ಪಿತೃ ಪಕ್ಷ 2022: 15 ದಿನ ತಪ್ಪಿಯೂ ಈ ಕೆಲಸ ಮಾಡ್ಬೇಡಿ..

ಪಿತೃ ಪಕ್ಷದ ಸಮಯದಲ್ಲಿ ಮರೆತೂ ಈ ಕೆಲಸವನ್ನು ಮಾಡಬೇಡಿ. ಪಿತೃಗಳನ್ನು ಸಂತುಷ್ಟರಾಗಿಡಬೇಕಾದ ಈ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯೋಣ..

what to do and what not to do in Pitru Paksha 2022 skr

ಭಾದ್ರಪದ ಹುಣ್ಣಿಮೆ ಮತ್ತು ಅಶ್ವಿನ್ ಮಾಸದ ಕೃಷ್ಣ ಪಕ್ಷದ ಪ್ರತಿಪದವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಪೂರ್ವಜರ ಆತ್ಮಗಳ ಶಾಂತಿಗಾಗಿ ಶ್ರಾದ್ಧವನ್ನು ನಡೆಸಲಾಗುತ್ತದೆ. ಈ ಸಮಯವು ಶರನ್ನವರಾತ್ರಿಗೆ ನಾಂದಿ ಇದ್ದಂತೆ. ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯ ಮಾಡುವ ಮುನ್ನ ನಾಂದಿ ಮಾಡುತ್ತೇವೆ. ಇದನ್ನು ಪಿತೃಗಳ ಆಶೀರ್ವಾದ ಕೋರಿ ಮಾಡುವುದಾಗಿದೆ. ಈ ಬಾರಿ ಪಿತೃ ಪಕ್ಷವು ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25ರವರೆಗೆ ನಡೆಯಲಿದೆ. ಬ್ರಹ್ಮ ಪುರಾಣದ ಪ್ರಕಾರ ಈ ಸಮಯದಲ್ಲಿ ಪೂರ್ವಜರನ್ನು ಪೂಜಿಸಬೇಕು ಮತ್ತು ಅವರಿಗಾಗಿ ನೈವೇದ್ಯ ಮಾಡಬೇಕು. ಶ್ರಾದ್ಧದ ಮೂಲಕ ಪೂರ್ವಜರ ಋಣವನ್ನು ತೀರಿಸಬಹುದು. ಪಿತೃ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರು ಸಂತೋಷಪಡುತ್ತಾರೆ. ಈ 15 ದಿನಗಳಲ್ಲಿ ನೀವು ತಪ್ಪಿಯೂ ಮಾಡಬಾರದ ಕೆಲ ಕೆಲಸಗಳಿವೆ. ಅವನ್ನು ಮಾಡುವುದರಿಂದ ಪೂರ್ವಜರ ಕೋಪಕ್ಕೆ ಬಲಿಯಾಗಬೇಕಾಗುತ್ತದೆ. ಹಾಗೆಯೇ ಕೆಲ ಮಾಡಲೇಬೇಕಾದ ಕೆಲಸಗಳೂ ಇವೆ. 

ಪಿತೃಪಕ್ಷದಲ್ಲಿ ಮಾಡಬಾರದ ಕೆಲಸಗಳು(what not to do in pitru paksha)

  • ಶ್ರಾದ್ಧ ಪಕ್ಷದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಮದುವೆ, ಮುಂಜಿ, ನಾಮಕರಣ ಇತ್ಯಾದಿ ಯಾವುದೇ ಶುಭ ಕಾರ್ಯ ಮಾಡಬಾರದು. ಸಮಯವು ಸಂಪೂರ್ಣವಾಗಿ ಪಿತೃಗಳ ಸ್ಮರಣೆಗೆ ಮೀಸಲಾಗಿಡಬೇಕು. 
  • ಈ ದಿನಗಳಲ್ಲಿ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬಾರದು. ಬಟ್ಟೆಬರೆ, ಚಪ್ಪಲಿ, ಮನೆಯ ಪೀಠೋಪಕರಣಗಳು, ಮನೆ ಆಸ್ತಿ ಇತ್ಯಾದಿ ಯಾವುದೇ ಹೊಸ ವಸ್ತುಗಳನ್ನು ಈ ಸಮಯದಲ್ಲಿ ಖರೀದಿಸಬಾರದು. 
  • ಈ ಸಮಯದಲ್ಲಿ ತಾಮಸಿಕ ಆಹಾರವನ್ನು ತಪ್ಪಿಸಬೇಕು. ಕೇವಲ ಸಾತ್ವಿಕ ಆಹಾರವನ್ನು ತಯಾರಿಸಬೇಕು. ಶ್ರಾದ್ಧದ ಸಮಯದಲ್ಲಿ ಕಬ್ಬಿಣದ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದನ್ನು ತಪ್ಪಿಸಬೇಕು. ಪಿತೃ ಪಕ್ಷದಲ್ಲಿ ಹಿತ್ತಾಳೆ, ತಾಮ್ರ ಅಥವಾ ಇತರ ಲೋಹದ ಪಾತ್ರೆಗಳನ್ನು ಬಳಸಬೇಕು. ಶ್ರಾದ್ಧ ಪಕ್ಷದ ಸಮಯದಲ್ಲಿ ಬೆಳ್ಳುಳ್ಳಿ, ಈರುಳ್ಳಿಯಿಂದ ಮಾಡಿದ ಆಹಾರವನ್ನು ಸೇವಿಸಬಾರದು.
  • ಈ ಪಕ್ಷದಲ್ಲಿ ಕೂದಲು ಮತ್ತು ಗಡ್ಡವನ್ನು ಕತ್ತರಿಸಬಾರದು. ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದರಿಂದ ಧನಹಾನಿಯಾಗುತ್ತದೆ. 

    ಮಕ್ಕಳಾಗುತ್ತಿಲ್ಲವೇ? ಇಲ್ಲಿವೆ ಸಂತಾನ ಸಿದ್ಧಿಗಾಗಿಯೇ ಪ್ರಸಿದ್ಧವಾದ ದೇವಾಲಯಗಳು..

ಪಿತೃ ಪಕ್ಷದಲ್ಲಿ ಮಾಡಬೇಕಾದ ಕೆಲಸಗಳು(What to do in Pitru Paksha)

  • ಪಿತೃ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಸಂಜೆ ದಕ್ಷಿಣಾಭಿಮುಖ ಜ್ವಾಲೆಯೊಂದಿಗೆ ಸಾಸಿವೆ ಎಣ್ಣೆ ಅಥವಾ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ.
  • ಪಿತೃ ಪಕ್ಷದಂದು, ಪೂರ್ವಜರಿಗೆ ಪ್ರತಿದಿನ ತರ್ಪಣ ಬಿಡಿ ಅಥವಾ ಕಲಿತವರಿಂದ ಮಾಡಿಸಿ. 
  • ಪಿತೃ ಪಕ್ಷದಲ್ಲಿ ಪ್ರತಿದಿನ ಪಿತೃ ಗಾಯತ್ರಿ ಮಂತ್ರವನ್ನು ಪಠಿಸಲು ಮರೆಯದಿರಿ, ನೀವು ಪಿತೃ ದೋಷದಿಂದ ಮುಕ್ತಿ ಪಡೆಯುತ್ತೀರಿ.
  • ಪ್ರತಿ ಶ್ರಾದ್ಧದ ದಿನದಂದು ಬಡವರಿಗೆ ಸಾಧ್ಯವಾದಷ್ಟು ಆಹಾರ ನೀಡಿ ಮತ್ತು ದಕ್ಷಿಣೆಯನ್ನು ನೀಡಿ ಆಶೀರ್ವಾದ ಪಡೆಯಿರಿ.
  • ಪ್ರತಿ ಶ್ರಾದ್ಧ ದಿನದಂದು ಹಸು, ನಾಯಿ, ಇರುವೆ ಮತ್ತು ಕಾಗೆಗಳಿಗೂ ಆಹಾರವನ್ನು ನೀಡಬೇಕು.
  • ಪಿತೃ ಪಕ್ಷದಲ್ಲಿ ಪೂರ್ವಜರ ಹೊಂದಾಣಿಕೆಯನ್ನು ಪಡೆಯಲು, ಶ್ರೀ ಮದ್ ಭಗವತ್ ಮಹಾಪುರಾಣ ಮತ್ತು ಶ್ರೀಮದ್ ಭಗವದ್ಗೀತೆಯ ಮೂಲ ಪಠ್ಯವನ್ನು ಓದಿ.
  • ಪಿತೃ ಪಕ್ಷದಲ್ಲಿ ಪೂರ್ವಜರ ಆಶೀರ್ವಾದ ಪಡೆಯಲು ಬ್ರಹ್ಮ ಗಾಯತ್ರಿ ಮಂತ್ರದ ಪಠಣವನ್ನೂ ಮಾಡಬೇಕು.
  • ಪೂರ್ವಜರ ಸಂತೋಷಕ್ಕಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಸೂರ್ಯಾಸ್ತದ ಸಮಯದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು.

    ವಾರ ಭವಿಷ್ಯ: ಈ ರಾಶಿಯನ್ನು ಹೈರಾಣಾಗಿಸಲಿದೆ ಹಣದ ಸಮಸ್ಯೆ, ಮತ್ತೊಂದಕ್ಕೆ ಕೈ ಕೊಡುವ ಆರೋಗ್ಯ

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios