Asianet Suvarna News Asianet Suvarna News

Navaratriಯಲ್ಲಿ ಅಖಂಡ ಜ್ಯೋತಿಯನ್ನು ಏಕೆ ಬೆಳಗಿಸಲಾಗುತ್ತದೆ?

ನವರಾತ್ರಿಯ ಸಮಯದಲ್ಲಿ ಒಂಬತ್ತೂ ದಿನಗಳ ಕಾಲ ಕೆಲವರು ಅಖಂಡ ಜ್ಯೋತಿ ಉರಿಸುತ್ತಾರೆ. ಅಂದರೆ, ಒಮ್ಮೆ ಹಚ್ಚಿದ ಜ್ಯೋತಿ 9 ದಿನಗಳ ಕಾಲ ಕೆಡದಂತೆ ನೋಡಿಕೊಳ್ಳಲಾಗುತ್ತದೆ. ಇದರ ಹಿಂದಿನ ಉದ್ದೇಶವೇನು?

Why is the Akhand Jyoti lit in Navratri skr
Author
First Published Sep 20, 2022, 2:51 PM IST

ಎಲ್ಲ ಹಿಂದೂ ಮನೆಗಳಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ದೀಪಗಳನ್ನು ಬೆಳಗಿಸಲಾಗುತ್ತದೆ, ಆದರೆ ನವರಾತ್ರಿ ಮತ್ತು ಇತರ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿಅಖಂಡ ಜ್ಯೋತಿಯ ಬೆಳಕನ್ನು ಬೆಳಗಿಸಲಾಗುತ್ತದೆ. ಭಕ್ತಿ ಕ್ಷೇತ್ರದಲ್ಲಿ ಅಖಂಡ ಜ್ಯೋತಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅಖಂಡ ಜ್ಯೋತಿಯ ಬಗ್ಗೆ ಚರ್ಚಿಸುವ ಮೊದಲು, ದೀಪದ ಬಗ್ಗೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯ.

ಭಕ್ತಿಯು ದೇವರನ್ನು ತಲುಪುತ್ತದೆ
ಭಕ್ತನು ತನ್ನ ಪ್ರಾರ್ಥನೆಯನ್ನು ದೀಪದಲ್ಲಿರುವ ಅಗ್ನಿ ದೇವರ ಮೂಲಕ ದೇವರಿಗೆ ಕಳುಹಿಸಲು ಪ್ರಯತ್ನಿಸುತ್ತಾನೆ. ಇಲ್ಲಿ ಭಕ್ತನ ಧೂತನಾಗಿ ದೀಪವು ಆತನ ಭಾವನೆಗಳನ್ನು ದೇವರಿಗೆ ತಲುಪಿಸುತ್ತದೆ. ಆದ್ದರಿಂದ ಮನೆಗಳಲ್ಲಿ ದೇವರನ್ನು ನಿರಂತರವಾಗಿ ಪೂಜಿಸುವುದು, ದೀಪಗಳನ್ನು ಹಚ್ಚುವುದು, ಗಂಟೆಗಳು ಮತ್ತು ಶಂಖಗಳನ್ನು ಮೊಳಗಿಸುವ ಸಂಪ್ರದಾಯವಿದೆ. ಯಾವುದೇ ಪೂಜೆಯನ್ನು ದೀಪದಲ್ಲಿ ಅಗ್ನಿ ಬೆಳಗಿಸುವ ಮೂಲಕ ಪ್ರಾರಂಭಿಸಲಾಗುತ್ತದೆ ಮತ್ತು ಪೂಜೆಯ ಕೊನೆಯಲ್ಲಿ ದೇವರಿಗೆ ಆರತಿ ಎತ್ತಲಾಗುತ್ತದೆ. 

ಅಖಂಡ ಜ್ಯೋತಿ
ಎಲ್ಲಿಯವರೆಗೆ ಪೂಜೆ ನಡೆಯುತ್ತೋ ಅಷ್ಟು ಹೊತ್ತು ದೀಪವನ್ನು ಕೆಡದಂತೆ ಇಡಬೇಕು, ಅದರ ಶಕ್ತಿಯಿಂದ ಸುತ್ತಲಿನ ಪ್ರಭೆಯು ಕ್ರಮೇಣ ಸ್ವಚ್ಛವಾಗುತ್ತದೆ. ದೀಪದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಾಮುಖ್ಯತೆ ತುಂಬಾ ಹೆಚ್ಚು. ದೀಪವನ್ನು ಹಚ್ಚಿದ ನಂತರ ಕ್ರಮೇಣ ಸುತ್ತಮುತ್ತಲಿನ ಪ್ರದೇಶವನ್ನು ಅದರ ಜ್ವಾಲೆಯ ಶಾಖ ಆವರಿಸುತ್ತದೆ. ಅಖಂಡ ದೀಪ ಎಂದರೆ ಪೂಜೆ ಎಷ್ಟು ದಿನ ಇರುತ್ತದೆಯೋ ಅಷ್ಟು ದಿನ ಒಮ್ಮೆ ಹಚ್ಚಿದ ದೀಪ ಕೆಡದಂತೆ ನೋಡಿಕೊಂಡು ಬೆಳಗಿಸಬೇಕು. ಅಂದರೆ ದೀಪವನ್ನು ನಂದಲು ಬಿಡಬಾರದು. ಇದಕ್ಕಾಗಿ ಅಖಂಡ ಜ್ವಾಲೆಯನ್ನು ಹೊತ್ತಿಸುವ ದೀಪದ ಹತ್ತಿಯ ಬತ್ತಿ ಸಾಕಷ್ಟು ದೊಡ್ಡದಾಗಿರಬೇಕು ಮತ್ತು ಅದರಲ್ಲಿ ಸಾಕಷ್ಟು ಪ್ರಮಾಣದ ತುಪ್ಪ ಇರುವಂತೆ ನೋಡಿಕೊಳ್ಳಬೇಕು. ಆಗಾಗ, ಎಣ್ಣೆ ಇಲ್ಲವೇ ತುಪ್ಪವನ್ನು ದೀಪಕ್ಕೆ ಹಾಕುತ್ತಿರಬೇಕು. ಗಾಳಿ ಬೀಸಿ ದೀಪ ಆರದಂತೆ  ಸದಾ ಎಚ್ಚರ ವಹಿಸಬೇಕು.

