ಆಷಾಢ ಮಾಸದಲ್ಲಿ ಮರೆತೂ ಈ ಕೆಲಸಗಳನ್ನು ಮಾಡಬೇಡಿ!

ಆಷಾಢ ಮಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಇದು ಶಿವನಿಗೆ ಮೀಸಲಾದ ಮಾಸ. ಈ ತಿಂಗಳಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆ ಮಾಡಿದರೆ ಶಿವ ಕೋಪಗೊಳ್ಳುತ್ತಾನೆ ಎನ್ನಲಾಗುತ್ತದೆ. ಅಂಥ ಕೆಲಸಗಳೇನು?

Do not do this work even by forgetting in Ashada skr

ಆಷಾಢ ಮಾಸ(Ashadha Month 2022) ಎಂದರೆ ಶಿವನ ಮಾಸ. ಈ ಸಮಯದಲ್ಲಿ ಶಿವನನ್ನು ಮೆಚ್ಚಿಸಲು ಭಕ್ತರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿ ಸೋಮವಾರ ಉಪವಾಸ ಮಾಡುವುದು, ವಿಶೇಷ ಪೂಜೆ ಮಾಡುವುದು ಸೇರಿದಂತೆ ಆಷಾಢ ಶಿವರಾತ್ರಿಯ ಕಟ್ಟುನಿಟ್ಟಿನ ಆಚರಣೆವರೆಗೂ ಭಕ್ತರು ಶಿವನನ್ನು ಮೆಚ್ಚಿಸಲು ನೋಡುತ್ತಾರೆ. ಆಷಾಢ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುವುದು ಸುಲಭ, ಆತ ಭಕ್ತರಿಗೆ ಶೀಘ್ರ ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. 

ಕೆಲವು ನಕಾರಾತ್ಮಕ ನಂಬಿಕೆಗಳಿಂದಾಗಿ ಆಷಾಢ ಮಾಸವನ್ನು ಶೂನ್ಯ ಮಾಸವೆಂದು ಗುರುತಿಸಲಾಗಿದೆ. ಆಷಾಢ ಮಾಸವು ಗೃಹಸ್ಥಾಶ್ರಮ, ಪವಿತ್ರ ದಾರ, ಮದುವೆ ಮುಂತಾದ ಶುಭ ಕಾರ್ಯಗಳನ್ನು ಮಾಡಲು ಅಶುಭ ಎಂಬ ನಂಬಿಕೆಯಿದೆ. ಆಷಾಢ ಮಾಸವನ್ನು ಹೀಗೆ ಶೂನ್ಯ ಎಂದು ಪರಿಗಣಿಸುವ ನಂಬಿಕೆಯ ಹಿಂದಿನ ಮಳೆಗಾಲದ ಕಾರಣವಿರಬಹುದು.

ಆಷಾಢ ಮಾಸವು ದಕ್ಷಿಣಾಯಣದ ಆರಂಭವಾಗಿದೆ. ಇನ್ನಾರು ತಿಂಗಳು ಅಂದರೆ ಮಕರ ಸಂಕ್ರಾಂತಿಯವರೆಗೆ ದೇವಾನುದೇವತೆಗಳಿಗೆ ರಾತ್ರಿಯ ಸಮಯ.  ಈ ಸಮಯದಲ್ಲಿ ಭಕ್ತರು ಶಿವನೊಂದಿಗೆ ಸಪ್ತಮಾತೃಕ ಶಕ್ತಿ ದೇವತೆಗಳು, ಭೈರವ, ಭಗವಾನ್ ನರಸಿಂಹ, ಮಹಿಷಾಸುರನನ್ನು ಪೂಜಿಸಬೇಕು. ಈ ಮಾಸವು ವ್ರತ, ಪೂಜೆ ಇತ್ಯಾದಿಗಳಿಗೆ ಉತ್ತಮವಾಗಿದೆ. ಇದೇ ತಿಂಗಳಲ್ಲಿ ಚಾತುರ್ಮಾಸ ಕೂಡಾ ಆರಂಭವಾಗಲಿದೆ.

ಒಂದೇ ತಿಂಗಳಲ್ಲಿ ಮೂರು ಬಾರಿ ಬುಧನ ರಾಶಿ ಪರಿವರ್ತನೆ; ಈ ರಾಶಿಗಳಿಗೆ ಬಂಪರ್

ಈ ವರ್ಷ ಆಷಾಢ ಮಾಸವು ಜೂನ್ 30ರಂದು ಆರಂಭವಾಗಿದ್ದು, ಜುಲೈ 28ರವರೆಗೆ ಇರಲಿದೆ. ಆಷಾಢ ಮಾಸದಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲ ನಿಯಮಗಳನ್ನು ಅನುಸರಿಸಬೇಕು ಮತ್ತು ಕೆಲ ತಪ್ಪುಗಳನ್ನು ತಪ್ಪಿಸಬೇಕು. ಆಷಾಢ ಮಾಸದಲ್ಲಿ ಮಾಡಬಾರದ ಕೆಲಸಗಳೇನೇನು ನೋಡೋಣ. 

1. ಆಷಾಢ ಮಾಸದಲ್ಲಿ ಬದನೆಕಾಯಿ(brinjol)ಯನ್ನು ಸೇವಿಸಬಾರದು. ಬದನೆಯನ್ನು ಅಶುದ್ಧ ತರಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಲೇ ಜನರು ದ್ವಾದಶಿ ಮತ್ತು ಚತುರ್ದಶಿಯಂದು ಬದನೆಕಾಯಿಯನ್ನು ತ್ಯಜಿಸುತ್ತಾರೆ.

2. ಆಷಾಢದಲ್ಲಿ ಹಾಲಿನೊಂದಿಗೆ ಶಿವಲಿಂಗದ ಜಲಾಭಿಷೇಕವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಈ ತಿಂಗಳಲ್ಲಿ ಹಾಲು(milk) ಕುಡಿಯುವುದನ್ನು ತಪ್ಪಿಸಬೇಕು.

3. ಭಗವಾನ್ ಶಿವನ ಆರಾಧನೆಯ ಸಮಯದಲ್ಲಿ, ಒಬ್ಬರು ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ತಪ್ಪಿಸಬೇಕು. ಶಿವಲಿಂಗದ ಮೇಲೆ ಅರಿಶಿನ(Turmeric) ಮತ್ತು ಸಿಂಧೂರ ಇತ್ಯಾದಿಗಳನ್ನು ಅರ್ಪಿಸಬಾರದು. ಬೇಲ್ ಎಲೆಗಳು, ಗಾಂಜಾ ಮತ್ತು ದತುರಾ ಭೋಲೆನಾಥನಿಗೆ ಬಹಳ ಪ್ರಿಯವಾಗಿದೆ.

4. ಆಷಾಢ ಮಾಸದಲ್ಲಿ ಯಾರನ್ನೂ ಅವಮಾನಿಸಬೇಡಿ. ವಾದ ವಿವಾದಗಳಿಂದ ದೂರವಿರಬೇಕು ಮತ್ತು ಮಾತಿನ ಮೇಲೆ ಸಂಯಮ ಇರಬೇಕು.

5. ಆಷಾಢ ಮಾಸದಲ್ಲಿ ಮನೆ ಬಾಗಿಲಿಗೆ ಬರುವ ಹಸು ಅಥವಾ ಗೂಳಿಯನ್ನು ಓಡಿಸಬೇಡಿ. ಅಂಥ ಪ್ರಾಣಿಗಳಿಗೆ ಏನಾದರೂ ತಿನ್ನಲು ಕೊಡಿ. ಗೂಳಿಯನ್ನು ಕೊಲ್ಲುವುದು ಶಿವನ ಸವಾರಿ ನಂದಿ(nandi)ಗೆ ಅವಮಾನವೆಂದು ಪರಿಗಣಿಸಲಾಗಿದೆ.

ಯಾವ ರಾಶಿಯ ಹುಡುಗ ಸಂಗಾತಿಯಾಗಿ ಹೇಗೆ? ಖಾಸಗಿ ಬದುಕಲ್ಲಿ ಆತ ಹೇಗೆ?

6. ಆಷಾಢ ಮಾಸದಲ್ಲಿ ದೇಹಕ್ಕೆ ಎಣ್ಣೆ ಹಚ್ಚುವುದನ್ನು ತಪ್ಪಿಸಿ. ಈ ತಿಂಗಳು ದೇಹಕ್ಕೆ ಎಣ್ಣೆ ಹಚ್ಚುವುದು ಅಶುಭವೆಂದು ಪರಿಗಣಿಸಲಾಗಿದೆ.

7. ಪೂಜೆಯ ಸಮಯದಲ್ಲಿ ಕೇತಕಿ ಹೂವನ್ನು ಶಿವನಿಗೆ ಅರ್ಪಿಸಬಾರದು.

8. ಈ ತಿಂಗಳಲ್ಲಿ ಹಗಲಿನಲ್ಲಿ ಮಲಗುವುದನ್ನು ತಪ್ಪಿಸಿ.

9. ಆಷಾಢ ಮಾಸದಲ್ಲಿ ವಿವಾಹ, ನಿಶ್ಚಿತಾರ್ಥ, ಉಪನಯನ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios