ಗಣೇಶ ಚತುರ್ಥಿ 2022: ಈ ದಿನ ಇಂಥ ತಪ್ಪೆಲ್ಲ ಮಾಡಿ ಗಣಪತಿಗೆ ಕೋಪ ತರಿಸ್ಬೇಡಿ!

ಗಣೇಶ ಚತುರ್ಥಿ ಪೂಜೆಗೆ ಮನೆಮನೆಯೂ ಸಜ್ಜಾಗಿದೆ. ಗಣೇಶನನ್ನು ಆರಾಧಿಸುವಾಗ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆಯೇ ವ್ರತದ ದಿನ ಮಾಡಬಾರದ ಕೆಲ ಕೆಲಸಗಳಿವೆ. ಅವುಗಳ ಬಗ್ಗೆಯೂ ಗಮನವಿರಲಿ..

Do not do this work on the day of Ganesh Chaturthi 2022 skr

ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಎರಡೂ ಪಕ್ಷಗಳ ಚತುರ್ಥಿ ದಿನಾಂಕವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಇವಲ್ಲದೆ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ಎಲ್ಲಕ್ಕಿಂತ ವಿಶೇಷವೂ, ದೊಡ್ಡ ಹಬ್ಬವೂ ಆಗಿದೆ. ಈ ಬಾರಿ ಆಗಸ್ಟ್ 31ರಂದು ಗಣೇಶ ಚತುರ್ಥಿಯನ್ನು ಜಗತ್ತಿನಾದ್ಯಂತ ಹಿಂದೂಗಳು ಆಚರಿಸುತ್ತಿದ್ದಾರೆ. 
ಈ ವರ್ಷ ಗಣಪತಿ ಪ್ರತಿಷ್ಠಾಪನೆಗೆ ಮುಹೂರ್ತವು ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1:38 ರವರೆಗೆ ಇರುತ್ತದೆ. ಗಣಪತಿಯ ವ್ರತಾಚರಣೆಯಿಂದ ಬಾಳಿನಿಂದ ಸಂಕಷ್ಟಗಳು ದೂರಾಗಿ ಮಾಡುವ ಕೆಲಸಗಳಲ್ಲಿ ವಿಘ್ನಗಳು ದೂರಾಗುತ್ತವೆ. ಗಣೇಶನನ್ನು ಭಕ್ತಿಯಿಂದ ಬೇಡಿದವರಿಗೆ ಆತ ಸಂಪತ್ತನ್ನೂ, ಬುದ್ಧಿವಂತಿಕೆಯನ್ನೂ ಕೊಡುತ್ತಾನೆ. ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಈ ವಾರ ಬುಧವಾರವೇ ಗಣೇಶ ಚತುರ್ಥಿ ಹಬ್ಬ ಬಂದಿರುವುದು ವಿಶೇಷವಾಗಿದೆ. ಇಂಥದೊಂದು ಅಪರೂಪದ ವಿಶೇಷ ದಿನದಂದು ಭಕ್ತಿಭಾವದಿಂದ ಗಣೇಶನನ್ನು ಪೂಜಿಸಿ, ಬೇಡಿದ ವರ ಪಡೆಯಿರಿ. ಆದರೆ, ಈ ದಿನ ಪೂಜಿಸುವಾಗ, ವ್ರತ ಆಚರಿಸುವಾಗ ಕೆಲ ತಪ್ಪುಗಳಾಗದಂತೆ ನೀವು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಆಭಾಸವಾಗಬಹುದು. ಗಣೇಶನಿಗೆ ಕೋಪ ಬರಬಹುದು. ಗಣೇಶ ಚತುರ್ಥಿಯ ಈ ಶುಭದಿನ ನೀವು ಮಾಡಬಾರದ ಕೆಲಸಗಳೇನು ತಿಳಿಯಿರಿ..

ಇವನ್ನು ನೆನಪಿಡಿ

  • ವಿನಾಯಕ ಚತುರ್ಥಿಯ ದಿನದಂದು ಗಣೇಶನಿಗೆ ಹಚ್ಚುವ ದೀಪದ ಸ್ಥಳವನ್ನು ಮತ್ತೆ ಮತ್ತೆ ಬದಲಾಯಿಸಬೇಡಿ. ಹಾಗೆಯೇ ಇದನ್ನು ಗಣೇಶನ ಗದ್ದುಗೆಯ ಮೇಲೆ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.

    ಗಣಪತಿ ಇಬ್ಬರಿಗೆ ಪತಿ! ಬಪ್ಪ ಎರಡೆರಡು ಮದುವೆಯಾದದ್ದು ಯಾಕಪ್ಪಾ?
     
  • ಗಣೇಶ ಚತುರ್ಥಿಯ ದಿನದಂದು ಗಣೇಶನನ್ನು ಪ್ರತಿಷ್ಠಾಪಿಸುವ ಸ್ಥಳವನ್ನು ಒಂಟಿಯಾಗಿ ಬಿಡಬಾರದು ಅಥವಾ ಖಾಲಿ ಬಿಡಬಾರದು. ಹಾಗೆಯೇ ಗಣೇಶನನ್ನು ಪೂಜಿಸುವ ಸಮಯದಲ್ಲಿ ಮನಸ್ಸು, ನಡೆ, ನುಡಿಗಳಲ್ಲಿ ಶುದ್ಧವಾಗಿರಬೇಕು. ಈ ದಿನ ಬ್ರಹ್ಮಚರ್ಯವನ್ನೂ ಅನುಸರಿಸಬೇಕು.
  • ಪೂಜೆಯ ಸಮಯದಲ್ಲಿ ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಬೇಡಿ. ತುಳಸೀದೇವಿ ಗಣಪನನ್ನು ಮದುವೆಯಾಗಲು ಬಯಸಿದಾಗ ಗಣೇಶ ನಿರಾಕರಿಸಿದ್ದ. ಇದರಿಂದ ಅವರಿಬ್ಬರಿಗೂ ಆಗಿ ಬರುವುದಿಲ್ಲ. ಹಾಗಾಗಿ, ಗಣೇಶನಿಗೆ ತುಳಸಿ ಇಟ್ಟು ಇಬ್ಬರ ಕೋಪವನ್ನೂ ಎದುರಿಸಬೇಡಿ.
  • ಗಣೇಶ ಚತುರ್ಥಿಯ ದಿನ, ಉಪವಾಸದ ಸಮಯದಲ್ಲಿ ಉಪ್ಪನ್ನು ಬಳಸಬೇಡಿ. ಇದರೊಂದಿಗೆ, ಈ ದಿನ ಕಪ್ಪು ಬಣ್ಣವನ್ನು ಧರಿಸುವುದನ್ನು ತಪ್ಪಿಸಿ. ಇದನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
  • ಗಣೇಶನನ್ನು ಗೌರವದಿಂದ ಕಾಣಬೇಕು. ಅನ್ನ, ನೀರು, ಪ್ರಸಾದ ಎನ್ನದೇ ಎಲ್ಲವನ್ನೂ ಮೊದಲು ಗಣೇಶನಿಗೆ ಅರ್ಪಿಸಬೇಕು. ನೈವೇದ್ಯವಾಗದೇ ಏನನ್ನೂ ನೀವು ತಿನ್ನಕೂಡದು. 
  • ಗಣೇಶನನ್ನು ಮನೆಗೆ ತರುವ ಮೊದಲು ನಿಮ್ಮ ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಸ್ನಾನ ಮಾಡಿ. ಸ್ನಾನ ಮಾಡದೆ ಹೋಗಿ ಗಣೇಶ ತರಬಾರದು. 
  • ಪ್ರಸಾದಕ್ಕಾಗಿ ಅಥವಾ ಮನೆಯ ಬಳಕೆಗಾಗಿ ಗಣಪತಿ ಪೂಜೆಯ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಿ.
  • ಗಣೇಶನ ವಿಗ್ರಹದ ವಿಸರ್ಜನೆಗಾಗಿ ಮಂಗಳಕರ ಸಮಯವನ್ನು ಅನುಸರಿಸಿ ಮತ್ತು ಅವನಿಗೆ ಪ್ರಾರ್ಥನೆ ಮತ್ತು ಪ್ರಸಾದವನ್ನು ನೀಡಿದ ನಂತರ ಮಾತ್ರ ವಿಗ್ರಹವನ್ನು ಮುಳುಗಿಸಿ.
  • ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಅಥವಾ ಅದನ್ನು ಮುಳುಗಿಸುವ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನು ಮುಚ್ಚಬೇಡಿ.

    ಗಣೇಶ ಚತುರ್ಥಿ 2022 ದಿನ ಈ ಕತೆಯನ್ನು ಕೇಳಿದರೆ ಪಾಪ ನಾಶವಾಗುವುದು..

ಗಣಪತಿ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ
'ಓಂ ಗಣಪತಯೇ ನಮಃ' ಎಂದು ಪಠಿಸುವುದರಿಂದ ದುಃಖಗಳಿಂದ ಮುಕ್ತಿ ಸಿಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಸಿಗುತ್ತದೆ.
'ಓಂ ವಕ್ರತುಂಡಾಯ ಧೀಮಹೇ, ಏಕದಂತಾಯ ವಿದ್ಮಹೇ' ಎಂಬ ಈ ಮಂತ್ರವನ್ನು ಪಠಿಸುವುದರಿಂದ ಕೆಲಸದಲ್ಲಿನ ಅಡೆತಡೆಗಳು ಗಣೇಶನ ಕೃಪೆಯಿಂದ ದೂರವಾಗುತ್ತವೆ.
'ಓಂ ಶ್ರೀ ಗಂ ಸೌಭಯ ಗಣಪತಯೇ ವರ ವರದ್ ಸರ್ವಜನಂ ಮೇ ವಶ್ಮಾನಾಯ ಸ್ವಾಹಾ' ಎಂಬ ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ವ್ಯಕ್ತಿಯ ಉದ್ಯೋಗದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.
 

Latest Videos
Follow Us:
Download App:
  • android
  • ios