ಸ್ಟೈಲ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ... ಬಹುತೇಕ ಎಲ್ರೂ ಇಷ್ಟಪಡ್ತಾರೆ. ಆದರೆ ಎಲ್ಲರಿಗೂ ಹಾಗಿರಕ್ಕೆ ಸಾಧ್ಯ ಆಗುವುದಿಲ್ಲ. ಕೆಲವರಿಗೆ ಹುಟ್ಟಿನಿಂದಲೇ ಇಂಥ ಗುಣ ಬಂದುಬಿಟ್ಟಿರುತ್ತದೆ. ಒಳ್ಳೊಳ್ಳೆ ಫ್ಯಾಷನ್ ಆಗಿರುವ ಡ್ರೆಸ್ ಹಾಕಬೇಕು, ನಾಲ್ಕು ಜನರೆದುರು ತುಂಬಾ ಚಂದ ಕಾಣಬೇಕು ಹಾಗೆ ಹೀಗೆ ಎಂಬ ಕನಸನ್ನು ಹೊತ್ತಿರುತ್ತಾರೆ. ಜತೆಗೆ ಅದರಂತೆಯೇ ನಡೆದುಕೊಳ್ಳುತ್ತಾರೆ.

ಹಾಗಾಗಿ ಕೆಲವು ರಾಶಿಗಳವರು ಹುಟ್ಟಾ ಸ್ಟೈಲಿಶ್ ಗುಣಗಳನ್ನು ಹೊಂದಿರುತ್ತಾರೆ. ಹೀಗಾಗಿ ಕೆಲವರು ಒಂದೊಂದು ವಸ್ತುವನ್ನೂ ಸಹ ತುಂಬಾ ಅಳೆದೂ ತೂಗಿ ತಾವು ತೊಡುವ ಬಟ್ಟೆ ಉಪಯೋಗಿಸುವ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಅಂದರೆ ತುಂಬಾ ಫ್ಯಾಷನೆಬಲ್ ಆಗಿರಬೇಕೆಂಬ ಚಿಂತನೆ ಅವರದ್ದಾಗಿರುತ್ತದೆ. ಆದರೆ ಇದಕ್ಕೆ ಮೂಲ ಕಾರಣ ಅವರ ರಾಶಿಚಕ್ರದ ಫಲಗಳು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ಇದನ್ನು ಓದಿ: ಸ್ನೇಹ ಬೆಳೆಸಬಹುದಾದ ಯೋಗ್ಯ ರಾಶಿಗೆ ಸೇರಿದವರಾ ನೀವು? 

ಹೀಗಾಗಿ ಈ ಕೆಲವು ರಾಶಿಯವರು ತುಂಬಾ ಚ್ಯೂಸಿ ಎಂದು ಹೇಳಿದರೂ ತಪ್ಪಾಗಲಾರದು. ಅವರ ಪ್ರತಿ ಆಯ್ಕೆಯಲ್ಲಿಯೂ ಹೊಸತನ್ನೇ ಹುಡುಕುತ್ತಿರುತ್ತಾರೆ. ಯಾವುದು ತಮಗೆ ಒಪ್ಪುತ್ತದೆ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಸಹ. ಹೀಗಾಗಿ ಯಾವ ರಾಶಿಯವರು ಹೀಗೆ ಫ್ಯಾಷನ್ ಉಡುಪುಗಳನ್ನು ಧರಿಸಲು ಇಷ್ಟಪಡುತ್ತಾರೆ ಎಂಬ ಬಗ್ಗೆ ನೋಡೋಣ ಬನ್ನಿ...ಮೇಷ ರಾಶಿ 
ಮೇಷ ರಾಶಿಯವರಿಗೆ ತಾವು ತುಂಬಾ ಚಂದ ಕಾಣಬೇಕು ಎಂಬ ಹಂಬಲ ಇರುತ್ತದೆ. ಹಾಗೆಯೇ ಯಾರಾದರೂ ಅವರನ್ನು ಹೊಗಳಿದರೆ ಇಲ್ಲವೇ ಪ್ರಶಂಸೆ ವ್ಯಕ್ತ ಪಡಿಸಿದರೆ ಇವರಿಗೆ ಒಳಗೊಳಗೆ ತುಂಬ ಖುಷಿಯನ್ನುಂಟು ಮಾಡುತ್ತದೆ. ಇವರಿಗೋಸ್ಕರ ಯಾರದೋ ಸಮಯ ಕೊಟ್ಟರೆ ಇವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೋಸ್ಕರ ತುಂಬಾ ಸುಂದರವಾಗಿ ಫ್ಯಾಷನೆಬಲ್ ಆಗಿ ಸಿಂಗರಿಸಿಕೊಳ್ಳುತ್ತಾರೆ. ಯಾವಾಗಲೂ ಒಳ್ಳೊಳ್ಳೆ ಡ್ರೆಸ್ ಗಳನ್ನು ಹಾಕಿಕೊಂಡು ತಯಾರಾಗಿ ಇರುವುದು ಇವರಿಗೆ ತುಂಬಾ ಇಷ್ಟ. ಜೊತೆಗೆ ಮಾರುಕಟ್ಟೆಗೆ ಹೊಸ ಟ್ರೆಂಡ್ ಎನಾದರೂ ಬಂದಲ್ಲಿ ಅದನ್ನು ಮೊದಲು ತಾವೇ ಹಾಕಿಕೊಳ್ಳಬೇಕು ಎಂಬ ಬಯಕೆ ಇವರದಾಗಿರುತ್ತದೆ. ಎಲ್ಲ ಜನರ ಮಧ್ಯದಲ್ಲೇ ತಾವು ಎದ್ದು ಕಾಣಬೇಕೆಂಬ ನಿಟ್ಟಿನಲ್ಲಿ ಇವರು ತಮ್ಮ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಉಡುಪುಗಳನ್ನು ಧರಿಸುತ್ತಾರೆ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ. 

