ಈ ರಾಶಿವರು ಖರ್ಚು ಮಾಡೋದು ಕಡಿಮೆ, ಹಾಗಾದ್ರೆ Savings ಮಾಡ್ತಾರಾ?

ವ್ಯಕ್ತಿಗಳ ಸ್ವಭಾವ ಹಾಗೂ ಗುಣಗಳು ಬೇರೆ ಬೇರೆ ಇರುವುದು ಸಹಜ. ಇದಕ್ಕೆ ರಾಶಿಚಕ್ರಗಳ ಪ್ರಭಾವವೂ ಇರುತ್ತದೆ. ಕೆಲವು ರಾಶಿಯ ವ್ಯಕ್ತಿಗಳು ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದರೆ, ಹಲವರದ್ದು ಒರಟು ಸ್ವಭಾವ, ಉದಾರತೆ, ಭಾವನಾತ್ಮಕತೆ... ಹೀಗೆ ಹಲವು ರೀತಿಯ ಸ್ವಭಾವಗಳನ್ನು ಒಳಗೊಂಡಿರುತ್ತಾರೆ. ಈಗ ಹಣವನ್ನು ಕಡಿಮೆ ಖರ್ಚು ಮಾಡಿ ಉಳಿತಾಯ ಮಾಡುವ 4 ರಾಶಿಯವರ ಬಗ್ಗೆ ನೋಡೋಣ....

Zodiac signs that would spend less but are they interested in savings

ಯಾವುದೇ ವ್ಯಕ್ತಿಗಳ ಗುಣವು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಹೇಗೆ ಐದೂ ಬೆರಳುಗಳು (Fingers) ಒಂದೇ ರೀತಿಯಲ್ಲಿ ಇರುವುದಿಲ್ಲವೋ ಹಾಗೆಯೇ ಇಲ್ಲಿಯೂ ಕೂಡಾ. ಒಂದೇ ತಾಯಿಯ (Mother) ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ (Child) ಗುಣ – ಸ್ವಭಾವಗಳು (Qualities – Characteristics), ಭವಿಷ್ಯ ಹೀಗೆ ಎಲ್ಲವೂ ಒಬ್ಬರಿಗಿಂತ ಇನ್ನೊಬ್ಬರದ್ದು ಭಿನ್ನವಾಗಿರುತ್ತದೆ. ಇದಕ್ಕೆ ರಾಶಿಚಕ್ರದ (Zodiac) ಪ್ರಭಾವಗಳು ಸಹ ಕಾರಣವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಒಟ್ಟು 12 ರಾಶಿಚಕ್ರಗಳಿದ್ದು, ಪ್ರತಿ ರಾಶಿಯ ವ್ಯಕ್ತಿಗಳು ಕೂಡಾ ಭಿನ್ನರಾಗಿರುತ್ತಾರೆ. 

ರಾಶಿಗಳಿಗೆ ಅನುಸಾರವಾಗಿ ನೋಡುವುದಾರೆ, ಕೆಲವರದು ಅಗ್ನಿ ತತ್ವ ರಾಶಿಯಾಗಿರುತ್ತದೆ. ಮತ್ತೆ ಕೆಲವವರದ್ದು ವಾಯು ಮತ್ತು ಇನ್ನು ಕೆಲವರದ್ದು ಜಲ ತತ್ವಗಳ ರಾಶಿಚಕ್ರವಾಗಿರುತ್ತದೆ. ಆದ್ದರಿಂದ ತತ್ವಗಳಿಗೆ ಅನುಸಾರವಾಗಿ ಆಯಾ ವ್ಯಕ್ತಿಗಳ ಗುಣ ಹಾಗೂ ಸ್ವಭಾವಗಳು ನಿರ್ಧರಿತವಾಗಿರುತ್ತವೆ. ಇನ್ನು ಪ್ರತಿ ರಾಶಿಗಳಿಗೂ ಅಧಿಪತಿ ಗ್ರಹಗಳಿದ್ದು, ಇದರ ಪ್ರಭಾವಕ್ಕೆ ರಾಶಿಯ ಗುಣಗಳು ಒಳಪಟ್ಟಿರುತ್ತವೆ. ಗ್ರಹ (Planet), ನಕ್ಷತ್ರ (Star) ಹಾಗೂ ರಾಶಿಗಳ ಪ್ರಭಾವದಿಂದ ವ್ಯಕ್ತಿಯಿಂದ ವ್ಯಕ್ತಿಗೆ ರೂಪ, ಸ್ವಭಾವ, ಗುಣಗಳನ್ನು ಗಮನಿಸಿದಲ್ಲಿ ಅನೇಕ ವ್ಯತ್ಯಾಸಗಳು ಕಾಣುತ್ತವೆ. ಈಗ ಹೆಳಲು ಹೊರಟಿರುವುದು ದುಡ್ಡಿದ್ದರೂ ಅದನ್ನು ಖರ್ಚು ಮಾಡದೇ, ಭವಿಷ್ಯಕ್ಕಾಗಿ (Future) ಕೂಡಿಡುವ ಸ್ವಭಾವವನ್ನು ಹೊಂದಿರುವ ರಾಶಿಯವರ ಬಗ್ಗೆಯಾಗಿದೆ. ಸಿಂಹ, ವೃಷಭ, ಮಕರ ಮತ್ತು ಮಿಥುನ ರಾಶಿಯವರು ಹೀಗೆ ಹಣವನ್ನು (Money) ಯದ್ವಾತದ್ವ ಖರ್ಚು ಮಾಡದೆ ಉಳಿತಾಯ ಪ್ರಿಯರಾಗಿರುತ್ತಾರೆ. ಈ ನಾಲ್ಕು ರಾಶಿಚಕ್ರದ ವ್ಯಕ್ತಿಗಳ ಬಗ್ಗೆ ನೋಡೋಣ....

ಮಕರ ರಾಶಿ (Capricorn)
ಮಕರ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸರಳ (Simple) ಸ್ವಭಾವದವರು. ಇವರಿಗೆ ಎಲ್ಲ ವಿಷಯಗಳಲ್ಲಿಯೂ ನಿರ್ದಿಷ್ಟತೆಯನ್ನು ಹೊಂದಿರಬೇಕು. ತಾವು ಹೀಗೇ ಇರಬೇಕೆಂಬ ನಿಟ್ಟಿನಲ್ಲಿ ಗೆರೆಯನ್ನು ಹಾಕಿಕೊಂಡಿರುತ್ತಾರೆ. ಹೀಗಾಗಿ ಎಲ್ಲದರಲ್ಲೂ ಲೆಕ್ಕಾಚಾರ ಇವರದ್ದಾಗಿದ್ದು, ಹಣವನ್ನು ಯಾವ ಕೆಲಸಕ್ಕೆ ಬಳಸಬೇಕು..? ಎಷ್ಟು ಬಳಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿರುತ್ತಾರೆ. ಹೀಗಾಗಿ ಇಂಥ ಕೆಲಸಕ್ಕೆ ಹಣವನ್ನು ಖರ್ಚು ಮಾಡಿದರೆ ನಷ್ಟ ಇಲ್ಲವೇ ವ್ಯರ್ಥ (Waste) ಎಂದೆನಿಸಿದರೆ ಅದರ ಗೋಜಿಗೇ ಹೋಗುವವರು ಇವರಲ್ಲ. ಇಷ್ಟೆಲ್ಲ ಸಿದ್ಧತೆಗಳಿದ್ದರೂ ಹಣವನ್ನು ಖರ್ಚು (Spent) ಮಾಡುವಾಗ ಮತ್ತೊಮ್ಮೆ ಯೋಚಿಸುವ ಗುಣ ಇವರದ್ದಾಗಿದೆ. 

ಇದನ್ನು ಓದಿ: ಕನಸಲ್ಲಿ ಈ ರೂಪದ ನೀರು ಕಂಡರೆ ಶುಭವೋ – ಅಶುಭವೋ..?

ವೃಷಭ ರಾಶಿ (Taurus)
ವೃಷಭ ರಾಶಿಯವರದ್ದು ನೇರಾ - ನೇರ ವ್ಯಕ್ತಿರತ್ವ. ಇದ್ದಿದ್ದನ್ನು ಇದ್ದಂತೆ ಹೇಳಿಬಿಡುತ್ತಾರೆ. ಮುಚ್ಚುಮರೆ ಇವರಲ್ಲಿ ಇರುವುದಿಲ್ಲ. ಖರ್ಚಿನಲ್ಲಿ ಹಿಡಿತವಿದ್ದರೂ ಸಂಬಂಧಿಕರು (Relations), ಸ್ನೇಹಿತರೊಡಗೂಡಿ (Friends) ಹೊರ ಹೋದಾಗ ಊಟಕ್ಕೆ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವವರಲ್ಲ. ಇನ್ನು ಕೆಲವು ಕಡೆ ಹಣವನ್ನು ಖರ್ಚು ಮಾಡಬೇಕೆಂದಾದಲ್ಲಿ ನಂಬಿಕೆ ಇರುವ ಸ್ನೇಹಿತರ ಸಲಹೆಯನ್ನೂ ಸಹ ಪಡೆಯುತ್ತಾರೆ. ಏಕೆಂದರೆ ಹಣವನ್ನು ಅನಾವಶ್ಯಕವಾಗಿ ಪೋಲು ಮಾಡುವುದು ಇವರಿಗೆ ಇಷ್ಟವಿಲ್ಲ. 

ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಸೆನ್ಸ್ ಆಫ್ ಹ್ಯೂಮರ್ (Sense of Humour) ತುಂಬಾ ಚೆನ್ನಾಗಿಯೇ ಇರಲಿದೆ. ಈ ರಾಶಿಯ ವ್ಯಕ್ತಿಗಳು ಹಣದ ವಿಷಯ ಬಂದಾಗ ಸ್ವಲ್ಪ ಜಾಗೃತರಾಗುತ್ತಾರೆ. ಹಣವನ್ನು ಖರ್ಚು ಮಾಡುವ ಸಂದರ್ಭದಲ್ಲಿ ಬಹಳಷ್ಟು ಬಾರಿ ಅದರ ಬಗ್ಗೆ ಯೋಚಿಸಿ, ಅನಗತ್ಯ ಎಂದು ಅನ್ನಿಸಿದಲ್ಲಿ ಹಿಂದೆ ಸರಿಯುತ್ತಾರೆ. ಇವರಿಗೆ ಹೂಡಿಕೆ ಬಗ್ಗೆ ಸಹ ಬಹಳ ಆಸಕ್ತಿ ಇದ್ದು, ಎಲ್ಲಿ ಹೂಡಿದರೆ ಲಾಭ (Profit) ಬರುತ್ತದೋ ಅಲ್ಲಿಯೇ ಹೂಡಿಕೆ ಹಾಕಿ ಲಾಭವನ್ನು ಗಳಿಸುತ್ತಾರೆ. 

ಇದನ್ನು ಓದಿ: ನೋಡೋದಾದ್ರೆ ಈ ವಸ್ತುಗಳನ್ನೇ ನೋಡಿ, ನಿಮಗೆ ಒಲಿಯತ್ತೆ ಅದೃಷ್ಟ..!

ಸಿಂಹ ರಾಶಿ (Leo)
ಈ ರಾಶಿಯವರು ಸಾಹಸಿಗಳು (Adventurers) ಹಾಗೂ ಧೈರ್ಯವಂತರಾಗಿದ್ದು, ಐಷಾರಾಮಿ ವಸ್ತುಗಳ ಹಿಂದೆ ಬೀಳುವ ಜಾಯಮಾನದವರಲ್ಲ. ಹಣ ಉಳಿತಾಯ ಮಾಡುವುದರಲ್ಲಿ ಇವರು ನಿಸ್ಸೀಮರಾಗಿದ್ದು, ತಮಗೆ ಅನಗತ್ಯ, ದುಬಾರಿ (Expensive) ಎಂದು ಅನ್ನಿಸಿದಲ್ಲಿ ಅವುಗಳ ಖರೀದಿಗೆ ಮುಂದಾಗಲಾರರು. ತೀರಾ ಅಗತ್ಯವಿದ್ದರಷ್ಟೇ ಅಂಥ ವಸ್ತುಗಳನ್ನು ಖರೀದಿ ಮಾಡುವ ಗುಣ ಇವರದ್ದಾಗಿದೆ. ಇವರ ಸ್ನೇಹ ಬಳಗ ದೊಡ್ಡದಾಗಿಯೇ ಇರಲಿದ್ದು, ಅವರಿಗಾಗಿ ಖರ್ಚು ಮಾಡಲು ಯೋಚಿಸುವುದಿಲ್ಲ. ಹಾಗಂತ ನೀರಿನಂತೆ ಹಣವನ್ನು ಖರ್ಚು ಮಾಡದೇ ಉಳಿತಾಯ (Savings) ದೃಷ್ಟಿಯಿಂದಲೂ ಲೆಕ್ಕಾಚಾರ ಹಾಕುವ ಗುಣ ಹೊಂದಿದ್ದಾರೆ. 
 

Zodiac signs that would spend less but are they interested in savings

 

Latest Videos
Follow Us:
Download App:
  • android
  • ios