Asianet Suvarna News Asianet Suvarna News

ಜನ್ಮರಾಶಿ ಪ್ರಕಾರ ನಿಮಗೆ ಈ ಪ್ರಾಣಿಗಳಿಂದ ಆತಂಕ!

ನಿಮ್ಮ ಜನ್ಮಕುಂಡಲಿ ಪ್ರಕಾರ ಕೆಲವು ಪ್ರಾಣಿಗಳು ನಿಮಗೆ ಆಗಿಬರೋಲ್ಲ. ಅವುಗಳಿಂದ ನಿಮಗೆ ಅಥವಾ ನಿಮ್ಮಿಂದ ಅವುಗಳಿಗೆ ಆತಂಕ ತಪ್ಪಿದ್ದಲ್ಲ.

 

Do not get near to these animals if you are born in this zodiac
Author
Bengaluru, First Published Jun 5, 2021, 6:21 PM IST

ಮೇಷ: ಮೇಷ ಎಂದರೆ ಆಡು. ಈ ಜನ್ಮರಾಶಿಯಲ್ಲಿ ಜನಿಸಿದವರಿಗೆ ದೊಡ್ಡ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ ಮುಂತಾದವುಗಳಿಂದ ಆತಂಕ ಇದೆ. ಹಾಗೆಯೇ ಬೆಕ್ಕಿನ ಯಾವುದೇ ಜಾತಿ ನಿಮಗೆ ಆಗಿಬರೋಲ್ಲ. ಇವುಗಳನ್ನು ಮನೆಯಲ್ಲಿ ಸಾಕುವುದು ನಿಮಗೆ ಅಲರ್ಜಿ ಉಂಟುಮಾಡಬಹುದು.

ವೃಷಭ: ಹಾವುಗಳಿಂದ ನಿಮಗೆ ತೊಂದರೆ. ವಿಷವಿಲ್ಲದ ಹಾವು ಕಂಡರೂ ನಿಮಗೆ ಆತಂಕ ಸೃಷ್ಟಿಯಾಗುತ್ತದೆ. ವಿಷಕಾರಿ ಹಾವುಗಳು ಇರುವಲ್ಲಿ ವಾಸಿಸಬೇಡಿ. ಹಾಗೆ ಇರಲೇಬೇಕೆಂದಿದ್ದರೆ ಸರ್ಪಶಾಂತಿ, ಆಶ್ಲೇಷ ಬಲಿ ಮಾಡಿಸಿಕೊಂಡು ಮುಂದುವರಿಯಿರಿ.

ಮಿಥುನ: ಮೈ ತುಂಬ ರೋಮಗಳು ಇರುವ ಕೆಲವು ಜಾತಿಯ ನಾಯಿಗಳನ್ನು ಸಾಕುವುದು ನಿಮಗೆ ಅಲರ್ಜಿ ಉಂಟುಮಾಡಬಹುದು. ಇವುಗಳ ಬದಲಾಗಿ ಮುಧೋಳ ಮುಂತಾದ ರೋಮವಿಲ್ಲದ ನಾಯಿಗಳನ್ನು ಸಾಕಿಕೊಳ್ಳಬಹುದು. ಬೀದಿನಾಯಿಗಳೂ ನಿಮಗೆ ಅಪಾಯಕರ.

ಶನಿವಾರ ಹುಟ್ಟಿದವರಿಗೆ ಬದುಕಿಡೀ ಕಷ್ಟ ಪಡೋದು ತಪ್ಪಿದ್ದಲ್ಲ! ...

ಕಟಕ: ನಿಮಗೆ ಹದ್ದುಗಳು ಆಗಿಬರೋಲ್ಲ. ನಿಮ್ಮ ಮನೆಯ ಸುತ್ತಮುತ್ತ ಯಾವುದೇ ಸತ್ತ ಪ್ರಾಣಿಯ ಕಳೇಬರ ಇದ್ದರೆ, ಅಲ್ಲಿಗೆ ಹದ್ದುಗಳು ಬರುತ್ತಿದ್ದರೆ ಎಚ್ಚರ ಇರಲಿ. ಅವುಗಳಿಂದ ಕೆಲವು ಬಗೆಯ ಅನಾರೋಗ್ಯ ಉಂಟಾಗುವ ಸಂಭವ ಇದೆ.
 

