Asianet Suvarna News Asianet Suvarna News

Astrology Tips: ಮಾಘ ಮಾಸದಲ್ಲಿ ಹೀಗೆ ಮಾಡಿದರೆ ವರ್ಷವಿಡೀ ಅದೃಷ್ಟ

ಮಾಘಮಾಸವು ಮಹಾ ವಿಷ್ಣುವಿಗೆ ಪ್ರಿಯವಾದ ಮಾಸವೆಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಕೆಲವು ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ವಿಷ್ಣುವಿನ ಜತೆಗೆ ಶಿವನ ಆರಾಧನೆಗೆ ಇದು ಪ್ರಶಸ್ತ ಮಾಸವಾಗಿದೆ. ಮಾಘ ಮಾಸದಲ್ಲಿ ಮಾಡಬೇಕಾದ ನಾಲ್ಕು ಕಾರ್ಯಗಳ ಬಗ್ಗೆ ತಿಳಿಯೋಣ...
 

Doing this work on Magha month will bring luck
Author
Bangalore, First Published Jan 26, 2022, 9:05 AM IST

ಹಿಂದೂ ಸಂಪ್ರದಾಯದಲ್ಲಿ ಪ್ರತಿ ಮಾಸಕ್ಕೂ (Month) ವಿಶೇಷತೆ (Special) ಇದೆ. ಆರೋಗ್ಯ (Health) ವೃದ್ಧಿ ಮತ್ತು ಪುಣ್ಯ ಸಂಪಾದನೆಗೆ ಮಾಘ ಮಾಸ (Magha month) ಅತ್ಯಂತ ವಿಶೇಷ ಎಂದು ಹೇಳಲಾಗುತ್ತದೆ. ಮಾಘಮಾಸವು ಅತ್ಯಂತ ಪವಿತ್ರವಾದ (Auspicious) ಮಾಸವಾಗಿದ್ದು ದೇವರ ಆರಾಧನೆ ಪೂಜೆ, ಹವನ ವ್ರತೋಪವಾಸಗಳಿಗೆ ಅತ್ಯಂತ ಪ್ರಶಸ್ತ ಮಾಸವಾಗಿದೆ. ಶಾಸ್ತ್ರದಲ್ಲಿ ಹೇಳಿರುವಂತೆ ಈ ಮಾಸದಲ್ಲಿ ಕೆಲವು ಕಾರ್ಯಗಳನ್ನು ಮಾಡಿದರೆ ಅದರಿಂದ ಪುಣ್ಯಪ್ರಾಪ್ತಿ ಆಗುವುದಲ್ಲದೆ ಜೀವನವು (Life) ಸುಖ ಸಂತೋಷದಿಂದ (Happy) ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಮಾಘ ಮಾಸವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. ಮಾಘ ಮಾಸದ ಪುಣ್ಯ ಫಲವನ್ನು ಪಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಯೋಣ...

ಪುಣ್ಯ ಪ್ರಾಪ್ತಿಗೆ ಮಾಘಸ್ನಾನ (Holy bath )
ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡುವುದರಿಂದ ಸರ್ವ ಪಾಪಗಳು (Sin) ನಾಶವಾಗುತ್ತವೆ ಎಂದು ನಾರದ ಪುರಾಣದಲ್ಲಿ (Narada Purana) ತಿಳಿಸಲಾಗಿದೆ. ಈ ಮಾಸದಲ್ಲಿ ಯಾವುದೇ ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದು, ನದಿ (river) ಅಥವಾ ಸಮುದ್ರ (Sea) ಸ್ನಾನ ಅತ್ಯಂತ ಪ್ರಶಸ್ತವಾದದ್ದೆಂದು ಹೇಳಲಾಗುತ್ತದೆ. ಹೀಗಾಗಿ ಈ ಬಗ್ಗೆ ಮೊದಲೇ ಪ್ಲಾನ್ ಮಾಡಿ ಹೋಗುವುದು ಒಳಿತು.

ಇದನ್ನು ಓದಿ: Numerology: ಪಾದಾಂಕ 4ರಲ್ಲಿ ಜನಿಸಿದವರ ಆರೋಗ್ಯ ಭವಿಷ್ಯ ಹೀಗಿದೆ..

