ನಿಮ್ಮನೇಲಿ ದೆವ್ವ, ಭೂತ ಏನಾದ್ರೂ ಸೇರಿ ಕೊಂಡಿದ್ಯಾ? ಕಂಡು ಹಿಡಿಯೋಕೆ ಇಲ್ಲಿವೆ ದಾರಿ

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತ ತುಂಬಿರಬಹುದು. ಅಥವಾ ಕ್ಷುದ್ರ ಶಕ್ತಿಗಳೇ ನಿಮ್ಮ ಉತ್ತಮ ಶಕ್ತಿಯನ್ನು ಹೀರಿಕೊಳ್ಳುತ್ತಿರಬಹುದು. ಆದರೆ ಇದನ್ನು ಕಂಡುಹಿಡಿಯುವುದು ಹೇಗೆ? ಕೆಲವು ಮಾರ್ಗಗಳಿವೆ. ಅದನ್ನು ತಿಳಿಯೋಣ.

 

Do your home has negative energy How to find out simple tips bni

ನಕಾರಾತ್ಮಕ ಶಕ್ತಿ ಅಥವಾ ನೆಗೆಟಿವ್ ಎನರ್ಜಿ ಎಂಬುದು ಅಸ್ತಿತ್ವದಲ್ಲಿದೆ ಮತ್ತು ನಮ್ಮ ಸುತ್ತಲೂ ಇರುತ್ತದೆ. ನಾವು ಜೀವನದಲ್ಲಿ ಉತ್ತಮ ದೃಷ್ಟಿಕೋನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೂ ಸಹ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಕೆಲವೊಮ್ಮೆ ನಿಮ್ಮನ್ನು ಹಿಂಡಿಹಾಕಬಹುದು. ನಕಾರಾತ್ಮಕ ಶಕ್ತಿಯು ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಘರ್ಷಣೆಗಳು ಮತ್ತು ಚಕಮಕಿಗಳಿಗೆ ಕಾರಣವಾಗಬಹುದು. ಇದು ನಿಮ್ಮನ್ನು ಕೆಳಮಟ್ಟಕ್ಕಿಳಿಸಬಹುದು, ಅವಮಾನ ಅಸಮಾಧಾನ ಉಂಟುಮಾಡಬಹುದು. ನಕಾರಾತ್ಮಕ ಶಕ್ತಿಯು ನಿಮ್ಮ ದೇಹ ಮತ್ತು ಮನಸ್ಸಿನಿಂದ ಆಶಾವಾದವನ್ನು ಹೊರಹಾಕುತ್ತದೆ. ಪರಿಣಾಮವಾಗಿ ನೀವು ಬಳಲುತ್ತಿರಿ, ಅತೃಪ್ತರಾಗುತ್ತೀರಿ. ನಿಮ್ಮ ಮನೆಯಲ್ಲಿರಬಹುದಾದ ನಕಾರಾತ್ಮಕ ಶಕ್ತಿಯನ್ನು ಕಂಡುಹಿಡಿಯುವ ಕೆಲವು ವಿಧಾನಗಳನ್ನು ಮೊದಲು ಚರ್ಚಿಸೋಣ.

ಮನೆಯಲ್ಲಿ ನೀವು ಹೇಗೆ ಫೀಲ್ ಮಾಡುತ್ತೀರಿ ಎಂಬುದನ್ನು ಗಮನಿಸಿ. ನಿಮ್ಮ ಮನೆಯಾದ್ಯಂತ ಪ್ರಶಾಂತ, ಆಹ್ವಾನಿಸುವ ವಾತಾವರಣವಿರಬೇಕು. ಅಸಾಮಾನ್ಯ ಭಯಾನಕ ಭಾವನೆ ಹುಟ್ಟಿಸುವ ಸ್ಥಳಗಳಿವೆಯಾ? ಅಥವಾ ಮನೆಯಲ್ಲಿ ಯಾವಾಗಲೂ ಜಗಳ ಶುರುವಾಗುವ ನಿರ್ದಿಷ್ಟ ಕೊಠಡಿ ಇದೆಯಾ? ನಕಾರಾತ್ಮಕ ಶಕ್ತಿಯು ಅಲ್ಲಿರಬಹುದು.

ಈ ಮೂರು ವಿಷ್ಯಗಳಿಗೆ ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡೋ ವ್ಯಕ್ತಿ ಶ್ರೀಮಂತನಾಗ್ತಾನೆ!

ಮನೆಗಳು ಅಲ್ಲಿ ವಾಸಿಸುತ್ತಿದ್ದ ವ್ಯಕ್ತಿಗಳಿಂದ ಶಕ್ತಿಯನ್ನು ಪಡೆದುಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ನೀವು ಇತ್ತೀಚೆಗೆ ಆ ಮನೆಗೆ ಸ್ಥಳಾಂತರಗೊಂಡಿದ್ದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ದುಃಖಕ್ಕೆ ಒಳಗಾಗುತ್ತಿದ್ದರೆ, ಅಳುವುದು ಕಂಡುಬಂದರೆ, ಅಲ್ಲಿ ನೆಗೆಟಿವ್ ಶಕ್ತಿ ಇರುತ್ತದೆ. ಆಗ ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ನಕಾರಾತ್ಮಕ ಶಕ್ತಿಯು ಉತ್ತಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ನೀವು ಎಷ್ಟೇ ಉತ್ಸಾಹದಿಂದ ಮನೆಗೆ ಬಂದರೂ ಮನೆಯೊಳಗೆ ಬಂದ ಕೂಡಲೆ ನಿರಾಸೆ, ಹತಾಶೆ, ಮಂಕು ಕವಿಯಬಹುದು. ಆಯಾಸ, ಪ್ರೇರಣೆ ಕಡಿಮೆಯಾಗುವಿಕೆ, ದಿಗ್ಭ್ರಮೆಯ ಸಂವೇದನೆ ಉಂಟಾಗಬಹುದು.

