Name Astrology: ಈ ಹೆಸರಿನ ಹುಡುಗರು ಪತ್ನಿಯನ್ನು ಪ್ರೀತಿಯ ಕಡಲಲ್ಲೇ ತೇಲಿಸುತ್ತಾರೆ!
ಈ ಐದು ಲೆಟರ್‌ನಿಂದ ಹೆಸರು ಆರಂಭವಾಗುವ ಹುಡುಗರು ತಮ್ಮ ಸಂಗಾತಿಗೆ ಅತ್ಯುತ್ತಮ ಪತಿ ಎನಿಸಿಕೊಳ್ಳುತ್ತಾರೆ.
K ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು
K ಅಕ್ಷರದಿಂದ ಪ್ರಾರಂಭವಾಗುವ ಹೆಸರು
ಕೆಯಿಂದ ಹೆಸರು ಪ್ರಾರಂಭವಾಗುವ ಹುಡುಗರು ಅತ್ಯಂತ ನಿಷ್ಠಾವಂತ ಸಹಚರರು. ತಮ್ಮ ಸಂಗಾತಿಯನ್ನು ಯಾವಾಗಲೂ ಬೆಂಬಲಿಸುತ್ತಾರೆ. ಅವರ ಪರ ನಿಂತು ಇಡೀ ಜಗತ್ತಿನೊಂದಿಗೆ ಬೇಕಾದರೂ ಹೋರಾಡಲು ಸಿದ್ಧರಿರುತ್ತಾರೆ.
A ಅಕ್ಷರದಿಂದ ಪ್ರಾರಂಭವಾಗುವ ಹೆಸರು
ಎ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ. ಅವರು ತಮ್ಮ ಜೀವನವನ್ನು ಪತ್ನಿಯ ಕೈಗಿಡುತ್ತಾರೆ. ಜೊತೆಗೆ ಆಕೆಯ ಬೇಕುಬೇಡಗಳೆಲ್ಲವನ್ನೂ ನೋಡಿಕೊಳ್ಳುತ್ತಾರೆ. ಅವರು ತಮ್ಮ ಹೆಂಡತಿಯ ಸಂತೋಷಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ.
P ಅಕ್ಷರದಿಂದ ಪ್ರಾರಂಭವಾಗುವ ಹೆಸರು
P ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಮಾತ್ರವಲ್ಲ, ಅವರ ಮುಖದಲ್ಲಿ ಸದಾ ನಗುವನ್ನು ಹೊಂದಿರುತ್ತಾರೆ. ಪತ್ನಿಯ ಮುಖದಲ್ಲೂ ಈ ನಗು ನೋಡಲು ಬಯಸುತ್ತಾರೆ. ಈ ಹುಡುಗರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿರುತ್ತದೆ. ಅವರ ಜೊತೆ ನಗುನಗುತ್ತಾ ಆಟವಾಡುತ್ತಾ ಜೀವನ ಸಾಗುವುದೇ ತಿಳಿಯದು.
R ಅಕ್ಷರದಿಂದ ಪ್ರಾರಂಭವಾಗುವ ಹೆಸರು
R ನಿಂದ ಪ್ರಾರಂಭವಾಗುವ ಹುಡುಗರಲ್ಲಿ ಕೋಪ ಜಾಸ್ತಿ. ಆದರೆ ಅವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಹೀಗಾಗಿ ಅವರ ಸಣ್ಣ ಪುಟ್ಟ ತಪ್ಪನ್ನು ಬಿಟ್ಟು ಹಾಕಿ ಈ ಹುಡುಗನ ಸಂತೋಷ ನೋಡಿಕೊಳ್ಳಿ. ಆತ ಅದರ 10 ಪಟ್ಟು ಸಂತೋಷವನ್ನು ಪತ್ನಿಗೆ ಮರಳಿಸುತ್ತಾನೆ.
letters
ವಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು
V ಯಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಸಂಗಾತಿಯನ್ನು ಪಡೆಯಲು ಯಾವುದೇ ಹಂತಕ್ಕೆ ಹೋಗುತ್ತಾರೆ. ಈ ಹುಡುಗರದು ಸಾಮಾನ್ಯವಾಗಿ ಲವ್ ಮ್ಯಾರೇಜ್ ಆಗುತ್ತದೆ. ಅವರು ತುಂಬಾ ರೋಮ್ಯಾಂಟಿಕ್ ಮತ್ತು ಪಾಲುದಾರರ ಭಾವನೆಗಳನ್ನು ಹೆಚ್ಚು ಕಾಳಜಿ ವಹಿಸುತ್ತಾರೆ.