ಸೂರ್ಯೋಪಾಸನೆ (Worshipping sun)
ಪದ್ಮ ಪುರಾಣದ ಪ್ರಕಾರ ಶ್ರೀ ಮಹಾ ವಿಷ್ಣುವಿಗೆ (Lord Vishnu) ಪೂಜೆ, ಅರ್ಚನೆ, ತಪಸ್ಸು ಮಾಡುವುದರಿಂದ ಪುಣ್ಯ ಸಿಗುತ್ತದೆ. ಇದಕ್ಕಿಂತ ಹೆಚ್ಚಿನ ಪುಣ್ಯ ಫಲ ಪ್ರಾಪ್ತಿ ಮಾಘಮಾಸದಲ್ಲಿ ಪ್ರಾತಃ ಕಾಲದಲ್ಲಿ ಸ್ನಾನವನ್ನು ಮಾಡಿ, ಸೂರ್ಯದೇವನಿಗೆ ಅರ್ಘ್ಯ ನೀಡುವುದರಿಂದ ಸಿಗುತ್ತದೆ. ಹಾಗಾಗಿ ಮಾಘ ಮಾಸದಲ್ಲಿ ಪ್ರಾತಃ ಕಾಲದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡಿ, ಸೂರ್ಯ ಮಂತ್ರವನ್ನು ಹೇಳುವುದರ ಮೂಲಕ ಸೂರ್ಯೋಪಾಸನೆಯನ್ನು ಮಾಡಬೇಕಿದೆ. ಹೀಗೆ ಮಾಡುವುದರಿಂದ ಸಕಲ ಕಷ್ಟಗಳು ದೂರವಾಗಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಹಾಗಾಗಿ ಸೂರ್ಯದೇವನ ಆರಾಧನೆಯಿಂದ ಬುದ್ಧಿ, ತೇಜಸ್ಸು ಮತ್ತು ಸುಖ ಸಮೃದ್ಧಿ ದೊರೆಯುತ್ತದೆ. ಮನೆಯಲ್ಲಿಯೂ ಸುಖ, ಶಾಂತಿ ಲಭ್ಯವಾಗುತ್ತದೆ. 

ಶಿವಲಿಂಗಕ್ಕೆ ಅಭಿಷೇಕ (Lord Shiva)
ಮಾಘಮಾಸವು ಶ್ರೀ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ಮಾಸವೆಂದು ಹೇಳಲಾಗುತ್ತದೆ. ಆದರೂ ಈ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಎಂಥ ಪುಣ್ಯ ಪ್ರಾಪ್ತಿ ಸಾಧ್ಯವಿದೆ ಎಂದು ಹೇಳಲಾಗುತ್ತದೆ. ಮಾಘ ಮಾಸದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ರೋಗಗಳಿಂದ (Disease) ಮುಕ್ತಿ ದೊರೆಯುತ್ತದೆ. ಈ ಮಾಸದಲ್ಲಿ ರುದ್ರಾಭಿಷೇಕ ಮಾಡುವುದರಿಂದ ಮನೋ ಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ಮಾಸದಲ್ಲಿ ಶ್ರೀ ವಿಷ್ಣು ಸಹಸ್ರನಾಮ, ಶ್ರೀ ಸೂಕ್ತ ಇವುಗಳನ್ನು ಪ್ರತಿನಿತ್ಯ ಪಠಣೆ ಮಾಡಬೇಕು. ಹೀಗೆ ಇವುಗಳನ್ನು ಪಠಣೆ ಮಾಡುವುದರಿಂದ ಧನ ಪ್ರಾಪ್ತಿ ಆಗಲಿದೆ. ಇದರ ಜೊತೆ ಜೊತೆಗೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಅಲ್ಲದೆ, ಈ ಮಾಸದ ಪುಣ್ಯ ಫಲವೂ ಪ್ರಾಪ್ತಿಯಾಗುತ್ತದೆ.

ಇದನ್ನು ಓದಿ : 2022ರಲ್ಲಿ ಮಕರ ರಾಶಿಯವರ Job, Love & Future ಹೇಗಿರಲಿದೆ?

ದಾನ (Donation) 
ಈ ಮಾಸದಲ್ಲಿ ಎಳ್ಳು, ಬೆಲ್ಲ (Sesame, jaggery) ಮತ್ತು ಕಂಬಳಿಯನ್ನು (Blanket) ದಾನ (Donate) ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಅಷ್ಟೇ ಅಲ್ಲದೆ ಈ ವಸ್ತುಗಳನ್ನು ದಾನ ಮಾಡುವುದರಿಂದ ಉತ್ತಮ ಆರೋಗ್ಯ (Good Health) ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಈ ಮಾಸದಲ್ಲಿ ಪ್ರತಿನಿತ್ಯ ಅನ್ನದಾನವನ್ನು ಮಾಡುವುದರಿಂದ ಧನ ಸಂಪತ್ತು (Wealth) ವೃದ್ಧಿಯಾಗುತ್ತದೆ. ಮಾಘ ಮಾಸದಲ್ಲಿ ಶೀತ ನಿವಾರಕ ವಸ್ತುಗಳನ್ನು ದಾನವಾಗಿ ನೀಡಿದರೆ ಉತ್ತಮ ಎಂದು ಹೇಳಲಾಗುತ್ತದೆ.

Follow Us:
Download App:
  • android
  • ios