ರಾಮನಗರದಲ್ಲಿ ಗೃಹಪ್ರವೇಶದ ಊಟ  ಸೇವಿಸಿ ಬರೋಬ್ಬರಿ 25ಕ್ಕೂ ಹೆಚ್ವು ಮಂದಿ ಅಸ್ವಸ್ಥ!

ಗೃಹಪ್ರವೇಶದ ಊಟ  ಸೇವಿಸಿ ಬರೋಬ್ಬರಿ 25 ಕ್ಕೂ ಹೆಚ್ವು ಮಂದಿ ಅಸ್ವಸ್ಥವಾಗಿರುವ ಘಟನೆ   ರಾಮನಗರದಲ್ಲಿ ನಡೆದಿದೆ.

Many more people hospitalized after eating home ceremony meals at Ramanagara gow

ರಾಮನಗರ (ಮೇ.10): ಗೃಹಪ್ರವೇಶದ ಊಟ  ಸೇವಿಸಿ ಬರೋಬ್ಬರಿ 25 ಕ್ಕೂ ಹೆಚ್ವು ಮಂದಿ ಅಸ್ವಸ್ಥವಾಗಿರುವ ಘಟನೆ  ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಸಮಾರಂಭದ ಮಧ್ಯಾಹ್ನ ಊಟ ಊಟ ಸೇವಿಸಿದ ಕೆಲ ಗಂಟೆ ಬಳಿಕ ಹೊಟ್ಟೆ ನೋವು ಬೇಧಿ, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು  ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥರಲ್ಲಿ 10 ಕ್ಕೂ ಹೆಚ್ಚು ಮಕ್ಕಳು ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಘಟನೆಗೆ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಸಮಾರಂಭದ ಊಟಕ್ಕೆ ಬಳಸಿದ ನೀರು, ಆಹಾರ ಪದಾರ್ಥಗಳಿಂದ ಈ ರೀತಿ ಆಗಿರಬಹುದು ಎಂದು ಶಂಕಿಸಲಾಗಿದೆ. ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ.

ಕೊಡಗು ವಿದ್ಯಾರ್ಥಿನಿಯ ತಲೆ ಕಡಿದಾತ ಆತ್ಮಹತ್ಯೆ, ಅಪ್ರಾಪ್ತೆಯ ರುಂಡಕ್ಕಾಗಿ ಪೊಲೀಸರ ಶೋಧ!

ಮಲ್ಪೆ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಮಂಗಳೂರು:ದೊಡ್ಡ ಅಲೆಯ ಹೊಡೆತಕ್ಕೆ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್ ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಯುವಕರನ್ನು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಗೋಪಿನಾಥ್ (25) ಮತ್ತು ರಂಗನಾಥ (26) ಎಂದು ಗುರುತಿಸಲಾಗಿದೆ. ಬಳ್ಳಾರಿಯಿಂದ ಆರು ಮಂದಿಯ ಯುವಕರು ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಮಧ್ಯಾಹ್ನ ಸಮುದ್ರ ತೀರಕ್ಕೆ ಬಂದಿದ್ದರು.

ಎಲ್ಲರೂ ಸಮುದ್ರಕ್ಕಿಳಿದು ಆಟವಾಡುತ್ತಿದ್ದಾಗ ಭಾರಿ ಅಲೆಯೊಂದು ಅಪ್ಪಳಿಸಿದೆ. ಪರಿಣಾಮ ಇಬ್ಬರು ಯುವಕರು ಸಮುದ್ರದ ಪಾಲಾಗಿದ್ದಾರೆ. ತಕ್ಷಣ ತೀರದಲ್ಲಿದ್ದ ಲೈಫ್ ಗಾರ್ಡ್ (ಜೀವರಕ್ಷಕ)ಗಳು ಅವರನ್ನು ರಕ್ಷಿಸಿ, ಉಪ್ಪು ನೀರು ಕುಡಿದು ಅಸ್ವಸ್ಥರಾಗಿದ್ದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

10ನೇ ತರಗತಿ ಪಾಸ್‌ ಆದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಹತ್ಯೆ! ರುಂಡಕ್ಕಾಗಿ ಪೊಲೀಸರ ತೀವ್ರ ಹುಡುಕಾಟ

ಎಚ್ಚರಿಕೆ - ನಿರ್ಲಕ್ಷ
ಈಗಾಗಲೇ ಸಮುದ್ರದಲ್ಲಿ ಮಳೆಯಾಗುತ್ತಿದ್ದು, ಸಮುದ್ರ ಉದ್ವಿಗ್ನವಾಗುತ್ತಿದೆ. ಕರಾವಳಿಯಲ್ಲಿ ಮಳೆ ಆರಂಭವಾದ ಮೇಲೆ ಸಮುದ್ರ ಇನ್ನೂ ಹೆಚ್ಚು ಒರಟಾಗುತ್ತದೆ. ಆದ್ದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಲೈಫ್‌ಗಾರ್ಡ್ ಗಳು ಪ್ರವಾಸಿಗರಿಗೆ ನೀರಿಗಿಳಿಯದಂತೆ ಸೂಚಿಸುತ್ತಾರೆ. ಆದರೆ ಪ್ರವಾಸಿಗರು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಿದ್ದಾರೆ.

Latest Videos
Follow Us:
Download App:
  • android
  • ios