Asianet Suvarna News Asianet Suvarna News

Astrology Tips : ವಾರದ ಈ ದಿನ ಅಪ್ಪಿತಪ್ಪಿಯೂ ಇದನ್ನು ತಿನ್ಬೇಡಿ

ಭಾನುವಾರ ಬಂದ್ರೆ ಎಲ್ಲರೂ ರುಚಿ ರುಚಿ ಆಹಾರ ತಿನ್ನೋಕೆ ಇಷ್ಟಪಡ್ತಾರೆ. ಉಪ್ಪು, ಮಸಾಲೆ ಬೆರೆತ ಆಹಾರ ಯಾರಿಗೆ ಇಷ್ಟವಾಗೊಲ್ಲ ಹೇಳಿ. ಆದ್ರೆ ನಿಮಗಿಷ್ಟಬಂದಂತೆ ಆಹಾರ ತಿನ್ನೋದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರಿಯಲ್ಲ. 
 

Do Not Eat These Things On These Week Days
Author
Bangalore, First Published Jul 9, 2022, 3:49 PM IST | Last Updated Jul 9, 2022, 3:49 PM IST

ಹಿಂದೂ ಧರ್ಮ (Hinduism) ದಲ್ಲಿ ದಿನ, ವಾರ, ತಿಂಗಳು ಎಲ್ಲದಕ್ಕೂ ಮಹತ್ವದ ಸ್ಥಾನವಿದೆ. ಪ್ರತಿ ದಿನವನ್ನೂ ಒಂದೊಂದು ದೇವರಿ (God) ಗೆ ಹಾಗೂ ಗ್ರಹ (Planet) ಕ್ಕೆ ಅರ್ಪಣೆ ಮಾಡಲಾಗಿದೆ. ಆ ದಿನ ಆ ದೇವರ ಪೂಜೆ ಮಾಡಲಾಗುತ್ತದೆ. ಹಾಗೆ  ದಿನಕ್ಕೆ ತಕ್ಕಂತೆ ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ. ವಾರದ ಎಲ್ಲ ದಿನ ಎಲ್ಲ ಕೆಲಸವನ್ನು ಮಾಡುವಂತಿಲ್ಲ. ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು ಸೇರಿದಂತೆ ಕೆಲ ಕೆಲಸಗಳನ್ನು ಎಲ್ಲ ದಿನ ಮಾಡುವುದು ನಿಷಿದ್ಧ. ಅದಕ್ಕೆ ಕೆಲ ದಿನಗಳನ್ನು ಮೀಸಲಿಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದೆ ಕೆಲ ನಿಯಮಗಳನ್ನು ಮಾಡಲಾಗಿದೆ. ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ ಪ್ರತಿ ದಿನ ಮೂರು ಹೊತ್ತು ಆಹಾರ ಸೇವನೆ ಮಾಡುವವರಿದ್ದಾರೆ. ಕೆಲವರು ಎರಡು ಹೊತ್ತು ಮಾತ್ರ ಆಹಾರ ಸೇವನೆ ಮಾಡ್ತಾರೆ. ವಾರದಲ್ಲಿ ಎಲ್ಲ ದಿನ ನೀವು ಎಲ್ಲ ಆಹಾರ ಸೇವನೆ ಮಾಡುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಪ್ಪು.  ಕೆಲ ದಿನ ಕೆಲ ಆಹಾರ ನಿಷಿದ್ಧ. ಆ ದಿನ ತಪ್ಪಾಗಿ ಆಹಾರ ಸೇವನೆ ಮಾಡಿದ್ರೆ ವಿಫಲತೆ ಅನುಭವಿಸಬೇಕಾಗುತ್ತದೆ. ವ್ಯಕ್ತಿ ತೊಂದರೆಗೆ ಸಿಲುಕುತ್ತಾನೆ. ಜಾತಕದ ಗ್ರಹಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ. ವಾರದ ಯಾವ ದಿನ ಯಾವ ಪದಾರ್ಥವನ್ನು ತಿನ್ನಬಾರದು ಎಂದು ನಾವಿಂದು ಹೇಳ್ತೇವೆ.

ದಿನಕ್ಕೆ ಅನುಸಾರವಾಗಿರಲಿ ನಿಮ್ಮ ಆಹಾರ :

ಸೋಮವಾರ : ಸೋಮವಾರ ಚಂದ್ರನಿಗೆ ಸಂಬಂಧಿಸಿದ ವಾರ. ಸೋಮವಾರ ಶಿವನ ಆರಾಧನೆ ಮಾಡಲಾಗುತ್ತದೆ. ಗ್ರಹದ ಪ್ರಕಾರ ಈ ದಿನ ಸಕ್ಕರೆಯನ್ನು ಸೇವಿಸಬೇಡಿ. ಸೋಮವಾರದಂದು ಸಕ್ಕರೆಯನ್ನು ಸೇವನೆ ಮಾಡಿದ್ರೆ ಚಂದ್ರನು ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ.

ಇದನ್ನೂ ಓದಿ: ಪತಿ -ಪತ್ನಿ ನಡುವೆ ಪ್ರೀತಿ ಹೆಚ್ಚಿಸುತ್ತದೆ ಏಕ್ ಚುಟ್ಕೀ ಸಿಂಧೂರ್!

ಮಂಗಳವಾರ : ಮಂಗಳವಾರದಂದು ಹನುಮಂತನ ಪೂಜೆಗೆ ವಿಶೇಷ ಮಹತ್ವವಿದೆ. ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ತುಪ್ಪವನ್ನು ಸೇವಿಸಬಾರದು. ಮಂಗಳವಾರ ತುಪ್ಪವನ್ನು ಸೇವನೆ ಮಾಡಿದ್ರೆ ಧೈರ್ಯ ಮತ್ತು ಶೌರ್ಯದಲ್ಲಿ ಇಳಿಕೆ ಕಂಡುಬರುತ್ತದೆ.

ಬುಧವಾರ : ಬುಧವಾರದಂದು ಗಣೇಶನ ಪೂಜೆ ಮಾಡಲಾಗುತ್ತದೆ. ಬುಧವಾರ ಬುಧ ಗ್ರಹಕ್ಕೆ ಸಂಬಂಧಿಸಿದೆ. ಬುಧವು ವ್ಯಕ್ತಿಗೆ ಬುದ್ಧಿವಂತಿಕೆ, ಚಾತುರ್ಯ, ತರ್ಕ, ಸಂಪತ್ತನ್ನು ನೀಡುತ್ತಾನೆ. ಈ ದಿನ ಹಸಿರು ತರಕಾರಿಗಳನ್ನು ತಿನ್ನುವುದರಿಂದ ಬುಧ ಗ್ರಹವು ಕೆಟ್ಟ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಬುಧವಾರ ಯಾವಾಗಲೂ ಹಸಿರು ವಸ್ತುಗಳನ್ನು ದಾನ ಮಾಡಬೇಕು. ಇದ್ರಿಂದ ಒಳಿತಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಗುರುವಾರ : ಗುರುವಾರ, ಗುರುವಿನ ಪೂಜೆ ಮಾಡಲಾಗುತ್ತದೆ. ಹಾಗೆ ಗುರುವಾರ ಗುರು ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಹಳದಿ ಪದಾರ್ಥಗಳನ್ನು ಸೇವಿಸಬಾರದು. ಹಾಗೆಯೇ  ಹಾಲು ಮತ್ತು ಬಾಳೆಹಣ್ಣಿನಿಂದ ದೂರವುರಬೇಕು. ಇಲ್ಲವಾದ್ರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ: ನಿಮ್ಮಿಷ್ಟದ ಉದ್ಯೋಗ ಪಡೆಯೋಕೆ ಆಂಜನೇಯನನ್ನು ಹೀಗೆ ಮೆಚ್ಚಿಸಿ..

ಶುಕ್ರವಾರ : ಶುಕ್ರವಾರ ತಾಯಿ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಶುಕ್ರವಾರ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಹುಳಿ ಪದಾರ್ಥಗಳನ್ನು ತಿನ್ನಬಾರದು. ಶುಕ್ರವಾರ ತಾಯಿ ಲಕ್ಷ್ಮಿಯ ಆಶೀರ್ವಾದ ಬೇಕು ಎನ್ನುವವರು ಹಾಲು ಅಥವಾ ಹಾಲಿನಿಂದ ಸಿಹಿ ತಿಂಡಿಯನ್ನು ತಯಾರಿಸಿ ಅದನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಇದ್ರಿಂದ ಆರ್ಥಿಕ ವೃದ್ಧಿಯನ್ನು ನೀವು ಕಾಣಬಹುದು.

ಶನಿವಾರ : ಶನಿವಾರ ಶನಿಗೆ ಸಂಬಂಧಿಸಿದೆ. ಶನಿವಾರದಂದು ಎಣ್ಣೆಯಿಂದ ಮಾಡಿದ ಪದಾರ್ಥಗಳನ್ನು ತಿನ್ನಬಾರದು.  ಹಾಗೆಯೇ ಶನಿವಾರದಂದು ನಿರ್ಗತಿಕರಿಗೆ ಅಥವಾ ಬಡವರಿಗೆ ಮತ್ತು ದೇವಸ್ಥಾನಕ್ಕೆ ಹೋಗಿ ಎಣ್ಣೆಯನ್ನು ದಾನ ಮಾಡಬೇಕು. 

ಭಾನುವಾರ : ಭಾನುವಾರ ಸೂರ್ಯನಿಗೆ ಸಂಬಂಧಿಸಿದ ದಿನವಾಗಿದೆ. ಸೂರ್ಯನ ಅಶುಭ ಫಲಿತಾಂಶಗಳನ್ನು ತಪ್ಪಿಸಲು ಭಾನುವಾರದಂದು ಉಪ್ಪು ತಿನ್ನದಿರುವುದು ಒಳ್ಳೆಯದು. 

Latest Videos
Follow Us:
Download App:
  • android
  • ios