ನಾಳೆ ಕಾಮಿಕಾ ಏಕಾದಶಿ; ವಿಷ್ಣು ಕೃಪೆಗಾಗಿ ನೀವೇನು ಮಾಡಬೇಕು? ಏನು ಮಾಡಕೂಡದು?

ಆಷಾಢ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯನ್ನು ಕಾಮಿಕಾ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನ ಕೆಲ ಕೆಲಸಗಳನ್ನು ತಪ್ಪಿಯೂ ಮಾಡಬಾರದು. ಅವು ಯಾವುವು ತಿಳಿಯಿರಿ..

Do not do this work on the day of Kamika Ekadashi skr

ಏಕಾದಶಿ ದಿನಾಂಕವು ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿಗಳು ಬರುತ್ತವೆ. ಪ್ರತಿ ತಿಂಗಳಿಗೆ ಎರಡು ಬಾರಿ ಏಕಾದಶಿ ತಿಥಿ ಬರುತ್ತದೆ. ಆಷಾಢ ಮಾಸದ ಕೊನೆಯ ಏಕಾದಶಿಯನ್ನು ಕಾಮಿಕಾ ಏಕಾದಶಿ ಎನ್ನಲಾಗುತ್ತದೆ. ಕಾಮಿಕ ಏಕಾದಶಿಯ ದಿನದಂದು ಏನು ಮಾಡಬೇಕು - ಏನು ಮಾಡಬಾರದು ಎಂದು ತಿಳಿಯೋಣ. 

ನಾಳೆ ಅಂದರೆ ಜುಲೈ 24, 2022ರಂದು ಕಾಮಿಕ ಏಕಾದಶಿ. ಏಕಾದಶಿ ತಿಥಿಯು ಜುಲೈ 23 ರಂದು ಶನಿವಾರ ಬೆಳಿಗ್ಗೆ 11:27 ರಿಂದ ಆರಂಭವಾಗುತ್ತದೆ. ಜುಲೈ 24 ರಂದು ಭಾನುವಾರ ಮಧ್ಯಾಹ್ನ 1:45 ರವರೆಗೆ ಇರುತ್ತದೆ. ಉದಯ ತಿಥಿಯಂತೆ ಕಾಮಿಕಾ ಏಕಾದಶಿ ಉಪವಾಸವನ್ನು ಜುಲೈ 24 ರಂದು ಆಚರಿಸಲಾಗುತ್ತದೆ. ಏಕಾದಶಿಯ ಮಂಗಳಕರ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ, ಎಲ್ಲ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು. ಏಕೆಂದರೆ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿರುತ್ತದೆ. 

ಉಪವಾಸ(fast)
ಏಕಾದಶಿ ತಿಥಿ ವಿಷ್ಣುವಿಗೆ ಪ್ರಿಯ. ಸಾಧ್ಯವಾದರೆ, ಈ ಪವಿತ್ರ ದಿನದಂದು ಉಪವಾಸವನ್ನು ಆಚರಿಸಿ. ಈ ದಿನ ಉಪವಾಸ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಜೊತೆಗೆ, ತಾಯಿ ಲಕ್ಷ್ಮಿಯನ್ನು ಆರಾಧಿಸಿ. ಈ ಪವಿತ್ರ ದಿನದಂದು ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಕೂಡ ಪೂಜಿಸಬೇಕು. ಲಕ್ಷ್ಮಿ ದೇವಿಯನ್ನು ಆರಾಧಿಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷಗಳು ಸಿಗುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಸಾತ್ವಿಕ ಆಹಾರವನ್ನು ಸೇವಿಸಿ
ಈ ಪವಿತ್ರ ದಿನದಂದು ಸಾತ್ವಿಕ ಆಹಾರವನ್ನು ಸೇವಿಸಬೇಕು. ಏಕಾದಶಿಯಂದು ಮಾಂಸಾಹಾರ ಮತ್ತು ಮದ್ಯ ಸೇವಿಸಬಾರದು. ಈ ದಿನ ಮೊದಲು ದೇವರಿಗೆ ಅನ್ನವನ್ನು ಅರ್ಪಿಸಿ, ನಂತರವೇ ಆಹಾರ ಸೇವಿಸಿ.