Do not get near to these animals if you are born in this zodiac

ಸಿಂಹ: ನಿಮ್ಮ ಹೆಸರೇ ಹೇಳುವಂತೆ ಸಿಂಹರಾಶಿ, ನಿಮಗೂ ಆನೆಗಳಿಗೂ ಆಗಿಬರೋಲ್ಲ. ಕೆಲವೊಮ್ಮೆ ಸಿಂಹವನ್ನು ಆನೆಗಳು ಮಣಿಸುತ್ತವೆ, ಹಾಗೇ ಇದು. ಒಂಟಿ ಸಲಗ ಇರುವಲ್ಲಿ ಹೋಗಬೇಡಿ. ಆನೆಗಳ ಜೊತೆಗೆ ಅನಗತ್ಯ ಆಟ ಬೇಡ, ಇವುಗಳ ಜತೆ ಸಲಿಗೆ ನಿಮಗೆ ಸಾಧ್ಯವಾಗದು.

ಕನ್ಯಾ: ನಿಮಗೆ ಮನೆಯಲ್ಲಿ ಹರಿದಾಡುವ ಕೆಲವು ಬಗೆಯ ಸರೀಸೃಪಗಳಿಂದ ತೊಂದರೆ ಇದೆ. ಉದಾಹರಣೆಗೆ ಹಲ್ಲಿ, ಓತಿಕ್ಯಾತ ಇತ್ಯಾದಿ. ಉಡ, ಊಸರವಳ್ಳಿ ಮತ್ತಿತರ ಪ್ರಾಣಿಗಳು ನಿಮಗೆ ಆಗಿಬರದು. ಇಂಥವುಗಳನ್ನು ಸಾಕಿಕೊಳ್ಳುವ ಹವ್ಯಾಸ ನಿಮಗೆ ಅನಾರೋಗ್ಯಕಾರಿ.

ತುಲಾ: ಬೆಕ್ಕುಗಳು ನಿಮಗೆ ಅಲರ್ಜಿಕಾರಿ. ಬೆಕ್ಕಿನ ರೋಮಗಳು ನಿಮಗೆ ಅಲರ್ಜಿ ಉಂಟುಮಾಡಬಹುದು. ಆದರೆ ಬೆಕ್ಕು ತಾನಾಗಿಯೇ ಮನೆಗೆ ಬಂದರೆ ಅದೃಷ್ಟ. ಆದರೆ ಅದು ಬಹು ದೀರ್ಘ ಕಾಲ ನಿಮ್ಮಲ್ಲಿ ಇರುವುದಿಲ್ಲ; ಯಾಕೆಂದರೆ ಅದಕ್ಕೂ ನೀವೆಂದರೆ ಆಗಿಬರಲ್ಲ.

ಅಪಾಯಕಾರಿ ವಿಷಯೋಗದ ಬಗ್ಗೆ ನಿಮಗೆಷ್ಟು ಗೊತ್ತು? ...
 

ವೃಶ್ಚಿಕ: ಕೆಲವು ಬಗೆಯ ಇರುವೆಗಳು ನಿಮಗೆ ಅನರ್ಥಕಾರಿ. ಉದಾಹರಣೆಗೆ ದೊಡ್ಡ ಗಾತ್ರದ ಕಪ್ಪಿರುವೆ. ಇವುಗಳನ್ನು ಕಂಡಲ್ಲಿ ಬಾಲ್ಯದ ಅಭ್ಯಾಸದಂತೆ ಹಿಂಸಿಸಲು ನೀವು ಮುಂದಾಗಬಹುದು. ಆದರೆ ಹಾಗೆ ಮಾಡಬೇಡಿ. ಅವು ಅವುಗಳ ಪಾಡಿಗೆ, ನೀವು ನಿಮ್ಮ ಪಾಡಿಗೆ ಇದ್ದರೆ ಲೇಸು.

