Virat Kohli: ವಿರಾಟ್ ಕೊಹ್ಲಿಯ ಶತಕಕ್ಕೆ ವಜ್ರಕವಚ ನೀಡಿದ ಮಂತ್ರದ ಪವರ್ ನಿಮಗೂ ಗೊತ್ತಿರಲಿ
ಭರ್ಜರಿ ನಾಲ್ಕು ಶತಕಗಳನ್ನು ಸಿಡಿಸುತ್ತಿದ್ದಾಗ ವಿರಾಟ್ ಕೊಹ್ಲಿ ನೆನೆಯುತ್ತಿದ್ದುದು ಶಿವ ಪಂಚಾಕ್ಷರಿ ಮಂತ್ರವನ್ನಂತೆ. ಈ ಮಂತ್ರದ ಮಹತ್ವವೇನು, ಅದನ್ನು ಜಪಿಸುವುದರಿಂದ ಆಗುವ ಭೌತಿಕ, ಬೌದ್ಧಿಕ ಲಾಭಗಳೇನು? ಇಲ್ಲಿದೆ ವಿವರ.
ವಿರಾಟ್ ಕೊಹ್ಲಿ 10 ವರ್ಷ ಹಿಂದಿನ ರೋಚಕ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ. 2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ‘ವಿರಾಟ’ ರೂಪ ಪ್ರದರ್ಶಿಸಿದ್ದ ಕೊಹ್ಲಿ, ಮಂತ್ರವೊಂದನ್ನು ಜಪಿಸಿಕೊಂಡೇ ನಾಲ್ಕು ಟೆಸ್ಟ್ ಶತಕಗಳನ್ನು ಸಿಡಿಸಿದ್ದರಂತೆ. ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಜೊತೆ ಕೊಹ್ಲಿ ನಡೆಸಿರುವ ವಿಶೇಷ ಸಂವಾದದಲ್ಲಿ ಈ ಕುತೂಹಲಕಾರಿ ವಿಷಯ ಬಹಿರಂಗಗೊಂಡಿದೆ. ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್ ಬಿಸಿಸಿಐ ಟಿವಿಯಲ್ಲಿ ಕೊಹ್ಲಿ ಹಾಗೂ ಗಂಭೀರ್ ನಡುವಿನ ಸಂವಾದದ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಕೊಹ್ಲಿ ಜಪ ಮಾಡಿದ್ದ ವಿಷಯವನ್ನು ಬಹಿರಂಗಪಡಿಸಿರುವುದು ಗಂಭೀರ್. ಸಂವಾದದ ವೇಳೆ ಕೊಹ್ಲಿ, ಗಂಭೀರ್ ಬಳಿ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗಳಲ್ಲಿನ ರೋಚಕ ಕ್ಷಣಗಳ ಬಗ್ಗೆ ಮಾತನಾಡುವಂತೆ ಕೇಳುತ್ತಾರೆ. ಆಗ ಗಂಭೀರ್, ‘ನನ್ನ ಬದಲು, ಆಸ್ಟ್ರೇಲಿಯಾದಲ್ಲಿ ನೀವು ಬಂಪರ್ ಬ್ಯಾಟಿಂಗ್ ನಡೆಸಿದ ಸರಣಿ ಬಗ್ಗೆ ಮಾತನಾಡೋಣ. 2014-15ರ ಸರಣಿಯಲ್ಲಿ ನೀವು ರಾಶಿ ರಾಶಿ ರನ್ ಬಾರಿಸಿದಾಗ, ಓಂ ನಮಃ ಶಿವಾಯ ಎಂದು ಜಪ ಮಾಡುತ್ತಿದ್ದೆ ಎಂದು ನನ್ನ ಬಳಿ ಹೇಳಿದ್ದು ನನಗೆ ಇನ್ನೂ ನೆನಪಿದೆ’ ಎಂದಿದ್ದಾರೆ. ಇದಕ್ಕೆ ಕೊಹ್ಲಿ ನಗುತ್ತಲೇ ತಲೆಯಾಡಿಸಿದ್ದಾರೆ.
ಈ ಮಂತ್ರದ ಹೆಸರು ʼಪಂಚಾಕ್ಷರಿ ಮಂತ್ರʼ ಅಥವಾ ʼಶಿವ ಪಂಚಾಕ್ಷರಿ ಮಂತ್ರʼ. ಪಠಿಸಿದವರ ಅಥವಾ ಮನನ ಮಾಡಿದವರ ಇಷ್ಟಾರ್ಥಗಳನ್ನು ಈಡೇರಿಸಬಲ್ಲ ಪವರ್ ಹೊಂದಿರುವ ಈ ಮಂತ್ರದ ರಕ್ಷೆ ವಿರಾಟ್ ಕೊಹ್ಲಿಗೆ ದೊರೆತದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಶಿವ ಪಂಚಾಕ್ಷರಿ ಮಂತ್ರ ಅಂದರೆ ʼಓಂ ನಮಃ ಶಿವಾಯʼ. ಇದರಲ್ಲಿ ಐದು ಅಕ್ಷರಗಳು ಇರುವುದರಿಂದ ಇದಕ್ಕೆ ಪಂಚಾಕ್ಷರಿ ಮಂತ್ರವೆಂದು ಹೆಸರು. ಹಿಂದೆ ಹಿಂದೂ ಶೈವ ವೀರರು ಶತ್ರುಗಳನ್ನು ಸದೆಬಡಿಯಲು ಹೋಗುವಾಗ ಈ ಮಂತ್ರವನ್ನು ಉದ್ಘೋಷಿಸುತ್ತಿದ್ದರು. ಶಿವನು ಲಯಕರ್ತನೂ ಆದ್ದರಿಂದ, ರಣಬೈರವನೂ ಅವನೇ ಆದ್ದರಿಂದ, ಕದನದಲ್ಲಿ ಈ ಮಹಾದೇವನ ಕೃಪೆ ಈ ಮಂತ್ರದ ಉದ್ಗಾರದಿಂದ ದೊರೆಯುತ್ತದೆ ಎಂದು ನಂಬಿಕೆ. ಹೀಗಾಗಿಯೇ ಕೊಹ್ಲಿ ಇದನ್ನು ಪಠಿಸಿರಬಹುದು.
ಪಂಚಾಕ್ಷರಿ ಮಂತ್ರದ ಪವರ್ ಇಷ್ಟೇ ಅಲ್ಲ. ʼಓಂ ನಮಃ ಶಿವಾಯʼ ಮಂತ್ರವು ಸೆಕೆಂಡಿಗೆ ಹಲವಾರು ಧ್ವನಿ ತರಂಗಗಳನ್ನು ಉತ್ಪಾದಿಸುತ್ತದೆ. ಈ ಅಲೆಗಳು ಮಾನವನ ಬುದ್ಧಿಮತ್ತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುತ್ತವೆ. ಧ್ಯಾನದ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ನಿಧಾನವಾಗಿ ಜಪಿಸುವುದರಿಂದ ಸಾಮರಸ್ಯ, ಏಕಾಗ್ರತೆ ಮತ್ತು ಶಕ್ತಿಯನ್ನು ನೀಡುತ್ತದೆ. ಋಗ್ವೇದವು ಮಹಾರುದ್ರನನ್ನೇ ಸರ್ವಸ್ವ ಎಂದು ವ್ಯಾಖ್ಯಾನಿಸಿದೆ. ಶಿವನ ಕುರಿತು ನಿಜ ಭಕ್ತಿಯಿಂದ ಮಂತ್ರವನ್ನು ಜಪಿಸಿದರೆ, ಅವರ ಮನಸ್ಸು, ದೇಹ ಮತ್ತು ಆತ್ಮವು ಹಗುರವಾಗುತ್ತದೆ. ಅವರು ತಮ್ಮ ಬದುಕಿನ ಆಯಾಮಗಳನ್ನು ಸಹ ಬದಲಾಯಿಸಬಹುದು.
ಓಂ ನಮಃ ಶಿವಾಯ ಎನ್ನುವ ಮಂತ್ರದ ಪಠಣ ದೇಹಕ್ಕೆ ಅತೀಂದ್ರಿಯ ಬದಲಾವಣೆಗಳನ್ನು ತರುತ್ತದೆ. ಪ್ರಪಂಚದಾದ್ಯಂತದ ಋಷಿಮುನಿಗಳು ಶುಭ ಮಂತ್ರವನ್ನು ಪಠಿಸುವುದರಲ್ಲಿ ನಿರತರಾಗಿದ್ದಾರೆ, ಅದರ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಅನಂತ ಮಟ್ಟಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇದರರ್ಥ ಆ ಯೋಗಿಗಳು ಪ್ರಕೃತಿ ಅಥವಾ ಭವ್ಯವಾದ ಶಕ್ತಿಯ ಹರಿವಿನ ಅಸ್ತಿತ್ವದ ಪ್ರಾಥಮಿಕ ಸ್ವರೂಪದೊಂದಿಗೆ ತಮ್ಮನ್ನು ಸಂಪರ್ಕಿಸಿಕೊಂಡಿದ್ದಾರೆ. ಶಕ್ತಿ ದೇವಿಯು ಆ ಶಕ್ತಿಯ ಹರಿವಿನಲ್ಲಿ ವಾಸಿಸುತ್ತಾಳೆ ಮತ್ತು ನಿಮ್ಮನ್ನು ಶಿವನ ಬಳಿಗೆ ಕರೆದೊಯ್ಯುತ್ತಾಳೆ. ಇದು ನೈಜತೆಗಳ ಆಧಾರದ ಮೇಲೆ ಯೋಗಿಗಳ ಗಮನಾರ್ಹ ಪ್ರಾಚೀನ ವಿಜ್ಞಾನವಾಗಿದೆ. ಸರಿಯಾಗಿ ಜಪಿಸಿದರೆ, ಶಿವನೊಂದಿಗೆ ಸಂಪರ್ಕ ಹೊಂದಲು ಮಂತ್ರವು ಸಹಾಯ ಮಾಡುತ್ತದೆ.
