Asianet Suvarna News Asianet Suvarna News

Navratri 2023: ಲಲಿತಾ ಪಂಚಮಿಯ ಮಹತ್ವ, ಮುಹೂರ್ತ ತಿಳ್ಕೊಳಿ, ಆರೋಗ್ಯಕ್ಕಾಗಿ ಲಲಿತಾರಾಧನೆ ಮಾಡಿ

ಶಂಕರಿ, ಶುಭಕರಿ, ಜಗದೀಶ್ವರಿ ಎನಿಸಿಕೊಂಡಿರುವ ದೇವಿ ಶಕ್ತಿಯನ್ನು ಆರಾಧಿಸುವ ನವರಾತ್ರಿಯ ಐದನೇ ದಿನದಂದು ಲಲಿತಾ ಪಂಚಮಿಯನ್ನು ಆಚರಿಸಲಾಗುತ್ತದೆ. ಅಂದು ಲಲಿತಾ ಸಹಸ್ರನಾಮ ಪಾರಾಯಣ ಮಾಡುವ ಜತೆಗೆ ಲಲಿತಾ ದೇವಿಯನ್ನು ಪೂಜಿಸುವುದರಿಂದ ಆರೋಗ್ಯ, ಸುಖ, ಸಮೃದ್ಧಿ ಲಭಿಸುತ್ತವೆ. 
 

Worship goddess Lalitha at Lalitha Panchami in Navaratri
Author
First Published Oct 5, 2023, 5:11 PM IST

ನವಶಕ್ತಿಯ ರೂಪದಲ್ಲಿ ನವ ದೇವಿ ಸ್ವರೂಪಗಳನ್ನು ಆರಾಧಿಸುವ ನವರಾತ್ರಿ ಹಬ್ಬ ನಮ್ಮೊಳಗಿನ ಭಕ್ತಿಯ ಚೈತನ್ಯವನ್ನು ಬಡಿದೇಳಿಸುವ ಸಮಯವಾಗಿದೆ. ನಿರಂತರವಾಗಿ ೯ ದಿನಗಳ ಕಾಲ ಉಪವಾಸ, ವ್ರತಗಳನ್ನು ಮಾಡುತ್ತ ಭಕ್ತಿಯ ಸಿಂಚನದಲ್ಲಿ ಮೈಮರೆಯುವಂತೆ ಮಾಡುವ ಕಾಲವಾಗಿದೆ. ಈ ಮೂಲಕ, ವರ್ಷದಲ್ಲಿ ಒಮ್ಮೆಯಾದರೂ ದೈವಿಕ ಶಕ್ತಿಯ ಮೊರೆ ಹೋಗುವಂತಾಗುತ್ತದೆ. ನಾವು ಭಾರತೀಯರು ಮಾತೆಯನ್ನು ಜಗತ್ತಿನ ರಕ್ಷಣೆ ಮಾಡುವ ಶಕ್ತಿ ಎಂದು ನಂಬುತ್ತೇವೆ. ಇಂತಹ ಮಾತೆಯನ್ನು ಪೂಜಿಸುವ ನವರಾತ್ರಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ನವರಾತ್ರಿಯ ಎಲ್ಲ ದಿನಗಳೂ ನವ ವಿಧದ ಶಕ್ತಿ ಸ್ವರೂಪಿಣಿಯನ್ನು ಆರಾಧಿಸಲಾಗುತ್ತದೆ. ಆದರೆ, ಶಾರದೀಯ ನವರಾತ್ರಿಯ ಐದನೇ ದಿನ ಆಚರಿಸುವ ಲಲಿತಾ ಪಂಚಮಿಗೆ ವಿಶೇಷ ಆದ್ಯತೆಯಿದೆ. ಆಶ್ವೀಜ ಮಾಸದ ಶುಕ್ಲ ಪಕ್ಷದ ಪಂಚಮಿಯೇ ಲಲಿತಾ ಪಂಚಮಿ. ಅಂದು ಲಲಿತಾ ಪಂಚಮಿ ವ್ರತ ಕೈಗೊಳ್ಳಲಾಗುತ್ತದೆ. ದೇವಿ ಲಲಿತೆ ರೋಗ, ದೋಷಗಳಿಂದ ಮುಕ್ತಿ ದೊರೆಯುವಂತೆ ಮಾಡುತ್ತಾಳೆ ಎನ್ನುವ ನಂಬಿಕೆ ಗಾಢವಾಗಿದೆ.

ಆಶ್ವೀಜ (Ashvin) ಮಾಸದ ಶುಕ್ಲ (Shukla) ಪಕ್ಷದ ಪಂಚಮಿ ತಿಥಿಯನ್ನು ಲಲಿತಾ ಪಂಚಮಿ (Lalitha Panchami) ಎಂದು ಕರೆಯಲಾಗಿದೆ. ಈ ದಿನಕ್ಕೆ ಭಾರೀ ಮಹತ್ವವಿದೆ. ಅಂದು ನವಶಕ್ತಿ (9 Energy) ಸ್ವರೂಪಿಣಿಯಲ್ಲಿ ಒಂದಾದ ಸ್ಕಂದಮಾತೆಯ (Skandamata) ಪೂಜೆ ಮಾಡಲಾಗುತ್ತದೆ. ಹಾಗೂ ಮಾತೆ ಸತಿ ಸ್ವರೂಪದ ಲಲಿತಾ ಪೂಜೆಯನ್ನೂ ಕೈಗೊಳ್ಳಲಾಗುತ್ತದೆ. ಲಲಿತಾ ಪಂಚಮಿಯ ವ್ರತವನ್ನು ಗುಜರಾತ್‌ (Gujarat) ಮತ್ತು ಮಹಾರಾಷ್ಟ್ರ (Maharashtra) ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಲ್ಲಕ್ಕಿಂತ ಆದ್ಯತೆಯ ಮೇರೆಗೆ ಆಚರಿಸಲಾಗುತ್ತದೆ. ದೇವಿ ಲಲಿತೆಯನ್ನು ಆರಾಧಿಸುವುದರಿಂದ ರೋಗ, ದೋಷ ಸೇರಿದಂತೆ ಎಲ್ಲ ರೀತಿಯ ಸಂಕಷ್ಟಗಳೂ ದೂರವಾಗುತ್ತವೆ ಎಂದು ಹೇಳಲಾಗುತ್ತದೆ. 

ನವರಾತ್ರಿಯ ವೈಭವ ನೋಡ್ಬೇಕಾ? ದೇಶದ ಈ ಸ್ಥಳಗಳಿಗೆ ಭೇಟಿ ನೀಡೋದು ಬೆಸ್ಟ್

ಈ ಬಾರಿಯ ಲಲಿತಾ ಪಂಚಮಿ ಅಕ್ಟೋಬರ್‌ 19ರ ಗುರುವಾರ (Thursday) ಆಚರಿಸಲಾಗುತ್ತದೆ. ಇದನ್ನು ಉಪಾಂಗ ಪಂಚಮಿ ಎಂದೂ ಹೇಳಲಾಗುತ್ತದೆ. ಮಾತೆ ಲಲಿತೆಗೆ ಮಹಾತ್ರಿಪುರ ಸುಂದರೀ, ಷೋಡಶೀ, ಲಲಿತಾ, ಲೀಲಾವತೀ, ಲೀಲಾಮತೀ, ಲಲಿತಾಂಬಿಕಾ, ಲೀಲೇಶೀ, ಲೀಲೇಶ್ವರೀ, ಲಲಿತಾಗೌರೀ ಎನ್ನುವ ಹೆಸರುಗಳೂ ಇವೆ. ಈಕೆ ಶ್ರೀ ಚಕ್ರದ ಮೇಲೆ ಕುಳಿತಿರುತ್ತಾಳೆ.

ಪೂಜಾ ಮುಹೂರ್ತ
ಪಂಚಾಂಗದ ಪ್ರಕಾರ, ಈ ಬಾರಿಯ ಲಲಿತಾ ಪಂಚಮಿಯ ತಿಥಿ ಅಕ್ಟೋಬರ್‌ 18ರಂದು ಮಧ್ಯರಾತ್ರಿ ಕಳೆದ ಬಳಿಕ 19ರ 1 ಗಂಟೆಯಿಂದ ಮಾರನೆಯ ದಿನ ಅಂದರೆ, ಅಕ್ಟೋಬರ್‌ 20ರ ರಾತ್ರಿ 12.31 ನಿಮಿಷಗಳವರೆಗೆ ಇರುತ್ತದೆ. ಪೂಜೆಗೆ ಅತ್ಯುತ್ತಮ ಮುಹೂರ್ತವೆಂದರೆ, ಬೆಳಗ್ಗೆ 6.24 ರಿಂದ 7.49 ನಿಮಿಷ ಹಾಗೂ ಬೆಳಗ್ಗೆ 10.40ರಿಂದ ಮಧ್ಯಾಹ್ನ 12.06 ರವರೆಗೆ ಮುಹೂರ್ತವಿದೆ.

ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?

ಮಹತ್ವವೇನು?
ಮಾತೆ ಲಲಿತಾ ಹತ್ತು ಮಹಾವಿದ್ಯೆಗಳಲ್ಲಿ ಒಂದಾಗಿದ್ದಾಳೆ. ಹಾಗೂ ಲಲಿತೆಯನ್ನು ಚಂಡಿಯ ರೂಪದಲ್ಲೂ ಪರಿಗಣಿಸಲಾಗುತ್ತದೆ. ಪಂಚಮಿಯಂದು ದೇವಿ ಆರಾಧನೆ (Worship) ಮಾಡುವುದರಿಂದ ಆರೋಗ್ಯ ಲಭಿಸುತ್ತದೆ. ಸುಖ-ಸಮೃದ್ಧಿ (Happiness, Prosperity) ಲಭಿಸುತ್ತದೆ. ಪಂಚಮಿಯ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ, ಧ್ಯಾನಗಳನ್ನು ಮಾಡಬೇಕು. ಬಳಿಕ, ಲಲಿತಾ ಪಂಚಮಿಯ ವ್ರತದ ಸಂಕಲ್ಪವನ್ನು ಮಾಡಬೇಕು. ಮೊಟ್ಟಮೊದಲು ಗಣೇಶ, ಭಗವಾನ್‌ ಶಿವ ಹಾಗೂ ಮಾತಾ ಪಾರ್ವತಿಯನ್ನು ಪೂಜಿಸಬೇಕು. ಬಳಿಕ, ಅಶೋಕ ಸುಂದರೀ ಮಾತೆಯ ಆರಾಧನೆ ಮಾಡಬೇಕು. ಜತೆಗೆ, ಆಕೆಯಲ್ಲಿ ಸುಖ-ಸಮೃದ್ಧಿಯ ಆಶೀರ್ವಾದ ಕೋರಬೇಕು. ಬಳಿಕ, ಲಲಿತಾ ದೇವಿಯ ಭಾವಚಿತ್ರದೆದುರು ತುಪ್ಪದ ದೀಪ ಬೆಳಗಬೇಕು. ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು. ಪೂಜೆಯ ಸಮಯದಲ್ಲಿ ನೀವು ಉತ್ತರ ದಿಕ್ಕಿಗೆ (North Direction) ಅಭಿಮುಖವಾಗಿ ಕುಳಿತುಕೊಂಡಿರುವುದು, ನಿಮ್ಮ ಮುಖ ಉತ್ತರ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳುವುದು ಅಗತ್ಯ.

Latest Videos
Follow Us:
Download App:
  • android
  • ios