ಯಾವಾಗಲೂ ಕಾಮಿಡಿ ಫಿಲಂಗಳನ್ನು ನೋಡುತ್ತೀರಾ? ಅದಕ್ಕೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ!
ಯಾವುದೇ ಒಂದು ನಿರ್ದಿಷ್ಟ ಪ್ರಕಾರದ ಫಿಲಂಗಳನ್ನು ನೀವು ನೋಡುತ್ತಿದ್ದೀರಿ ಎಂದರೆ ಅದಕ್ಕೆ ಕಾರಣ ನಿಮ್ಮ ಜನ್ಮರಾಶಿ ಇರಬಹುದು. ಜನ್ಮರಾಶಿ ಪ್ರಕಾರ ನಿಮ್ಮ ಸ್ವಭಾವ ಇರುವುದರಿಂದ, ಅಂಥ ಸಿನಿಮಾಗಳು ನಿಮ್ಮನ್ನು ಸೆಳೆಯುತ್ತವೆ.
ನೀವು ಕೆಲವು ಜಾನರ್ ಅಥವಾ ಪ್ರಕಾರದ ಫಿಲಂಗಳನ್ನು ಮತ್ತೆ ಮತ್ತೆ ನೋಡುತ್ತೀರಾ? ಯಾವಾಗಲೂ ಎಮೋಷನಲ್ ಡ್ರಾಮಾಗಳನ್ನು ನೋಡುವುದು ನಿಮಗೆ ಇಷ್ಟ ಅಥವಾ ಥ್ರಿಲ್ಲರ್ ಮೂವಿಗಳನ್ನು ನೋಡುವುದು ಇಷ್ಟ ಅಂತಿಟ್ಟುಕೊಳ್ಳಿ. ಇದಕ್ಕೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ ಎಂಬುದು ನಿಮಗೆ ಗೊತ್ತಿರಲಾರದು. ಒಂದು ನಿರ್ದಿಷ್ಟ ಪ್ರಕಾರದ ಫಿಲಂಗಳತ್ತ ನೀವು ಹೆಚ್ಚು ಆಕರ್ಷಿತರಾಗುತ್ತಿದ್ದೀರಿ ಏಕೆ ಎಂಬುದಕ್ಕೆ ಜ್ಯೋತಿಷ್ಯ ಮತ್ತು ರಾಶಿಚಕ್ರ ಚಿಹ್ನೆಗಳ ಜಗತ್ತಿನಲ್ಲಿ ಉತ್ತರವಿದೆ!
ಇದಕ್ಕೆ ಕಾರಣ ರಾಶಿಚಕ್ರದ ಚಿಹ್ನೆಯ ವ್ಯಕ್ತಿಗಳಲ್ಲಿ ಇರುವ ಗುಣಲಕ್ಷಣಗಳು. ನಾವು ಸುಲಭವಾಗಿ ಪ್ರಭಾವಿತರಾಗುವ ಕೆಲವು ಚಲನಚಿತ್ರಗಳಿದ್ದರೆ, ಕೆಲವೊಮ್ಮೆ ನಾವು ಪರಿಗಣಿಸದೇ ಇರುವ ಚಲನಚಿತ್ರಗಳೂ ಇವೆ. ನಮ್ಮ ಜನ್ಮರಾಶಿಯು ಹೇಗೆ ಸಿನಿಮಾಗಳ ವಿಷಯದಲ್ಲಿ ಪ್ರಭಾವಿತವಾಗಿರುತ್ತದೆ ಎಂಬುದನ್ನು ನೋಡೋಣ.