ಓಂ ನಮಃ ಶಿವಾಯ.. ಜಪ ಮಾಡುತ್ತಾ ನಾಲ್ಕು ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ! ರೋಚಕ ಕಥೆ ಬಹಿರಂಗ!
ಯಾರಾದರೂ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಜಪಿಸಿದಾಗ, ಆ ಕ್ಷಣದಲ್ಲಿ ಅವನು ಅಘೋರಿಯಾಗುತ್ತಾನೆ. ಅಘೋರಿ ಎಂದರೆ ವಿಪರೀತವಲ್ಲದವನು. ಶಿವನು ನಿಮ್ಮ ಹೃದಯದೊಳಗೆ ಬೆಳಕು ಅನುಭವಿಸುವಂತೆ ಮಾಡುತ್ತಾನೆ. ಓಂ ನಮಃ ಶಿವಾಯ ಮಂತ್ರ ಪಠಣವು ಕೇವಲ ಮೋಕ್ಷ ನೀಡುವ ಮಂತ್ರವಲ್ಲ; ಇದು ನಮ್ಮ ಆಂತರಿಕ ಆಲೋಚನೆಗಳ ಪ್ರಕ್ರಿಯೆಯನ್ನು ಸಹ ಪ್ರಬುದ್ಧಗೊಳಿಸುತ್ತದೆ ಮತ್ತು ನರಕೋಶಗಳ ರಕ್ತ ಪರಿಚಲನೆ ಸುಧಾರಿಸುತ್ತದೆ. ವೈದ್ಯಕೀಯ ಪದದಲ್ಲಿ, ಈ ಪರಿಕಲ್ಪನೆಯನ್ನು ನ್ಯೂರೋಪ್ಲ್ಯಾಸ್ಟಿಕ್ ಎಂದು ಕರೆಯಲಾಗುತ್ತದೆ.
ಓಂ ನಮಃ ಶಿವಾಯ ಮಂತ್ರ ಪಠಣವು ನಿಮ್ಮ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಹೃದಯ ಬಡಿತವನ್ನು ಸ್ಥಿರಗೊಳಿಸುತ್ತದೆ. ಮಂತ್ರವು ನಿಮ್ಮ ರಕ್ತ ಶುದ್ಧೀಕರಣ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಮಂತ್ರವನ್ನು ಜಪಿಸುವುದರಿಂದ ನಿಮ್ಮ ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಸಹ ಶುದ್ಧೀಕರಿಸುತ್ತದೆ, ಅದು ನಿಮ್ಮ ದೈಹಿಕ ಮತ್ತು ಬೌದ್ಧಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.
ಓಂ ನಮಃ ಶಿವಾಯ ಮಂತ್ರವನ್ನು ಜಪಿಸುವುದರಿಂದ ನಿಮಗೆ ಶಾಶ್ವತ ಸಂತೋಷ ಸಿಗುತ್ತದೆ. ಶಿವನು ನಿಮ್ಮ ರಕ್ಷಕನಾಗುತ್ತಾನೆ. ಯಾವುದೇ ಭೀತಿ, ಒತ್ತಡ, ಖಿನ್ನತೆ, ಹುಚ್ಚುತನವು ನಿಧಾನವಾಗಿ ಮರೆಯಾಗುತ್ತದೆ. ಇದು ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸುತ್ತದೆ, ಅದು ನಿಮ್ಮ ದೇಹದ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ದೇಹದ ವಿಷತ್ವವನ್ನು ಕಡಿಮೆ ಮಾಡುತ್ತದೆ.