Gemology: ಸಿಂಹ, ಮೇಷ ರಾಶಿಗೆ ಮಂಗಳಕರ ಮಾಣಿಕ್ಯ, ಆದರೆ ಈ ರಾಶಿಯವರು ಮಾತ್ರ ಧರಿಸಲೇಬಾರದು!
ಮಾಣಿಕ್ಯವನ್ನು ಧರಿಸುವುದರಿಂದ ಕೆಟ್ಟ ಯೋಚನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ರತ್ನ ಶಾಸ್ತ್ರದಲ್ಲಿ ಮಾಣಿಕ್ಯಕ್ಕೆ ವಿಶೇಷ ಮಹತ್ವವಿದೆ. ಆದರೆ, ಎಲ್ಲ ರಾಶಿಯವರಿಗೂ ಇದು ಆಗಿಬರೋಲ್ಲ.
ಮಾಣಿಕ್ಯ(Ruby stone)ವನ್ನು ಧರಿಸಿದವನ ವ್ಯಕ್ತಿತ್ವವು ಸೂರ್ಯನಂತೆ ಹೊಳೆಯುತ್ತದೆ ಹಾಗೂ ಆತನಿಗೆ ಎಲ್ಲದರಲ್ಲೂ ಯಶ ಸಿಗುತ್ತದೆ ಎನ್ನುತ್ತದೆ ರತ್ನ ಶಾಸ್ತ್ರ. ಮಾಣಿಕ್ಯವು ವ್ಯಕ್ತಿಯ ಕೆಟ್ಟ ಯೋಚನೆಗಳನ್ನು ಕಟ್ಟಿ ಹಾಕುವಲ್ಲಿ ಸಫಲವಾಗುತ್ತದೆ. ಆದರೆ, ಕೆಲ ವೃತ್ತಿ(profession)ಯಲ್ಲಿರುವವರು ಹಾಗೂ ಕೆಲ ರಾಶಿ(zodiac signs)ಯವರು ಮಾಣಿಕ್ಯವನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಹಾಗಾದರೆ ಯಾರು ಮಾಣಿಕ್ಯದ ಸಂಪೂರ್ಣ ಫಲಗಳನ್ನು ಪಡೆಯಬಹುದು, ಯಾರಿಗೆ ಇದು ಒಳಿತು ಮಾಡುವುದಿಲ್ಲ ಎಂಬ ಬಗ್ಗೆ ನೋಡೋಣ.
ರತ್ನಗಳಿಗೆ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ರತ್ನ ಶಾಸ್ತ್ರದಲ್ಲಿ ಮಾಣಿಕ್ಯವನ್ನು ಸೂರ್ಯ(Sun)ನ ರತ್ನ ಎಂದು ಪರಿಗಣಿಸಲಾಗುತ್ತದೆ. ಅದೇ ಕಾರಣಕ್ಕೆ ಮಾಣಿಕ್ಯವು ಸೂರ್ಯನ ವಿಷಯದಲ್ಲಿ ಸಾಕಷ್ಟು ಶುಭ ಫಲಗಳನ್ನು ನೀಡುತ್ತದೆ. ಬಹಳ ಶಕ್ತಿಶಾಲಿಯಾದ ಮಾಣಿಕ್ಯವು ಸೂರ್ಯನಂತೆ ಹೊಳೆಯುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ ಹಾಗೂ ಸಮಾಜದಲ್ಲಿ ಆತನ ಗೌರವ(respect) ಹೆಚ್ಚುತ್ತದೆ. ಮಾಣಿಕ್ಯವು ಕಣ್ಣುಗಳು, ಮೂಳೆಗಳು, ಹೃದಯ ಮತ್ತು ಹೆಸರು-ಪ್ರತಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾಣಿಕ್ಯವು ಅನೇಕ ಬಣ್ಣಗಳಲ್ಲ ದೊರೆಯುತ್ತದೆ. ಆದರೆ ಕೆಂಪು ಮಾಣಿಕ್ಯವು ಸಾಕಷ್ಟು ಪ್ರಭಾವಶಾಲಿಯಾಗಿದೆ ಮತ್ತು ತ್ವರಿತ ಪರಿಣಾಮವನ್ನು ತೋರಿಸುತ್ತದೆ
ಯಾವ ರಾಶಿಯವರು ಮಾಣಿಕ್ಯ ಧರಿಸಬಹುದು?
ಸಿಂಹ, ಮೇಷ, ವೃಶ್ಚಿಕ, ಕಟಕ(Cancer) ಹಾಗೂ ಧನು(Sagittarius) ರಾಶಿಯವರಿಗೆ ಮಾಣಿಕ್ಯ ಧರಿಸಲು ಸಲಹೆ ನೀಡಲಾಗುತ್ತದೆ. ಇದರಿಂದ ಅವರಲ್ಲಿ ಕೆಟ್ಟ ಯೋಚನೆ(wrong thought)ಗಳು ಬರದಂತೆ ತಡೆಯಬಹುದು ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು. ಸರ್ಕಾರಿ ಉದ್ಯೋಗದಲ್ಲಿರುವವರು, ರಾಜಕಾರಣಿಗಳು ಹಾಗೂ ನಾಯಕತ್ವ ಹುದ್ದೆಯಲ್ಲಿರುವವರಿಗೆ ಮಾಣಿಕ್ಯ ಚೆನ್ನಾಗಿ ಹೊಂದುತ್ತದೆ.
ಶುಕ್ರ ಗೋಚಾರದಿಂದ ಖುಲಾಯಿಸಲಿದೆ ಮೂರು ರಾಶಿಗಳ ಅದೃಷ್ಟ
ಮಾಣಿಕ್ಯ ಧಾರಣೆಯ ಲಾಭಗಳು
ಮಾಣಿಕ್ಯ ಧಾರಣೆಯಿಂದ ವ್ಯಕ್ತಿಯ ಸೃಜನಶೀಲತೆ(creativity) ಹೆಚ್ಚುತ್ತದೆ.
ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚುವ ಕಾರಣದಿಂದ ನಾಯಕತ್ವ ಸಾಮರ್ಥ್ಯ(leadership ability) ಹೆಚ್ಚುತ್ತದೆ.
ನಾಯಕತ್ವ ಹೆಚ್ಚಿದಂತೆಲ್ಲ ಆತ ಬೆಳೆಯುತ್ತಾ ಹೋಗುತ್ತಾನೆ. ಸಮಾಜದಲ್ಲಿ ಆತನ ಗೌರವ ಹೆಚ್ಚುತ್ತದೆ.
ಮಾಣಿಕ್ಯ ಧರಿಸುವುದರಿಂದ ದೃಷ್ಟಿ ಚೆನ್ನಾಗಿರುತ್ತದೆ. ಕಣ್ಣಿನ ಸಮಸ್ಯೆ ಬರುವುದನ್ನು ತಡೆಯಬಹುದು.
ನಿಮ್ಮ ರಾಶಿ ಹಾಗೂ ವೃತ್ತಿಗೆ ಆಗಿ ಬರುವ ಮಾಣಿಕ್ಯ ಧಾರಣೆಯಿಂದ ಮನೆಯಲ್ಲಿ ತಂದೆ ಹಾಗೂ ಇತರೆ ಕುಟುಂಬ ಸದಸ್ಯರ ಜೊತೆ ಸಂಬಂಧ(Relationship) ಸುಧಾರಿಸುತ್ತದೆ. ಕೌಟುಂಬಿಕ ಸಮನ್ವಯದ ಕೊರತೆ ಇರುವವರು ಮಾಣಿಕ್ಯ ಧರಿಸಬೇಕು.
ಮಾಣಿಕ್ಯ ಧಾರಣೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಕೆಟ್ಟ ಯೋಚನೆಗಳು ಕಡಿಮೆಯಾಗುವ ಕಾರಣ ಒಳ್ಳೆಯ ಯೋಚನೆಗಳು ಹೆಚ್ಚುತ್ತವೆ. ಎಲ್ಲರ ಒಳಿತಿನ ಬಗ್ಗೆ ವ್ಯಕ್ತಿ ಯೋಚಿಸತೊಡಗುತ್ತಾನೆ.
ಮೂಳೆ ಸಮಸ್ಯೆ ಇರುವವರು ಮಾಣಿಕ್ಯ ಧರಿಸಿದರೆ ಅವರ ಮೂಳೆಗಳು ಬಲಗೊಳ್ಳುತ್ತವೆ.
Traits Of Scorpio: ವೃಶ್ಚಿಕ ರಾಶಿಯ ಪುರುಷರ ಸ್ವಭಾವಗಳೇನೇನು ಗೊತ್ತಾ?
ಮಾಣಿಕ್ಯವನ್ನು ಯಾರು ಧರಿಸಬಾರದು?
ಕನ್ಯಾ(Virgo), ಮಕರ, ಮಿಥುನ, ಕನ್ಯಾ, ಕುಂಭ(Aquarius) ರಾಶಿಯವರು ಮಾಣಿಕ್ಯ ಧರಿಸಬಾರದು ಎನ್ನುತ್ತಾರೆ ಜ್ಯೋತಿಷಿಗಳು. ಏಕೆಂದರೆ ಈ ರಾಶಿಯ ಅಧಿಪತಿ ಗ್ರಹಗಳಿಗೂ ಸೂರ್ಯನಿಗೂ ಶತ್ರುತ್ವ ಇರುವುದರಿಂದ ಮಾಣಿಕ್ಯ ಧಾರಣೆ ಅಶುಭ ಫಲಗಳನ್ನು ಈ ರಾಶಿಯವರಿಗೆ ತರಲಿದೆ.
ಅಷ್ಟೇ ಅಲ್ಲ, ಶನಿ(Saturn)ಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿರುವವರು ಅಂದರೆ, ಕಬ್ಬಿಣ, ವಾಹನಗಳು, ಎಣ್ಣೆ, ಕಲ್ಲಿದ್ದಲು ಮುಂತಾದ ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿರುವವರು ಮಾಣಿಕ್ಯ ಧರಿಸಲೇಬಾರದು.
ಮಾಣಿಕ್ಯ ಧರಿಸುವುದರ ಅಡ್ಡ ಪರಿಣಾಮಗಳು(Side effects)
ಗೊತ್ತಿದ್ದೋ ಗೊತ್ತಿಲ್ಲದೆಯೇ ಸಿಂಥೆಟಿಕ್ ಅಥವಾ ಡೂಪ್ಲಿಕೇಟ್ ರೂಬಿ ಧರಿಸಿದರಾದರೆ ಅದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಹಾನಿಯಾಗಲಿದೆ. ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ. ಗೌರವ ಕುಂದುತ್ತದೆ. ಅವಮಾನ, ಅಪವಾದಗಳು ಹೆಚ್ಚಾಗುತ್ತವೆ. ಕಚೇರಿಯಲ್ಲಿ ಹಿನ್ನಡೆ ಅನುಭವಿಸುವಿರಿ. ಹಾಗಾಗಿ, ಮಾಣಿಕ್ಯ ಆರಿಸುವಾಗ ಅದು ಒರಿಜಿನಲ್ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.