ಮಿಥುನ ರಾಶಿ 
ಮಿಥುನ ರಾಶಿಯವರ ಆಲೋಚನೆಗಳೇ ತುಂಬಾ ಸ್ವತಂತ್ರವಾಗಿರುತ್ತದೆ. ಅವರ ಮನಸ್ಸುಗಳನ್ನು ತುಂಬಾ ಹರಿಬಿಡುತ್ತಿರುತ್ತಾರೆ. ಆದರೆ ಅವರು ತಮ್ಮ ಪ್ರಶ್ನೆಗಳಿಗೆ ತಾವೇ ಉತ್ತರವನ್ನು ಕಂಡುಕೊಳ್ಳುತ್ತಾರೆ. ತಮಗೆ ಯಾವುದು ಚೆಂದವಾಗಿ ಕಾಣುತ್ತದೆ. ಯಾವುದೋ ಅಷ್ಟಾಗಿ ಒಪ್ಪುವುದಿಲ್ಲ ಎಂಬ ಬಗ್ಗೆ ನಿರ್ಧಾರವನ್ನು ಅವರೇ ಮಾಡುತ್ತಾರೆ. ಇಷ್ಟಾದರೂ ಇವರ ಡ್ರೆಸ್ಸಿಂಗ್ ಸೆನ್ಸ್ ತುಂಬಾ ಉತ್ತಮವಾಗಿರುತ್ತದೆ. ಅವರು ತಮಗೆ ಒಪ್ಪುವುದನ್ನೇ ಹಾಕಿಕೊಳ್ಳುತ್ತಾರೆ. ಇದಕ್ಕೆ ವಿಶೇಷವಾಗಿ ಇವರ ಜೀವನದಲ್ಲಿ ಯಾವುದೇ ಕೊರತೆಯೂ ಕಾಣುವುದಿಲ್ಲ. ಹೆಸರು ಗೌರವ ದುಡ್ಡು ಎಲ್ಲವೂ ಇವರಿಗೆ ತಾನಾಗಿಯೇ ಹರಿದುಬರುತ್ತದೆ. ಹೀಗಾಗಿ ಸ್ಟೈಲ್ ಗಾಗಿ ಹೆಚ್ಚಿನ ದುಡ್ಡನ್ನು ಖರ್ಚು ಮಾಡುತ್ತಾರೆ.

ಇದನ್ನು ಓದಿ: ರಾಶಿಯನುಸಾರ ನಿಮ್ಮ ಸ್ನೇಹಿತರು-ಶತ್ರುಗಳ್ಯಾರೆಂದು ತಿಳಿಯಿರಿ..! 

ಸಿಂಹ ರಾಶಿ 
ಸಿಂಹ ರಾಶಿಯವರು ಸ್ವಲ್ಪ ಪ್ರಾಕ್ಟಿಕಲ್ ಆಲೋಚನೆಗಳನ್ನು ಹೊಂದಿರುವವರು. ಇವರು ತಮ್ಮ ಮನಸ್ಸಿನ ಮಾತಿಗಿಂತ ಬುದ್ಧಿಯ ಮಾತನ್ನು ಕೇಳುತ್ತಾರೆ. ಎಲ್ಲ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ಕೈಗೊಳ್ಳುತ್ತಾರೆ. ಹೀಗಾಗಿ ಸ್ಟೈಲ್ ಹಾಗೂ ಫ್ಯಾಷನ್ ವಿಷಯದಲ್ಲಿ ರಾಜಿಯಾಗುವುದನ್ನು ಇವರು ಇಷ್ಟಪಡುವುದಿಲ್ಲ. ತಮಗೆ ಏನು ಬೇಕೋ ಅದನ್ನು ಮಾಡಿಯೇ ತೀರುತ್ತಾರೆ. ಎಲ್ಲವೂ ತನಗೆ ಬೆಸ್ಟ್ ಆಗಿರುವುದೇ ಬೇಕು ಎಂಬುದು ಇವರ ಇರಾದೆ. ಇದರಿಂದ ಜನರು ಇವರ ಸ್ಟೈಲ್ ಗೆ ಫಿದಾ ಆಗಿರುತ್ತಾರೆ.

ತುಲಾ ರಾಶಿ 
ಈ ರಾಶಿಯವರು ಸ್ಟೈಲ್ ಹಾಗೂ ಗಾಂಭೀರ್ಯ ಸ್ವಭಾವಕ್ಕೆ ಹೆಸರುವಾಸಿ. ಇವರು ಯಾರನ್ನೂ ದಬ್ಬಾಳಿಕೆ ಮಾಡುವುದಿಲ್ಲ ಹಾಗೂ ತಮ್ಮನ್ನು ದಬ್ಬಾಳಿಕೆ ಮಾಡಲು ಬಿಡುವವರಲ್ಲ. ಇವರು ತುಂಬಾ ಸ್ನೇಹವನ್ನು ಇಷ್ಟಪಡುತ್ತಾರೆ ಹೀಗಾಗಿ ಇವರಿಗೆ ಸಖತ್ ಸ್ನೇಹಿತರು, ನೆರೆಮನೆಯವರ ಜೊತೆ ಸ್ನೇಹ ಹಾಗೂ ಸಂಬಂಧಿಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಲು ಇಷ್ಟಪಡುತ್ತಾರೆ. ಇವರನ್ನು ನೀವು ಯಾವ ಸಮಯದಲ್ಲಿ  ನೋಡಿದರೂ ಸಹ ತುಂಬಾ ಶಿಸ್ತಾಗಿ ಉಡುಪನ್ನು ಧರಿಸಿಕೊಂಡು ಇರುತ್ತಾರೆ. ಹನ್ನೆರಡು ರಾಶಿಯಲ್ಲೇ ತುಂಬಾ ಸ್ಟೈಲಿಶ್ ಹಾಗೂ ಫ್ಯಾಷನೇಬಲ್ ಆಗಿರುವ ರಾಶಿಯವರು ಇವರೇ ಆಗಿದ್ದಾರೆ.

ಇದನ್ನು ಓದಿ: ಈ ಕೆಲವು ಸಸ್ಯಗಳು ಮನೆಯಲ್ಲಿದ್ದರೆ ರೋಗಗಳು ದೂರ..! ಕುಟುಂಬಕ್ಕೆ ಶುಭ 

ಧನು ರಾಶಿ 
ಈ ರಾಶಿಯವರು ತುಂಬಾ ಬುದ್ಧಿವಂತರು. ಇದರ ಪರಿಣಾಮ ಇವರಿಗೆ ಫ್ಯಾಷನ್ ಸೆನ್ಸ್ ಸಹ ಉತ್ತಮವಾಗಿರುತ್ತದೆ. ಇವರು ಇಷ್ಟಪಡುವ ಉಡುಪು ಉಳಿದವರಿಗೂ ಚೆಂದವಾಗಿ ಕಾಣುತ್ತದೆ. ಅಂದರೆ ತುಂಬಾ ಸೊಗಸಾದ ಅಭಿರುಚಿಯನ್ನು ಇವರು ಹೊಂದಿರುತ್ತಾರೆ. ಇವರು ತುಂಬಾ ಬೋಲ್ಡ್ ಆಗಿ ಕಾಣಿಸಲು ಇಷ್ಟಪಡುವುದಿಲ್ಲ. ಜನಕ್ಕೂ ತಹ ಸಹಿಸುವಂತಹ ಹಾಗೂ ತಮಗೂ ಸಹ್ಯ ಎನಿಸುವಂತಹ ಡ್ರೆಸ್ ಅನ್ನು ಹಾಕಿಕೊಳ್ಳುತ್ತಾರೆ. ಹೀಗಾಗಿ ಇವರು ಎಲ್ಲರಿಗೂ ತುಂಬಾ ಸಾಂಪ್ರದಾಯಿಕ ಹಾಗೂ ರಾಯಲ್ ಆಗಿ ಕಾಣುತ್ತಾರೆ.