ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮೊದಲ ಬಾರಿಗೆ ಸಂದರ್ಶನದಲ್ಲಿ ಮುಖಾಮುಖಿಯಾಗಿದ್ದು, ಹಲವು ಗಾಸಿಪ್‌ಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ: ಪರಿಸ್ಥಿತಿ ಒಮ್ಮೊಮ್ಮೆ ಹೀರೋವನ್ನು ವಿಲನ್ ಮಾಡುತ್ತೇ, ಅದೇ ರೀತಿ ವಿಲನ್‌ನನ್ನು ಹೀರೋ ಮಾಡಿಬಿಡುತ್ತೆ ಎನ್ನುವ ಮಾತನ್ನು ನಾವು ನೀವೆಲ್ಲರೂ ಕೇಳಿಯೇ ಇರುತ್ತೇವೆ. ಇದೀಗ ಭಾರತದ ಕ್ರಿಕೆಟ್ ದಂತಕಥೆಗಳಾದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್, ತಮ್ಮಿಬ್ಬರ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ ಕೆಲ ವರ್ಷಗಳಿಂದ ಹರಿದಾಡುತ್ತಿರುವ ಮಸಾಲೆಭರಿತ ಸುದ್ದಿಗಳಿಗೆ ತೆರೆ ಎಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. 

ವಿರಾಟ್ ಕೊಹ್ಲಿ ಹಾಗೂ ಗೌತಮ್‌ ಗಂಭೀರ್ ಆನ್‌ಫೀಲ್ಡ್‌ನಲ್ಲಿ ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಸಿರುವುದನ್ನು ನಾವು ನೀವೆಲ್ಲರೂ ನೋಡಿಯೇ ಇದ್ದೇವೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಈ ಇಬ್ಬರು ಆಟಗಾರರ ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡುವುದನ್ನು ಕಳೆದ ಕೆಲ ವರ್ಷಗಳಿಂದ ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. ಇದೆಲ್ಲದರ ನಡುವೆ ಇದೀಗ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್‌ಕೋಚ್ ಆಗಿ ನೇಮಕವಾದ ಬೆನ್ನಲ್ಲೇ ಇಬ್ಬರ ಒಂದೇ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಈ ಇಬ್ಬರ ನಡುವೆ ಮನಸ್ತಾಪವಿದೆ ಎನ್ನುವಂತಹ ಗಾಳಿ ಸುದ್ದಿಗೆ ತೆರೆ ಎಳೆಯುವ ಪ್ರಯತ್ನಕ್ಕೆ ಬಿಸಿಸಿಐ ಮುಂದಾಗಿದ್ದು, ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ನಡುವೆ ಎಕ್ಸ್‌ಕ್ಲೂಸಿವ್ ಮಾತುಕತೆಯನ್ನು ಆಯೋಜಿಸಿ ಗಮನ ಸೆಳೆದಿದೆ.

ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗೌತಮ್‌ ಗಂಭೀರ್‌ರ ಕೋಚಿಂಗ್‌ ಶೈಲಿಗೂ ವ್ಯತ್ಯಾಸವಿದೆ.: ರೋಹಿತ್ ಶರ್ಮಾ

ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದೆ. ಈ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಗುಮುಖದಲ್ಲಿಯೇ ಆ ದಿನಗಳಲ್ಲಿ ಎದುರಾಳಿ ತಂಡಗಳಲ್ಲಿದ್ದಾಗ ಆಗುತ್ತಿದ್ದ ಮಾತಿನ ಚಕಮಕಿಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. 

Scroll to load tweet…

ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಎದುರಾಳಿಗಳ ಜತೆ ಮಾತಿನ ಚಕಮಕಿ ನಡೆದಾಗ ನೀವು ಯಾವ ಝೋನ್‌ಗೆ ಹೋಗುತ್ತೀರಾ? ಅದು ನಿಮ್ಮ ಏಕಾಗ್ರತೆಗೆ ಧಕ್ಕೆ ತಂದು ಔಟ್ ಮಾಡುವ ಸಾಧ್ಯತೆಯಿರುತ್ತದೆಯೋ? ಅಥವಾ ಅದರಿಂದ ಮತ್ತಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಲು ಹುರುಪು ನೀಡುತ್ತದೆಯೋ ಎಂದು ಗಂಭೀರ್‌ಗೆ ಕೊಹ್ಲಿ ಕೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ರಾಬಿನ್ ಸಿಂಗ್!

ಇದಕ್ಕೆ ಉತ್ತರಿಸಿರುವ ಗಂಭೀರ್, ನನಗಿಂತ ನೀವೇ ಹೆಚ್ಚು ಮೈದಾನದಲ್ಲಿ ವಾಗ್ವಾದ ನಡೆಸುತ್ತೀರ. ನನಗನಿಸತ್ತೇ, ಈ ಪ್ರಶ್ನೆಗೆ ಉತ್ತರ ನೀಡಲು ನನಗಿಂತ ನೀವೇ ಸೂಕ್ತ ಎಂದು ಗೌತಿ ಹೇಳಿದ್ದಾರೆ.

ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದರು. ಇದೀಗ ವಿರಾಟ್ ಕೊಹ್ಲಿ ಆಟಗಾರನಾಗಿ ಮುಂದುವರೆದಿದ್ದರೇ, ಗಂಭೀರ್ ಕೋಚ್ ಆಗಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ.