ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!
ಭಾದ್ರಪದ ಮಾಸದಲ್ಲಿ ಬರುವ ಪಿತೃಪಕ್ಷವು ಬಹಳ ವಿಶಿಷ್ಟವಾದುದು. ಈ ಸಮಯದಲ್ಲಿ ನಮ್ಮ ಪೂರ್ವಜರು ಶಕ್ತಿ ರೂಪದಲ್ಲಿ ಭೂಮಿಗೆ ಬರುತ್ತಾರೆ. ಅವರನ್ನು ಸಂತೃಪ್ತಿ ಪಡಿಸಲು ಹಲವು ಚಟುವಟಿಕೆಗಳನ್ನು ಮಾಡಬೇಕು ಹಾಗೂ ಕೆಲ ಚಟುವಟಿಕೆಗಳನ್ನು ಮಾಡಬಾರದು ಕೂಡ. ಈ ೧೬ ದಿನಗಳಲ್ಲಿ ಅನುಸರಿಸಬೇಕಾದ ಕೆಲ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪಿತೃಪಕ್ಷವು ನಮ್ಮ ಪೂರ್ವಜರ ಮಕ್ಕಳು ಅಥವಾ ಸಂಬAಧಿಕರು ಅಗಲಿದ ಆತ್ಮಕ್ಕೆ ಶಾಂತಿಗಾಗಿ ಮಾಡುವ ಆಚರಣೆಯಾಗಿದೆ. ಭಾದ್ರಪದ ಮಾಸದಲ್ಲಿ ಬರುವ ಈ ಪಿತೃಪಕ್ಷವು ವರ್ಷದ ವಿಶೇಷ ಸಮಯವಾಗಿದ್ದು, ಹಿಂದುಗಳು ತಮ್ಮ ಪೂರ್ವಜರಿಗೆ ಕೆಲವು ಆಚರಣೆಗಳನ್ನು ಮಾಡುವ ಮೂಲಕ ಮತ್ತು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸುವ ಮೂಲಕ ಗೌರವ ಸಲ್ಲಿಸುವುದಾಗಿದೆ. ಈ ಸಮಯದಲ್ಲಿ ನಮ್ಮ ಪೂರ್ವಜರ ಆತ್ಮಗಳು ಶಕ್ತಿ ರೂಪದಲ್ಲಿ ಭೂಮಿಗೆ ಬರುತ್ತಾರೆ ಹಾಗೂ ಅವರ ಇಚ್ಛಗೆ ಅನುಗುಣವಾಗಿ ನಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು ಎಂಬ ನಂಬುಗೆ ಇದೆ.
ಪಿತೃ ಪಕ್ಷದ ಸಂದರ್ಭದಲ್ಲಿ ನಾಯಿ, ಹಸು, ಕಾಗೆಗಳಿಗೆ ಆಹಾರ ನೀಡುವುದು ಒಳ್ಳೆಯದು ಎನ್ನಲಾಗುತ್ತದೆ. ಶ್ರಾದ್ಧಾ ಸಮಯದಲ್ಲಿ ಹಲವು ಶುಭ ಆಚರಣೆಗಳನ್ನು ಮಾಡಬಾರದು. ಹಾಗೆ ಕೆಲ ಆಚರಣೆಗಳನ್ನು ಮಾಡಲೇಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಬ್ರಾಹ್ಮಣರ ಭೋಜನ
ಸಮಾಜದ ಉನ್ನತ ವರ್ಗ ಎಂದು ಕರೆಯಲ್ಪಡುವ ಬ್ರಾಹ್ಮಣರು ದೇವರು ಹಾಗೂ ಸಾಮಾನ್ಯ ವ್ಯಕ್ತಿಯ ನಡುವಿನ ಕೊಂಡಿ ಎಂದು ಹೇಳಲಾಗುತ್ತದೆ. ಪಿತೃಪಕ್ಷದ ಸಮಯದಲ್ಲಿ ಬ್ರಾಹ್ಮಣರಿಗೆ ಆಹಾರ ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಈ ಕುರಿತು ಪುರಾಣದಲ್ಲೂ ಉಲ್ಲೇಖವಿದೆ. ಮಹಾಭಾರತದಲ್ಲಿ ಬರುವ ಕುಂತಿ ಪುತ್ರ ಕರ್ಣನು ತನ್ನ ಜೀವಿತಾವಧಿಯಲ್ಲಿ ಬಡ ಮತ್ತು ನಿರ್ಗತಿಕರಿಗೆ ದಾನವಾಗಿ ಬಹಳಷ್ಟು ಸಂಪತ್ತನ್ನು ದಾನ ಮಾಡಿದನು. ಆದರೆ ಅವನು ಎಂದಿಗೂ ಆಹಾರವನ್ನು ದಾನವಾಗಿ ನೀಡಲಿಲ್ಲ. ಕರ್ಣನು ಮರಣದ ನಂತರ ಸ್ವರ್ಗಕ್ಕೆ ಹೋದಾಗ, ಅವನಿಗೆ ಅನೇಕ ಐಷಾರಾಮಿ ಮತ್ತು ಭೌತಿಕ ಸಂತೋಷಗಳನ್ನು ನೀಡಲಾಗುತ್ತದೆ. ಆದರೆ ಯಾವುದೇ ಆಹಾರವನ್ನು ಅವನಿಗೆ ನೀಡುವುದಿಲ್ಲ. ಕರ್ಣನು ಈ ಕುರಿತು ಕಾರಣವನ್ನು ಅರ್ಥಮಾಡಿಕೊಂಡನು. ಬ್ರಾಹ್ಮಣರಿಗೆ ಮತ್ತು ಬಡವರಿಗೆ ಆಹಾರವನ್ನು ದಾನ ಮಾಡಲು 15 ದಿನಗಳ ಕಾಲ ಅವನನ್ನು ಭೂಮಿಗೆ ಕಳುಹಿಸಿಕೊಡಲು ಯಮರಾಜನನ್ನು ಕೇಳಿಕೊಳ್ಳುತ್ತಾನೆ. ಯಮರಾಜನು ಅವನ ಕೋರಿಕೆಯನ್ನು ಸ್ವೀಕರಿಸಿ, ಭೂಮಿಗೆ ಕಳುಹಿಸಿದನು. ಭೂಮಿಗೆ ಬಂದ ಕರ್ಣ ಬಡವರಿಗೆ ಹಾಗೂ ಬ್ರಾಹ್ಮಣರಿಗೆ ಆಹಾರ ದಾನ ಮಾಡಿದ, ಆಹಾರ ಕೇಳಿಕೊಂಡು ಬಂದವರಿಗೂ ಇಲ್ಲ ಎನ್ನದೆ ಏನಾದರೂ ಕೊಟ್ಟು ಕಳುಹಿಸುತ್ತಿದ್ದ. ಕರ್ಣ ಸ್ವರ್ಗಕ್ಕೆ ಹಿಂತಿರುಗಿದಾಗ ಅವನಿಗೆ ಹೇರಳವಾದ ಆಹಾರದೊಂದಿಗೆ ಸ್ವಾಗತಿಸಲಾಗುತ್ತದೆ. ಇದು ಬ್ರಾಹ್ಮಣ ಭೋಜನದ ಪ್ರಾಮುಖ್ಯತೆ ಬಗ್ಗೆ ಸೂಚಿಸುತ್ತದೆ.
Pitru Paksha 2022: ಪೂರ್ವಜರ ತೃಪ್ತಿಗಾಗಿ ಈ ಐದು ಜೀವಿಗಳಿಗೆ ನೀಡಲೇಬೇಕು ಆಹಾರ
ಪೂರ್ವಜರನ್ನು ತೃಪ್ತಿ ಪಡಿಸಲು ಪಿತೃಪಕ್ಷ ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ಎಚ್ಚರಿಕೆಯಿಂದ ಮಾಡಬೇಕಾದ ಕೆಲ ನಿಯಮಗಳು ಇಲ್ಲಿವೆ.
1. ಪಿತೃ ಪಕ್ಷದ ಸಮಯದಲ್ಲಿ ಅನ್ನ (Rice), ಮಾಂಸಾಹಾರ (Non-Veg), ಬೆಳ್ಳುಳ್ಳಿ (Garlic), ಈರುಳ್ಳಿ (Onion), ಹೊರಗಿನ ತಿಂಡಿ ತಿನ್ನುವುದನ್ನು ನಿಷೇಧಿಸಬೇಕು. ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸುವುದು ಒಳ್ಳೆಯದು.
