Asianet Suvarna News Asianet Suvarna News

Astro Tips: ಈ ಜನ್ಮರಾಶಿಯವರನ್ನು ಅಪ್ಪಿತಪ್ಪಿಯೂ ವೈರಿಗಳಾಗಿ ಮಾಡಿಕೊಳ್ಳಬೇಡಿ!

Astrology Tips in Kannada: ಕೆಲವೇ ಕೆಲವು ಜನ್ಮರಾಶಿಯವರು ಆಚಾರ್ಯ ಚಾಣಕ್ಯರ ಹಾಗೆ. ನೀವು ಕಾಡಿದರೆ ಅವರು ಎರಡು ಪಟ್ಟು ಕಾಡುತ್ತಾರೆ. ಇವರ ಜತೆ ಶತ್ರುತ್ವ ಒಳ್ಳೆಯದಲ್ಲ. ಯಾರು ಎಂದು ಇಲ್ಲಿ ನೋಡಿ.  
 

Dont make these zodiac persons your enemy
Author
Bengaluru, First Published Jul 6, 2022, 4:22 PM IST | Last Updated Jul 6, 2022, 4:22 PM IST

ಕೆಲವು ಜನ್ಮರಾಶಿಯವರು ಮೆದು ಸ್ವಭಾವದವರು. ಅಂಥವರ ಜತೆ ಬದುಕು ಸುಲಭ. ಆದರೆ ಇನ್ನು ಕೆಲವರು ಕಠೋರ ಸ್ವಭಾವಿಗಳು ಇರುತ್ತಾರೆ. ಇವರು ಮೇಲ್ನೋಟಕ್ಕೆ ಸಾಮಾನ್ಯರು ಎನಿಸುತ್ತಾರೆ. ಆದರೆ ಇವರು ಚಾಣಕ್ಯನ ಹಾಗೆ. ಒಮ್ಮೆ ಇವರೊಡನೆ ಶತ್ರುತ್ವ ಹೊಂದಿದವರನ್ನು ಫಿನಿಶ್ ಮಾಡದೇ ಬಿಡುವುದಿಲ್ಲ. ಚಾಣಕ್ಯ ನಂದಸಾಮ್ರಾಜ್ಯವನ್ನು ನಾಶ ಮಾಡಿದ ಕತೆ ನಿಮಗೆ ಗೊತ್ತು ತಾನೆ?  

ಹಾಗೆಂದು ನಾವು ಪ್ರಪಂಚದ ಎಲ್ಲ ಜನರೊಂದಿಗೂ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬುದೂ ನಿಜವೇ. ನಾವು ಶತ್ರುಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ, ಕೆಲವೊಮ್ಮೆ ತಿಳಿಯದೇ ಹಾಗೆ ಮಾಡುತ್ತೇವೆ. ಆದರೆ ಕೆಲವರ ಜತೆ ಕೋಪಗೊಂಡಾಗ ವ್ಯವಹರಿಸಬಾರದು. ಶತ್ರುಗಳಾಗಿ ಇವರು ಭಯಾನಕ. ರಾಶಿಚಕ್ರದ ಚಿಹ್ನೆಗಳ ಆಧಾರದ ಮೇಲೆ, ಚಕ್ರದಲ್ಲಿ ಅಂತಹ 4 ರಾಶಿಚಕ್ರಗಳು ನಿಮ್ಮ ಶತ್ರುಗಳಾಗಬಾರದು.

