ಪ್ರೀತಿಯ ಬಗ್ಗೆ ಎಚ್ಚರ

ಏಪ್ರಿಲ್‌ನಲ್ಲಿ ಜನಿಸಿದ ವ್ಯಕ್ತಿಗಳು ಪ್ರೀತಿಯಲ್ಲಿ ಉನ್ನತ ಮಟ್ಟವನ್ನು ಹೊಂದಿರುತ್ತಾರೆ. ಅವರು ಪ್ರೀತಿಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಇವರು ಯಾರಲ್ಲಿ ಕಿರಿಕಿರಿ ಹಾಗೂ ಸ್ವಾರ್ಥಗುಣಗಳಿರುತ್ತವೆ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ತಮ್ಮ ಸ್ನೇಹಿತರಾಗಬೇಕು ಎಂದು ಅಂದುಕೊಂಡ ಜನರೊಂದಿಗೆ ಮಾತ್ರ ಬಹಳ ಹತ್ತಿರದ ವ್ಯಕ್ತಿಗಳಾಗಿ ಇರುತ್ತಾರೆ. ಇವರಲ್ಲಿ ಅತಿಯಾದ ಪ್ರಣಯಾತ್ಮಕ ಭಾವನೆ ಇರುವುದಿಲ್ಲ. ಆದರೆ ವಾಸ್ತವವಾಗಿ ಹೇಗಿರಬೇಕೋ ಹಾಗಿರುತ್ತಾರೆ. ಇವರನ್ನು ಸ್ನೇಹಿತರನ್ನಾಗಿ ಪಡೆದುಕೊಳ್ಳಲು ಅದೃಷ್ಟವನ್ನು ಹೊಂದಿರಬೇಕು.

ಉಳಿತಾಯದ ಸ್ವಭಾವ

ಇವರು ಹಣವನ್ನು ಖರ್ಚುಮಾಡುವುದು ಅಥವಾ ಅದರ ಉಳಿತಾಯದ ವಿಚಾರದಲ್ಲಿ ಅತ್ಯುತ್ತಮವಾದ ನಿಯಮವನ್ನು ಅನುಸರಿಸುತ್ತಾರೆ. ಅನವಶ್ಯಕ ಖರ್ಚುಗಳಿಗೆ ಮುಂದಾಗುವುದಿಲ್ಲ. ಅಗತ್ಯ ಹಾಗೂ ಅನಿವಾರ್ಯವಾದ ಸಂಗತಿಗಳಿಗೆ ಬೇಕಾದ ಹಾಗೆ ಹಣವನ್ನು ವ್ಯಯಿಸುವರು. ಇವರು ತಮ್ಮ ಉಳಿತಾಯ ಹಾಗೂ ಖರ್ಚಿನ ಮೇಲೆ ಒಂದು ಮಿತಿಯನ್ನು ಹೊಂದಿರುತ್ತಾರೆ. ಇದು ಅವರ ಎಲ್ಲಾ ಬಗೆಯ ಖರೀದಿಯ ಮೇಲೆ ಪ್ರಭಾವವನ್ನು ಬೀರುತ್ತದೆ. ಅಗತ್ಯ ಎಂದಾದಾಗ ಎಷ್ಟೇ ಹಣವ್ಯಯಿಸಿ ಆದರೂ ಖರ್ಚುಮಾಡುತ್ತಾರೆ.

ಹೋರಾಟಗಾರರು

ಇವರು ಬೇಕಾದದ್ದನ್ನು ಪಡೆಯಲು ಹಾಗೂ ತಮ್ಮ ಗುರಿಯನ್ನು ನೆರವೇರಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ಮಾಡುತ್ತಾರೆ. ಇವರು ತಮಗೆ ಅಗತ್ಯವಿಲ್ಲ ಎಂದುಕೊಂಡ ವಿಚಾರಗಳಿಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ಇತರರಿಗೆ ಅನುಕೂಲ ಆಗುವಂತೆಯೇ ತಮ್ಮ ನಡವಳಿಕೆಯನ್ನು ಬದಲಿಸಿಕೊಂಡು ಹೊಂದಾಣಿಕೆಯ ಜೀವನ ನಡೆಸುತ್ತಾರೆ. ಮುಕ್ತ ಮನೋಭಾವ ಹಾಗೂ ಪ್ರೀತಿಯಿಂದ ಜೀವನವನ್ನು ನಿರ್ವಹಿಸುತ್ತಾರೆ. ಇತರರನ್ನು ಹಾಗೂ ಅವರ ಜೀವನದ ಬಗ್ಗೆ ಮಾತನಾಡಿಕೊಳ್ಳುವುದಿಲ್ಲ. ತಮ್ಮ ಜೀವನ ಹಾಗೂ ನಡವಳಿಕೆಯ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ಜೊತೆಗೆ ತಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ. ಪರಸ್ಪರ ಸಂಬಂಧವನ್ನು ಇಟ್ಟುಕೊಳ್ಳುವುದರ ಬಗ್ಗೆ ಹೆಚ್ಚು ಗಮನ ನೀಡುವರು.

ನೋವು ಹಂಚಿಕೊಳ್ಳುವುದಿಲ್ಲ

ಏಪ್ರಿಲ್‌ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಸಮಯ, ಗೌಪ್ಯತೆ ಮತ್ತು ಭಾವನೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ವ್ಯಕ್ತಪಡಿಸುವುದಿಲ್ಲ. ಮನಸ್ಸಿಗೆ ನೋವು ಹಾಗೂ ಹೃದಯ ಮುರಿತದಿಂದ ಯಾವುದೇ ವಿಷಯವನ್ನು ವ್ಯಕ್ತಪಡಿಸುವುದಿಲ್ಲ. ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಜನರು ಇವರನ್ನು ಅಹಂಕಾರಿಗಳು, ಸೊಕ್ಕಿನ ವ್ಯಕ್ತಿಗಳು ಎಂದು ಸಹ ಭಾವಿಸುವರು. ಕೆಲವೊಂದು ವಿಷಯದಲ್ಲಿ ತಾವು ಹೇಳಿದಂತೆಯೇ ನಡೆಯಬೇಕು ಎನ್ನುವ ಹಠವನ್ನು ತೋರುವುದರಿಂದ ಮೊಂಡುತನವು ಪ್ರದರ್ಶನಗೊಳ್ಳುವುದು.

ತುಂಬಾನೇ ಸ್ಮಾರ್ಟ್

ಇವರು ತುಂಬಾ ಸ್ಮಾರ್ಟ್ ಜನರಾಗಿರುತ್ತಾರೆ. ಮೂರ್ಖ ಪ್ರಶ್ನೆಗಳನ್ನು ಕೇಳುವ ಜನರನ್ನು ಇವರು ಇಷ್ಟಪಡರು. ಸಣ್ಣ ಸಣ್ಣ ವಿಚಾರಗಳಿಗೆ ಬಹುಬೇಗ ಸಿಟ್ಟುಮಾಡುವರು. ಅದನ್ನು ಯಾವುದೇ ಹಿಂಜರಿಕೆ ಇಲ್ಲದೆ ವ್ಯಕ್ತಪಡಿಸುವರು. ಹಾಗಾಗಿ ಇವರ ಬಳಿ ಯಾವುದೇ ಸಮಸ್ಯೆ ಕೇಳುವ ಮೊದಲು ಯೋಚಿಸಿ ಹೋಗಿ. ವಿಷಯದ ಬಗ್ಗೆ ದೃಢತೆ ಇದ್ದರೆ ಮಾತ್ರ ಪ್ರಶ್ನೆಗಳನ್ನು ಕೇಳಿ ಎಂದು ಹೇಳುವರು.

ಕಷ್ಟವನ್ನು ಎದುರಿಸುತ್ತಾರೆ

ಇವರು ಬಹಳ ಸ್ವಯಂ ಪ್ರೇರಿತ ವ್ಯಕ್ತಿಗಳಾಗಿರುತ್ತಾರೆ. ಅತ್ಯಂತ ಶಕ್ತಿಯುತವಾದ ಮತ್ತು ಯಾವುದೇ ಕಷ್ಟವನ್ನು ಜಯಿಸಬಲ್ಲ ವ್ಯಕ್ತಿಗಳಾಗಿರುತ್ತಾರೆ. ಜೀವನವು ಸಂಪೂರ್ಣವಾಗಿ ಆಶ್ಚರ್ಯಕರವಾಗಿರುತ್ತದೆ. ಜೊತೆಗೆ ಜೀವನದಲ್ಲಿ ವೈಫಲ್ಯವೂ ಸಾಮಾನ್ಯವಾಗಿರುತ್ತದೆ ಎನ್ನುವುದನ್ನು ಅವರು ತಿಳಿದಿರುತ್ತಾರೆ. ವೈಫಲ್ಯವನ್ನು ಹೊಂದಲು ಇವರು ಬಿಡುವುದಿಲ್ಲ. ಬದಲಿಗೆ ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಜೀವನದಲ್ಲಿ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಲು ಅವರ ಸ್ವಯಂ ಪ್ರೇರಿತ ವರ್ತನೆಯೇ ಅವರಿಗೆ ಸಹಾಯ ಮಾಡುತ್ತದೆ.

ಶನಿದೇವರ ಎಂಟು ಹೆಂಡತಿಯರ ಕತೆ ನಿಮಗೆ ಗೊತ್ತೇ? ...

ನಾಯಕತ್ವ ಗುಣ

ಏನೇ ಆಗಿರಲಿ ಇವರು ಅರ್ಹವಾದ ವಿಷಯಗಳನ್ನು ಪಡೆದುಕೊಳ್ಳಲು ಹೆಚ್ಚು ಶ್ರಮಿಸುತ್ತಾರೆ. ಜೊತೆಗೆ ಜೀವನದಲ್ಲಿ ಬಯಸುವ ವಿಷಯಗಳಿಗೆ ಹೆಚ್ಚು ಸಮರ್ಪಿತರಾಗಿರುತ್ತಾರೆ. ಕೆಲಸ ಯಾವುದಾದರೂ ಚಿಂತಿಸುವುದಿಲ್ಲ. ಅವನ್ನು ನಿರ್ವಹಿಸುವಾಗ ಸಮರ್ಪಕ ರೀತಿಯಲ್ಲಿ ಮಾಡಿ ಮುಗಿಸುತ್ತಾರೆ. ಎಂತಹ ಪರಿಸ್ಥಿತಿ ಎದುರಾದರೂ ನಾಯಕತ್ವ ಗುಣಗಳ ಮೂಲಕ ನಿರ್ವಹಿಸುವರು. ಪ್ರಚಾರಗಳನ್ನು ಬಯಸುವ ಇವರು ಜನರ ಮೆಚ್ಚುಗೆಯನ್ನು ಆನಂದಿಸುವರು. ವಿನಾಶಕಾರಿ ಭಾವನಾತ್ಮಕ ಪ್ರಕೋಪಗಳಿಗೆ ಒಳಗಾಗದಂತೆಯೇ ಎಚ್ಚರ ವಹಿಸಿ, ತಮ್ಮ ಹೆಮ್ಮೆಯ ಪ್ರಗತಿಯ ರೂಪದಲ್ಲಿ ಬರಬಹುದು.

ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ! ...

ಅದೃಷ್ಟವಂತರು

ಇವರು ಬಹಳ ಅದೃಷ್ಟವಂತರು. ಆಗಾಗ ವಿಶೇಷ ಅದೃಷ್ಟಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಎಲ್ಲಿಗೆ ಹೋದರು ಅಲ್ಲಿ ಜಯ ಹಾಗೂ ಅದೃಷ್ಟವನ್ನು ಪಡೆದುಕೊಂಡೇ ಬರುವರು. ಹಾಗಾಗಿ ಆಗಸ್ಟ್ ಅಲ್ಲಿ ಜನಿಸಿದವರು ಹೆಚ್ಚು ಶಕ್ತಿವಂತರು ಹಾಗೂ ಪ್ರಖ್ಯಾತ ವ್ಯಕ್ತಿಗಳಾಗುತ್ತಾರೆ ಎಂದು ಹೇಳಲಾಗುವುದು. ಜೀವನದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿಗಳು ಹಾಗೂ ಅದೃಷ್ಟವನ್ನು ಹೊಂದಿದವರಾಗಿರುತ್ತಾರೆ. ಪ್ರಭಾವಶಾಲಿ ವ್ಯಕ್ತಿಗಳಾಗುವುದರ ಮೂಲಕ ಜೀವನದಲ್ಲಿ ಸ್ಫೂರ್ತಿದಾಯಕ ವ್ಯಕ್ತಿಗಳಾಗಿರುತ್ತಾರೆ.

ಈ ರಾಶಿಯವರ ಜೊತೆ ಪೋಲಿತನದಲ್ಲಿ ಯೂರಿಗೂ ಕಾಂಪೀಟ್ ಮಾಡಲಾಗೋಲ್ಲ! ...

ಸಹನೆಶೀಲರು

ಉತ್ತಮ ಸಹನೆಯ ಗುಣವನ್ನು ಹೊಂದಿರುತ್ತಾರೆ. ಇವರ ಸಹನಾ ಶಕ್ತಿಯು ಸಂಬಂಧಗಳ ವಿಚಾರದಲ್ಲಿ ಅತ್ಯುತ್ತಮವಾದ ಪಾತ್ರ ನಿರ್ವಹಿಸುತ್ತದೆ. ಕೆಲವು ವಿಚಾರದಲ್ಲಿ ಕೋಪ ಮತ್ತು ಉದ್ವೇಗ ಉಂಟಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಸಹನೆಯಿಂದ ಅದನ್ನು ಸುಲಭವಾಗಿ ನಿರ್ವಹಿಸುವರು. ಇವರ ನಡವಳಿಕೆಯು ಆಕ್ರಮಣಕಾರಿ ರೀತಿಯಲ್ಲಿ ತೋರುವುದು. ಆದರೆ ಉತ್ತಮ ಭಾವನೆಗಳು ಅದರಲ್ಲಿ ಅಡಗಿರುತ್ತವೆ.