2. ಶ್ರಾದ್ಧ ಆಹಾರದಲ್ಲಿ ಮಸೂರ್, ಕಪ್ಪು ಉದ್ದು, ಕಡಲೇಕಾಳು, ಕಪ್ಪು ಜೀರಿಗೆ, ಕಪ್ಪು ಉಪ್ಪು, ಕಪ್ಪು ಸಾಸಿವೆ ಮತ್ತು ಯಾವುದೇ ಅಶುದ್ಧ ಅಥವಾ ಹಳೆಯ ಆಹಾರವನ್ನು ಬಳಸಬಾರದು.
3. ಶ್ರಾದ್ಧ ಮಾಡುವ ವ್ಯಕ್ತಿಯು ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸಬಾರದು. ಜೊತೆಗೆ ಕೂದಲು ಕತ್ತರಿಸುವುದು, ಶೇವ್ ಮಾಡುವುದು, ಕೆಟ್ಟ ಅಥವಾ ಒಗೆಯದ ಬಟ್ಟೆ ಧರಿಸಬಾರದು.
4. ಶ್ರಾದ್ಧ ಮಾಡುವ ವ್ಯಕ್ತಿಯು ಚರ್ಮದಿಂದ ತಯಾರಿಸಿದ ಬೆಲ್ಟ್, ಪರ್ಸ್, ಅಥವಾ ಪಾದರಕ್ಷೆಗಳನ್ನು ಬಳಸಬಾರದು.
5. ಶ್ರಾದ್ಧ ಆಚರಣೆಗಳನ್ನು ಮಾಡುತ್ತಿದ್ದರೆ ಮತ್ತು ಮಂತ್ರಗಳನ್ನು ಪಠಿಸುತ್ತಿದ್ದರೆ ಯಾರೊಂದಿಗಾದರೂ ಮಾತನಾಡಲು ಅದನ್ನು ಹೇಳುವುದನ್ನು ಎಂದಿಗೂ ನಿಲ್ಲಿಸಬಾರದು. ಇದು ನಕಾರಾತ್ಮಕ ಶಕ್ತಿಯನ್ನು ತರಬಹುದು.
6. ತಂಬಾಕು ಅಗಿಯುವುದು, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ಈ ರೀತಿಯ ಕೆಟ್ಟ ಅಭ್ಯಾಸಗಳನ್ನು ಪಿತೃ ಪಕ್ಷದ ಸಮಯದಲ್ಲಿ ಮಾಡಬಾರದು. ಇದು ಶ್ರಾದ್ಧ ಸಮಯದಲ್ಲಿ ಮಾಡುವ ಒಳ್ಳೆಯ ಕಾರ್ಯಗಳು ಮತ್ತು ದಾನಗಳನ್ನು ನಾಶಪಡಿಸುತ್ತದೆ ಹಾಗೂ ಫಲ ನೀಡುವುದಿಲ್ಲ.
7. ಪಿತೃಪಕ್ಷದ ಸಮಯದಲ್ಲಿ ದೈಹಿಕ ಚಟುವಟಿಕೆಗಳನ್ನು ಅನುಸರಿಸಬೇಡಿ. ಹಾಗೂ ಆದಷ್ಟು ಈ ಸಮಯದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಒಳ್ಳೆಯದು.
8. ಈ 16 ದಿನಗಳಲ್ಲಿ ಯಾರೊಂದಿಗೂ ಕಠೋರವಾಗಿ ಮಾತನಾಡುವುದು ಅಥವಾ ನಡೆದುಕೊಳ್ಳುವುದು, ನಿಂದಿಸುವುದು ಮಾಡಬಾರದು. ಏಕೆಂದರೆ ಪಿತೃಗಳು ಭೂಮಿಗೆ ಶಕ್ತಿ ರೂಪದಲ್ಲಿ ಬಂದಿರುತ್ತಾರೆ ಹಾಗೂ ಹೀಗೆ ಮಾಡಿದ್ದಲ್ಲಿ ಅಸ್ತು ಎಂದು ಪರಿಗಣಿಸುತ್ತಾರೆ. ಮುಂದೆ ಇದೊಂದು ಶಾಪವಾಗಿ ಪರಿಣಮಿಸಬಹುದು
9. ಸಾಧ್ಯವಾದರೆ ಪಿತೃಪಕ್ಷದ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಧರಿಸುವುದನ್ನು ನಿಯಂತ್ರಿಸಿ.
ಪಿತೃ ಪಕ್ಷ 2022: 15 ದಿನ ತಪ್ಪಿಯೂ ಈ ಕೆಲಸ ಮಾಡ್ಬೇಡಿ..
10. ಶ್ರಾದ್ಧ ಸಂದರ್ಭದಲ್ಲಿ ಕಪ್ಪು ಅಥವಾ ಕೆಂಪು ಹೂವುಗಳನ್ನು ಮತದತು ಅತ್ಯಂತ ಪರಿಮಳಯುಕ್ತ ಅಥವಾ ವಾಸನೆ ಇಲ್ಲದ ಹೂವುಗಳನ್ನು ಶ್ರಾದ್ಧಾ ಪೂಜೆ ಮತ್ತು ಆಚರಣೆಗಳಿಗೆ ಬಳಸುವುದನ್ನು ತಪ್ಪಿಸಿ.
11. ಪಿತೃಪಕ್ಷದ ಸಂದರ್ಭದಲ್ಲಿ ಕಬ್ಬಿಣದ ಪಾತ್ರೆಗಳನ್ನು ಬಳಸಬೇಡಿ. ಬದಲಾಗಿ ಪೂರ್ವಜರನ್ನು ಮೆಚ್ಚಿಸಲು ಚಿನ್ನ, ಬೆಳ್ಳಿ, ತಾಮ್ರ ಅಥವಾ ಕಂಚಿನ ಪಾತ್ರೆಗಳನ್ನು ಬಳಸಿ.
12. ಶ್ರಾದ್ಧ ಮಾಡುವವರು ಕುಳಿತುಕೊಳ್ಳಲು ಕಬ್ಬಿಣವನ್ನು (Iron) ಬಳಸಬೇಡಿ. ಬದಲಾಗಿ ಕುಳಿತುಕೊಳ್ಳಲು, ಮರದ ಹಲಗೆ ಅಥವಾ ಮಣೆ, ಪ್ಲಾಸ್ಟಿಕ್ ಚಾಪೆ, ಬಟ್ಟೆಯ ಆಸನವನ್ನು ಬಳಸಿ.
13. ಪಿತೃ ಪಕ್ಷದ ಸಮಯದಲ್ಲಿ ಹೊಸ ಬಟ್ಟೆ ಖರೀದಿಸುವುದು ಅಥವಾ ಧರಿಸುವುದು, ಹೊಸ ಮನೆ ಪ್ರವೇಶ, ಹೊಸ ಕೆಲಸ, ಹುಟ್ಟುಹಬ್ಬ ಆಚರಣೆ (Birthday Celebration), ನಾಮಕರಣ, ಹೊಸ ವಾಹನಗಳ ಖರೀದಿ (Buying new vehicle) ಮಾಡಬಾರದು.
14. ಶ್ರಾದ್ಧ ಕರ್ಮಗಳನ್ನು ಸಂಜೆ, ರಾತ್ರಿ, ಮುಂಜಾನೆ, ಮುಸ್ಸಂಜೆ ವೇಳೆ ಮಾಡಬಾರದು.
15. ಶ್ರಾದ್ಧ ಸಂದರ್ಭದಲ್ಲಿ ಬಟ್ಟೆ ತೊಳೆಯುವುದನ್ನು ಮಾಡಬಾರದು.
16. ಪಿತೃಪಕ್ಷದ 16 ದಿನಗಳಲ್ಲಿ ಪೂಜೆ ಮಾಡುವಾಗ ಗಂಟೆ ಬಾರಿಸುವುದು, ಮನೆಯಲ್ಲಿ ಧೂಳು ತೆಗೆಯುವುದು ಮಾಡಬಾರದು. ಇದರಿಂದ ಪಿತೃಗಳಿಗೆ ಅಶಾಂತಿ, ಕಿರಿಕಿರಿ, ಅತೃಪ್ತಿ, ಸಿಟ್ಟು ಬರುತ್ತದೆ ಎನ್ನಲಾಗುತ್ತದೆ.