ವೃಷಭ ರಾಶಿ (Taurus)
ಈ ರಾಶಿಚಕ್ರದ ವ್ಯಕ್ತಿಗಳು ತುಂಬಾ ಹಠಮಾರಿಗಳು. ನೀವು ಎಂದಿಗೂ ಅವರ ಕೋಪವನ್ನು ಉತ್ತೇಜಿಸಬಾರದು. ಯಾವ ವಿಷಯವು ಅವರಲ್ಲಿ ಕೋಪವನ್ನು ಉಂಟುಮಾಡುತ್ತದೆ ಎಂದು ನಿಮಗೆ ತಿಳಿದ ಬಳಿಕ, ಅದನ್ನು ಹೆಚ್ಚು ಕೆದಕಲು ಹೋಗಬೇಡಿ. ಈ ವ್ಯಕ್ತಿಗಳು ಸಾಕಷ್ಟು ಕೋಪದಿಂದ ಲೋಡ್ ಆಗಿರುತ್ತಾರೆ ಮತ್ತು ನೀವು ಅವರ ಮುಚ್ಚಳ ತೆರೆದರೆ ಭುಸ್ಸೆಂದು ಸ್ಫೋಟಿಸುತ್ತಾರೆ. ಶತ್ರುಗಳನ್ನು ಆಹ್ವಾನಿಸುವ ಸ್ವಭಾವದವರು ಇವರು. ಅವರ ಬಿಗಿಯಾದ ತುಟಿಗಳ ನಗು ನೋಡಿಯೇ ಅರ್ಥ ಮಾಡಿಕೊಳ್ಳಿ. ನಿಮ್ಮಿಬ್ಬರ ನಡುವಿನ ಉದ್ವಿಗ್ನತೆಯನ್ನು ಇವರು ಒಪ್ಪಿಕೊಳ್ಳದಿದ್ದರೂ, ಮೌನವಾಗಿ ಹಗೆ ಸಾಧಿಸಬಹುದು.

ಇದನ್ನೂ ಓದಿ: ಯಾವ ರಾಶಿಯ ಹುಡುಗ ಸಂಗಾತಿಯಾಗಿ ಹೇಗೆ? ಖಾಸಗಿ ಬದುಕಲ್ಲಿ ಆತ ಹೇಗೆ?

ಕಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಕೋಪಗೊಂಡರೆ ನಿಮ್ಮ ಮೇಲೆ ಭಾವನೆಗಳ ಸುಂಟರಗಾಳಿಯನ್ನು ಹರಿಬಿಡಬಹುದು. ಇದರಿಂದ ನಿಮ್ಮಲ್ಲಿ ಶತ್ರುತ್ವ ಉಂಟಾಗಬಹುದು. ಇವರು ನೇರವಾಗಿ ಏನೂ ಮಾಡದಿರಬಹುದು, ಆದರೆ ಇವರು ನಿಮ್ಮ ಬಗ್ಗೆ ಗಾಸಿಪ್ ಹರಡುತ್ತಾರೆ. ಅವರ ಮಾತುಗಳು ವಿಷಪೂರಿತವಾಗಿರುತ್ತವೆ. ಈ ರಾಶಿಚಕ್ರದವರನ್ನು ನಿಮ್ಮ ಶತ್ರುಗಳನ್ನಾಗಿ ಮಾಡಿಕೊಂಡರೆ ನೀವು ವಿಷಾದಿಸುತ್ತೀರಿ.

ವೃಶ್ಚಿಕ ರಾಶಿ (Scorpio)
ಇವರ ಕೋಪವು ಅಸ್ಥಿರವಾದುದು. ಇವರ ಕೋಪಕ್ಕೆ ಹೆದರುವುದು ಅರ್ಥಹೀನ ಎಂದು ಕಾಣಿಸಬಹುದು, ಆದರೆ ಹಾಗಿಲ್ಲ. ಇವರು ನಿಮ್ಮ ಮುಖಕ್ಕೆ ಹೊಡೆದಂತೆ ಮಾತಾಡುತ್ತಾರೆ, ಜನರ ಮಧ್ಯದಲ್ಲಿ ನಿಮ್ಮನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಾರೆ. ಇವರು ನಿಮ್ಮನ್ನು ಅಷ್ಟು ಸುಲಭವಾಗಿ ಹೋಗಲು ಬಿಡುವುದಿಲ್ಲ. ಇವರ ನಡೆಗಳು ಸಮಯಕ್ಕೆ ತಕ್ಕಂತೆ ಇರುತ್ತವೆ. ವೃಶ್ಚಿಕ ರಾಶಿಯವರ ಮೇಲೆ ನೀವು ಪ್ರತಿದಾಳಿ ಮಾಡಲು ಸಿದ್ಧರಾಗಿರುವುದಿಲ್ಲ, ನೆನಪಿಡಿ.