ಮೇಷ ರಾಶಿ (Aries)
ಮೇಷ ರಾಶಿಗೆ ಬೆಂಕಿಯು ಸಂಕೇತ. ಇದು ಮಂಗಳ ಗ್ರಹದಿಂದ ಆಳಲ್ಪಡುತ್ತದೆ. ಇದು ಆಕ್ರಮಣಶೀಲತೆ, ವಿನಾಶ, ಧೈರ್ಯ ಮತ್ತು ಮುನ್ನುಗ್ಗುವ ಸ್ವಭಾವದೊಂದಿಗೆ ಸಂಬಂಧಿಸಿದೆ. ಈ ಜನ್ಮರಾಶಿಯವರು ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳನ್ನು ಇಷ್ಟಪಡುವುದರಲ್ಲಿ ಆಶ್ಚರ್ಯವೇನಿಲ್ಲ. ಇವರು ಹೆಚ್ಚು ಸಾಹಸಮಯ ಮತ್ತು ಹಠಾತ್ ಪ್ರವೃತ್ತಿಯ ಕಡೆಗೆ ಒಲವು ತೋರುತ್ತಾರೆ. ಯುದ್ಧಮಯ ಸನ್ನಿವೇಶದಲ್ಲಿ ಸಹಜ ಪ್ರವೃತ್ತಿಯನ್ನು ಹೊಂದಿರಬಹುದು. ಇದಕ್ಕೆ ಸಾಕ್ಷಿ ಇವರು ನೋಡುವ ಚಿತ್ರಗಳು.
ಉದಾಹರಣೆ: ಕೆಜಿಎಫ್, ವಲ್ಡ್ ವಾರ್, ದಿ ಘಾಜಿ ಅಟ್ಯಾಕ್, ಉರಿ, ಅವೆಂಜರ್ಸ್, ಮಿಷನ್ ಇಂಪಾಸಿಬಲ್.
ವೃಷಭ ರಾಶಿ (taurus)
ವೃಷಭ ರಾಶಿಯವರು ಅತಿಸೂಕ್ಷ್ಮ, ತಾರ್ಕಿಕ ಮತ್ತು ದೃಢನಿಶ್ಚಯದ ಜನರು. ಶುಕ್ರ ಗ್ರಹದಿಂದ ಆಳಲ್ಪಡುವ ಇವರು ಸ್ವಭಾವತಃ ಹೆಚ್ಚು ಶಾಂತಿಯುತ, ಹರ್ಷಚಿತ್ತ ಮತ್ತು ಸೌಮ್ಯವಾಗಿರುತ್ತಾರೆ. ಆದ್ದರಿಂದ ಇವರು ಹೆಚ್ಚು ಕ್ಲಾಸಿಕ್ ಅಥವಾ ಹಾಸ್ಯಮಯ ಚಲನಚಿತ್ರದತ್ತ ಒಲವು ತೋರುತ್ತಾರೆ. ಅದರಲ್ಲಿ ಅವರು ತಮ್ಮ ಸಂಜೆಯನ್ನು ಅತ್ಯುತ್ತಮವಾಗಿ ಆನಂದಿಸಬಹುದು ಮತ್ತು ಉತ್ತಮ ಸಮಯವನ್ನು ಕಳೆಯಬಹುದು.
ಉದಾಹರಣೆ: ರಾಮ ಶಾಮ ಭಾಮ, ಶೋಲೆ, ಜಿಂದಗಿ ನಾ ಮಿಲೇಗಿ ದೊಬಾರಾ, ರಂಗ್ ದೇ ಬಸಂತಿ, ಕಾಸಾಬ್ಲಾಂಕಾ, ಗಾನ್ ವಿಥ್ ದಿ ವಿಂಡ್.
ಅರ್ಥ ತಿಳಿದು ನವಗ್ರಹ ಮಂತ್ರ ಪಠಿಸಿದರೆ, ಮನೆಯಲ್ಲಿ ಶಾಂತಿ ನೆಮ್ಮದಿ!
ಮಿಥುನ ರಾಶಿ (gemini)
ಈ ಬುದ್ಧಿವಂತ ಮತ್ತು ಸೃಜನಶೀಲ ಜನರನ್ನು ಬುಧ ಗ್ರಹವು ಆಳುತ್ತದೆ. ಇವರನ್ನು ಹೆಚ್ಚು ವಿಶ್ಲೇಷಣಾತ್ಮಕ, ಬುದ್ಧಿವಂತ ಮತ್ತು ಅವರ ಆಲೋಚನಾ ವಿಧಾನದಲ್ಲಿ ಕಲ್ಪನೆಗೆ ಅವಕಾಶ ಕೊಡುವವರನ್ನಾಗಿ ಮಾಡುತ್ತದೆ. ಆದ್ದರಿಂದ ಇವರು ತಮ್ಮ ಮೆದುಳನ್ನು ಮಂಥನ ಮಾಡುವ ರಹಸ್ಯ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ. ಜೆಮಿನಿಯ ಜೀವನದಲ್ಲಿ ಕುತೂಹಲ ಪ್ರಮುಖ ಪಾತ್ರ ವಹಿಸುತ್ತದೆ.
ಉದಾಹರಣೆ: ಉಳಿದವರು ಕಂಡಂತೆ, ದೃಶ್ಯಂ, ಕಹಾನಿ, ಡಿಟೆಕ್ಟಿವ್ ಬ್ಯೋಮಕೇಶ್ ಬಕ್ಷಿ, ಮನೋರಮಾ ಸಿಕ್ಸ್ ಫೀಟ್ ಅಂಡರ್, ಶಟರ್ ಐಲ್ಯಾಂಡ್, ಮೆಮೆಂಟೊ.
ಕಟಕ ರಾಶಿ (cancer)
ಕಟಕದ ರಾಶಿಚಕ್ರ ಚಿಹ್ನೆ ಇರುವ ಜನರು ಚಂದ್ರ ಗ್ರಹದಿಂದ ಆಳಲ್ಪಡುತ್ತಾರೆ. ಇದು ಅವರನ್ನು ಬಹಳ ಸೂಕ್ಷ್ಮ, ಸಹಾನುಭೂತಿ, ಕೋಮಲ ಮತ್ತು ಹಗುರ ಹೃದಯದವರನ್ನಾಗಿ ಮಾಡುತ್ತದೆ. ಡ್ರಾಮಾ ಹೊರತುಪಡಿಸಿ ಬೇರೆ ಯಾವುದೇ ಪ್ರಕಾರವು ಕರ್ಕ ರಾಶಿಯ ಮೇಲೆ ಪ್ರಭಾವ ಬೀರುವುದಿಲ್ಲ. ಇವರು ನೀರಿನ ಅಂಶದವರು. ನೀರಿನಂತೆಯೇ ಸದಾ ಹರಿಯುವ, ನಾಟಕೀಯ ಗುಣದವರು.
ಉದಾಹರಣೆ: ಅಮೃತವರ್ಷಿಣಿ, ಬರ್ಫಿ, ಕಬೀರ್ ಸಿಂಗ್, ಕ್ವೀನ್, ಹಮ್ ಆಪ್ಕೆ ಹೈ ಕೌನ್, ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್, ದಿ ಶ್ವಶಾಂಕ್ ರಿಡೆಂಪ್ಶನ್, ಗುಡ್ ವಿಲ್ ಹಂಟಿಂಗ್.
ಸಿಂಹ ರಾಶಿ (Leo)
ರಾಶಿಚಕ್ರದ ಐದನೇ ಚಿಹ್ನೆ ಸಿಂಹ. ಇದು ಮನರಂಜನೆ, ಆಹ್ಲಾದಕರ ಭಾವನೆಗಳು ಮತ್ತು ಪ್ರೀತಿಯ ಜಗತ್ತನ್ನು ಹೊಂದಿದೆ. ಇದು ಹಾಸ್ಯ, ಡ್ರಾಮಾ, ಸಂಗೀತ ಪ್ರಕಾರದ ಚಲನಚಿತ್ರಗಳನ್ನು ನೋಡಲು ಈ ಚಿಹ್ನೆಯನ್ನು ಪ್ರೇರೇಪಿಸುತ್ತದೆ! ಸಿಂಹಗಳು ಸಾಕಷ್ಟು ಉತ್ಸಾಹಭರಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಡ್ರಾಮಾಗೆ ಸಂಬಂಧಿಸಿದ ಯಾವುದಾದರೂ ಚಿತ್ರಗಳು ಇವರನ್ನು ಸೆಳೆಯುತ್ತವೆ.
ಉದಾಹರಣೆ: 777 ಚಾರ್ಲಿ, ಜಗ್ಗಾ ಜಾಸೂಸ್, ರಾಕ್ ಆನ್, ತಾಲ್, ಆಶಿಕಿ 2, ರಾಕ್‌ಸ್ಟಾರ್, ಲಾ ಲಾ ಲ್ಯಾಂಡ್, ಎ ಸ್ಟಾರ್ ಈಸ್ ಬರ್ನ್
ಕನ್ಯಾ ರಾಶಿ (virgo)
ಚಿಕ್ಕ ಚಿಕ್ಕ ವಿವರಗಳನ್ನು ಇಟ್ಟುಕೊಂಡು ವಿಶ್ಲೇಷಿಸುವ ಒಲವು ಕನ್ಯಾ ರಾಶಿಯವರಿಗೆ ಹೊರತಾಗಿ ಯಾರಿಗೂ ಇಲ್ಲದ ಲಕ್ಷಣ. ಕನ್ಯಾ ರಾಶಿಯವರು ಬುಧ ಗ್ರಹದಿಂದ ಆಳಲ್ಪಡುತ್ತಾರೆ. ಇದರಿಂದಾಗಿ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ. ಹಾಸ್ಯ, ವಿಮರ್ಶಾತ್ಮಕ, ಬಹುಮುಖ ಚಿತ್ರಗಳು ಇಷ್ಟ. ಆದರೂ ಥ್ರಿಲ್ಲರ್ ಪ್ರಕಾರಕ್ಕೆ ಸಂಬಂಧಿಸಿದಂತೆ ಪರದೆಯ ನೋಡಲು ಹೆಚ್ಚು ಇಷ್ಟಪಡುತ್ತಾರೆ.
ಉದಾಹರಣೆ: ದೃಶ್ಯ, ತಲಾಶ್, ಸ್ಪೆಷಲ್ 26, ಕಾರ್ತಿಕ್ ಕಾಲಿಂಗ್ ಕಾರ್ತಿಕ್, ನೋ ಒನ್ ಕಿಲ್ಡ್ ಜೆಸ್ಸಿಕಾ, ಕೌನ್, ಡೋಂಟ್ ಬ್ರೀತ್ ಮತ್ತು ಸ್ಪ್ಲಿಟ್.
ತುಲಾ ರಾಶಿ (libra)
ಈ ರಾಶಿಚಕ್ರದ ಚಿಹ್ನೆಯವರು ನ್ಯಾಯ ಮತ್ತು ಸದಾಚಾರ ಬಯಸುವವರು. ಅದಕ್ಕಾಗಿಯೇ ಅವರು ಯುದ್ಧ ಪ್ರಕಾರದ ಚಲನಚಿತ್ರಗಳನ್ನು ಬಯಸುತ್ತಾರೆ. ಯುದ್ಧ-ಸಂಬಂಧಿತ ಚಲನಚಿತ್ರಗಳ ಸಂಪೂರ್ಣ ಕಥಾವಸ್ತು ಧನಾತ್ಮಕ ಅಥವಾ ಋಣಾತ್ಮಕ ರೀತಿಯಲ್ಲಿ ಪರಿಣಾಮ ಬೀರುವಂತಹ ದೊಡ್ಡ ನಿರ್ಧಾರಗಳನ್ನು ಒಳಗೊಂಡಿರುವುದರಿಂದ, ಇದು ತುಲಾಗಳಿಗೆ ಸೂಕ್ತವಾಗಿರುತ್ತದೆ. ಇವರ ಸಂಪೂರ್ಣ ನೈತಿಕತೆಯ ಪ್ರಜ್ಞೆಯು ಯುದ್ಧ ಪ್ರಕಾರದ ಚಲನಚಿತ್ರಗಳಲ್ಲಿ ಸಾಕಾರವಾಗುತ್ತದೆ!
ಉದಾಹರಣೆ: ರಂಗೂ, ರಾಜಿ, ಬಾರ್ಡರ್, ಮಂಗಲ್ ಪಾಂಡೆ, ಡಂಕರ್ಕ್, 1917.
ವೃಶ್ಚಿಕ ರಾಶಿ (scorpio)
ವೃಶ್ಚಿಕ ರಾಶಿಯವರನ್ನು ಮೆಚ್ಚಿಸುವುದು ಕಷ್ಟದ ಕೆಲಸ. ಇದಕ್ಕಾಗಿಯೇ ಮನರಂಜನಾ ಅಂಶವನ್ನು ಹೊಂದಿರುವ ಯಾವುದಾದರೂ ರಹಸ್ಯ, ಭಯಾನಕ ಮತ್ತು ಥ್ರಿಲ್ಲರ್ ಖಂಡಿತವಾಗಿಯೂ ಈ ಮಂಗಳನ ಆಳ್ವಿಕೆಯ ರಾಶಿಯವರ ಮೇಲೆ ಪ್ರಭಾವ ಬೀರಬಹುದು. ಈ ಚಿಹ್ನೆಯು 8ನೇ ಮನೆಯೊಂದಿಗೆ ಸಂಬಂಧಿಸಿದೆ. ಅಂದರೆ ಸಾವಿನೊಂದಿಗೆ ಮತ್ತು ಸತ್ತವರೊಂದಿಗಿನ ಎಲ್ಲಾ ವಿಷಯಗಳೊಂದಿಗೆ ನಂಟು ಹೊಂದಿದೆ. ಸಾಮಾನ್ಯವಾಗಿ ವೃಶ್ಚಿಕ ರಾಶಿಯವರು ನಿಗೂಢತೆ ಮತ್ತು ಅತೀಂದ್ರಿಯತೆಯೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಆದ್ದರಿಂದ, ಹಾರರ್ ಪ್ರಕಾರವು ವೃಶ್ಚಿಕದವರನ್ನು ಇತರ ಯಾವುದೇ ಪ್ರಕಾರದ ಚಲನಚಿತ್ರಗಳಿಗಿಂತ ಹೆಚ್ಚು ಆಕರ್ಷಿಸುತ್ತದೆ.
ಉದಾಹರಣೆ: ಆಪ್ತಮಿತ್ರ, ಸ್ತ್ರೀ, ರಾಗಿಣಿ MMS, 13B, ರಾಜ್, ಎಕ್ಸಾರ್ಸಿಸ್ಟ್ ಮತ್ತು ಎಮಿಲಿ ರೋಸ್‌ನ ಎಕ್ಸಾರ್ಸಿಸಮ್.
ಧನು ರಾಶಿ (sagittarius)
ಧನು ರಾಶಿಯು ಗುರು ಗ್ರಹದಿಂದ ಆಳಲ್ಪಡುತ್ತದೆ. ಆದ್ದರಿಂದ ಇವರು ಮೋಜು, ತಮಾಷೆ ಮತ್ತು ಹಾಸ್ಯದಂತಹ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ನಿಸ್ಸಂದೇಹವಾಗಿ, ಹಾಸ್ಯ ಪ್ರಕಾರ ಇವರಿಗೆ ಇಷ್ಟವಾಗಬಹುದು. ಈ ವ್ಯಕ್ತಿಗಳು ಸಾಕಷ್ಟು ವಿನೋದಪ್ರಿಯರು, ಉತ್ಸಾಹಿ ಮತ್ತು ಬೆರೆಯುವವರೂ ಆಗಿರುತ್ತಾರೆ. ತಮ್ಮ ಜೀವನವನ್ನು ಪೂರ್ಣವಾಗಿ ಬದುಕುತ್ತಾರೆ. ಅದಕ್ಕಾಗಿಯೇ ಹಾಸ್ಯವು ಈ ಚಿಹ್ನೆಯವರ ಮೇಲೆ ಬೇರೆ ಯಾವುದೇ ಪ್ರಕಾರಕ್ಕಿಂತ ಮೇಲುಗೈ ಸಾಧಿಸಬಹುದು.
ಉದಾಹರಣೆ: ಗೋಲ್ಮಾಲ್, ಧಮಾಲ್, ಹೇರಾ ಫೇರಿ, ಅಂದಾಜ್ ಅಪ್ನಾ ಅಪ್ನಾ, ದಿ ಡಿಕ್ಟೇಟರ್ ಮತ್ತು ಡ್ಯೂ ಡೇಟ್.
ಮಗು, ಮನೆ, ಕೆಲಸದ ಮೇಲೆ ಯಾರಾದ್ದಾದ್ರು ದೃಷ್ಟಿ ಬಿದ್ದಿದ್ಯಾ?
ಮಕರ ರಾಶಿ (capricorn)
ಮಕರ ರಾಶಿಚಕ್ರದ ಚಿಹ್ನೆಯು ಸ್ವಭಾವತಃ ಬಹಳ ಸೂಕ್ಷ್ಮ, ಪ್ರಾಯೋಗಿಕ ಮತ್ತು ವಾಸ್ತವಿಕ. ಇವರು ವಾಸ್ತವದೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅದಕ್ಕಾಗಿಯೇ ವಾಸ್ತವ ಬಿಟ್ಟು ಬೇರೆ ಯಾವುದೇ ಪ್ರಕಾರದ ಚಲನಚಿತ್ರಗಳು ಅವರನ್ನು ಆಕರ್ಷಿಸುವುದಿಲ್ಲ. ಹಾಸ್ಯ, ಆಕ್ಷನ್, ಹಾರರ್ ಮುಂತಾದ ಯಾವುದೇ ಪ್ರಕಾರಗಳು ಅವರಿಗೆ ಇಷ್ಟವಾಗದಿರಬಹುದು. ನೀವು ಇವರಿಗೆ ನೈಜ ಕಥೆಯಿಂದ ಪ್ರೇರಿತವಾದ ಚಲನಚಿತ್ರ ತೋರಿಸಿದರೆ ಖಂಡಿತವಾಗಿ ಇಷ್ಟಪಡುತ್ತಾರೆ. ಶನಿ ಗ್ರಹದಿಂದ ಆಳಲ್ಪಡುವ ಇವರು ಸಾಕಷ್ಟು ಆತ್ಮಾವಲೋಕನ, ವಿವೇಕ ಮತ್ತು ನಿಷ್ಠುರರಾಗಿರುವವರು.
ಉದಾಹರಣೆ: ಬ್ಲ್ಯಾಕ್ ಫ್ರೈಡೇ, ಶಾಹಿದ್, ಹೈದರ್, ಭಾಗ್ ಮಿಲ್ಕಾ ಭಾಗ್, ಗುರು, ಲಿಂಕನ್, ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್.
ಕುಂಭ ರಾಶಿ (Aquarius)
ವಿಶ್ಲೇಷಣಾತ್ಮಕ, ಸೃಜನಶೀಲ, ಅಸಹಜ ಮತ್ತು ವೈಜ್ಞಾನಿಕ ಪದಗಳು 11ನೇ ರಾಶಿಚಕ್ರದ ಚಿಹ್ನೆ, ಕುಂಭವನ್ನು ವಿವರಿಸುತ್ತವೆ. ಇವರು "ಔಟ್ ಆಫ್ ದಿ ಬಾಕ್ಸ್" ಮನಸ್ಸು ಇರುವವರು, ಅನ್ವೇಷಿಸುವ ಸ್ವಭಾವದವರು. ಇದು ಅವರನ್ನು ವೈಜ್ಞಾನಿಕ ಚಲನಚಿತ್ರಗಳ ದೊಡ್ಡ ಅಭಿಮಾನಿಯನ್ನಾಗಿ ಮಾಡುತ್ತದೆ. ಗಾಳಿ ಇವರ ಚಿಹ್ನೆಯ ಅಂಶ. ಈ ವ್ಯಕ್ತಿಗಳು ತುಂಬಾ ಕುತೂಹಲಕಾರಿ, ತೀಕ್ಷ್ಣ-ಬುದ್ಧಿವಂತರು. ಇದು ವೈಜ್ಞಾನಿಕ ಕಾದಂಬರಿಯ ಪ್ರಕಾರದ ಕಡೆಗೆ ಒಲವು ತೋರುವಂತೆ ಮಾಡುತ್ತದೆ.
ಉದಾಹರಣೆ: PK, ರೋಬೋಟ್, ಕ್ರಿಶ್, ಕೋಯಿ ಮಿಲ್ ಗಯಾ, ಮಿಸ್ಟರ್ ಇಂಡಿಯಾ, ದಶಾವತಾರಂ, ಸ್ಟಾರ್ ವಾರ್ಸ್ ಮತ್ತು ಇನ್ಸೆಪ್ಶನ್.
ಮೀನ ರಾಶಿ (pisces)
ಇವರು ಅತ್ಯಂತ ಭಾವನಾತ್ಮಕ ಮತ್ತು ಕನಸು ಕಾಣುವ ರಾಶಿಯವರು. ಸಮುದ್ರದ ದೇವರು ಎಂದೂ ಕರೆಯಲ್ಪಡುವ ನೆಪ್ಚೂನ್ ಗ್ರಹದಿಂದ ಆಳಲ್ಪಡುತ್ತಾರೆ. ಈ ಚಿಹ್ನೆಯು ನೀರಿನ ಅಂಶದೊಂದಿಗೆ ಸಹ ಸಂಯೋಜಿತವಾಗಿದೆ. ಈ ಎರಡು ಗುಣಲಕ್ಷಣಗಳು ಅವರನ್ನು ಭಾವನಾತ್ಮಕ, ಸಂವೇದನಾಶೀಲ, ಆಳವಾದ ಚಿಂತಕರು ಮತ್ತು ಸಹಾನುಭೂತಿಯುಳ್ಳವರನ್ನಾಗಿ ಮಾಡುತ್ತದೆ. ಆದ್ದರಿಂದ, ಫ್ಯಾಂಟಸಿಗಿಂತ ಬೇರೆ ಯಾವ ಚಲನಚಿತ್ರ ಪ್ರಕಾರವೂ ಅವರನ್ನು ಆಕರ್ಷಿಸದು. ಮೀನ ರಾಶಿಯವರನ್ನು ಸಾಮಾನ್ಯವಾಗಿ ಹಗಲು-ಕನಸುಗಾರರು ಎಂದು ಕರೆಯಲಾಗುತ್ತದೆ ಮತ್ತು ಫ್ಯಾಂಟಸಿ ಜಗತ್ತಿನಲ್ಲಿ ವಾಸಿಸುತ್ತಾರೆ.
ಉದಾಹರಣೆ: ಮಖಿ, ಅಲ್ಲಾದೀನ್, ಗಾಯಬ್, ಪಹೇಲಿ, ಓ ಮೈ ಗಾಡ್, ಲೈಫ್ ಆಫ್ ಪೈ, ಲಾರ್ಡ್ ಆಫ್ ದಿ ರಿಂಗ್ಸ್ ಮತ್ತು ಹ್ಯಾರಿ ಪಾಟರ್.
Vastu Tips : ದುಡ್ಡು ಕೈ ಸೇರಬೇಕೆಂದರೆ ಮನೆಯನ್ನು ಹೀಗಿಡಬೇಕು!
ಪ್ರತಿ ರಾಶಿಚಿಹ್ನೆಯವರಿಗೂ ವಿಭಿನ್ನ ಗುಣಲಕ್ಷಣಗಳು ಮತ್ತು ವ್ಯಕ್ತಿತ್ವಗಳಿರುವುದರಿಂದ, ನಿರ್ದಿಷ್ಟ ಪ್ರಕಾರದ ಕಡೆಗೆ ಒಲವು ತೋರುವ ಪ್ರವೃತ್ತಿ ಇರುತ್ತದೆ. ಅಂದರೆ ಇವರು ಆ ಪ್ರಕಾರ ಚಲನಚಿತ್ರಗಳನ್ನು ಮಾತ್ರ ವೀಕ್ಷಿಸುತ್ತಾರೆ ಎಂದೇನೂ ಅಲ್ಲ. ಆದರೆ ಅವರ ಒಲವು ಆ ನಿರ್ದಿಷ್ಟ ರೀತಿಯ ಚಲನಚಿತ್ರದ ಬಗ್ಗೆ ಇತರರಿಗಿಂತ ಹೆಚ್ಚಿರಬಹುದು.