ಯಾವುದೋ ದೊಡ್ಡ ತಪ್ಪು ಆಗಿದೆ ಎಂಬುದಕ್ಕೆ ಒಂದು ಸ್ಪಷ್ಟವಾದ ಚಿಹ್ನೆಯೆಂದರೆ, ಹಠಾತ್ ಆಗಿ ಕೀಟಗಳು ಮುತ್ತಿಕೊಳ್ಳುವಿಕೆ. ಯಾವುದೇ ದೋಷ ಇಲ್ಲದೆಯೂ ಇದ್ದಕ್ಕಿದ್ದಂತೆ ಕೀಟಗಳು ರಾಶಿ ರಾಶಿ ಕಂಡುಬಂದರೆ, ಕ್ರಿಮಿಗಳು ಮನೆ ಪ್ರವೇಶಿಸಿದರೆ, ನೆಗೆಟಿವ್ ಶಕ್ತಿ ಇದೆಯೆಂದರ್ಥ. ಮಾಟಮಂತ್ರ ಅಥವಾ ನಿಮ್ಮ ವಿರುದ್ಧ ಕೆಟ್ಟಕಣ್ಣುಗಳಂತಹ ಈ ವಿಚಿತ್ರ ಸಂದರ್ಭಗಳಲ್ಲಿ ಹೀಗೆ ಆಳವಾದ ಸಮಸ್ಯೆ ಇರಬಹುದು.

ಪ್ರತಿಕೂಲ ಘಟನೆಗಳು ಅಲ್ಪಾವಧಿಯಲ್ಲಿ ಸರಣಿಯಾಗಿ ಒಂದೇ ಬಾರಿಗೆ ನಡೆದರೆ, ಎಲ್ಲವೂ ನೀವು ಅಂದುಕೊಂಡಂತೆ ಆಗುತ್ತಿಲ್ಲ ಎಂಬುದರ ಸುಳಿವು ಆಗಿರಬಹುದು. ಒಂದರ ಹಿಂದೊಂದರಂತೆ ಕೆಟ್ಟ ಘಟನೆಗಳು ಮನೆಯಲ್ಲಿ ಸಂಭವಿಸಬಹುದು.

ಉಪ್ಪು ನೀರಿನ ಪರೀಕ್ಷೆ
ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಕಲ್ಲುಪ್ಪನ್ನು ಸೇರಿಸಿ. ಗ್ಲಾಸಿನಲ್ಲಿ ಉಪ್ಪು ಮತ್ತು ನೀರಿನ ಮಿಶ್ರಣವನ್ನು ಸುರಿಯಿರಿ. ಈ ಗ್ಲಾಸ್ ಅನ್ನು ನಿಮ್ಮ ಮನೆಯ ಕೋಣೆಯಲ್ಲಿ ಇರಿಸಿ. ಅದು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಗಾಜನ್ನು ಯಾರಿಗೂ ಕಾಣದಂತೆ ಮರೆಮಾಡಿ. ಮನೆಯಲ್ಲಿ ಹೆಚ್ಚು ನಕಾರಾತ್ಮಕ ಶಕ್ತಿಗಳನ್ನು ಪತ್ತೆಹಚ್ಚಲು ನೀವು ಬಯಸಿದರೆ, ಮೇಲೆ ತಿಳಿಸಿದ ವಿಧಾನವನ್ನು ಬಳಸಿಕೊಂಡು 4 ರಿಂದ 5 ಗ್ಲಾಸ್ ನೀರನ್ನು ತುಂಬಿಸಿ ಮತ್ತು ಅವುಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸಿ. 24 ಗಂಟೆಗಳ ನಂತರ ನೀರಿನ ಲೋಟವನ್ನು ಪರ್ಯಾಯವಾಗಿ ಪರಿಶೀಲಿಸಿ. ಗಾಜಿನ ನೀರು ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗಿದರೆ, ಅಲ್ಲಿ ಬಹಳ ಕಡಿಮೆ ನಕಾರಾತ್ಮಕ ಶಕ್ತಿ ಇರುತ್ತದೆ. ಗಾಜಿನ ನೀರು ಹಸಿರು ಅಥವಾ ಕೆಂಪು ಬಣ್ಣದ ತಿಳಿ ಛಾಯೆಗೆ ತಿರುಗಿದರೆ, ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ತಿಳಿಯಲಾಗುತ್ತದೆ. ಹೆಚ್ಚುವರಿಯಾಗಿ, ಗಾಜಿನ ನೀರು ಕಪ್ಪು ಬಣ್ಣಕ್ಕೆ ಗಾಢವಾಗಿದ್ದರೆ, ಇದು ಬಲವಾದ ನಕಾರಾತ್ಮಕ ಚಿಹ್ನೆಯಾಗಿ ಕಂಡುಬರುತ್ತದೆ. ಗಾಜಿನ ನೀರಿನ ಬಣ್ಣದಲ್ಲಿ ಯಾವುದೇ ಬದಲಾವಣೆಯಿಲ್ಲದಿದ್ದರೆ, ಪ್ರದೇಶವು ಬಲವಾದ ಸಕಾರಾತ್ಮಕ ಶಕ್ತಿಯನ್ನು ಹೊಂದಿದೆ.

ಕನಸಿನಲ್ಲಿ ಅಳೋ ಮಗು, ನಗೋ ಮಗು ಬಂದರೆ ಅದರ ಅರ್ಥ ಏನಿರಬಹುದು?
 

Latest Videos
Follow Us:
Download App:
  • android
  • ios