Asianet Suvarna News Asianet Suvarna News

Pitru Paksha: ಶುಭ ಫಲ ಸಿಗಲು ಪಿತೃ ಪಕ್ಷದಲ್ಲಿ ಈ ವಸ್ತುಗಳನ್ನು ದಾನ ಮಾಡಿ

ಪೂರ್ವಜರು ತೃಪ್ತರಾಗುವುದು ಬಹಳ ಮುಖ್ಯ. ಪಿತೃಗಳು ಸಂತೋಷಗೊಂಡ್ರೆ ಖುಷಿ ಸದಾ ನೆಲೆಸುತ್ತದೆ. ಹಾಗಾಗಿ ಪಿತೃ ಪಕ್ಷದಲ್ಲಿ ಪೂರ್ವಜರನ್ನು ನೆನೆದು ಕೆಲವೊಂದು ವಸ್ತುಗಳನ್ನು ದಾನ ಮಾಡಬೇಕೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. 
 

Donate silver black sesame during pitru paksha to get luck
Author
First Published Sep 21, 2022, 10:12 AM IST

ವರ್ಷದಲ್ಲಿ 15 ದಿನಗಳ ಕಾಲ ಪಿತೃ ಪಕ್ಷವಿರುತ್ತದೆ. ಈ ಬಾರಿ ಸೆಪ್ಟೆಂಬರ್ 25ರಂದು ಪಿತೃ ಪಕ್ಷ ಮುಗಿಯಲಿದೆ. ಸೆಪ್ಟೆಂಬರ್ 25ನೇ ತಾರೀಕು ಅಮವಾಸ್ಯೆಯಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತದೆ. ಈ ದಿನ ಪೂರ್ವಜರಿಗೆ ಶ್ರಾದ್ಧ, ತರ್ಪಣ ನೀಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆಯಿದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ನೋವಾಗುವ ಯಾವುದೇ ಕೆಲಸವನ್ನು ಮಾಡಬಾರದು. ಸದಾ ಪೂರ್ವಜರು ಖುಷಿಯಾಗಿರುವಂತೆ ನೋಡಿಕೊಳ್ಳಬೇಕು. ಪೂರ್ವಜರು ಸಂತೋಷವಾದ್ರೆ ಖುಷಿಯಿಂದ ಎಲ್ಲರನ್ನು ಹರಸುತ್ತಾರೆ. ಇದ್ರಿಂದ ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ, ವಂಶಾಭಿವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಪಿತೃ ಪಕ್ಷದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ಸಂದರ್ಭದಲ್ಲಿ ಕೆಲ ವಸ್ತುಗಳನ್ನು ದಾನ ಮಾಡಿದ್ರೆ ಪೂರ್ವಜರು ಖುಷಿಯಾಗ್ತಾರೆ. ಇದ್ರಿಂದ ಬಯಸಿದ್ದೆಲ್ಲ ನಮಗೆ ಸಿಗುತ್ತದೆ. ಪಿತೃ ಪಕ್ಷದಲ್ಲಿ ಯಾವುದನ್ನು ದಾನ ಮಾಡಿದ್ರೆ ಒಳ್ಳೆಯದು ಎಂಬುದನ್ನು ನಾವಿಂದು ಹೇಳ್ತೇವೆ.

ಪಿತೃ ಪಕ್ಷ (Pitru Paksha) ದಲ್ಲಿ ಈ ವಸ್ತು (Material) ಗಳನ್ನು ದಾನ (Donation)  ಮಾಡಿ : 
ಬೆಳ್ಳಿ (Silver) :
ಪಿತೃ ಪಕ್ಷದಲ್ಲಿ ಬೆಳ್ಳಿಯ ವಸ್ತುವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಬೆಳ್ಳಿ ವಸ್ತುಗಳನ್ನು ದಾನ ಮಾಡಿದ್ರೆ ಪೂರ್ವಜರ ಆತ್ಮ (soul)ಕ್ಕೆ ಶಾಂತಿ ಸಿಗುತ್ತದೆ. ಪಿತೃಗಳ  ಆಶೀರ್ವಾದ ಕುಟುಂಬದ ಮೇಲಾಗುತ್ತದೆ. ಬೆಳ್ಳಿ ಚಂದ್ರ ಗ್ರಹಕ್ಕೆ ಸಂಬಂಧಿಸಿದೆ. ಪಿತೃ ಪಕ್ಷದಲ್ಲಿ ಹಾಲು ಮತ್ತು ಅನ್ನದ ಜೊತೆಗೆ ಬೆಳ್ಳಿಯನ್ನು ದಾನ ಮಾಡುವುದು ತುಂಬಾ ಶುಭವೆಂದು ನಂಬಲಾಗಿದೆ.  

ಕಪ್ಪು ಎಳ್ಳು : ಪಿತೃ ಪಕ್ಷದಲ್ಲಿ ಮಾಡುವ ಶ್ರಾದ್ಧದ ಸಂದರ್ಭದಲ್ಲಿ  ಕಪ್ಪು ಎಳ್ಳನ್ನು ದಾನ ಮಾಡಬೇಕು. ಇದ್ರಿಂದ ಮಂಗಳಕರ ಫಲಿತಾಂಶ ನಿಮಗೆ ಸಿಗುತ್ತದೆ. ಪೂರ್ವಜರನ್ನು ತೃಪ್ತಿಪಡಿಸಲು ಬೆಳ್ಳಿ ವಸ್ತುಗಳನ್ನು ದಾನ ಮಾಡಲು ಸಾಧ್ಯವಿಲ್ಲ ಎನ್ನುವವರು ಕಪ್ಪು ಎಳ್ಳನ್ನು ದಾನ ಮಾಡಿದ್ರೆ ಸಾಕು. ಕಪ್ಪು ಎಳ್ಳನ್ನು ದಾನ ಮಾಡುವುದ್ರಿಂದ ಮುಂದೆ ಬರುವ ಆಪತ್ತು ಕಡಿಮೆಯಾಗುತ್ತದೆ. ಅನಾಹುತಗಳಿಂದ ರಕ್ಷಣೆ ಸಿಗುತ್ತದೆ.  

ಬೆಲ್ಲ (Jaggery) : ಪಿತೃ ಪಕ್ಷದಲ್ಲಿ ಬೆಲ್ಲವನ್ನು ಕೂಡ ನೀವು ದಾನ ಮಾಡಬಹುದು. ಶ್ರಾದ್ಧದ ಸಂದರ್ಭದಲ್ಲಿ ಬೆಲ್ಲವನ್ನು ದಾನ ಮಾಡಿದ್ರೆ ಪೂರ್ವಜರಿಗೆ ಖುಷಿಯಾಗುತ್ತದೆ. ಕುಟುಂಬಸ್ಥರ ಗಲಾಟೆ, ಜಗಳ ಕಡಿಮೆಯಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಪಾಲಕರಿಗೆ ನೆಮ್ಮದಿ ಸಿಗುತ್ತದೆ.  

ಅನ್ನ ದಾನ (Rice)  : ಅನ್ನದಾನ ಮಹಾದಾನ ಎಂದು ನಂಬಲಾಗಿದೆ. ಪಿತೃ ಪಕ್ಷದಲ್ಲೂ ಪೂರ್ವಜರನ್ನು ತೃಪ್ತಿಪಡಿಸಲು ಅನ್ನದಾನವನ್ನು ಮಾಡಬೇಕು. ಅನ್ನದಾನ ಮಂಗಳಕರ ಫಲಿತಾಂಶ ನೀಡುತ್ತದೆ. ಪಿತೃ ಪಕ್ಷದಲ್ಲಿ ಅಕ್ಕಿ ಮತ್ತು ಗೋಧಿಯನ್ನು ನೀವು ದಾನ ಮಾಡಬೇಕು. ಇದ್ರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಸುಖ, ಸಂಪತ್ತು ಪ್ರಾಪ್ತಿಯಾಗುತ್ತದೆ. 

POSITIVE VIBES: ಸೂರ್ಯನ ಚಲನೆಗೆ ತಕ್ಕಂತೆ ವಾಸ್ತು ಬದಲಿಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ

ಉಪ್ಪು (Salt) : ಉಪ್ಪನ್ನು ದಾನ ಮಾಡದೆ ಯಾವುದೇ ದಾನ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಉಪ್ಪನ್ನು ಅವಶ್ಯಕವಾಗಿ ದಾನ ಮಾಡಬೇಕು. ಶ್ರಾದ್ಧದ ಸಂದರ್ಭದಲ್ಲಿ ಅಥವಾ ಪಿತೃ ಪಕ್ಷದಲ್ಲಿ ನೀವು ಉಪ್ಪನ್ನು ದಾನ ಮಾಡಬೇಕು.  

ಚಪ್ಪಲಿ, ಶೂ (Slippers, shoes) : ಪಿತೃ ಪಕ್ಷದಲ್ಲಿ ಚಪ್ಪಲಿ ಮತ್ತು ಶೂವನ್ನು ಕೂಡ ದಾನ ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಪಾದರಕ್ಷೆ ದಾನ ಮಾಡುವುದ್ರಿಂದ ಅನೇಕ ಸಮಸ್ಯೆ ಕಡಿಮೆಯಾಗುತ್ತದೆ. ಜಾತಕದಲ್ಲಿ ಯಾವುದೇ ದೋಷವಿದ್ರೂ ಪಾದರಕ್ಷೆಯನ್ನು ದಾನ ಮಾಡ್ಬೇಕು. ಪಾದರಕ್ಷೆ ಮತ್ತು ಚಪ್ಪಲಿಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸಂತೋಷ, ಖುಷಿ ಮತ್ತು ಶಾಂತಿ ನೆಲೆಸುತ್ತದೆ.  

Navaratriಯಲ್ಲಿ ಅಖಂಡ ಜ್ಯೋತಿಯನ್ನು ಏಕೆ ಬೆಳಗಿಸಲಾಗುತ್ತದೆ?

ಪಿತೃ ಪಕ್ಷದಲ್ಲಿ ಹಸುವಿನ ತುಪ್ಪ (Ghee) ದಾನ ಮಾಡಿ : ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಹಸುವನ್ನು ಪೂಜಿಸುವುದರಿಂದ ಅನೇಕ ಸಮಸ್ಯೆ ದೂರವಾಗುತ್ತವೆ. ಪಿತೃ ಪಕ್ಷದಲ್ಲಿ ಹಸುವಿನ ತುಪ್ಪವನ್ನು ದಾನ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ.    

Follow Us:
Download App:
  • android
  • ios