Asianet Suvarna News Asianet Suvarna News

Navaratri 2023: ನವರಾತ್ರಿಯಲ್ಲಿ ರಾತ್ರಿ ಪೂಜೆ ಮಾಡುವುದರಿಂದ ಸಿದ್ಧಿ ಪಡೆಯೋಕೆ ಸಾಧ್ಯ!

ನವರಾತ್ರಿಯಲ್ಲಿ ರಾತ್ರಿ ಪೂಜೆ ಮಾಡುವುದರಿಂದ ವ್ಯಕ್ತಿ ಹಲವು ರೀತಿಯ ಸಿದ್ಧಿಗಳನ್ನು ಪಡೆಯಬಹುದು ಎನ್ನಲಾಗುತ್ತದೆ. ಆಧ್ಯಾತ್ಮಿಕ ಸುಖ ಹೊಂದಬಹುದು. ಹೀಗಾಗಿ, ನವರಾತ್ರಿಯ ದೇವಿ ಪೂಜೆಗೆ ಅಗ್ರ ಸ್ಥಾನವಿದೆ. 
 

Doing worship at nigh in Navaratri one can get some siddi
Author
First Published Oct 7, 2023, 5:49 PM IST

ಶಾರದೀಯ ನವರಾತ್ರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ದೇಶದೆಲ್ಲೆಡೆ ಉತ್ಸಾಹ, ಉಲ್ಲಾಸದ ವಾತಾವರಣ ಈಗಾಗಲೇ ಎಲ್ಲೆಡೆ ಕಂಡುಬರುತ್ತಿದೆ. ಆಶ್ವೀಜ ಮಾಸದ ಶುಕ್ಲ ಪಕ್ಷದ ಪಾಡ್ಯದ ಆರಂಭದಿಂದ ನವಮಿಯವರೆಗೆ ನವರಾತ್ರಿಯನ್ನು ಆಚರಿಸಲಾಗುತ್ತದೆ. ಶಕ್ತಿ ಸ್ವರೂಪಿಣಿಯ ಆರಾಧನೆಗೆ ಈ 9 ದಿನಗಳು ಸರ್ವಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ಹಬ್ಬ ಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳಲು ಹಾಗೂ ದೇವಿ ದುರ್ಗೆಯ ಕೃಪೆಯನ್ನು ಪಡೆಯಲು ಅತ್ಯುತ್ತಮ ಅವಕಾಶ ನೀಡುತ್ತದೆ. 9 ದಿನಗಳ ಕಾಲ ದೇವಿಯನ್ನು ಆರಾಧಿಸಿ ಹತ್ತನೆಯ ದಿನದಂದು ವಿಜಯದಶಮಿ ಆಚರಿಸಲಾಗುತ್ತದೆ. ಈ ದಿನದಂದೇ ಶ್ರೀರಾಮ ರಾವಣನನ್ನು ನಾಶ ಮಾಡಿ ವಿಜಯಿಯಾದ. ಈ ದಿನದಂದೇ ದುರ್ಗಾ ದೇವಿ ಮಹಿಷಾಸುರನನ್ನು ಸಂಹಾರ ಮಾಡಿದಳು ಎಂದೂ ಹೇಳಲಾಗುತ್ತದೆ. ಒಂದು ಕಥೆಯ ಪ್ರಕಾರ, ಮಾತೆ ಭಗವತಿ ದೇವಿ ಮಹಿಷಾಸುರನೊಂದಿಗೆ ಒಂಭತ್ತು ದಿನಗಳ ಕಾಲ ಯುದ್ಧ ಮಾಡಿ ಬಳಿಕ ಆತನ ವಧೆ ಮಾಡಿದಳು. ಹೀಗಾಗಿ, ಆಕೆಯನ್ನು ಮಹಿಷಾಸುರಮರ್ದಿನಿ ಎಂದು ಕೊಂಡಾಡಲಾಗುತ್ತದೆ. ಅಂದಿನಿಂದಲೂ ದುರ್ಗೆಯ ಶಕ್ತಿಯನ್ನು ಆರಾಧಿಸುವ ನವರಾತ್ರಿ ಆಚರಣೆ ಅಭ್ಯಾಸಕ್ಕೆ ಬಂದಿತು.

ನಮ್ಮ ದೇಶದಲ್ಲಿ ನವರಾತ್ರಿಯನ್ನು (Navaratri) ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಸ್ವರೂಪದಲ್ಲಿಯೇ ಆರಾಧಿಸಲಾಗುತ್ತದೆ. ಬಂಗಾಳದಲ್ಲಿ (Bengal) ದೇವಿ ದುರ್ಗೆ (Durga), ಕಾಳಿಯನ್ನು ಆರಾಧಿಸುವುದು ಕಂಡುಬಂದರೆ, ಉತ್ತರದ ಕೆಲವೆಡೆ ರಾವಣನ ಕೆಟ್ಟ ಶಕ್ತಿಯ (Evil) ನಾಶವೇ ಪ್ರಮುಖ ಆಚರಣೆ. ದಕ್ಷಿಣದಲ್ಲಿ ವಿದ್ಯಾದಾತೆ ಸರಸ್ವತಿ (Saraswathi) ದೇವಿಯನ್ನು ಪೂಜಿಸಲಾಗುತ್ತದೆ. ಶಾರದೀಯ ನವರಾತ್ರಿಯ ಬಳಿಕ ಪ್ರಕೃತಿಯಲ್ಲಿ (Nature) ಚಳಿಗಾಲದ ಲಕ್ಷಣಗಳು ಗೋಚರಿಸಲು ಶುರುವಾಗುತ್ತದೆ. ಋತುವಿನಲ್ಲಿ (Season) ಸಾಕಷ್ಟು ಪರಿವರ್ತನೆಯಾಗುತ್ತದೆ.

Navratri 2023 : ನವರಾತ್ರಿ ಮುಗಿಯುವ ಒಳಗೆ ಈ ವಸ್ತು ದಾನ ಮಾಡಿದ್ರೆ ಧನಲಾಭ!

ಇದೇ ಕಾರಣದಿಂದ ಜನರು ನವರಾತ್ರಿಯ ಅವಧಿಯಲ್ಲಿ ಸಾತ್ವಿಕ ಆಹಾರ (Food) ಮತ್ತು ಧ್ಯಾನ (Meditation), ಪೂಜೆಗಳಿಂದ ತಮ್ಮನ್ನು ಆಂತರಿಕವಾಗಿ ಸಮರ್ಥಗೊಳಿಸಿಕೊಳ್ಳುತ್ತಾರೆ. ಶಕ್ತಿ ಸಂಪನ್ನರಾಗುತ್ತಾರೆ. ಇದರಿಂದ ಋತು ಬದಲಾವಣೆಯ ಕೆಟ್ಟ ಪರಿಣಾಮ ಅವರ ಆರೋಗ್ಯದ ಮೇಲೆ ಉಂಟಾಗುವುದಿಲ್ಲ. 

ರಾತ್ರಿ ಪೂಜೆಯ (Night Worship) ಮಹತ್ವ
ನವರಾತ್ರಿ ಎನ್ನುವುದೇ ರಾತ್ರಿಯ ವೈಶಿಷ್ಟ್ಯವನ್ನು ತೋರಿಸುತ್ತದೆ. ಈ ಅವಧಿಯಲ್ಲಿ ವ್ಯಕ್ತಿ ಮನಸ್ಸು ಮಾಡಿದರೆ ವ್ರತ, ಪೂಜೆ, ಮಂತ್ರದ ಜಪ, ಸಂಯಮ, ನಿಯಮ, ಯಜ್ಞ, ತಂತ್ರ, ತ್ರಾಟಕ, ಯೋಗಗಳನ್ನು ಮಾಡುವ ಮೂಲಕ ಅಲೌಕಿಕವಾದ ಸಿದ್ಧಿ ಪಡೆಯಲು ಸಾಧ್ಯ ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ, ರಾತ್ರಿಯಲ್ಲಿ ಹಲವು ರೀತಿಯ ಅಡೆತಡೆಗಳು (Obstacle) ಇರುವುದಿಲ್ಲ. ಇದ್ದರೂ ಕೆಲವು ಅಡೆತಡೆಗಳು ನಿವಾರಣೆಯಾಗುತ್ತವೆ. ಕಾರಣ, ವಾತಾವರಣ ಶಾಂತವಾಗಿರುತ್ತದೆ. ಈ ಸಮಯದಲ್ಲಿ ಈಶ್ವರನ ಸಂಪರ್ಕ ಸುಲಭವಾಗುತ್ತದೆ. ನವರಾತ್ರಿಯ ರಾತ್ರಿಯ ಸಮಯದಲ್ಲಿ ದೇವಿ ದುರ್ಗೆಯ ಪೂಜೆ ಮಾಡುವುದರಿಂದ ದೇಹ (Body), ಮನಸ್ಸು (Mind) ಮತ್ತು ಆತ್ಮಗಳು (Soul) ಉನ್ನತಿ ಹೊಂದುತ್ತವೆ. ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ (Spiritual) ಸುಖವನ್ನು ಪಡೆಯಲು ಸಾಧ್ಯವಾಗುತ್ತದೆ.

ಲಲಿತಾ ಪಂಚಮಿಯ ಮಹತ್ವ, ಮುಹೂರ್ತ ತಿಳ್ಕೊಳಿ, ಆರೋಗ್ಯಕ್ಕಾಗಿ ಲಲಿತಾರಾಧನೆ ಮಾಡಿ

ನವರಾತ್ರಿಯಲ್ಲಿ ದುರ್ಗೆಯ 9 ಸ್ವರೂಪಗಳನ್ನು ಆರಾಧಿಸಲಾಗುತ್ತದೆ. ಇವರನ್ನು ನವದುರ್ಗೆಯರು ಎನ್ನಲಾಗುತ್ತದೆ. ಈ ಸ್ವರೂಪಗಳು ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನೀ, ಕಾಲರಾತ್ರೀ, ಮಹಾಗೌರೀ ಮತ್ತು ಸಿದ್ಧಿಧಾತ್ರೀ. ಈ ಎಲ್ಲ ಸ್ವರೂಪಗಳಿಗೆ ಪ್ರತ್ಯೇಕ ಪೌರಾಣಿಕ (Purana) ಕತೆಯೇ ಇದೆ. ದೇವಿ ದುರ್ಗೆಯ ಶಕ್ತಿ ಸ್ವರೂಪದ ಗಾಥೆಯಿದೆ. ಭೂಮಿಯನ್ನು ಹಲವು ವಿಧಗಳಿಂದ ರಕ್ಷಿಸಿ ಆಕೆಯ ವೈಭವದ ಕತೆಯಿದೆ.

ಸ್ಥಾಪನಾ ಮುಹೂರ್ತ (Muhurtam) ಯಾವುದು?
ಆಶ್ವೀಜ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ದುರ್ಗಾಪೂಜೆಯ (Durga) ಘಟಸ್ಥಾಪನೆ ಮಾಡಲಾಗುತ್ತದೆ. ನವರಾತ್ರಿಯ ಆರಂಭದ ದಿನದಂದು ಬೆಳಗ್ಗೆ 11.44 ರಿಂದ ಮಧ್ಯಾಹ್ನ 12.30 ರವರೆಗೆ ಒಳ್ಳೆಯ ಮುಹೂರ್ತವಿದ್ದು, ಕಳಶ ಸ್ಥಾಪನೆಗೆ ಇದು ಸುಸಮಯವಾಗಿದೆ. 
  
 

Follow Us:
Download App:
  • android
  • ios