ಇದನ್ನೂ ಓದಿ: ಶನಿ ಬರೀ ಕೆಟ್ಟದ್ದೇ ಮಾಡೋಲ್ಲ, ಈ ಶುಭ ಸಂಕೇತಗಳನ್ನೂ ಕೊಡುತ್ತಾನೆ!

ಧನು ರಾಶಿ (Sagttarius)
ಇವರ ಸ್ವಭಾವ ತುಂಬಾ ಸೂಕ್ಷ್ಮ ಮತ್ತು ಇವರನ್ನು ನೋಯಿಸುವುದು ತುಂಬಾ ಸುಲಭ. ಆದರೆ ಇವರು ದ್ವೇಷವನ್ನು ಹಿಡಿದಿಟ್ಟುಕೊಳ್ಳುತ್ತಾರೆ ಮತ್ತು ನಿಮ್ಮನ್ನು ಬೇರೆ ಕಡೆ, ಬೇರೆ ಸಮಯದಲ್ಲಿ ಅಟಕಾಯಿಸಿಕೊಳ್ಳುತ್ತಾರೆ. ಕೆಲವು ಸಲ ನೀವು ಇವರ ಬಗ್ಗೆ ಮಾಡುವ ತಮಾಷೆಗಳು ಕೂಡ ಇವರಿಗೆ ಕಿರಿಕಿರಿ ಉಂಟುಮಾಡುತ್ತದೆ.

ಮೇಷ ರಾಶಿ (Aries)
ಇವರನ್ನು ತೀರಾ ಅಪಾಯಕಾರಿಗಳು ಎಂದು ಹೇಳಲಾಗದು. ಆದರೆ ಒಮ್ಮೆ ಇವರಿಗೆ ಯಾರಾದರೂ ಅಪಮಾನ ಮಾಡಿದರೆ, ಕೂಡಲೇ ತಿರುಗೇಟು ನೀಡುತ್ತಾರೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ. ಯಾವುದಕ್ಕೂ ಇನ್ನೊಮ್ಮೆ ಕಾದು ಕುಳಿತು ಪ್ರತಿಯಾಗಿ ತಿರುಗೇಟು ಕೊಡೋಣ ಎಂದು ಕಾಯುವವರಲ್ಲ. ಆದ್ದರಿಂದ ಇವರಿಗೆ ತಕ್ಷಣವೇ ಸಿಟ್ಟು ತರಿಸಬಹುದಾದ ವಿಷಯಗಳ ಬಗ್ಗೆ ಮಾತಾಡುವಾಗ ಆ ಬಗ್ಗೆ ಹುಷಾರಾಗಿರಿ.

ಇದನ್ನೂ ಓದಿ: ಆಷಾಢ ಮಾಸದಲ್ಲಿ ಮರೆತೂ ಈ ಕೆಲಸಗಳನ್ನು ಮಾಡಬೇಡಿ!

ಇನ್ನು ಮಿಥುನ, ಸಿಂಹ, ಕನ್ಯಾ, ತುಲಾ, ಮಕರ, ಕುಂಭ ಮತ್ತು ಮೀನ ರಾಶಿಯವರು ಕೂಡ ಕೋಪಗೊಳ್ಳುತ್ತಾರೆ, ಆದರೆ ಇವರು ಕಾದು ಕುಳಿತು ಸೇಡು ತೀರಿಸಿಕೊಳ್ಳುವವರಲ್ಲ. ಹೀಗಾಗಿ ಮೇಲಿನ ಐದು ಜನ್ಮರಾಶಿಯವರ ಕುರಿತು ನೀವು ಹೆಚ್ಚು ಎಚ್ಚರವಾಗಿ ಇರಬೇಕು. 

Latest Videos
Follow Us:
Download App:
  • android
  • ios