ನೆನಪಿಡಿ, ಈ 6 ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು
ಶ್ರಾವಣ ಮಾಸವು ಶಿವನನ್ನು ಆರಾಧಿಸಲು ಪ್ರಶಸ್ತವಾದ ಕಾಲವಾಗಿದೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹವನ್ನು ಪಡೆಯಲು ವ್ರತೋಪವಾಸಗಳನ್ನು ಅರ್ಚನೆ ಮತ್ತು ಅನುಷ್ಟಾನಗಳನ್ನು ಮಾಡುತ್ತಾರೆ. ಭಕ್ತಿ ಮತ್ತು ಶ್ರದ್ಧೆಯಿಂದ ಶಿವಲಿಂಗವನ್ನು ಪೂಜಿಸುವುದರಿಂದ ಶಿವ ಕೃಪೆಗೆ ಪಾತ್ರರಾಗಬಹುದಾಗಿದೆ. ಬಿಲ್ವ ಪತ್ರೆ ಮತ್ತು ಅಕ್ಷತೆಗಳು ಶಿವನಿಗೆ ಪ್ರಿಯವಾದ ವಸ್ತುಗಳು. ಹಾಗೆಯೇ ಕೆಲವು ವಸ್ತುಗಳು ಶಿವನ ಪೂಜೆಗೆ ಸಲ್ಲವುದಿಲ್ಲ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ.
ಹಬ್ಬಗಳ ಮಾಸ ಶ್ರಾವಣ. ಶುಭಕಾರ್ಯಗಳನ್ನು ನೇರವೇರಿಸಲು ಇದು ಪ್ರಶಸ್ತವಾದ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಮಹಾದೇವನನ್ನು ಆರಾಧಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಲಾಹಲವನ್ನು ಕುಡಿದು ನೀಲಕಂಠನಾಗಿ ಜಗತ್ತಿನ ನಾಶವನ್ನು ತಡೆದದ್ದು ಇದೆ ಶ್ರಾವಣ ಮಾಸದಲ್ಲಿ. ಹಾಗಾಗಿ ಶ್ರಾವಣ ಮಾಸವು ಶಿವನ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಕಾಲವೆಂದೇ ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಶಿವಲಿಂಗವನ್ನು ಪೂಜಿಸುವುದು ಅತ್ಯಂತ ಮಹತ್ವದ್ದಾಗಿದೆ. ಶಿವ ಲಿಂಗವನ್ನು ಆರಾಧಿಸುವ ಮೂಲಕ ಪರಶಿವನ ಅನುಗ್ರಹವನ್ನು ಪಡೆಯಬಹುದಾಗಿದೆ. ಶಿವ ಲಿಂಗವನ್ನು ಪೂಜಿಸುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶಿವಪುರಾಣದಲ್ಲಿ ಉಲ್ಲೇಖಿಸಿದಂತೆ ಶಿವಲಿಂಗಕ್ಕೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಅಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಶಿವನಿಗೆ ಪ್ರಿಯವಾದ ವಸ್ತುಗಳು ಹಲವು. ಆದರೆ, ಕೆಲವು ವಸ್ತುಗಳು ಶಿವನ ಪೂಜೆಗೆ ನಿಷಿದ್ಧ.
ಇದನ್ನು ಓದಿ: ಶ್ರಾವಣದ ಮಾಸದಲ್ಲಿ ನೆಡುವ ಈ ಐದು ಸಸ್ಯಗಳಿಂದ ಬರಲಿದೆ ಅದೃಷ್ಟ..!
ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹವನ್ನು ಪಡೆಯಲು ಅನೇಕ ವ್ರತ ಮತ್ತು ಉಪವಾಸಗಳನ್ನು ಮಾಡುತ್ತಾರೆ. ಶಿವ ಪುರಾಣ, ಪರಶಿವನಿಗೆ ಸಂಬಂಧಿಸಿದ ಕಥೆ, ಹರಿಕಥೆಗಳನ್ನು ಶ್ರವಣ ಮಾಡುತ್ತಾರೆ. ಅಷ್ಟೇ ಅಲ್ಲದೆ ಶಿವಲಿಂಗಕ್ಕೆ ಬಿಲ್ವ ಪತ್ರೆಗಳನ್ನು , ಪುಷ್ಪಗಳನ್ನು ಮತ್ತು ನೈವೇದ್ಯಗಳನ್ನು ಅರ್ಪಿಸುತ್ತಾರೆ. ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬಿಲ್ವ ಪತ್ರೆ, ಶ್ರೀಗಂಧ, ಅಕ್ಷತೆಗಳನ್ನು ಅರ್ಪಿಸುವುದರಿಂದ ಶಿವನ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಶಿವಲಿಂಗಕ್ಕೆ ಯಾವ್ಯಾವ ವಸ್ತುಗಳನ್ನು ಅರ್ಪಿಸುವುದು ಶುಭವಲ್ಲ ಎಂಬುದನ್ನು ತಿಳಿಯೋಣ.
ತುಳಸಿ ಎಲೆ
ತುಳಸಿ ವಿಷ್ಣುವಿಗೆ ಪ್ರಿಯವಾದದ್ದು, ಶಿವನಿಗೆ ಬಿಲ್ವ ಪತ್ರೆ ಶ್ರೇಷ್ಠವಾದದ್ದು. ವಿದ್ವಾಂಸರ ಪ್ರಕಾರ ತುಳಸಿಯನ್ನು ಶಿವಲಿಂಗಕ್ಕೆ ಅರ್ಪಿಸುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಜಲಂಧರನೆಂಬ ಅಸುರನ ಪತ್ನಿ ಬೃಂದಾಳ ಕಣ್ಣೀರಿನಿಂದ ಉತ್ಪತ್ತಿಯಾದದ್ದೆಂದು ಹೇಳಲಾಗುತ್ತದೆ. ಆಕೆಯನ್ನು ವಿಷ್ಣುಪತ್ನಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಶಿವಲಿಂಗಕ್ಕೆ ತುಳಸಿಯನ್ನು ಅರ್ಪಿಸುವುದು ನಿಷಿದ್ಧವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಭಯಾನಕ ಸ್ವಪ್ನಗಳು ಬಿದ್ದರೆ, ಬೀಳುತ್ತಿದ್ದರೆ ಹೀಗೆ ಮಾಡಿ!!
ಅರಿಶಿಣ
ಅರಿಶಿಣವನ್ನು ಶುಭ ಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ಕುಂಕುಮದ ಜೊತೆ ಅರಿಶಿಣವನ್ನು ಎಲ್ಲ ಪೂಜೆ, ಅರ್ಚನೆಗಳಲ್ಲಿ, ದೇವತಾ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಶಿವಲಿಂಗಕ್ಕೆ ಅರಿಶಿಣವನ್ನು ಅರ್ಪಿಸಬಾರದೆಂದು ಹೇಳಲಾಗುತ್ತದೆ. ಶಾಸ್ತ್ರಗಳು ಉಲ್ಲೇಖಿಸುವಂತೆ ಶಿವಲಿಂಗವು ಪೌರುಷವನ್ನು ಸೂಚಿಸುತ್ತದೆ. ಅದೇ ಅರಿಶಿಣ ಒಂದು ಸೌಂದರ್ಯ ವರ್ಧಕ ವಸ್ತುವಾಗಿದೆ. ಅಷ್ಟೇ ಅಲ್ಲದೆ ಪುರಾಣಗಳ ಪ್ರಕಾರ ಶ್ರೀ ಮಹಾವಿಷ್ಣು ಮತ್ತು ಸೌಭಾಗ್ಯದ ಸಂಕೇತವು ಅರಿಶಿಣದೊಂದಿಗೆ ಸಂಬಂಧಿಸಿದೆ. ಕೆಲವು ನಂಬಿಕೆಗಳ ಪ್ರಕಾರ ಶಿವಲಿಂಗಕ್ಕೆ ಅರಿಶಿಣವನ್ನು ಅರ್ಪಿಸುವುದರಿಂದ ಚಂದ್ರ ನೀಚ ಸ್ಥಿತಿಯನ್ನು ತಲುಪುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ಶಿವಲಿಂಗಕ್ಕೆ ಅರಿಶಿಣವನ್ನು ಅರ್ಪಿಸಬಾರದೆಂದು ಹೇಳಲಾಗುತ್ತದೆ.
ಕುಂಕುಮ
ಸೌಭಾಗ್ಯದ ಸಂಕೇತ ಕುಂಕುಮ. ಪತಿಯ ಶ್ರೇಯೊಭಿವೃದ್ಧಿಗೆ ಪತ್ನಿ ಹಣೆಗೆ ಕುಂಕುಮವಿಡುತ್ತಾಳೆ. ಶಿವ ಪುರಾಣದಲ್ಲಿ ಉಲ್ಲೇಖಿಸಿದಂತೆ ಶಿವ ಲಿಂಗಕ್ಕೆ ಕುಂಕುಮವನ್ನು ಅರ್ಪಿಸುವುದು ಒಳ್ಳೆಯದಲ್ಲ. ಶಿವನನ್ನು ಲಯಕರ್ತನೆಂದು ಕರೆಯಲಾಗುತ್ತದೆ. ವಿನಾಶ ಮಾಡುವ ಕಾರ್ಯ ಶಿವನದ್ದು ಹಾಗಾಗಿ ಸೌಭಾಗ್ಯ ಸ್ಥಿರ ಗೊಳಿಸುವ ಕುಂಕುಮವನ್ನು ಅರ್ಪಿಸುವುದಿಲ್ಲವೆಂದು ಹೇಳಲಾಗುತ್ತದೆ.
ಕೆಂಪು ಹೂ
ಕೆಂಪು ಬಣ್ಣದ ಹೂವು ಮತ್ತು ಕಣಗಿಲೆ ಹೂವನ್ನು ಶಿವಲಿಂಗಕ್ಕೆ ಅರ್ಪಿಸುವುದು ಸೂಕ್ಯವಲ್ಲ. ಪುರಾಣಗಳ ಪ್ರಕಾರ ಕಣಗಿಲೆ ಪುಷ್ಪವು ಸುಳ್ಳು ಹೇಳಿದ್ದ ಕಾರಣಕ್ಕಾಗಿ ಶಿವ ಪೂಜೆಗೆ ಸಲ್ಲದ್ದು ಎಂದು ಶಿವನಿಂದ ಶಾಪಗ್ರಸ್ತವಾಗಿತ್ತು. ಹಾಗಾಗಿ ಕಣಗಿಲೆ ಪುಷ್ಪವನ್ನು ಶಿವನಿಗೆ ಅರ್ಪಿಸುವುದಿಲ್ಲ.
ಇದನ್ನು ಓದಿ: ಶನಿ ದೇವನ ಕೃಪೆ: ಈ ರಾಶಿ ಹುಡುಗಿಯರು ಸ್ವಾಭಿಮಾನಿಗಳು... ನಿಮ್ಮ ಹುಡುಗಿ ಹೇಗೆ?
ತೆಂಗಿನಕಾಯಿ
ತೆಂಗಿನ ಕಾಯಿಯನ್ನು ಲಕ್ಷ್ಮೀಯ ಪ್ರತೀಕವೆಂದು ನಂಬಲಾಗಿದೆ. ಹಾಗಾಗಿ ಇದು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಇದೇ ಕಾರಣಕ್ಕೆ ಶಿವಲಿಂಗದ ಮೇಲೆ ತೆಂಗಿನ ಕಾಯಿಯನ್ನು ಅರ್ಪಿಸಬಾರದೆಂದು ಹೇಳಲಾಗುತ್ತದೆ.
ಎಳ್ಳು
ಪುರಾಣಗಳ ಪ್ರಕಾರ ಎಳ್ಳು ಮೊದಲು ಉತ್ಪತ್ತಿಯಾದದ್ದು ಮಹಾವಿಷ್ಣುವಿನ ಕೊಳಕಿನಿಂದ ಆದದ್ದೆಂದು ಹೇಳಲಾಗುತ್ತದೆ. ಹಾಗಾಗಿ ಇದನ್ನು ಶಿವಲಿಂಗಕ್ಕೆ ಅರ್ಪಿಸಬಾರದೆಂದು ಹೇಳಲಾಗುತ್ತದೆ.