Asianet Suvarna News Asianet Suvarna News

Personality Traits: ಶುಕ್ರವಾರ ಜನಿಸಿದವರ ವ್ಯಕ್ತಿತ್ವವೇ ಆಕರ್ಷಕ

ಶುಕ್ರವಾರ ಜನಿಸಿದ ವ್ಯಕ್ತಿಗಳು ಸ್ವಭಾತಃ ಹೇಗಿರುತ್ತಾರೆ? ಅವರ ವ್ಯಕ್ತಿತ್ವ ಎಂಥದ್ದು? ಗುಣಗಳು ಏನು? ಅವರು ಹೇಗೆ ಇತರರಿಗಿಂತ ಭಿನ್ನ? ಅವರ ವೃತ್ತಿ ಜೀವನ, ಸಾಂಸಾರಿಕ ಜೀವನ ಹೇಗಿರಲಿವೆ? ಅವರ ಆರ್ಥಿಕ ಸ್ಥಿತಿ ಏನು..? 

Unique Characteristics of People Born on Friday and their future
Author
Bangalore, First Published Jan 29, 2022, 3:28 PM IST

ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ಅನೇಕ ಅಂಶಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯ ಹುಟ್ಟು (Born), ದಿನಾಂಕ (Date), ಘಳಿಗೆಗಳ (Time) ಆಧಾರದ ಮೇಲೆ ಹೇಗೆ ಭವಿಷ್ಯ (Future) ಹಾಗೂ ವ್ಯಕ್ತಿತ್ವವನ್ನು (Personality) ತಿಳಿಯಬಹುದೋ ಹಾಗೆಯೇ ವ್ಯಕ್ತಿಯು ಹುಟ್ಟಿದ ವಾರದ (Week) ಮೂಲಕವೂ ನಾವು ಅವರ ಮುಂದಿನ ದಾರಿಯನ್ನು ಅರಿಯಬಹುದಾಗಿದೆ. ಈಗ ಶುಕ್ರವಾರ (Friday) ಜನಿಸಿದವರು ಏನು..? ಎತ್ತ..? ಎಂಬುದನ್ನು ನೋಡೋಣ.

ಶುಕ್ರವಾರ ಶುಕ್ರನ ದಿನವಾಗಿದೆ. ಹೀಗಾಗಿ ಶುಕ್ರನ (Venus) ಅನುಗ್ರಹ ಇರಲಿದೆ. ಆದರೆ, ಈ ದಿನ ಜನಸಿದವರು ಸ್ವಲ್ಪ ಸೋಷಿಯಲ್ ಆಗಿರುವುದಲ್ಲದೆ, ಸಾಮಾಜಿಕವಾಗಿ (Social) ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇದರ ಜೊತೆಗೆ ಕಲಾತ್ಮಕ (Artistic) ಪ್ರತಿಭೆಯನ್ನು ಹೊಂದಿರುವ ಇವರು, ಸ್ವಲ್ಪ ಸೋಮಾರಿಗಳೂ (Lazy) ಆಗಿರುತ್ತಾರೆ. ಜೊತೆಗೆ ಆರಾಮ್ ಲೈಫ್  (Life) ಅನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಬೇರೆಯವರ ಅಭಿಪ್ರಾಯಗಳಿಗೆ ಹೆಚ್ಚು ಮನ್ನಣೆಕೊಡುವ ಇವರು ಸ್ವಂತ ನಿರ್ಣಯದ ಮೇಲೆ ಕೆಲವೊಮ್ಮೆ ಅಷ್ಟಾಗಿ ಕಟ್ಟುಬೀಳುವವರಲ್ಲ.  

ಇದನ್ನು ಓದಿ: Numerology: ಪಾದಾಂಕ 7, ಸಹಜ ನಿಮಗೆ ಏಳು ಬೀಳು

ಆಕರ್ಷಕ ವ್ಯಕ್ತಿತ್ವ (Attractive personality)
ಶುಕ್ರವಾರ ಜನಿಸಿದವರು ಆಕರ್ಷಕ ವ್ಯಕ್ತಿತ್ವ ಉಳ್ಳವರು. ಯಾರನ್ನಾದರೂ ಆಕರ್ಷಿಸುವ, ಮೋಡಿ ಮಾಡುವ ಕಲೆ ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ, ಸ್ಪರ್ಧಾತ್ಮಕ (Competitive) ವಿಷಯಕ್ಕೆ ಬಂದರೆ ಕೆಲವೊಮ್ಮೆ ಎದುರಾಳಿಯನ್ನು ಕಂಡು ಅಸೂಯೆಪಡುವ (Jealousy) ಮನಸ್ಥಿತಿ ಇವರದ್ದಾಗಿರುತ್ತದೆ. ಇವರು ಕೈ ಹಾಕಿದ ಕ್ಷೇತ್ರಗಳಲ್ಲಿ ಯಶಸ್ಸನ್ನು (Success) ಸುಲಭವಾಗಿ ಕಾಣಬಹುದಾಗಿದ್ದು, ಹಣದ ಕೊರತೆ (Lack of money) ಇವರಿಗೆ ಎಂದೂ ಆಗದು. ಜೊತೆಗೆ ಆರ್ಥಿಕವಾಗಿಯೂ ಶಕ್ತಿವಂತರಾಗಿರುತ್ತಾರೆ. ಇದೇ ವೇಳೆ ಸಂಗಾತಿಯ (Partner) ಆಯ್ಕೆಯಲ್ಲಿಯೂ ಇವರು ಉತ್ತಮರಾಗಿರುತ್ತಾರೆ. ಶುಕ್ರವಾರ ಜನಿಸಿದವರ ಅದೃಷ್ಟದ ಸಂಖ್ಯೆ (Lucky Number) 6. ಇವರಿಗೆ ಸಂತೋಷದ ಜೀವನ ಸದಾ ಲಭ್ಯವಾಗುತ್ತದೆ. ಅದೃಷ್ಟವನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ತಿಳಿದುಕೊಳ್ಳಬೇಕು. ಜೊತೆಗೆ ಮುಂಬರುವ ತೊಂದರೆ, ತಾಪತ್ರಯಗಳನ್ನು ಎದುರಿಸಲು ಶುಕ್ರವಾರದ ದಿನ ದಾನ ಮಾಡಬೇಕಿದೆ. 

ವೃತ್ತಿಜೀವನದಲ್ಲಿ (Career) ಹೇಗೆ..? 
ಈ ವಾರದಂದು ಜನಿಸಿದವರ ವೃತ್ತಿ ಜೀವನ ಉತ್ತಮವಾಗಿಯೇ ಇರಲಿದೆ. ಆದರೆ, ಹಣದ ವಿಷಯ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ದುಡುಕುವ ನಿರ್ಧಾರವನ್ನು ಮಾಡಬಾರದು. ಇವರು ಬಹಳ ಸಾಮರ್ಥ್ಯವನ್ನು (Capacity) ಹೊಂದಿದ್ದು, ಎಂತಹ ಕೆಲಸವನ್ನಾದರೂ ಸಾಧಿಸುವವರು. ಇವರಿಗೆ ಸೃಜನಶೀಲತೆ ಮತ್ತು ನಾವಿನ್ಯತೆಯ (Creativity and innovation) ಮನೋಭಾವವೂ ಇದೆ. ಜೊತೆಗೆ ನಿರ್ಧಾರದಲ್ಲಿ ಸ್ವಂತಿಕೆ ಇದೆ. ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುವ ಇವರು, ಹೃದಯದ (Heart) ಮಾತನ್ನು ಕೇಳಿದರೆ ಬಹಳ ಉತ್ತಮ. 

ಭಾವ ಜೀವಿ (Emotional being)
ಶುಕ್ರವಾರ ಜನಿಸಿದವರು ಎಲ್ಲರಿಗೂ ಪ್ರೀತಿಪಾತ್ರರು. ಅಷ್ಟೇ ಅಲ್ಲದೆ, ಭಾವನಾತ್ಮಕ ಜೀವಿ ಸಹ. ಇವರು ಯಾವಾಗಲೂ ಜನರ ನಡುವೆಯೇ ಇರಲು ಇಷ್ಟಪಡುತ್ತಾರೆ. ಹೀಗಾಗಿ ಇವರ ಸುತ್ತಲೇ ಇರುವ ಪ್ರೀತಿಸುವ (Love) ಸಂಗಾತಿಯನ್ನು ಕಂಡುಕೊಳ್ಳುವುದು ಇವರಿಗೆ ತುಂಬಾ ಸುಲಭ. ಆದರೆ, ಅವರನ್ನು ಗುರುತಿಸುವಾಗ ಹೆಚ್ಚಿನ ಕಾಳಜಿ ವಹಿಸುವ ಅಗತ್ಯತೆ ಇದೆ. ಒಮ್ಮೆ ಪ್ರೀತಿಯಲ್ಲಿ ಬಿದ್ದರೆ, ಅದರಲ್ಲೇ ಮುಳುಗಿಹೋಗುವ ಪ್ರವೃತ್ತಿ ಇವರದ್ದು. ಹೀಗಾಗಿ ಒಂದು ವೇಳೆ ಪ್ರೇಮ ವೈಫಲ್ಯವಾದರೆ (Love failure) ಆ ವಿಷಯವನ್ನು ಅರಗಿಸಿಕೊಳ್ಳುವುದು ಇವರಿಗೆ ಕಷ್ಟಸಾಧ್ಯ. ಹೀಗಾಗಿ ಲವ್ ಮಾಡುವ ಮುಂಚೆ ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಬಳಿಕವಷ್ಟೇ ಮುಂದುವರಿಯುವುದು ಉತ್ತಮ.

ಇದನ್ನು ಓದಿ: ಈ ನಾಲ್ಕು ರಾಶಿಗಳಿಂದ Break up ನೋವನ್ನು ಸಹಿಸೋದು ಸಾಧ್ಯವೇ ಇಲ್ಲ..

ಸೆಕ್ಸ್‌ನಲ್ಲಿ (Sex) ಸಖತ್ ಇಂಟ್ರೆಸ್ಟ್
ಶುಕ್ರವಾರ ಜನಿಸಿದವರ ವೈವಾಹಿಕ ಜೀವನವು ಬಹಳ ಚೆನ್ನಾಗಿರಲಿದೆ. ಕಾರಣ, ಇವರು ತಮ್ಮವರನ್ನು ತುಂಬಾ ಪ್ರೀತಿಸುವ ಗುಣವನ್ನು ಹೊಂದಿರುತ್ತಾರೆ. ಈ ದಿನ ಜನಿಸಿದವರಿಗೆ ಸೆಕ್ಸ್‌ನಲ್ಲಿ ಸಖತ್ ಇಂಟ್ರೆಸ್ಟ್. ಅದರಂತೆಯೇ ಸಂಗಾತಿಯಿಂದಲೂ ಪಾಸಿಟಿವ್ ಪ್ರತಿಕ್ರಿಯೆಯನ್ನು ಇದರಿಂದ ಪಡೆಯುತ್ತಾರೆ. ಐಷಾರಾಮಿ ಜೀವನವನ್ನು (Luxury Life) ಇಷ್ಟಪಡುವ ಇವರು, ಮನೆಯನ್ನು ಅತ್ಯಾಧುನಿಕ ವಸ್ತುಗಳಿಂದ ಅಲಂಕರಿಸಲು ಇಷ್ಟಪಡುತ್ತಾರೆ. 

Follow Us:
Download App:
  • android
  • ios