ಈ ಮೂರು ವಿಷ್ಯಗಳಿಗೆ ಹಿಂದೆ ಮುಂದೆ ನೋಡದೆ ಹಣ ಖರ್ಚು ಮಾಡೋ ವ್ಯಕ್ತಿ ಶ್ರೀಮಂತನಾಗ್ತಾನೆ!
ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ದಾನ ಮಾಡುವ ಮಹತ್ವವನ್ನು ಹೇಳಿದ್ದಾರೆ. ಅಗತ್ಯವಿರುವ ಸ್ಥಳಗಳಲ್ಲಿ ಹಣ ಖರ್ಚು ಮಾಡುವ ವ್ಯಕ್ತಿಯು ಯಾವಾಗಲೂ ಶ್ರೀಮಂತನಾಗಿರುತ್ತಾನೆ.
ಜನರು ಹೆಚ್ಚಾಗಿ ಹಣದ ಕೊರತೆ ಅಥವಾ ಸಮಸ್ಯೆ ಎದುರಿಸುತ್ತಾರೆ. ಅಂಥವರು ಈ 3 ವಿಷಯಗಳ ಮೇಲೆ ಮುಕ್ತವಾಗಿ ಖರ್ಚು ಮಾಡಬೇಕು. ಇದನ್ನು ಮಾಡುವುದರಿಂದ ಎಂದಿಗೂ ಹಣದ ಕೊರತೆ (money problem) ಉಂಟಾಗೋದಿಲ್ಲ, ಅಂದ್ರೆ ನೀವು ಶ್ರೀಮಂತರಾಗ್ತೀರಿ. ಹಾಗಿದ್ರೆ ಯಾವ ವಸ್ತುಗಳ ಮೇಲೆ ಖರ್ಚು ಮಾಡ್ಬೇಕು ನೋಡೋಣ.
ಈ ವಿಷಯಗಳಿಗೆ ಖರ್ಚು ಮಾಡಿ
ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲದಂತೆ ಮಾಡುವ ಅನೇಕ ವಿಷಯಗಳಿವೆ. ಅವುಗಳಲ್ಲಿ ಮುಖ್ಯವಾಗಿ ಮೂರನ್ನು ಇಲ್ಲಿ ತಿಳಿಸಲಾಗಿದೆ. ಅವುಗಳಿಗೆ ನೀವು ಹಣ ಖರ್ಚು ಮಾಡಿದ್ರೆ ಹಣದ ಸಮಸ್ಯೆಯೇ ಇರೋದಿಲ್ಲ.
ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಹಣ ವ್ಯಯಿಸೋದು
ಆಚಾರ್ಯ ಚಾಣಕ್ಯ ಹೇಳುವಂತೆ, ನಿಮ್ಮಲ್ಲಿ ಸಂಪತ್ತು ಇದ್ದರೆ, ಬಡವರು ಮತ್ತು ನಿರ್ಗತಿಕರಿಗೆ ಸಹಾಯ (helping poor people) ಮಾಡಿ. ಇದನ್ನು ಮಾಡುವುದರಿಂದ, ವ್ಯಕ್ತಿ ಯಾವಾಗಲೂ ಶ್ರೀಮಂತನಾಗಿ ಉಳಿಯುತ್ತಾನೆ.
ಸಾಮಾಜಿಕ ಕಾರ್ಯಗಳಿಗೆ ದಾನ
ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾನೆ. ಜೊತೆಗೆ ಸಾಮಾಜಿಕ ಕಾರ್ಯಗಳಿಗೆ ದಾನ ಮಾಡೊದು, ಹಣ ಖರ್ಚು ಮಾಡುವುದರಿಂದ, ಯಾರೂ ಕೂಡ ಜೀವನದಲ್ಲಿ ಹಣದ ಕೊರತೆಯನ್ನು ಹೊಂದೋದೆ ಇಲ್ಲ.
ಧಾರ್ಮಿಕ ಕಾರ್ಯಗಳಿಗೆ ದಾನ ಮಾಡಿ
ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಖರ್ಚು ಮಾಡುವಾಗ ವಿಷ್ಯ ಬಂದಾಗ ಹಿಂದೆ ಮುಂದೆ ಯೋಚನೆ ಮಾಡದೇ ಖರ್ಚು ಮಾಡಿ. ದೇವಾಲಯ ಅಥವಾ ಧಾರ್ಮಿಕ ಸ್ಥಳದಲ್ಲಿ ಉದಾರವಾಗಿ ದಾನ ಮಾಡಬೇಕು. ಇದರಿಂದಲೂ ನೀವು ಶ್ರೀಮಂತರಾಗ್ತೀರಿ.
ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ
ಧಾರ್ಮಿಕ ಚಟುವಟಿಕೆಗಳಿಗೆ ದಾನ ಮಾಡುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ (financial condition) ಬಲಗೊಳ್ಳುತ್ತದೆ. ಇದರೊಂದಿಗೆ, ವ್ಯಕ್ತಿ ಸಮಾಜದಲ್ಲಿ ಸಾಕಷ್ಟು ಗೌರವವನ್ನು ಸಹ ಪಡೆಯುತ್ತಾನೆ.
ಕೆಲಸದಲ್ಲಿ ಯಶಸ್ಸು
ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ವ್ಯಕ್ತಿಯು ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಇದಲ್ಲದೆ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ.