Asianet Suvarna News Asianet Suvarna News

Wednesday ಈ 4 ಕೆಲಸ ಮಾಡಿದ್ರೆ ಬದುಕು ಬರ್ಬಾದ್ ಆಗುತ್ತೆ!

ಬುಧವಾರ ಗಣಪತಿಯ ದಿನ. ಬುಧ ಗ್ರಹ ಈ ದಿನದ ಅಧಿಪತಿ. ಈ ದಿನ ಕೆಲವೊಂದು ಕೆಲಸ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಅಶುಭ ಫಲ ಎದುರಿಸಬೇಕಾಗುತ್ತದೆ. 

Do not do these 4 things by mistake on Wednesday skr
Author
Bangalore, First Published Apr 13, 2022, 10:24 AM IST

ಹಿಂದೂ ಧರ್ಮದಲ್ಲಿ ವಾರದ ಒಂದೊಂದು ದಿನವನ್ನು ಒಂದೊಂದು ಗ್ರಹಕ್ಕೂ, ಒಬ್ಬೊಬ್ಬ ದೇವರಿಗೂ ಸಮರ್ಪಿಸಲಾಗಿದೆ. ಅಯಾ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂಬುದರಿಂದ ಹಿಡಿದು ಏನು ಮಾಡಬೇಕು, ಏನು ಮಾಡಬಾರದು ಎಲ್ಲವನ್ನೂ ತಿಳಿಸಲಾಗಿದೆ. ಅಂತೆಯೇ ಬುಧವಾರ(Wednesday)ವನ್ನು ಎಲ್ಲರ ಮೆಚ್ಚಿನ ದೇವರಾದ ಗಣೇಶನಿಗೆ ಸಮರ್ಪಿಸಲಾಗಿದೆ. ಬುಧ ಗ್ರಹ ಈ ದಿನದ ಅಧಿಪತಿ. ಈ ದಿನ ಜನರು ವಿಶೇಷವಾಗಿ ಗಣೇಶ ಪೂಜೆಯಲ್ಲಿ ತೊಡಗುತ್ತಾರೆ. ಆದರೆ, ಈ ದಿನ ಕೆಲ ವಿಷಯಗಳಿಗೆ ನಿಷೇಧವನ್ನೂ ಹೇರಲಾಗಿದೆ. ಹಾಗೆ ಮಾಡುವುದರಿಂದ ಗಣಪತಿಯ ಕೋಪಕ್ಕೆ ಪಾತ್ರವಾಗಬೇಕಾಗುತ್ತದೆ. ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ, ಬುಧವಾರ ಮಾಡಲೇಬಾರದ ನಾಲ್ಕು ಕೆಲಸಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳನ್ನು ಅವಮಾನಿಸಬಾರದು(insult)
ಹೆಣ್ಣುಮಕ್ಕಳನ್ನಾಗಲೀ, ಯಾರನ್ನೇ ಆಗಲಿ, ವಾರದ ಯಾವ ದಿನ ಅವಮಾನಿಸಿದರೂ ತಪ್ಪೇ. ಅದರಲ್ಲೂ ಬುಧವಾರ ಹೆಣ್ಣುಮಕ್ಕಳನ್ನು ಅವಮಾನಿಸಿದರೆ, ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಚ್ಚರ! ಅದರ ಬದಲು, ಬುಧವಾರ ಹೆಣ್ಣುಮಕ್ಕಳನ್ನು ಮನೆಗೆ ಕರೆದು ಸತ್ಕರಿಸಿದರೆ ಹೆಚ್ಚಿನ ಪುಣ್ಯ ಫಲ ದೊರೆಯುತ್ತದೆ. ಈ ದಿನದ ಬಣ್ಣ ಹಸಿರಾಗಿರುವುದರಿಂದ ಹೆಣ್ಣುಮಕ್ಕಳಿಗೆ ಹಸಿರು ಬಳೆ, ಹಸಿರು ವಸ್ತ್ರ ನೀಡುವುದು, ಬಾಗೀನ ಕೊಡುವುದರಿಂದ ಒಳ್ಳೆಯದಾಗುತ್ತದೆ. ಇಂದು ಹೊರ ಹೋಗುವಾಗ ಹೆಣ್ಮಕ್ಕಳ ಆಶೀರ್ವಾದ ಪಡೆಯವುದರಿಂದ ಒಳಿತಾಗುತ್ತದೆ. ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. ಅವರಿಗೆ ಉಡುಗೊರೆ(gifts) ನೀಡುವುದು ಕೂಡಾ ಉತ್ತಮವೇ. 

Vastu Tips: ಮನೆ ನಿರ್ಮಾಣಕ್ಕೆ ಶುಭ ಮುಹೂರ್ತ ಯಾವುದು ಗೊತ್ತಾ?

ಹಾಲನ್ನು ಸುಡಬಾರದು, ವ್ಯರ್ಥ ಮಾಡಕೂಡದು
ಹಾಲು ಉಕ್ಕಿಸುವುದು ಮನೆಯ ಗೃಹಪ್ರವೇಶವಾದಾಗ ಮಾತ್ರ ಸಂತೋಷ ನೀಡುತ್ತದೆ. ಬೇರೆಲ್ಲ ದಿನ ಅದೊಂದು ತಲೆಬಿಸಿಯೇ. ಹಾಗಿದ್ದೂ ಹಾಲು ನಾವು ಕ್ಷಣ ಎಚ್ಚರ ತಪ್ಪಿದಾಗ ನೋಡಿ ಉಕ್ಕಿಯೇ ಬಿಡುತ್ತದೆ. ಆದರೆ, ಬುಧವಾರ ಮಾತ್ರ ಮನೆಯಲ್ಲಿ ಅಪ್ಪಿತಪ್ಪಿಯೂ ಹಾಲು(milk) ಉಕ್ಕಕೂಡದು. ಹಾಲು ಕಾಯಲಿಟ್ಟಾಗ ಎಚ್ಚರಿಕೆಯಿಂದ ಒಲೆ ಮುಂದೆಯೇ ಇರಿ. ಈ ದಿನ ಹಾಲನ್ನು ತಳ ಹೊತ್ತಿಸುವುದು ಕೂಡಾ ತಪ್ಪು ಎಂದೆನಿಸಿಕೊಂಡಿದೆ. ಹಾಗಾಗಿ, ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳ ಸಹವಾಸಕ್ಕೆ ಬುಧವಾರ ಹೋಗದಿರುವುದೇ ಕ್ಷೇಮ. 

Jupiter Transit 2022: ಈ ರಾಶಿಗಳಿಗೆ ಗುರುಬಲ ಬರೋಕೆ ಇನ್ನೊಂದೇ ದಿನ!

ಅಳಿಯ ಅತ್ತೆ ಮನೆಗೆ ಹೋಗಕೂಡದು!
ಶಾಸ್ತ್ರಗಳಲ್ಲಿ ಮಂಗಳವಾರ, ಶುಕ್ರವಾರ ಮನೆಯಿಂದ ಮಗಳನ್ನು ಕಳಿಸಬಾರದು ಎಂಬುದನ್ನು ಕೇಳಿರಬಹುದು. ಆದರೆ, ಅಳಿಯನಿಗಿರುವ ನಿಯಮಗಳನ್ನು ನೀವು ಕೇಳಿರಲಿಕ್ಕಿಲ್ಲ. ಆದರೆ, ಪುರುಷರು ಬುಧವಾರ ತಮ್ಮ ಅತ್ತೆಯ(mother-in-law) ಮನೆಗೆ ಹೋಗಬಾರದು. ಹೌದು, ಮೊದಲನೆಯದಾಗಿ ಗಂಡಸರು ಬುಧವಾರ ಪ್ರಯಾಣ ಮಾಡುವುದೇ ಒಳಿತಲ್ಲ. ಅಶುಭ ಫಲಕ್ಕೆ ಕಾರಣವಾಗುತ್ತದೆ. ಇನ್ನೇನಾದರೂ ಅವರು ಅತ್ತೆ ಮನೆಗೆ ಹೋದರೆ, ಅತ್ತೆ ಮನೆಯವರಿಗೂ, ಅಳಿಯನಿಗೂ ಸಮಸ್ಯೆಗಳಾಗುತ್ತದೆ. ಇಷ್ಟೇ ಅಲ್ಲ, ಬುಧವಾರ ಗಂಡಸರು ಹೊಸ ವಸ್ತ್ರವನ್ನು ಕೂಡಾ ಧರಿಸಬಾರದು. ಹೊಸ ಶೂ ಸೇರಿದಂತೆ ಹೊಸ ವಸ್ತುಗಳಿಂದ ಅಂದು ದೂರವಿರುವುದು ಒಳ್ಳೆಯದು. 

ಹಸಿರು ವಸ್ತು(green things) ಖರೀದಿ ಬೇಡ
ಮನೆಯಲ್ಲಿ ತರಕಾರಿ(vegetables) ಮುಗಿಯೆತೆಂದು ಖರೀದಿಗೆ ಹೋಗಿ ಪಾಲಕ್, ಹಸಿಮೆಣಸು, ಕೊತ್ತಂಬರಿ, ಪೇರಳೆ ಹಣ್ಣು ಸೇರಿದಂತೆ ಹಸಿರು ಹಣ್ಣುತರಕಾರಿಗಳನ್ನು ಕೊಳ್ಳುವ ಮೊದಲು, ಅದು ವಾರದ ಯಾವ ದಿನವೆಂದು ಯೋಚಿಸಿ. ಒಂದು ವೇಳೆ ಬುಧವಾರವಾದರೆ ಈ ಯಾವ ತರಕಾರಿಯನ್ನೂ ಕೊಳ್ಳಬೇಡಿ. ಹೌದು, ಬುಧವಾರ ಹಸಿರಾದ ಯಾವುದೇ ವಸ್ತುಗಳನ್ನು ಖರೀದಿಸುವುದು ಸಲ್ಲದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios