Valentine Day 2023: ಈ ಉಡುಗೊರೆಗಳನ್ನು ನೀಡಬೇಡಿ, ಸಂಬಂಧದಲ್ಲಿ ಬಿರುಕು ಉಂಟಾಗಬಹುದು!
ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ಪ್ರೇಮಿಗಳ ದಿನದಂದು ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ, ಈ ಉಡುಗೊರೆಯ ಆಯ್ಕೆ ತಪ್ಪಾದರೆ ಸಂಬಂಧವೇ ಹಾಳಾಗುತ್ತದೆ. ಇಂಥ ಉಡುಗೊರೆಗಳನ್ನು ಪ್ರೇಮಿಗೆ ನೀಡಬೇಡಿ..
ಫೆಬ್ರವರಿ ಪ್ರೀತಿಯ ಜೋಡಿಗಳಿಗೆ ತುಂಬಾ ವಿಶೇಷವಾಗಿದೆ. ಇದು ಪ್ರೀತಿಗೆ ಮೀಸಲಾದ ತಿಂಗಳು. ಈ ತಿಂಗಳ 14ನೇ ತಾರೀಖು ಅಂದರೆ ಪ್ರೇಮಿಗಳ ದಿನ ಬಹಳ ಮುಖ್ಯ. ಪ್ರೇಮಿಗಳ ದಿನವು ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ನಡೆಯುವ ವ್ಯಾಲೆಂಟೈನ್ಸ್ ವೀಕ್‌ನೊಂದಿಗೆ ಪ್ರಾರಂಭವಾಗುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸುವ ಮತ್ತು ಪ್ರಪೋಸ್ ಮಾಡುವ ಪ್ರೇಮಿಗಳು ಈ ವಾರಕ್ಕಾಗಿ ಕುತೂಹಲದಿಂದ ಕಾಯುತ್ತಾರೆ. ಈ ದಿನದಂದು, ಜನರು ತಮ್ಮ ಪ್ರೇಮಿ-ಗೆಳತಿಯರಿಗೆ ವಿಶೇಷ ಭಾವನೆ ಮೂಡಿಸಲು ಒಂದಕ್ಕಿಂತ ಹೆಚ್ಚು ಉಡುಗೊರೆಗಳನ್ನು ನೀಡುತ್ತಾರೆ. ಆದಾಗ್ಯೂ, ಕೆಲವು ಉಡುಗೊರೆಗಳು ಸಂತೋಷ ತರುವುದಕ್ಕಿಂತ ಹೆಚ್ಚಾಗಿ ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಪ್ರೇಮಿಗಳ ದಿನದಂದು ಸಂಗಾತಿಗೆ ಯಾವ ರೀತಿಯ ಉಡುಗೊರೆಗಳನ್ನು ನೀಡಬಾರದು ಎಂದು ತಿಳಿಯೋಣ.
ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡಬೇಡಿ
ಕಪ್ಪು ಬಟ್ಟೆ(Black cloths)
ಈ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಲು ನೀವು ಯೋಚಿಸುತ್ತಿದ್ದರೆ, ಬಣ್ಣಗಳ ಆಯ್ಕೆಗೆ ವಿಶೇಷ ಗಮನ ಕೊಡಿ. ಅಪ್ಪಿತಪ್ಪಿಯೂ ಅವರಿಗೆ ಕಪ್ಪು ಬಟ್ಟೆ ಖರೀದಿಸಬೇಡಿ. ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ತಪ್ಪಾಗಿಯೂ ಸಂಗಾತಿಗೆ ಕಪ್ಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಾರದು. ಕಪ್ಪು ಬಣ್ಣವು ಜೀವನದಲ್ಲಿ ತೊಂದರೆಗಳನ್ನು ತರುತ್ತದೆ.
ಕರ್ಚೀಫ್ ಮತ್ತು ಪೆನ್(Curchief and pen)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರವಸ್ತ್ರ ಮತ್ತು ಪೆನ್ನುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಬೇಕು. ಇದು ಸ್ವೀಕರಿಸುವವರ ಮತ್ತು ನೀಡುವವರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಕೆಲಸಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಉಡುಗೊರೆಯಾಗಿ ನೀಡುವುದರಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು ಎಂದು ನಂಬಲಾಗಿದೆ. ಇದರೊಂದಿಗೆ ಸಂಬಂಧಗಳಲ್ಲಿಯೂ ಕಹಿ ಬರಲಾರಂಭಿಸುತ್ತದೆ.
ಪ್ರೇಮಿಗಳ ದಿನದ ಮರುದಿನವೇ ಶುಕ್ರ ಗೋಚಾರ; ಪ್ರೀತಿಯ ಗ್ರಹದ ರಾಶಿ ಬದಲಾವಣೆ ಯಾರಿಗೆಲ್ಲ ಲಾಭ?
ಶೂಗಳು(Shoes)
ಪ್ರೇಮಿಗಳ ದಿನದಂದು ತಪ್ಪಾಗಿಯೂ ನಿಮ್ಮ ಸಂಗಾತಿಗೆ ಶೂಗಳನ್ನು ಉಡುಗೊರೆಯಾಗಿ ನೀಡಬೇಡಿ. ಶೂಗಳನ್ನು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪ್ರೇಮಿ ಅಥವಾ ಗೆಳತಿಗೆ ಶೂಗಳನ್ನು ಉಡುಗೊರೆಯಾಗಿ ನೀಡುವ ಮೂಲಕ, ನೀವು ಪ್ರತ್ಯೇಕತೆಯನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ಶೂಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಿ.
ಕೈ ಗಡಿಯಾರ(Watches)
ಸಾಮಾನ್ಯವಾಗಿ ಜನರು ಪರಸ್ಪರ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಆದರೆ ಜ್ಯೋತಿಷ್ಯದಲ್ಲಿ ಇದನ್ನು ಉತ್ತಮ ಉಡುಗೊರೆಯಾಗಿ ಪರಿಗಣಿಸಲಾಗುವುದಿಲ್ಲ. ನೀವು ಯಾರಿಗೆ ಗಡಿಯಾರವನ್ನು ಉಡುಗೊರೆಯಾಗಿ ನೀಡುತ್ತೀರೋ ಅವರ ಪ್ರಗತಿಗೆ ಅಡ್ಡಿಯಾಗಬಹುದು ಎಂದು ನಂಬಲಾಗಿದೆ. ಅದಕ್ಕಾಗಿಯೇ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಗಡಿಯಾರವನ್ನು ನೀಡುವುದನ್ನು ತಪ್ಪಿಸಿ.
ಸುಗಂಧ ದ್ರವ್ಯ(Perfumes)
ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಸುಗಂಧ ದ್ರವ್ಯ, ವೈನ್ ಅಥವಾ ಜ್ಯೂಸ್ ಅನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಿ. ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ದಂಪತಿಗಳ ನಡುವಿನ ಸಂಬಂಧವು ಕಡಿಮೆ ಸಮಯದಲ್ಲಿ ಹದಗೆಡಲು ಪ್ರಾರಂಭಿಸುತ್ತದೆ ಮತ್ತು ಸಂಬಂಧದಲ್ಲಿ ಅಂತರ ಹೆಚ್ಚಾಗಲು ಪ್ರಾರಂಭವಾಗುತ್ತದೆ.
Valentine's day 2023: ಈ 4 ರಾಶಿಯವರು ಪ್ರೀತಿ ಪಡೆಯಲು ಯಾವ ಮಟ್ಟಕ್ಕಾದರೂ ಹೋಗಬಲ್ಲರು!
ಇವಿಷ್ಟೇ ಅಲ್ಲದೆ, ಇಡೀ ಕುಟುಂಬಕ್ಕೆ ಉಪಯೋಗವಾಗುವಂಥ ಪಾತ್ರೆ ಪಗಡಿಗಳು, ಎಲೆಕ್ಟ್ರಾನಿಕ್ ಐಟಂಗಳು, ಫರ್ನಿಚರ್‌ಗಳು ಮುಂತಾದ ಉಡುಗೊರೆಗಳನ್ನು ನೀಡಲು ಕೂಡಾ ಇದು ಸಂದರ್ಭವಲ್ಲ. ಈಗೇನಿದ್ದರೂ ಕೇವಲ ನಿಮ್ಮ ವ್ಯಾಲೆಂಟೈನನ್ನು ಮಾತ್ರ ಸ್ಪೆಶಲ್ ಎಂದು ಫೀಲ್ ಮಾಡಿಸುವ ಸಮಯ..
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.