವಿಷಯಗಳನ್ನು ಕಟ್ಟುನಿಟ್ಟಾಗಿ (Regulation) ಪಾಲಿಸಬೇಕಾಗುತ್ತದೆ. ವಾಸ್ತು ತಜ್ಞರು ಹೇಳುವ ಪ್ರಕಾರ, ಕೋಣೆಯ ವಿನ್ಯಾಸ, ಗೋಡೆಗಳಿಗೆ (Wall) ಬಣ್ಣ (Colour), ಯಾವ ಯಾವ ವಸ್ತುಗಳಿಗೆ ಎಲ್ಲಿ ಜಾಗ ನೀಡಬೇಕು..? ಎಂಬುದು ಮುಖ್ಯವಾಗುತ್ತದೆ. ಇದರ ಆಧಾರದ ಮೇಲೆ ಅವರ ಸಂಬಂಧಗಳ ಸುಧಾರಣೆ, ಕುಟುಂಬದಲ್ಲಿ ಸಂತೋಷ ಎಲ್ಲವೂ ನಿರ್ಧರಿತವಾಗುತ್ತದೆ. ಹೀಗಾಗಿ ನವ ಜೋಡಿ ಮಲಗುವ ಕೋಣೆ ಹೇಗಿರಬೇಕು ಎಂಬುದ ತಿಳಿಯೋಣ ಬನ್ನಿ...

ಇದನ್ನು ಓದಿ: Name And Luck: ಈ ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಸಖತ್ ಟ್ಯಾಲೆಂಟೆಡ್!

ಬೆಡ್ ರೂಂ ಎಲ್ಲಿರಬೇಕು..? (Bed Room)
ವಾಸ್ತು ಶಾಸ್ತ್ರದ ಅನುಸಾರ ಮನೆಯ ಒಂದೊಂದು ವಿಭಾಗಕ್ಕೆ ಇಂಥದ್ದೇ ದಿಕ್ಕು (Direction) ಎಂದಿರುತ್ತದೆ. ಅದರಲ್ಲೂ ನವ ಜೋಡಿಯ ಬೆಡ್ ರೂಂ ಬಗ್ಗೆ ಹೇಳುವುದಾದರೆ ಅದು ಆಗ್ನೇಯ ದಿಕ್ಕಿನಲ್ಲಿರಬೇಕು. ಇದರ ಜೊತೆಗೆ ಮೇಲಿನ ಅಂತಸ್ಥಿನಲ್ಲಿದ್ದರೆ ಉತ್ತಮ. ಆದರೆ, ಕೆಲವೊಂದು ಕಡೆ ಮೊದಲೇ ಕೋಣೆಗಳು ನಿರ್ಮಾಣವಾಗಿರುವುದರಿಂದ ವಾಸ್ತು ನಿಯಮಗಳ ಅನುಸಾರ ಇರುವುದಿಲ್ಲ. ಇಂಥ ಸಮಯದಲ್ಲಿ (Time) ಇವರ ಹಾಸಿಗೆ ಯಾವ ದಿಕ್ಕಿನಲ್ಲಿರಬೇಕು ಎಂಬುದು ಮುಖ್ಯವಾಗುತ್ತದೆ. ದಕ್ಷಿಣ ದಿಕ್ಕಿಗೆ (South) ತಲೆ ಇಟ್ಟು ಮಲಗಬೇಕು. ಪಾದಗಳು ಕೋಣೆಯ ಉತ್ತರ ದಿಕ್ಕಿಗೆ ಇರಬೇಕು. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಪಾದಗಳು ಪ್ರವೇಶದ್ವಾರ ಅಥವಾ ಕೋಣೆಯ ಬಾಗಿಲಿನ ಮುಖಭಾಗಕ್ಕೆ ಇರಬಾರದು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಬಹುದು. ಆದರೆ, ಗರ್ಭಧರಿಸಬೇಕಾದಾಗ ಸಂದರ್ಭವಿದ್ದರೆ ಮಲಗುವ ದಿಕ್ಕನ್ನು ಬದಲಾಯಿಸಬೇಕಾಗುತ್ತದೆ.

ಮಂಚದ (Bed) ಆಯ್ಕೆ ಹೀಗಿರಲಿ..!
ಮಂಚ ನೋಡಲು ಆಕರ್ಷಕವಾಗಿರಬೇಕು ಸರಿ. ಆದರೆ, ಆಕರ್ಷಣೆಯೇ ಇಲ್ಲಿ ಮುಖ್ಯವಾಗುವುದಿಲ್ಲ. ಹೀಗಾಗಿ ಲೋಹದ ಮಂಚ ಬೇಡ. ಮರದ ಮಂಚ ಉತ್ತಮ. ಇನ್ನು ಬಾಕ್ಸ್‌ಗಳುಳ್ಳ ಮಂಚವಾಗಿದ್ದರೆ ಅದರಲ್ಲಿ ಜಂಕ್ (Junk) ವಸ್ತುಗಳನ್ನಿಡಬಾರದು. 

ರೂಮಿನೊಳಗೆ ಕನ್ನಡಿ (Mirror) ಬೇಕೇ..? ಬೇಡವೇ..?
ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವುದಾದರೂ ಕೆಲವೊಂದು ಸಮಯದಲ್ಲಿ ನೋಡಿಕೊಳ್ಳಬಾರದು. ಹೀಗಾಗಿ ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದು ಮುಖ್ಯ. ಹೀಗಾಗಿ ಮಲಗಿಕೊಂಡ ನೀವು ಕನ್ನಡಿಯಲ್ಲಿ ಕಾಣಿಸಬಾರದು. ಇದಕ್ಕಾಗಿ ಕನ್ನಡಿಯನ್ನು ಸದಾ ಹಾಸಿಗೆಯ ಪಕ್ಕದಲ್ಲಿಟ್ಟುಕೊಳ್ಳಬೇಕು. 

ಕೋಣೆ ಅಲಂಕಾರ ಹೀಗಿರಲಿ..!
ರೂಮ್‌ನಲ್ಲಿ ಫೋಟೋ ಫ್ರೇಮ್‌ಗಳ (Photo Frame) ಬಳಕೆ ಒಳ್ಳೆಯದು. ನೋಡಿದರೆ ಮನಸ್ಸಿಗೆ ಮುದ ನೀಡುವಂತಹ ಫೋಟೋಗಳನ್ನು ಬಳಸಬೇಕು. ದೇವರ (God) ಚಿತ್ರ, ಹೀರೋ, ಹೀರೋಯಿನ್‍ಗಳ ಚಿತ್ರಗಳು, ಕಾಡು ಮೃಗಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಆದರೆ, ತಮ್ಮ ಫೋಟೋಗಳನ್ನು ಇಟ್ಟುಕೊಳ್ಳಬಹುದು. 

ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಗೋಡೆಯ (Wall) ಬಣ್ಣ ಹೇಗಿರಬೇಕು?
ಮಲಗುವ ಕೋಣೆಯ ಗೋಡೆಗಳ ಬಣ್ಣವೂ ಸಹ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಮ್ಮ ನೆಚ್ಚಿನ ಬಣ್ಣವನ್ನು ಇಲ್ಲಿ ಬಳಸಬಹುದಾಗಿದ್ದು, ಸಾಧ್ಯವಾದರೆ ಕೆಂಪು (Red) ಬಣ್ಣ ಉತ್ತಮ. ಈ ಬಣ್ಣಕ್ಕೆ ಶಕ್ತಿವರ್ಧಕ ಸಾಮರ್ಥ್ಯವಿದೆ. ಇದು ನವಜೋಡಿ ನಡುವೆ ಸುಮಧುರ ಬಾಂಧವ್ಯ ಮೂಡಿಸುವುದಲ್ಲದೆ, ಪ್ರೀತಿಯನ್ನು ಹೆಚ್ಚಿಸುತ್ತದೆ. ಇನ್ನು  ಗರ್ಭಧರಿಸುವ ಚಿಂತನೆ ಇದ್ದರೆ, ಹೆಚ್ಚಿನ ಕೆಂಪು ಬಣ್ಣದ ಬಳಕೆ ಬೇಡ. ಇಲ್ಲದಿದ್ದರೆ ದಂಪತಿ ನಡುವೆ ಕಲಹಗಳು ಉಂಟಾಗುತ್ತವೆ. 

Follow Us:
Download App:
  • android
  • ios