ಧನು: ಮೊಲಗಳನ್ನು ನೀವು ಇಷ್ಟಪಡೋಲ್ಲ. ಯಾಕೆಂದರೆ ಅವು ತುಂಬ ಗಲೀಜು ಮಾಡುತ್ತವೆ ಎಂಬುದು ನಿಮ್ಮ ಪೂರ್ವಾಗ್ರಹ. ಆದರೆ ಹಾಗಲ್ಲ. ಅವುಗಳಲ್ಲಿ ತುಂಬಾ ರೋಮ ಇರುವ ಜಾತಿಗಳು ಅಷ್ಟೇನೂ ಆರೋಗ್ಯಕಾರಿಯಲ್ಲ. ನಿಮ್ಮ ಆರೋಗ್ಯ ಮೊದಲು, ಮತ್ತೆಲ್ಲ.

ಮಕರ: ಮಕರ ಎಂದರೆ ಮೊಸಳೆ. ಮೊಸಳೆಯನ್ನು ಅತ್ಯಂತ ಹೆಚ್ಚು ದ್ವೇಷಿಸುವ ಪ್ರಾಣಿ ಎಂದರೆ ಕೋತಿ. ಅದು ಮೊಸಳೆಯನ್ನು ಏನೂ ಮಾಡಲು ಸಾಧ್ಯವಿಲ್ಲವಾದರೂ, ಕಿರಿಕಿರಿ ಸೃಷ್ಟಿಸಬಹುದು. ಕೋತಿಗಳು ನಿಮ್ಮ ಬದುಕನ್ನು ನರಕ ಮಾಡಿಬಿಡಬಹುದು, ಅವುಗಳ ಬಳಿ ಜಾಗ್ರತೆಯಾಗಿರಿ.

ಕುಂಭ: ಇಲಿಗಳು ನಿಮಗೆ ಹಾನಿಕರ. ಇವುಗಳನ್ನು ಮನೆಯೊಳಗೆ ತಪ್ಪಿಯೂ ಬರಲು ಬಿಡಬೇಡಿ. ಇವುಗಳಿಂದ ಅನಾರೋಗ್ಯವೂ ಇದೆ ಎಂಬುದನ್ನು ತಿಳಿಯಿರಿ. ಇಲಿಗಳು ಮಹಾ ನ್ಯೂಸೆನ್ಸ್ ಪ್ರಾಣಿಗಳು. ಇವುಗಳಿಂದ ನಿಮಗೆ ದೊಡ್ಡ ಆರ್ಥಿಕ ಹಾನಿಯೂ ಆಗಬಹುದು. ಹಳಸಿದ ಆಹಾರ ಹತ್ತಿರ ಇರದಿರಲಿ.

ಕುಲದೇವತೆಯನ್ನು ಆರಾಧಿಸಿ, ನಿಮ್ಮನ್ನು ಕಾಪಾಡಲು ಅದೇ ಸಾಕು! ...

ಮೀನ: ನಿಮಗೆ ಬೆಕ್ಕು ಹಾಗೂ ಹದ್ದಿನಿಂದ ಸಮಸ್ಯೆ ಇದೆ. ಮೀನನ್ನು ಹದ್ದು ಅಥವಾ ಬೆಕ್ಕು ಗಬಕ್ಕನೆ ಎಗರಿ ಕಚ್ಚಿಕೊಂಡು ಹೋಗುವುದು ನೋಡಿದ್ದೀರಷ್ಟೆ? ಹಾಗೇ ಮೀನ ಜನ್ಮರಾಶಿಗೂ ಇವುಗಳಿಗೂ ಸಾಮ್ಯವಿಲ್ಲ. ಮನೆಯಲ್ಲಿ ಬೆಕ್ಕು ಸಾಕಬೇಡಿ. ಪರಚಿದರೆ ಇಂಜೆಕ್ಷನ್ ಹಾಕಿಸಿಕೊಳ್ಳಬೇಕಾದೀತು.

 

Follow Us:
Download App:
  • android
  • ios