ರಾಕ್ಷಸರ ರಕ್ತ ಹೀರುವ ಕಾಳಿ ದೇವಿಯ ನಾಲಿಗೆ!

ಹಳದಿ ಬಟ್ಟೆ(Yellow cloths)
ವಿಷ್ಣುವಿಗೆ ಹಳದಿ ಬಟ್ಟೆ ಎಂದರೆ ತುಂಬಾ ಇಷ್ಟ. ಹಾಗಾಗಿ, ಏಕಾದಶಿ ದಿನದಂದು ಹಳದಿ ಬಟ್ಟೆ ಧರಿಸಿ. 

ಅನ್ನ ತಿನ್ನಬೇಡಿ(don't eat rice)
ಏಕಾದಶಿಯಂದು ಅನ್ನವನ್ನು ಸೇವಿಸಬಾರದು. ಈ ದಿನ ಅನ್ನವನ್ನು ಸೇವಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹಣ್ಣು ಹಂಪಲು, ಹಾಲಿನ ಸೇವನೆ ಉತ್ತಮ. 

ಬ್ರಹ್ಮಚರ್ಯವನ್ನು ಅನುಸರಿಸಿ
ಏಕಾದಶಿಯ ದಿನದಂದು ಬ್ರಹ್ಮಚರ್ಯವನ್ನು ಆಚರಿಸಬೇಕು ಮತ್ತು ಯಾರನ್ನೂ ನಿಂದಿಸುವ ಪದಗಳನ್ನು ಬಳಸಬಾರದು.

ದಾನ ಮಾಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ, ದಾನ ಮಾಡುವುದರಿಂದ ಬಹುಫಲವಾಗುತ್ತದೆ. ಈ ಶುಭ ದಿನದಂದು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ. ಹಳದಿ ಧಾನ್ಯಗಳು, ಹಳದಿ ವಸ್ತ್ರ ಸೇರಿದಂತೆ ಹಳದಿ ವಸ್ತುಗಳನ್ನು ದಾನ ಮಾಡುವುದು ಉತ್ತಮ.

Vastu Tips: ಈ ದಿನಾಂಕದಂದು ಹೊಸ ಮನೆಗೆ ಹೋಗೋ ಸಾಹಸ ಮಾಡ್ಬೇಡಿ!

ವಿಷ್ಣುವಿಗೆ ತುಳಸಿಯನ್ನು ಅರ್ಪಿಸಿ
ತುಳಸಿ ಮತ್ತು ಏಕಾದಶಿ ಎರಡೂ ಭಗವಾನ್ ವಿಷ್ಣುವಿಗೆ ಬಹಳ ಪ್ರಿಯ. ಏಕಾದಶಿಯಂದು ತುಳಸಿಯ ಮುಂದೆ ಶುದ್ಧ ತುಪ್ಪದ ದೀಪವನ್ನು ಇಟ್ಟು ತುಳಸಿ ನಮಷ್ಟಕವನ್ನು ಪಠಿಸುತ್ತಾ 11 ಸುತ್ತು ಪ್ರದಕ್ಷಿಣೆ ಹಾಕಿ. ಪ್ರದಕ್ಷಿಣೆಗೆ ಸ್ಥಳವು ಸಾಕಾಗದಿದ್ದರೆ, ನಿಂತಲ್ಲಿಯೇ 11 ಬಾರಿ ಸುತ್ತಿ. ಈ ದಿನ ತುಳಸಿಗೆ ನೀರನ್ನು ಅರ್ಪಿಸಬೇಡಿ, ಏಕೆಂದರೆ ನಂಬಿಕೆಗಳ ಪ್ರಕಾರ ತುಳಸಿ ಮಾತೆಯ ಉಪವಾಸವನ್ನು ಏಕಾದಶಿಯಂದು ಆಚರಿಸಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios