ಆಂಜನೇಯನ ಈ ಫೋಟೋ ಮನೆಯಲ್ಲಿದ್ದರೆ ಜಗಳ ಜಾಸ್ತಿ
Astrology Prediction in Kannada: ರಾಮಭಕ್ತ ಹನುಮಂತನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಹಾಗಂತ ಎಲ್ಲಾ ಫೋಟೋಗಳನ್ನು ಮನೆಯಲ್ಲಿಟ್ಟು ಪೂಜಿಸುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಹನುಮಂತನ ಯಾವ ಫೋಟೋಗಳು ಮನೆಯಲ್ಲಿ ಇದ್ದರೆ ಶುಭವಲ್ಲವೆಂಬುದನ್ನು ನೋಡೋಣ...
ಹಿಂದೂ ಧರ್ಮದಲ್ಲಿ ದೇವರ (God) ಫೋಟೋಗಳನ್ನು (Photo) ಸಾಮಾನ್ಯವಾಗಿ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ದೇವಸ್ಥಾನಗಳಿಗೆ (Temple) ತೆರಳಿದರೆ ಅಲ್ಲಿಂದ ಬರುವಾಗ ಆ ದೇವರ ಫೋಟೋಗಳನ್ನು ತೆಗೆದುಕೊಂಡು ಬಂದು ಮನೆಯಲ್ಲಿಡುವುದು ಸಂಪ್ರದಾಯವೇ ಎಂಬಂತೆ ಹಲವರು ಪಾಲಿಸುತ್ತಾರೆ. ಹಾಗಾಗಿ ಮನೆಯಲ್ಲಿ ಎಲ್ಲಿ ನೋಡಿದರೂ ದೇವರ ಫೋಟೋಗಳೇ ಕಾಣ ಸಿಗುತ್ತವೆ. ದೇವರು ಒಂದೇ ಆದರೂ ಸಹ ದೇವರ ರೂಪಗಳು, ಅವತಾರಗಳು ಹಲವು ಇರುತ್ತವೆ. ಹೀಗಾಗಿ ಎಲ್ಲಾ ದೇವರನ್ನೂ ಪೂಜಿಸುವುದು ಹಿಂದೂಗಳ ಸಂಸ್ಕೃತಿಯಲ್ಲಿ ಬಂದಿದೆ. ಹೀಗೆ ಯಾವ ಮಾದರಿಯ ಫೋಟೋವನ್ನು ಮನೆಗೆ (Home) ತಂದಿಟ್ಟರೆ (Keep) ಶುಭ (Good) ಎಂಬುದನ್ನು ತಿಳಿದುಕೊಂಡು ತಂದರೆ ಉತ್ತಮ. ಇಲ್ಲದಿದ್ದರೆ ಫೋಟೋ ಜೊತೆಗೆ ಸಮಸ್ಯೆಯನ್ನು (Difficulties) ಜೊತೆಗೆ ತಂದಂತಾಗುತ್ತದೆ.
ದೇವಿಗೆ (Goddess) ಹಲವಾರು ರೂಪಗಳಿರುತ್ತವೆ, ಆದರೆ ಮನೆಗೆ ತಂದು ಪೂಜಿಸುವ (Pooja) ಫೋಟೋಗಳಲ್ಲಿ (Photo) ದೇವಿಯು ಶಾಂತ ಸ್ವರೂಪಳಾಗಿರಬೇಕು. ರೌದ್ರಾವತಾರದಲ್ಲಿರುವ ಫೋಟೋಗಳನ್ನು ಮನೆಗೆ ತಂದು ಪೂಜಿಸುವುದಿಲ್ಲ. ಹಾಗೆಯೇ ಅನೇಕ ದೇವರ ಫೋಟಗಳಿಗೂ ಇದು ಅನ್ವಯಿಸುತ್ತದೆ (Apply). ಅಂತಹ ಫೋಟೋಗಳಲ್ಲಿ ಹನುಮಂತನ ಫೋಟೋ ಕೂಡಾ ಒಂದಾಗಿದೆ. ಹಾಗಾದರೆ ಹನುಮಂತನ (Lord Hanuman) ಯಾವ ಫೋಟೋ ಮನೆಗೆ ತಂದರೆ ಅಶುಭ ಎಂಬುದನ್ನು ತಿಳಿಯೋಣ....
ಹಿಂದೂ ಧರ್ಮದಲ್ಲಿ ಪೂಜೆಗೆ ಮ್ತತು ಪೂಜಿಸುವ ದೇವರಿಗೆ ಅನೇಕ ನಿಯಮಗಳಿವೆ (Rules). ಆ ನಿಯಮಕ್ಕೆ ಬದ್ಧವಾಗಿ ನಡೆದುಕೊಂಡರೆ ಪೂಜೆಗೆ ತಕ್ಕ ಫಲ ದೊರೆಯುತ್ತದೆ. ಹಾಗೆಯೇ ರಾಮಭಕ್ತ ಹನುಮಂತನಿಗೂ ಹಲವಾರು ರೂಪಗಳಿವೆ. ಅವುಗಳಲ್ಲಿ ಕೆಲವು ರೂಪಗಳ ಫೋಟೋವನ್ನು ಮನೆಗೆ ತಂದು ಪೂಜಿಸಬಾರದು, ಇಟ್ಟುಕೊಳ್ಳಲೂ ಬಾರದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯುವುದು ಅವಶ್ಯಕ.
ಹನುಮಂತನಿಗೆ ಪವನಪುತ್ರ, ಸಂಕಟ ವಿಮೋಚನ ಮುಂತಾದ ಅನೇಕ ಹೆಸರುಗಳಿಂದ (Names) ಕರೆಯಲಾಗುತ್ತದೆ. ಹಾಗೆಯೇ ಹನುಮಂತನನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದಲ್ಲಿ ಬೇಗ ಪ್ರಸನ್ನವಾಗುವ ದೇವರಾಗಿದ್ದಾನೆ. ಅಷ್ಟೇ ಅಲ್ಲದೆ ಭಕ್ತರ ಮನೋಕಾಮನೆಗಳನ್ನು ಈಡೇರಿಸುವ ದಯಾಗುಣ ನಿಧಿಯಾಗಿದ್ದಾನೆ. ಹಾಗಾಗಿ ಹನುಮನ ಯಾವ ಫೋಟೋ ಮನೆಗೆ ಒಳಿತಲ್ಲವೆಂದು ನೋಡೋಣ...
ಇದನ್ನು ಓದಿ: Vastu tips: ಈ ಅಭ್ಯಾಸ ಬಿಡಿ ಉದ್ಯೋಗ ಉಳಿಸಿಕೊಳ್ಳಿ
ಈ ಫೋಟೋ ಬೇಡ (Do not keep this photo)
ಹನುಮಂತನು ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ, ಅವನ ವಕ್ಷಸ್ಥಳದಲ್ಲಿ ಶ್ರೀರಾಮನ ವಾಸವಿದೆ. ಹಾಗಾಗಿ ಹನುಮಂತನು ತನ್ನ ಎದೆ (Chest) ಬಗೆದು ಅದರಲ್ಲಿ ತಾನು ಪೂಜಿಸುವ ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣನನ್ನು ತೋರಿಸಿದ ಫೋಟೋ ಅನೇಕ ಕಡೆಗಳಲ್ಲಿ ಕಾಣ ಸಿಗುತ್ತದೆ. ಹಾಗಂತ ಅದನ್ನು ಮನೆಯಲ್ಲಿಟ್ಟು ಪೂಜಿಸಬಾರದು. ಹೀಗೆ ಮಾಡುವುದರಿಂದ ಮನೆಯ ನೆಮ್ಮದಿ ನಾಶವಾಗುತ್ತದೆ.
ಆಕಾಶದಲ್ಲಿ ಹಾರುತ್ತಿರುವ ಫೋಟೋ (Flying Photo)
ಹನುಮಂತನು ಆಕಾಶದಲ್ಲಿ (Sky) ಹಾರುತ್ತಿರುವ ಫೋಟೋ ಇಟ್ಟುಕೊಳ್ಳುವುದು ಅಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹನುಮಂತನು ಸಂಜೀವಿನಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಹಾರುತ್ತಿರುವ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ.
ಲಂಕಾದಹನದ ಫೋಟೋ (Lanka dahana)
ಹನುಮಂತನು ತನ್ನ ಬಾಲದಿಂದ ಲಂಕೆಯನ್ನು (Lanka) ದಹಿಸಿದ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭವಲ್ಲ. ಅಷ್ಟೇ ಅಲ್ಲದೆ ಹನುಮಂತನು ರಾಕ್ಷಸರನ್ನು ಸಂಹಾರ ಮಾಡಿದ ಫೋಟೋವನ್ನು (Photo) ಸಹ ಮನೆಯಲ್ಲಿಡಬಾರದು. ಇದರಿಂದ ಮನೆಯ ಸುಖ –ಸಮೃದ್ಧಿ ಹಾನಿಯಾಗುತ್ತದೆ.
ಇದನ್ನು ಓದಿ: Chanakya Neeti: ಯಶಸ್ಸಿಗೆ ಪಾಲಿಸಿ ಈ ಐದು ಸೂತ್ರ
ಹನುಮಂತನ ಭುಜದ ಮೇಲೆ ರಾಮ – ಲಕ್ಷ್ಮಣರ ಕೂರಿಸಿದ ಫೋಟೋ
ಹನುಮಂತನು ತನ್ನ ಭುಜದ ಮೇಲೆ ರಾಮ – ಲಕ್ಷ್ಮಣರನ್ನು ಕೂರಿಸಿಕೊಂಡ ಫೋಟೋ ಮನೆಗೆ ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಅಂತಹ ಫೋಟೋಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative energy) ಹೆಚ್ಚು ಮಾಡುತ್ತವೆ. ಹಾಗಾಗಿ ಈ ರೀತಿ ಫೋಟೋಗಳನ್ನು ಮನೆಯಲ್ಲಿಡುವುದು ತೊಂದರೆಯನ್ನು ಆಹ್ವಾನಿಸಿದಂತಾಗುತ್ತದೆ.