ಡಿ ಅಕ್ಷರದಿಂದ ಶುರುವಾಗೋ ಹೆಸರಿನವರಿಗೆ ಉತ್ತಮ ಮುಂದಾಳುವಾಗಬಲ್ಲ ಶಕ್ತಿ ಇರುತ್ತದೆ. ಬಹಳ ಶಿಸ್ತಿನ ಮನುಷ್ಯರು. ಜೊತೆಗೆ ಜವಾಬ್ದಾರಿಯುತವಾಗಿ ಕೆಲಸ ಮಾಡುವವರು. ನೀವು ಗಂಭೀರ ಮತ್ತು ಅತೀ ಹೆಚ್ಚು ಕೆಲಸ ಮಾಡುವವರು. ನಿಮ್ಮ ಎಷ್ಟೋ ಭಾವನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಡಿರುತ್ತೀರಿ. ತೀರಾ ಆತ್ಮಿಯರೆದುರು ಮಾತ್ರವೇ ನಿಮ್ಮ ಮನಸ್ಸನ್ನು ಖಾಲಿ ಮಾಡಿಕೊಳ್ಳಲು ಬಯಸುತ್ತೀರಿ. ಮುಂಗೋಪಿಯಾದರೂ ಬಹುಬೇಗನೇ ನಿಮ್ಮನ್ನು ತಪ್ಪಿಗೆ ಪಶ್ಚಾತ್ತಾಪ ಪಡುವ ಸ್ವಭಾವ ನಿಮ್ಮದು. ಅದಕ್ಕಾಗಿ ತಕ್ಷಣವೇ ಕ್ಷಮೆ ಕೇಳುವ ಉದಾರತೆಯನ್ನೂ ತೋರಿಸುತ್ತೀರಿ.

ಸಾಮಾಜಿಕ ಜೀವಿ ಎಂದೇ ಹೆಸರಾದ ಇವರು ಜನರೊಂದಿಗೆ ಬೆರೆಯುವುದು ಹೇಗೆ ಮತ್ತು ಸಾಮಾಜಿಕ ಜೀವಿಯಾಗಿ ಬದುಕುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡವರು. ಇವರು ಆಲ್ ರೌಂಡರ್ ಸಹ. ಅತ್ಯುತ್ತಮ ಬುದ್ಧಿಮತ್ತೆ ಅವರಿಗೆ ಸಂದ ವರ. ಸದಾ ಓಡಾಟ, ಪ್ರವಾಸದಲ್ಲಿರುವುದೆಂದರೆ ಅಚ್ಚುಮೆಚ್ಚು. ಬೇಗನೇ ಹೊಂದಿಕೊಳ್ಳುವ ಸ್ವಭಾವ ಇವರದು. ಕಲ್ಪನಾಶಕ್ತಿಯ ಮೂಲಕ ಹೊಸ ಹೊಸ ಆಲೋಚನೆಗಳಿಗೆ ಮುನ್ನುಡಿ ಬರೆಯುವವರು. ಸದಾ ಅವಿಶ್ರಾಂತವಾಗಿರುವ ನಿಮ್ಮ ಸ್ವಭಾವ ಕೆಲವೊಮ್ಮೆ ತಾಳ್ಮೆಯಿಲ್ಲದವರು ಎನ್ನಿಸಬಹುದು. ಪ್ರತಿದಿನವೂ ಒಂದೇ ಕೆಲಸ ಮಾಡುವುದೆಂದರೆ ನಿಮಗೆ ಬೋರು. ಆದ್ದರಿಂದ ಒಂದು ಕಡೆ ಬಹಳ ಹೊತ್ತು ನಿಲ್ಲುವುದು ನಿಮಗೆ ಸಾಧ್ಯವಿಲ್ಲ, ನಿಮ್ಮ ಈ ಸ್ವಭಾವ ಚಂಚಲಚಿತ್ತ ಎಂದು ಹಲವರಿಗೆ ಅನ್ನಿಸಿರಲಿಕ್ಕೆ ಸಾಕು!

ಈ ರಾಶಿಯವರ ಜೊತೆ ಪೋಲಿತನದಲ್ಲಿ ಯೂರಿಗೂ ಕಾಂಪೀಟ್ ಮಾಡಲಾಗೋಲ್ಲ! ...

ಸದಾ ತಮ್ಮ ಬದುಕಿನಲ್ಲಿ ಹುರುಪನ್ನು ಉಳಿಸಿಕೊಳ್ಳುವವರು. ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳಿಂದ ಬಹುಬೇಗನೇ ಚೇತರಿಸಿಕೊಳ್ಳುವ ತಾಕತ್ತಿರುವವರು ಇವರು. ಯಾವಾಗಲೂ ಅವಿಶ್ರಾಂತವಾಗಿ ದುಡಿಯುವ ಇವರು, ಸುಲಭವಾಗಿ ಪರಿಹರಿಸಿಕೊಳ್ಳುವಂಥದ್ದನ್ನೂ ಸಂಕೀರ್ಣಗೊಳಿಸಿಕೊಳ್ಳಬಲ್ಲರು. ಸಾರ್ವಜನಿಕವಾಗಿ ಯಾರನ್ನೆ ಆದರೂ ಇಂಪ್ರೆಸ್ ಮಾಡಬಲ್ಲ ಶಕ್ತಿ ಇರುವವರು. ಬರವಣಿಗೆ, ಹಾಡುಗಾರಿಕೆಗಳಲ್ಲಿ ನಿಮ್ಮದು ಎತ್ತಿದ ಕೈ. ಉತ್ತಮ ವಾಗ್ಮಿಯೂ ಹೌದು. ಆದರೆ ಕೆಲವೊಮ್ಮೆ ನೀವು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತೀರಿ. ಎಲ್ಲಾ ವಿಷಯಗಳ ಬಗ್ಗೆಯೂ ಅದಮ್ಯ ಉತ್ಸಾಹ ನಿಮ್ಮನ್ನು ಸದಾ ಚಲನಶೀಲವಾಗಿಡುತ್ತದೆ ಮತ್ತು ನಾಲ್ಕು ಜನರೆದುರು ಗುರುತಿಸಿಕೊಳ್ಳುವಂತೆ ಮಾಡುತ್ತದೆ.

ಶಮಂತಕ ಮಣಿ ಕದ್ದಿದ್ದಾನೆಂಬ ಅಪನಿಂದನೆಯಿಂದ ಕೃಷ್ಣನನ್ನು ಪಾರು ಮಾಡಿದ್ದು ದೇವಿ ಭಾಗವತ! ...

ಇವರು ಸಾಕಷ್ಟು ಜವಾಬ್ದಾರಿಯನ್ನು ಹೊತ್ತವರು. ನೆರವು ನೀಡುವುದರಲ್ಲಿ ಎತ್ತಿದ ಕೈ. ಮತ್ತೊಬ್ಬರನ್ನು ಬಹುಬೇಗನೇ ಅರ್ಥಮಾಡಿಕೊಳ್ಳುವ ಸೂಕ್ಷ್ಮಮತಿಗಳು. ಈ ದಿನಾಂಕದಂದು ಹುಟ್ಟಿದವರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಎಲ್ಲರೊಂದಿಗೂ ತುಂಬಾ ಪ್ರಾಮಾಣಿಕವಾಗಿರುತ್ತಾರೆ. ತಮ್ಮ ಕುಟುಂಬದ ಬಗ್ಗೆ ಅತಿಯಾದ ಕಾಳಜಿ ಇವರಿಗೆ. ಪ್ರತಿಭೆ ಸಾಕಷ್ಟಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಸೋಮಾರಿತನ. ಜೀವನ ತಾವಂದುಕೊಂಡಂತೆ, ಯಾವ ತಾಪತ್ರಯವಿಲ್ಲದೆ ಸಾಗಬೇಕು ಎಂಬ ಪ್ರವೃತ್ತಿಯವರು. ಅಂದುಕೊಂಡಿದ್ದನ್ನು ಮಾಡಲೇ ಬೇಕು ಎಂಬ ಸ್ವಭಾವ. ನಿಮ್ಮ ಸಾಮರ್ಥ್ಯದ ಮೇಲೆ ಸಾಕಷ್ಟು ಆತ್ಮವಿಶ್ವಾಸ. ಸ್ವಲ್ಪಮಟ್ಟಿನ ಅಹಂ ನಿಮ್ಮನ್ನು ಹಲವು ಸಂಬಂಧಗಳಿಂದ ವಂಚಿತಗೊಳಿಸರಬಹುದು.

ಇವರು ಸದಾ ಪರಿಪೂರ್ಣತೆ ಬಯಸುವವರು. ಹೆಚ್ಚಾಗಿ ಖಾಸಗೀತನ ಬಯಸುವವರು. ಯಾವಾಗಲೂ ವಿವೇಚನೆಯಿಂದ ಯೋಚಿಸುವವರು ಮತ್ತು ಅಂತರ್ಮುಖಿಗಳಾಗಿ ಇರಲು ಇಷ್ಟಪಡುವವರು. ನೀವು ಎಂದಿಗೂ ನಿಮ್ಮ ಮನಸ್ಸಿಗೆ ಏನನ್ನಿಸುತ್ತದೆಯೋ ಅದನ್ನೇ ಮಾಡುತ್ತೀರಿ. ನಿಮಗೆ ಒಂಟಿಯಾಗಿ ಕೆಲಸ ಮಾಡುವುದೆಂದರೆ ಇಷ್ಟ. ಮೇಲಧಿಕಾರಿಯಾಗುವ ಎಲ್ಲಾ ಗುಣಗಳೂ ನಿಮ್ಮಲ್ಲಿವೆ. ಆದರೆ ಜನರೊಂದಿಗೆ ಹೆಚ್ಚು ಬೆರೆಯಲು ಇಷ್ಟಪಡದೆ, ಅಂತರ್ಮುಖಿಯಾಗಿರುವುದರಿಂದ ಕೆಲವೊಮ್ಮೆ ನಿಮ್ಮ ಮೇಲೆಯೇ ನಿಮಗೆ ಬೇಸರ ಬರಬಹುದು. ಮನಸ್ಸು ಖಿನ್ನವಾಗಿ ಯೋಚಿಸಬಹುದು. ಆದರೆ ಆನೆ ನಡೆದಿದ್ದೇ ಹಾದಿ ಎಂಬಂತೆ, ನಿಮ್ಮದೇ ಒಂದು ಹಾದಿಯನ್ನು ನಿರ್ಮಿಸಲು ನಿಮ್ಮ ಬಳಿ ಸಾಮರ್ಥ್ಯವಿದೆ.

ಏಪ್ರಿಲ್‌ ತಿಂಗಳಲ್ಲಿ ಹುಟ್ಟಿದೋರು ಹೀಗಿರ್ತಾರೆ ನೋಡಿ! ...