Overcoming Negativity: ಇಂಥ ಋಣಾತ್ಮಕತೆಗಳಿಂದ ದೂರವಿದ್ದರೆ ನಿಮ್ಮಷ್ಟು ಸುಖಿ ಯಾರಿಲ್ಲ..
ನಿಮ್ಮ ಸ್ವಭಾವದಲ್ಲಿರಬಹುದಾದ ನಕಾರಾತ್ಮಕತೆಯಿಂದಾಗಿ ಬದುಕಲ್ಲಿ ಬಹಳಷ್ಟು ನೋವು, ಬೇಜಾರು, ದುಃಖವೇ ತುಂಬುತ್ತದೆ. ಪಾಸಿಟಿವಿಟಿ ಬೇಕೆಂದರೆ ಮೊದಲು ಇಂಥ ನೆಗೆಟಿವಿಟಿಯಿಂದ ಕಳಚಿಕೊಳ್ಳಬೇಕು.
ನೆಗೆಟಿವ್ ಯೋಚನೆಗಳು, ಮಾತುಗಳು ಹಾಗೂ ಕೆಲಸಗಳು ವ್ಯಕ್ತಿಯನ್ನು ದುಃಖ, ನೋವಿಗೆ ತಳ್ಳಿ ಖಿನ್ನತೆ(depression)ಗೊಳಪಡಿಸುತ್ತವೆ. ನಮ್ಮ ಮನಸ್ಸು ಹೇಗಿರುತ್ತದೋ ನಮ್ಮ ಬದುಕಿನ ನಿರ್ಧಾರಗಳು, ನಮಗೆ ಸಿಗುವ ಜನರು, ಸಂದರ್ಭ(situation) ಎಲ್ಲವೂ ಅದರ ಮೇಲೆ ಅವಲಂಬಿತವಾಗಿರುತ್ತವೆ. ಇವುಗಳ ಜೊತೆ ಒಂಟಿತನ, ತಿರಸ್ಕಾರ ಭಾವಗಳು ಸೇರಿಕೊಂಡರಂತೂ ಮುಗಿಯಿತು, ನಮ್ಮ ಇಡೀ ದೇಹ, ಮನಸ್ಸನ್ನು ಋಣಾತ್ಮಕ ಯೋಚನೆಗಳೇ ಆಳತೊಡಗುತ್ತವೆ. ನೀವು ಈ ಕೆಳಗಿನ ಋಣಾತ್ಮಕ ಯೋಚನೆಗಳಿಂದ ಕಳಚಿಕೊಂಡರೆ ಅತ್ಯುತ್ತಮ ವ್ಯಕ್ತಿತ್ವದ ಜೊತೆ, ಉತ್ತಮ ಜೀವನ ಹೊಂದುವಲ್ಲಿ ಅನುಮಾನವಿಲ್ಲ.
ಪರ್ಫೆಕ್ಷನ್(Perfection)
ಪರಿಪೂರ್ಣರಾಗಿರಬೇಕೆಂಬ ಆಸೆ ತಪ್ಪಲ್ಲ. ಆದರೆ, ಅತಿಯಾಗಿ ಪರಿಪೂರ್ಣತೆ ಸಾಧಿಸುವುದೇ ಗುರಿಯಾದಾಗ ಅದು ವಿಷಕಾರಿಯಾಗಬಲ್ಲದು. ತಾನು ಯಾವಾಗಲೂ ಪರಿಪೂರ್ಣವಾಗಿರುತ್ತೇನೆ, ತಪ್ಪೇ ಮಾಡುವುದಿಲ್ಲ ಎಂಬ ನಂಬಿಕೆ ನಿಧಾನವಾಗಿ ಅಹಂಕಾರವಾಗಿಯೂ ಬದಲಾಗಬಹುದು. ಅಲ್ಲದೆ, ಅದು ನಿಮ್ಮ ಮೇಲೇ ನಿಮಗೆ ಅನುಮಾನ, ಕಡಿಮೆ ಅತ್ಮವಿಶ್ವಾಸ ಹಾಗೂ ಅಭದ್ರತೆ(insecurity)ಯ ಭಾವಗಳಿಗೆ ಕಾರಣವಾಗಬಹುದು.
ತೀರ್ಪು(Judgements)
ಮತ್ತೊಬ್ಬರನ್ನು ಜಡ್ಜ್ ಮಾಡುವುದು, ಅವರ ಎಲ್ಲ ಕ್ರಿಯೆ, ಅಭಿಪ್ರಾಯಗಳ ಬಗ್ಗೆಯೂ ತೀರ್ಪು ನೀಡುವುದರಿಂದ ನೀವೇನು ದೊಡ್ಡ ಜನವಾಗುವುದಿಲ್ಲ. ಬದಲಿಗೆ ಮತ್ತೊಬ್ಬರ ಕಣ್ಣಿನಲ್ಲಿ ಸಣ್ಣವರಾಗುತ್ತೀರಿ. ಇಂಥ ಸ್ವಭಾವ ಬೆಳೆಸಿಕೊಂಡರೆ ಸದಾ ಗಾಸಿಪ್ ಮಾಡುವುದು, ನಕಾರಾತ್ಮಕ ಮಾತುಗಳಲ್ಲಿ ತೊಡಗಿರುವುದೇ ಆಗಿರುತ್ತದೆ. ಮತ್ತೊಬ್ಬರ ನೆಗೆಟಿವ್ ಸ್ವಭಾವದ ಬಗ್ಗೆ ಮಾತನಾಡುತ್ತಾ ನೀವೇ ಸಂಪೂರ್ಣ ನೆಗೆಟಿವ್ ಆಗಿಬಿಡುತ್ತೀರಿ.
Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ
ನಿಯಂತ್ರಣ(Control)
ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಧಿಕಾರ(power)ವಲ್ಲ. ಅದು ನಿಮ್ಮೊಳಗಿನ ಭಯವನ್ನು ಸೂಚಿಸುತ್ತದೆ. ಅದನ್ನು ಬೇಗ ಒಪ್ಪಿಕೊಂಡಷ್ಟೂ ಬೇಗ ನೀವು ಪಾಸಿಟಿವ್ ಆಗಲಿರುವಿರಿ. ನೀವು ಮತ್ತೊಬ್ಬರನ್ನು ನಿಯಂತ್ರಣ ಮಾಡಲು ಹೋದರೆ, ನಿಧಾನವಾಗಿ ನಿಮ್ಮ ಮೇಲಿನ ನಿಯಂತ್ರಣವೇ ನಿಮ್ಮಿಂದ ತಪ್ಪಿ ಹೋಗುತ್ತದೆ. ಹಾಗಾದಾಗ ಸೋಲುಗಳ ಸುಳಿಯಲ್ಲಿ ಸಿಕ್ಕಿ ಬೀಳುವಿರಿ.
ಈ ವಸ್ತುಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ !
ಚಿಂತೆಗಳು(Worries)
ಅತಿಯಾಗಿ ಚಿಂತೆ ಮಾಡುವುದರಿಂದ ಯಾವುದೇ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಬದಲಿಗೆ ನಿಮ್ಮ ಮನಸ್ಸು ಸಂಪೂರ್ಣ ಹಾಳಾಗುತ್ತದೆ. ಬಹಳಷ್ಟು ವಿಷಯಗಳು ನಾವು ಚಿಂತಿಸಿದರೂ, ಚಿಂತಿಸದಿದ್ದರೂ ಸಮಯ ಕಳೆದಂತೆ ಸರಿಯಾಗುತ್ತವೆ. ಮತ್ತೆ ಕೆಲವಕ್ಕೆ ಚಿಂತಿಸುವುದು ಬಿಟ್ಟು ಯೋಚಿಸಲು ತೊಡಗಿದಾಗ ಪರಿಹಾರಗಳು ಸಿಗುತ್ತವೆ. ಯಾವುದೇ ವಿಷಯದಲ್ಲಿ ಯಶಸ್ಸಿಗೆ ಚಿಂತಿಸುವುದು ಅಡ್ಡಿಯಾಗುತ್ತದೆ.
ಕೆಟ್ಟದ್ದನ್ನೇ ಯೋಚಿಸುವುದು
ಬಹಳಷ್ಟು ಬಾರಿ ಜನರಿಗೆ ತಮ್ಮ ಯೋಚನೆಗಳ ಮೇಲೆ ನಿಯಂತ್ರಣವೇ ಇರುವುದಿಲ್ಲ. ಎಲ್ಲ ವಿಷಯಕ್ಕೂ ಕೆಟ್ಟದ್ದಾದರೆ ಎಂಬ ಯೋಚನೆಯೇ ಅವರನ್ನು ಕಾಡುತ್ತಿರುತ್ತದೆ. ಯಾವುದರಲ್ಲೂ ಕೆಟ್ಟದ್ದೇ ಆದರೆ ಎಂಬ ಯೋಚನೆಯು ಮುಂದೆ ಹೋಗಲು ಬಿಡುವುದೇ ಇಲ್ಲ. ಎಲ್ಲ ಒಳಿತಾಗಲಿದೆ ಎಂಬ ಯೋಚನೆಯಿಂದ ಮುಂದುವರಿಯುವುದನ್ನು ರೂಢಿಸಿಕೊಳ್ಳಬೇಕು. ವಾಹನ ಹೊರಟಾಗ ಆ್ಯಕ್ಸಿಡೆಂಟ್ ಆದರೆ ಎಂಬ ಭಯ, ಮಗು ಶಾಲೆಗೆ ಹೊರಟರೆ ಕೆಟ್ಟವರ ಸಂಗವಾದರೆ ಎಂಬ ಭಯ.. ಹೀಗೆ ಪ್ರತಿಯೊಂದರಲ್ಲೂ ಕೆಟ್ಟದ್ದಾದರೆ ಎಂದು ಯೋಚಿಸುವುದನ್ನು ಬಿಡಿ. ಹ್ಯಾಪಿ ಎಂಡಿಂಗ್‌ನಲ್ಲಿ ನಂಬಿಕೆ ಇಡಿ.
ದೂರುವುದು(complaining)
ಎಲ್ಲವನ್ನೂ, ಎಲ್ಲರನ್ನೂ ದೂರುವುದು ಮಾಡುತ್ತಿದ್ದೀರಾ ಎಂದು ಮೊದಲು ಗಮನಿಸಿಕೊಳ್ಳಿ. ನನಗೇ ಇಂಥವರು ಸಿಗುತ್ತಾರೆ, ನನಗೇ ಹೀಗಾಗುತ್ತದೆ, ನನಗೇ ಹಾಳಾದದ್ದೆಲ್ಲ ಸಿಗುತ್ತದೆ ಎಂಬ ಯೋಚನೆಗಳು ನಿಮ್ಮನ್ನು ಬಾಧಿಸುತ್ತವಾದರೆ, ಬಹುಷಃ ನಿಮಗೆ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುವ, ದೂರುವ ಅಭ್ಯಾಸ ಇದೆ ಎಂದರ್ಥ. ಹಣ್ಣು, ತರಕಾರಿಯಿಂದ ಹಿಡಿದು ಮನುಷ್ಯರವರೆಗೆ ಎಲ್ಲವನ್ನೂ ದೂರುವ ಅಭ್ಯಾಸ ಬಿಟ್ಟು ಬಿಡಿ. ಎಲ್ಲವೂ ಹೇಗಿದೆಯೋ ಹಾಗೆ ಸ್ವೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜೊತೆಗೆ, ಎಲ್ಲದರಲ್ಲೂ ಏನು ಒಳ್ಳೆಯದಿದೆ, ಹೊಗಳುವಂತದಿದೆ ಎಂದು ಪ್ರಯತ್ನಪೂರ್ವಕವಾಗಿ ಹುಡುಕಿ ಮಾತಾಡಿ. ನಿಧಾನಕ್ಕೆ ಎಲ್ಲದರಲ್ಲೂ ಒಳ್ಳೆಯದೇ ಕಾಣುತ್ತದೆ.