ಕೆಟ್ಟ ಕಂಪನಗಳ ನಿವಾರಣೆ(removing negative vibes)
ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ಉರಿಯುವ ದೀಪದಿಂದಾಗಿ, ಅದರ ಶಕ್ತಿಯು ಇಡೀ ಮನೆ ಅಥವಾ ನಿರ್ದಿಷ್ಟ ಪ್ರದೇಶವನ್ನು ಆವರಿಸುತ್ತದೆ. ಕೆಟ್ಟ ಕಂಪನ ಎಂದೂ ಕರೆಯಲ್ಪಡುವ ನಕಾರಾತ್ಮಕತೆಯು ಈ ಅಖಂಡ ಜ್ಯೋತಿಯ ಪರಿಣಾಮ ಆ ಪ್ರದೇಶದಿಂದ ತಾನಾಗಿಯೇ ನಾಶವಾಗುತ್ತದೆ. ಆದ್ದರಿಂದ ನವರಾತ್ರಿಯ ಉದ್ದಕ್ಕೂ ಮುರಿಯದ ಜ್ವಾಲೆಯನ್ನು ಬೆಳಗಿಸುವ ಸಂಪ್ರದಾಯವಿದೆ. ಎಲ್ಲವನ್ನೂ ಸ್ವಚ್ಛಗೊಳಿಸುವವನು ಅಗ್ನಿದೇವ. ಸೀತೆಯ ಪಾವಿತ್ರ್ಯತೆಗೆ ಸಾಕ್ಷಿಯಾದವನು ಆತ. ಬೆಂಕಿಯ ಸಂಪರ್ಕಕ್ಕೆ ಬಂದ ನಂತರ ಅಶುದ್ಧತೆ ಅಥವಾ ಋಣಾತ್ಮಕತೆ ದಹಿಸಲ್ಪಡುತ್ತದೆ ಮತ್ತು ಉಳಿಯುವುದು ಶುದ್ಧ ಚಿನ್ನದಂತ ಧನಾತ್ಮಕ ಕಂಪನಗಳು. ಮನೆಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ.

ಈ ವಿಷಯದ ಬಗ್ಗೆ ಎಚ್ಚರ ವಹಿಸಿ
ದೀಪವನ್ನು ನೆಲದ ಮೇಲೆ ಇಡಬೇಡಿ. ಪೂಜಾ ಕಂಬದಲ್ಲಿ ಅಷ್ಟಭುಜವನ್ನು ಮಾಡಿ ಮತ್ತು ಮಾತೆ ದುರ್ಗೆಯ ವಿಗ್ರಹದ ಮುಂದೆ ಅಖಂಡ ಜ್ಯೋತಿಯ ದೀಪವನ್ನು ಇರಿಸಿ.
ಅಖಂಡ ಜ್ಯೋತಿಯಲ್ಲಿ ಹಸುವಿನ ತುಪ್ಪವನ್ನು ಬಳಸಿ. ತುಪ್ಪವಿಲ್ಲದಿದ್ದರೆ, ಶುದ್ಧ ಸಾಸಿವೆ ಅಥವಾ ಎಳ್ಳೆಣ್ಣೆಯ ದೀಪವನ್ನು ಸಹ ಬೆಳಗಿಸಬಹುದು. ದೇವಿಯ ವಿಗ್ರಹದ ಬಲಭಾಗದಲ್ಲಿ ದೀಪವನ್ನು ಇರಿಸಿ, ಎಣ್ಣೆಯ ದೀಪವಿದ್ದರೆ ಅದನ್ನು ದುರ್ಗಾದೇವಿಯ ಮೂರ್ತಿಯ ಎಡಭಾಗದಲ್ಲಿ ಇಡಬೇಕು.

Navratri 2022: ಪೂಜೆಯಲ್ಲಿ ಕಳಸದ ಮೇಲೆ ತೆಂಗಿನಕಾಯಿ ಇಡುವುದೇಕೆ?

ಅಖಂಡ ಜ್ಯೋತಿಯನ್ನು ಬೆಳಗಿಸುವ ಮೊದಲು, 9 ದಿನಗಳ ಕಾಲ ದೇವಿಯನ್ನು ಪ್ರಾಮಾಣಿಕ ಹೃದಯದಿಂದ ಪೂಜಿಸುವ ಪ್ರತಿಜ್ಞೆ ಮಾಡಿ. ಜ್ವಾಲೆಯನ್ನು ಬೆಳಗಿಸುವ ಮೊದಲು, ಮೊದಲ ಪೂಜ್ಯ ಗಣೇಶನನ್ನು  ಶಂಕರ್-ಪಾರ್ವತಿ ಅವರನ್ನು ನೆನಪಿಸಿಕೊಳ್ಳಿ. ಬಯಕೆಯ ನೆರವೇರಿಕೆಯ ಪ್ರಾರ್ಥನೆಯೊಂದಿಗೆ ಅದನ್ನು ಬೆಳಗಿಸಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios