ಧನ ತ್ರಯೋದಶಿಯಂದು ರಾಶಿಯನುಸಾರ ಈ ವಸ್ತು ಖರೀದಿಸಿದರೆ ಶುಭ!
ದೀಪಾವಳಿ ಹಬ್ಬದ ಮೊದಲು ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಸಂಪತ್ತನ್ನು ಕರುಣಿಸೆಂದು ಲಕ್ಷ್ಮೀ ದೇವಿಯನ್ನು, ಸಮೃದ್ಧಿಗಾಗಿ ಕುಬೇರ ದೇವನನ್ನು ಮತ್ತು ಉತ್ತಮ ಆರೋಗ್ಯಕ್ಕಾಗಿ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೇ ಧನ ತ್ರಯೋದಶಿಯಂದು ಕೆಲವು ವಸ್ತುಗಳನ್ನು ಖರೀದಿ ಮಾಡುವುದರಿಂದ ಸಹ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ರಾಶಿಯನುಸಾರ ಯಾವ್ಯಾವ ವಸ್ತುಗಳನ್ನು ಖರೀದಿಸಿದರೆ ಶುಭ ಎಂಬುದನ್ನು ತಿಳಿಯೋಣ...
ದೀಪಾವಳಿ ಹಬ್ಬದ ಆಚರಣೆಗೆ ಮುನ್ನ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ ತ್ರಯೋದಶಿ ಆಚರಿಸಲಾಗುವುದು. ಈ ದಿನ ಸಂಪತ್ತು, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯನ್ನು ಆರಾಧಿಸಿ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಸಮೃದ್ಧಿಯನ್ನು ನೀಡುವ ಕುಬೇರನನ್ನು ಪೂಜಿಸಲಾಗುತ್ತದೆ ಮತ್ತು ಉತ್ತಮ ಆರೋಗ್ಯಕ್ಕೆ ಧನ್ವಂತರಿ ದೇವನನ್ನು ಸಹ ದಿನ ಪೂಜಿಸಲಾಗುತ್ತದೆ. ಹಾಗಾಗಿ ಧನ ತ್ರಯೋದಶಿಯ ದಿನವು ಅತ್ಯಂತ ಶುಭ ಮತ್ತು ಒಳಿತನ್ನು ತರುವ ದಿನವಾಗಿದೆ.
ಆ ದಿನ ವಸ್ತುಗಳನ್ನು ಖರೀದಿಸಿದರೆ ಶುಭವಾಗುತ್ತವೆ. ಮನೆಯಲ್ಲಿ ಸುಖ-ಸಂಪತ್ತು-ಸಮೃದ್ಧಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಈ ಬಾರಿ ನವೆಂಬರ್ 13ಕ್ಕೆ ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಹಾಗೆ ಈ ದಿನ ರಾಶಿಯ ಪ್ರಕಾರ ಕೆಲವು ವಸ್ತುಗಳನ್ನು ಖರೀದಿಸಿದರೆ ಅದು ಅತ್ಯಂತ ಶುಭವನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ರಾಶಿಯನುಸಾರ ಯಾವ ವಸ್ತುಗಳನ್ನು ಖರೀದಿಸಿದರೆ ಒಳಿತು ಎಂದು ತಿಳಿಯೋಣ...
ಮೇಷ ರಾಶಿ
ಧನ ತ್ರಯೋದಶಿಯಂದು ಮೇಷ ರಾಶಿಯವರು ಬಂಗಾರ, ತಾಮ್ರ ಅಥವಾ ಹಿತ್ತಾಳೆಯ ವಸ್ತುಗಳನ್ನು ಖರೀದಿಸಿದರೆ ಉತ್ತಮ. ಹಿತ್ತಾಳೆಯ ವಸ್ತುವನ್ನು ಖರೀದಿಸುವುದರಿಂದ ಧನ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ವೃಷಭ ರಾಶಿ
ಧನ ತ್ರಯೋದಶಿಯಂದು ವೃಷಭ ರಾಶಿಯವರು ಬೆಳ್ಳಿಯ ವಸ್ತುಗಳನ್ನು ಖರೀದಿಸುವುದು ಒಳ್ಳೆಯದು. ಈ ದಿನ ಬೆಳ್ಳಿಯ ನಾಣ್ಯ, ಬೆಳ್ಳಿಯ ಆಭರಣ ಅಥವಾ ವಸ್ತ್ರ ಮತ್ತು ವಾಹನವನ್ನು ಖರೀದಿಸಿದರೂ ಶುಭವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಈ 5 ರಾಶಿಯವರು ತುಂಬಾ ಸ್ಟೈಲಿಶ್ ಆಗಿರೋಕೆ ಇಷ್ಟಪಡ್ತಾರಂತೆ!
ಮಿಥುನ ರಾಶಿ
ಈ ರಾಶಿಯವರು ಧನ ತ್ರಯೋದಶಿಯ ದಿನ ತಾಮ್ರದ ವಸ್ತು ಖರೀದಿಸಿದರೆ ಶುಭ. ಇದರಿಂದ ಧನ್ವಂತರಿ ದೇವರ ಕೃಪೆ ಲಭ್ಯವಾಗುತ್ತದೆ.
ಕರ್ಕಾಟಕ ರಾಶಿ
ಈ ರಾಶಿಯವರು ಧನ ತ್ರಯೋದಶಿಯಂದು ಸ್ಟೀಲ್ ವಸ್ತುವನ್ನು ಖರೀದಿಸಿದರೆ ಶುಭವೆಂದು ಹೇಳಲಾಗುತ್ತದೆ. ಇದರಿಂದ ಮಹಾಲಕ್ಷ್ಮೀಯ ಕೃಪೆ ಪ್ರಾಪ್ತವಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ. ಹಾಗಾಗಿ ಸಿಂಹ ರಾಶಿಯವರು ಧನ ತ್ರಯೋದಶಿಯಂದು ಚಿನ್ನದ ನಾಣ್ಯ ಅಥವಾ ಆಭರಣವನ್ನು ಖರೀದಿಸಿದರೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಸ್ನೇಹ ಬೆಳೆಸಬಹುದಾದ ಯೋಗ್ಯ ರಾಶಿಗೆ ಸೇರಿದವರಾ ನೀವು?
ಕನ್ಯಾ ರಾಶಿ
ಈ ರಾಶಿಯವರು ಧನ ತ್ರಯೋದಶಿಯ ದಿನದಂದು ಬೆಳ್ಳಿಯ ನಾಣ್ಯವನ್ನು ಅಥವಾ ಹೊಸ ವಾಹನವನ್ನು ಖರೀದಿಸಿದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲಿದೆ.
ತುಲಾ ರಾಶಿ
ಈ ರಾಶಿಯವರು ಧನ ತ್ರಯೋದಶಿಯಂದು ಬೆಳ್ಳಿಯ ಪಾತ್ರೆ ಮತ್ತು ಹೊಸ ಬಟ್ಟೆ ಖರೀದಿಸಿದರೆ ಶುಭವೆಂದು ಹೇಳಲಾಗುತ್ತದೆ. ಇದರಿಂದ ಶುಭಫಲ ಪ್ರಾಪ್ತವಾಗುತ್ತದೆ.
ವೃಶ್ಚಿಕ ರಾಶಿ
ಈ ರಾಶಿಯವರು ಧನ ತ್ರಯೋದಶಿಯಂದು ಬಂಗಾರದ ಆಭರಣವನ್ನು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಿದರೆ ಶುಭವಾಗುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಸಲಿದೆ.
ಧನು ರಾಶಿ
ಈ ರಾಶಿಯವರು ಧನ ತ್ರಯೋದಶಿಯಂದು ವಾಹನ ಮತ್ತು ಬೆಳ್ಳಿಯ ಪಾತ್ರೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಮತ್ತಷ್ಟು ಹೆಚ್ಚಾಗುತ್ತದೆ.
ಮಕರ ರಾಶಿ
ಈ ಧನ ತ್ರಯೋದಶಿಯಂದು ಮಕರ ರಾಶಿಯವರು ವಾಹನ ಮತ್ತು ಸಿಂಗರಿಸಲು ಬೇಕಾಗುವ ಸಾಮಗ್ರಿಗಳನ್ನು ಖರೀಸಿದರೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.
ಕುಂಭ ರಾಶಿ
ಈ ರಾಶಿಯ ಅಧಿಪತಿ ಶನಿದೇವನಾಗಿರುವ ಕಾರಣ, ಧನ ತ್ರಯೋದಶಿಯಂದು ಬೆಳ್ಳಿಯ ಪಾತ್ರೆ ಮತ್ತು ಸ್ಟೀಲ್ ವಸ್ತುಗಳನ್ನು ಖರೀದಿಸಿದರೆ ಶುಭವೆಂದು ಹೇಳಲಾಗುತ್ತದೆ.
ಇದನ್ನು ಓದಿ: ರಾಶಿಯನುಸಾರ ನಿಮ್ಮ ಸ್ನೇಹಿತರು-ಶತ್ರುಗಳ್ಯಾರೆಂದು ತಿಳಿಯಿರಿ..!
ಮೀನ ರಾಶಿ
ಈ ಧನ ತ್ರಯೋದಶಿಯಂದು ಮೀನ ರಾಶಿಯವರು ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭ. ಅಷ್ಟೇ ಅಲ್ಲದೆ ಹೊಸತೇನಾದರೂ ಆರಂಭಿಸಿದರೂ ಸಹ ಶುಭವಾಗುತ್ತದೆ.