ವೈಶಾಖ ಪೂರ್ಣಿಮದಂದು ಖಗ್ರಾಸ ಚಂದ್ರ ಗ್ರಹಣ; ಮರೆಯದೇ ಈ ಎಚ್ಚರಿಕೆ ತೆಗೆದುಕೊಳ್ಳಿ

ಚಂದ್ರಗ್ರಹಣ ಸಮಯ ಸನ್ನಿಹಿತವಾಗಿದೆ. ಈ ಸಂದರ್ಭದಲ್ಲಿ ಸರ್ವರೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಇಲ್ಲಿವೆ. 

Doing these things on the day of lunar eclipse can cause damage skr

ವರ್ಷದ ಮೊದಲ ಚಂದ್ರಗ್ರಹಣ(lunar eclipse)ವು ಮೇ 16ರಂದು ಸಂಭವಿಸಲಿದೆ. ಈ ಬಾರಿ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಗ್ರಹಣವು ಪೂರ್ಣ ಪ್ರಮಾಣದಲ್ಲಿ ಗೋಚರವಾದಾಗ ಅದನ್ನು ಖಗ್ರಾಸ ಎನ್ನಲಾಗುತ್ತದೆ. 

ಗ್ರಹಣ ಎಂದರೆ ಅಶುಭ(inauspecious) ಎಂಬ ನಂಬಿಕೆ ಇದೆ. ಇದೇ ಸಂದರ್ಭದಲ್ಲಿ ನಾಳೆ ಹುಣ್ಣಿಮೆ(Full moon day) ಕೂಡಾ ಹೌದು. ಹುಣ್ಣಿಮೆಯು ಶುಭವಾಗಿದೆ. ಈ ಬಾರಿ ಚಂದ್ರ ಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲ. ಆದ್ದರಿಂದ ಇಲ್ಲಿ ಸೂತಕ ಸಮಯ ಇರುವುದಿಲ್ಲ. ಹಾಗಿದ್ದೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂತಕವು ಗ್ರಹಣವು ಗೋಚರಿಸಿದಾಗ ಮಾತ್ರ ಮಾನ್ಯವಾಗಿರುತ್ತದೆ. ಧರ್ಮಗ್ರಂಥಗಳಿಗೆ ಅನುಗುಣವಾಗಿ ಗ್ರಹಣ ಸಂದರ್ಭವೆಂದರೆ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ. ಈ ಸಮಯದಲ್ಲಿ ದೇವಾಲಯಗಳು ಕೂಡಾ ಬಾಗಿಲನ್ನು ಮುಚ್ಚಿರುತ್ತವೆ. ಗ್ರಹಣ ಸಂದರ್ಭದಲ್ಲಿ ನೀವು ಕೆಲ ಎಚ್ಚರಿಕೆಗಳನ್ನು(precautions) ತೆಗೆದುಕೊಳ್ಳದಿದ್ದರೆ ಸಮಸ್ಯೆಗಳನ್ನು ಮೈಗೆಳೆದುಕೊಂಡಂತಾಗುತ್ತದೆ. ಹಾಗಿದ್ದರೆ ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳೇನು ನೋಡೋಣ. 

Lunar Eclipse 2022: ಈ ಎರಡು ರಾಶಿಗಳ ಜನರು ಎಚ್ಚರ, ಕಟ್ಟೆಚ್ಚರ!

  • ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಜೊತೆಗೆ ದೇವರ ವಿಗ್ರಹ(Idols of God)ಗಳನ್ನು ಮುಟ್ಟಬಾರದು.
  • ಹಿಂದೂ ಪುರಾಣಗಳ ಪ್ರಕಾರ, ಜನರು ಚಂದ್ರಗ್ರಹಣದ ಸಮಯದಲ್ಲಿ ಪವಿತ್ರ ಮಂತ್ರಗಳನ್ನು ಪಠಿಸಬೇಕು.
  • ಗ್ರಹಣ ಸಂದರ್ಭದಲ್ಲಿ ಮೊಸರು, ಹಿಟ್ಟು ಸೇರಿದಂತೆ ಮರುದಿನಕ್ಕಾಗಿ ಇಟ್ಟ ಆಹಾರ ಪದಾರ್ಥಗಳಲ್ಲಿ ಜನರು ತುಳಸಿ (ತುಳಸಿ) ಎಲೆಯನ್ನು ಹಾಕಿಡಬೇಕು.
  • ಗ್ರಹಣದ ಸಮಯದಲ್ಲಿ ತುಳಸಿ(Basil) ಗಿಡವನ್ನು ಮುಟ್ಟಬಾರದು ಮತ್ತು ಸೂತಕ ಕಾಲದಲ್ಲಿ ತುಳಸಿ ಎಲೆಗಳನ್ನು ಕೀಳಬಾರದು.
  • ಗ್ರಹಣ ಮುಗಿದ ನಂತರವೇ ತಾಜಾವಾಗಿ ತಯಾರಿಸಿದ ಆಹಾರ(Food) ಸೇವಿಸಬೇಕು. ಗ್ರಹಣದ ಅವಧಿಯಲ್ಲಿ ನೀರು ಕುಡಿಯುವುದು ಹಾಗೂ ಆಹಾರ ಸೇವನೆ ಒಳ್ಳೆಯದಲ್ಲ. 
  • ಗ್ರಹಣ ಅವಧಿಯಲ್ಲಿ ಗರ್ಭಿಣಿಯರಿಗೆ ಕತ್ತರಿಸುವುದು, ಸಿಪ್ಪೆ ಸುಲಿಯುವುದು ಅಥವಾ ಹೊಲಿಯುವುದನ್ನು ನಿಷೇಧಿಸಲಾಗಿದೆ.
  • ಗ್ರಹಣ ಕಾಲದಲ್ಲಿ ಎಣ್ಣೆ ಹಚ್ಚುವುದು, ಬಟ್ಟೆ ಒಗೆಯುವುದು ಮತ್ತು ಬೀಗ ತೆರೆಯುವುದು ಇತ್ಯಾದಿಗಳನ್ನು ಮಾಡಬಾರದು.
  • ಗ್ರಹಣದ ದಿನ ನಿರ್ಗತಿಕರಿಗೆ ಮತ್ತು ಬಡವರಿಗೆ ದಾನ ನೀಡಬೇಕು.
  • ಗ್ರಹಣ ಸಂದರ್ಭದಲ್ಲಿ ಶಿವಲಿಂಗದ ಮೇಲೆ ನೀರನ್ನು ಅರ್ಪಿಸಬೇಕು ಮತ್ತು ಶಿವ ಮಂತ್ರಗಳ ಪಠಣ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಇರುವುದಿಲ್ಲ ಎಂದು ನಂಬಲಾಗಿದೆ.
  • ಗ್ರಹಣ ಮುಗಿದ ನಂತರ, ನಿಮ್ಮ ಇಡೀ ಮನೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು.
  • ಚಂದ್ರ ಗ್ರಹಣದ ಸಮಯದಲ್ಲಿ ಜನರು ತಮ್ಮ ಉಗುರು ಅಥವಾ ಕೂದಲನ್ನು ಕತ್ತರಿಸಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ.
  • ಗ್ರಹಣದ ದಿನ ಪೂರ್ವಜರ ಹೆಸರಿನಲ್ಲಿ ದಾನವನ್ನೂ ಮಾಡಬೇಕು.
  • ಗ್ರಹಣದ ಸಮಯದಲ್ಲಿ ಯಾವುದೇ ಚೂಪಾದ ವಸ್ತುವನ್ನು ಬಳಸಬೇಡಿ. ಈ ಸಮಯದಲ್ಲಿ, ಸೂಜಿಗಳು, ಕತ್ತರಿ, ಚಾಕು ಇತ್ಯಾದಿಗಳನ್ನು ತಪ್ಪಾಗಿಯೂ ಬಳಸಬೇಡಿ.
  • ಗ್ರಹಣದ ಸಮಯದಲ್ಲಿ ಗುರುತ್ವಾಕರ್ಷಣೆಯ ಬಲವು ಅಧಿಕವಾಗಿರುತ್ತದೆ ಎಂದು ನಂಬಲಾಗಿದೆ, ಆದ್ದರಿಂದ ಗರ್ಭಿಣಿಯರು ಗ್ರಹಣವನ್ನು ವೀಕ್ಷಿಸಬಾರದು. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು ಅಥವಾ ಮಲಗಬಾರದು.

    ವರ್ಷದ ಮೊದಲ ಬ್ಲಡ್ ಮೂನ್! ಹುಣ್ಣಿಮೆಯಂದೇ ಚಂದ್ರಗ್ರಹಣವಾಗುವುದೇಕೆ?
     
  • ಗ್ರಹಣ ಸಂದರ್ಭದಲ್ಲಿ ನೀರು ಕುಡಿಯುವುದು ಕೂಡಾ ಒಳ್ಳೆಯದಲ್ಲ. ಗ್ರಹಣದ ಬಳಿಕ ನೀರನ್ನು ಕಾಯಿಸಿ ಆರಿಸಿ ಸೇವಿಸಬೇಕು. 
  • ಗ್ರಹಣ ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಗ್ರಹಣ ಕಾಲದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಗ್ರಹಣದ ಪರಿಣಾಮಗಳು ಕಡಿಮೆಯಾಗುತ್ತವೆ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios