ಸೂರ್ಯಾಸ್ತದ ಸಮಯದಲ್ಲಿ ಇಂಥ ಕೆಲಸ ಮಾಡಿದ್ರೆ ಕಾಡುತ್ತೆ ದರಿದ್ರ ಯೋಗ!

ಸೂರ್ಯಾಸ್ತದ ಸಮಯದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕವಾಗಿ ಮುಗ್ಗಟ್ಟಿಗೆ ಸಿಲುಕಿಸುವ ಜೊತೆಗೆ ಅನಾರೋಗ್ಯವನ್ನೂ ತರುತ್ತವೆ. ಜೀವನದಲ್ಲಿ ಚಿಂತೆಗಳು ಹೆಚ್ಚಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಮಾಡುವ ಯಾವ ಕೆಲಸಗಳು ಲಕ್ಷ್ಮಿಯನ್ನು ಕೋಪಗೊಳಿಸುತ್ತವೆ ನೋಡೋಣ.

Do not do this work at the time of sunset otherwise you will become poor skr

ಸನಾತನ ಧರ್ಮದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇವು ಹಗಲು ಮತ್ತು ರಾತ್ರಿಯ ಸಂಧಿ ಸಮಯಗಳು. ಆದುದರಿಂದಲೇ ಧಾರ್ಮಿಕ ದೃಷ್ಟಿಯಿಂದ ಅವುಗಳನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಈ ಎರಡೂ ಸಮಯಗಳಲ್ಲಿ ಅಂದರೆ ಸಂಧಿಕಾಲದಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಅಂದರೆ, ಈ ಸಮಯದಲ್ಲಿ ಕೆಲ ಕೆಲಸಗಳನ್ನು ಮಾಡಬೇಕು ಹಾಗೂ ಕೆಲ ಕೆಲಸಗಳನ್ನು ಮಾಡಬಾರದು. ಇಂದು ಸೂರ್ಯಾಸ್ತದ ಸಮಯದಲ್ಲಿ ನೀವು ಮಾಡಬಾರದು ಕೆಲಸಗಳೇನು ನೋಡೋಣ. ಧರ್ಮಗ್ರಂಥಗಳ ಪ್ರಕಾರ, ಈ ಕೆಲಸಗಳನ್ನು ಮಾಡಿದಲ್ಲಿ ಅದು ಆರ್ಥಿಕ ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಸೂರ್ಯಾಸ್ತದ ಸಮಯದಲ್ಲಿ ತಿಳಿದೋ ತಿಳಿಯದೆಯೋ ಮಾಡುವ ಕೆಲಸಗಳು ದೊಡ್ಡ ರೀತಿಯಲ್ಲಿ ನಿಮಗೆ ತಿರುಗೇಟು ಕೊಡಬಹುದು. 

ತುಳಸಿ ಮುಟ್ಟುವುದು
ಪ್ರತಿದಿನ ತುಳಸಿಯನ್ನು ಪೂಜಿಸುವ ಮನೆಗಳ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ಆದರೆ ತುಳಸಿಯನ್ನು ಸಂಜೆ ಮುಟ್ಟಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು. ಮತ್ತು ನಿಮ್ಮ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಸೂರ್ಯ ಮುಳುಗಿದ ನಂತರ, ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಸಂಜೆ ಇಡಬೇಕು. ತುಪ್ಪ ಲಭ್ಯವಿಲ್ಲದಿದ್ದರೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬಹುದು. ಆದರೆ ಸೂರ್ಯ ಮುಳುಗಿದ ನಂತರ ತುಳಸಿಗೆ ನೀರು ಕೂಡ ನೀಡಬಾರದು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಈ ಕಾರಣದಿಂದಾಗಿ, ನೀವು ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೊಳಗಾಗಬಹುದು.

Budh Uday 2023: ಬುಧನ ಉದಯವು 3 ರಾಶಿಗಳಿಗೆ ತರಲಿದೆ ಕಷ್ಟನಷ್ಟ, ಬೇಕು ಎಚ್ಚರ!

ತುಳಸಿಗೆ ದೀಪ
ಕೆಲವರು ಸಂಜೆ ಮೊದಲು ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿ ನಂತರ ಮನೆಯ ಹೊರಗಿನ ತುಳಸಿಗೆ ದೀಪವನ್ನು ಹಚ್ಚುತ್ತಾರೆ.  ಅಥವಾ ಆರತಿ ಬೆಳಗುವಾಗಲೂ ಇದೇ ತಪ್ಪು ಮಾಡುತ್ತಾರೆ. ಆದಾಗ್ಯೂ, ನಂಬಿಕೆಯ ಪ್ರಕಾರ, ಸಂಜೆ ದೀಪಗಳನ್ನು ಬೆಳಗಿಸುವಾಗ, ಮೊದಲು ತುಳಸಿಗೆ ದೀಪವನ್ನು ತೋರಿಸಬೇಕು, ನಂತರ ಮನೆಯ ದೇವರನ್ನು ಪೂಜಿಸಬೇಕು. ಸೂರ್ಯಾಸ್ತದ ಮೊದಲು ಸಂಧಿ ಕಾಲದಲ್ಲಿ ಈ ಕೆಲಸವನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಲಗುವುದು
ಸೂರ್ಯಾಸ್ತದ ಸಮಯದಲ್ಲಿ ತುಂಬಾ ಅಗತ್ಯವಿಲ್ಲದಿದ್ದರೆ, ಅಂದರೆ ಅನಿವಾರ್ಯವಲ್ಲದಿದ್ದರೆ ತಿನ್ನುವುದು, ಕುಡಿಯುವುದು ಮತ್ತು ಮಲಗುವುದನ್ನು ಸಹ ತಪ್ಪಿಸಬೇಕು. ಈ ಸಮಯದಲ್ಲಿ ಮಲಗಿದರೆ ಲಕ್ಷ್ಮಿ ದೇವಿಯು ಕೋಪಗೊಂಡು ಆ ಮನೆಯನ್ನು ಬಿಟ್ಟು ಹೋಗುತ್ತಾಳೆ ಎಂದು ನಂಬಲಾಗಿದೆ. ಇದು ಬೊಜ್ಜು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

ಬ್ರಹ್ಮಚರ್ಯ ಪಾಲನೆ
ಸೂರ್ಯಾಸ್ತದ ಸಮಯದಲ್ಲಿ ಬ್ರಹ್ಮಚರ್ಯವನ್ನು ಪಾಲಿಸದಿರುವವರು ತಮ್ಮ ಮನೆಯಲ್ಲಿ ದೌರ್ಭಾಗ್ಯ ಮತ್ತು ದಾರಿದ್ರ್ಯವನ್ನು ಹೊಂದಿರುತ್ತಾರೆ.

ಅಧ್ಯಯನ
ಅಚ್ಚರಿಯಾಗಬಹುದು, ಆದರೆ, ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಅಧ್ಯಯನ ಮಾಡುವುದು ಸಹ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ದೇವರು ಕೋಪಗೊಳ್ಳುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ, ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಕುಳಿತು ಅಧ್ಯಯನ ಮಾಡುವ ಬದಲು ಆಟವಾಡಬೇಕು, ವ್ಯಾಯಾಮ ಮಾಡಬೇಕು. 

ಜೀವಿತಾವಧಿಯಲ್ಲಿ ಈ 5 ರೀತಿಯ ದಾನ ಮಾಡಿದರೆ ಮೋಕ್ಷ ಪ್ರಾಪ್ತಿ

ಗುಡಿಸುವುದು
ಸೂರ್ಯಾಸ್ತದ ನಂತರ ಗುಡಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದು ಮನೆಯ ಸಂತೋಷ ಮತ್ತು ಅದೃಷ್ಟವನ್ನು ನಾಶ ಪಡಿಸುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios