Indian Temples: ಉತ್ತರ & ದಕ್ಷಿಣದ ದೇವಸ್ಥಾನ ನಿರ್ಮಾಣದಲ್ಲಿ ಭಿನ್ನತೆ ಯಾಕೆ ಗೊತ್ತಾ?
ಉತ್ತರ ಭಾರತದ ದೇವಸ್ಥಾನ ವಿನ್ಯಾಸ ಭಿನ್ನವಾಗಿರುತ್ತದೆ. ದಕ್ಷಿಣ ಭಾರತದ ದೇವಸ್ಥಾನದ ವಿನ್ಯಾಸವೇ ಬೇರೆಯಾಗಿರುತ್ತದೆ. ಒಂದೇ ದೇಶವಾದ್ರೂ ದೇವಸ್ಥಾನಗಳ ನಿರ್ಮಾಣದಲ್ಲಿ ಈ ಭಿನ್ನತೆ ಏಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಜನರ ಜೀವನಶೈಲಿ, ಪದ್ಧತಿ, ಆಚರಣೆಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗುತ್ತ ಹೋಗುತ್ತದೆ. ಹಾಗೆಯೇ ಕಟ್ಟಡಗಳ ಶೈಲಿಯಲ್ಲೂ ಕೂಡ ನಾವು ವಿಭಿನ್ನತೆಯನ್ನು ಕಾಣಬಹುದು. ಇದಕ್ಕೇ ಇರಬೇಕು ವಿವಿಧತೆಯಲ್ಲಿ ಏಕತೆ ಎಂಬ ಮಾತನ್ನು ಭಾರತ ಕೂಗಿ ಕೂಗಿ ಹೇಳುವುದು.. ಈ ವಿವಿಧತೆ ಬರಿಯ ಜನರ ಪದ್ಧತಿಗಷ್ಟೇ ಸೀಮಿತವಾಗಿಲ್ಲ. ಏಕೆಂದರೆ ಭಾರತದಲ್ಲಿನ ವಿವಿಧ ಗುಡಿ ಗೋಪುರಗಳು ಕೂಡ ಭಿನ್ನ ಭಿನ್ನ ಶೈಲಿಯಲ್ಲೇ ನಿರ್ಮಾಣವಾಗಿವೆ. ಇದಕ್ಕೆ ಉದಾಹರಣೆಯಾಗಿ ನಾವು ದಕ್ಷಿಣ ಭಾರತದ ಮತ್ತು ಉತ್ತರ ಭಾರತದ ದೇವಾಲಯಗಳನ್ನೇ ನೋಡಬಹುದು.
ಭಾರತ (India) ದ ಮಂದಿರಗಳಲ್ಲಿನ ಪ್ರಮುಖ ಶೈಲಿಗಳು: ನಮ್ಮ ದೇಶದ ದೇವಾಲಯ (Temple) ಗಳನ್ನು ಮುಖ್ಯವಾಗಿ ಎರಡು ಪ್ರಮುಖ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಉತ್ತರ ಭಾರತದ ಮಂದಿರಗಳನ್ನು ನಾಗರ (Nagara) ಶೈಲಿ ಮತ್ತು ದಕ್ಷಿಣ ಭಾರತದ ದೇವಸ್ಥಾನಗಳನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಇನ್ನು ಮೂರನೇಯದು ವೇಸರ ಶೈಲಿ. ಇದು ದ್ರಾವಿಡ ಮತ್ತು ನಾಗರ ಶೈಲಿ ಎರಡರ ಸಂಯೋಜನೆಯಿಂದ ಮೂಡಿಬಂದಿದೆ. ಇದನ್ನು ವ್ಯಮಿಶ್ರ ಎಂದು ಕೂಡ ಕರೆಯಲಾಗುತ್ತೆ.
ಬ್ರೇಕಪ್ ಬಳಿಕ ನೋವು ಮರೆತು ಮುಂದೆ ಸಾಗಲು ಇಲ್ಲಿವೆ Vastu tips
ಉತ್ತರ ಭಾರತದ ದೇವಾಲಯಗಳ ರಚನೆ : ಉತ್ತರ ಭಾರತದ ದೇವಸ್ಥಾನಗಳು ನಾಗರ ಶೈಲಿಯಲ್ಲಿರುತ್ತವೆ. ಈ ಶೈಲಿಯ ದೇವಾಲಯಗಳ ಅಗಲ ಕಡಿಮೆಯಿದ್ದು ಬಹಳ ಎತ್ತರವಾಗಿರುತ್ತವೆ. ಮೇಲೆ ಹೋದಂತೆ ಕಟ್ಟಡದ ಅಗಲ ಕಡಿಮೆಯಾಗುತ್ತಾ ಹೋಗುತ್ತದೆ. ಭಾರತದಲ್ಲಿ ಈ ಶೈಲಿಯ ಮಂದಿರಗಳ ಗರ್ಭ ಗುಡಿಯ ಮೇಲೆ ಶಿಖರವನ್ನು ಕೂಡ ಕಾಣಬಹುದು. ಇದು ಉತ್ತರ ಭಾರತದ ಮಂದಿರಗಳ ಹೆಗ್ಗುರುತಾಗಿದೆ. ನಾಗರ ಶೈಲಿಯ ದೇವಸ್ಥಾನಗಳಲ್ಲಿ ಸಭಾಭವನ ಮತ್ತು ಪ್ರದಕ್ಷಿಣೆ ಹಾಕುವಂತಹ ಸ್ಥಳಗಳು ಕೂಡ ಇರುತ್ತವೆ.
ದಕ್ಷಿಣ ಭಾರತದ ದೇವಾಲಯಗಳ ರಚನೆ: ದಕ್ಷಿಣ ಭಾರತದ ದೇವಾಲಯಗಳ ಗೋಪುರಗಳಲ್ಲಿ ಹೆಚ್ಚು ಆಕೃತಿಗಳು ಮತ್ತು ಅಲಂಕಾರಗಳನ್ನು ಕಾಣಬಹುದು. ಇದನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ದ್ರಾವಿಡ ಶೈಲಿಯಿಂದ ನಿರ್ಮಾಣದಲ್ಲಿ ಚೌಕ, ಆಯತ, ಅಂಡಾಕಾರ, ವೃತ್ತ, ಅಷ್ಟಭುಜದ ಆಕೃತಿಗಳು ಇರುತ್ತವೆ. ಅದರಲ್ಲಿ ಚೌಕಾಕಾರವನ್ನು ಸಾಮಾನ್ಯವಾಗಿ ಕೂಟ ಮತ್ತು ಚತುರಾಸ್ತ್ರ ಎಂದೂ, ಆಯತಾಕಾರವನ್ನು ಆಯತ್ರಸ್ತ್ರ ಎಂದೂ, ಅಂಡಾಕಾರವನ್ನು ಗಜಪ್ರಷ್ಟಿಯ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಆಕಾರಗಳು ಅಲ್ಲಿರುವ ದೇವತೆಗಳಿಗೆ ಅನುಗುಣವಾಗಿರುತ್ತದೆ.
ಅಯ್ಯಬ್ಬ, ಜಮದಗ್ನಿಯಂತೆ ಕೋಪಿಸಿಕೊಳ್ಳುತ್ತೀರಾ: ಬಿಡಲು ಇಲ್ಲಿವೆ ವಾಸ್ತು ಟಿಪ್ಸ್
ನಾಗರ ಶೈಲಿಯ ಮಂದಿರಗಳು : ನಾಗರ ಶೈಲಿಯ ‘ನಾಗರ’ ಎಂಬ ಪದವು ‘ನಗರ’ದಿಂದ ಬಂದಿದೆ. ಈ ವಾಸ್ತುಶಿಲ್ಪ ಶೈಲಿ ಹಿಮಾಲಯದಿಂದ ವಿಂದ್ಯ ಪರ್ವತಗಳವರೆಗೆ ಪ್ರಚಲಿತದಲ್ಲಿದ್ದ ಪ್ರಾಚೀನ ಶೈಲಿಯಾಗಿದೆ. ಇದನ್ನು 8ನೇ ಮತ್ತು 13ನೇ ಶಾತಮಾನದಲ್ಲಿದ್ದ ರಾಜವಂಶಸ್ತರು ನಿರ್ಮಿಸಿದ್ದಾರೆ. ನಾಗರ ಶೈಲಿಯ ದೇವಾಲಗಳು ಸಮತಟ್ಟಾದ ಕಟ್ಟಡದಿಂದ ಆರಂಭವಾಗಿ ಎತ್ತರದ ಶಿಖರದ ರಚನೆಯಲ್ಲಿ ಕೊನೆಗೊಳ್ಳುತ್ತದೆ. ಉತ್ತರ ಭಾರತದ ಬಹುತೇಕ ಮಂದಿರಗಳು ನಾಗರಶೈಲಿಯಲ್ಲೇ ನಿರ್ಮಾಣಗೊಂಡಿವೆ. ಅವುಗಳಲ್ಲಿ ಪುರಿ ಜಗನ್ನಾಥ, ಮೊದೇರಾ ಸೂರ್ಯ ಮಂದಿರ ಕೂಡ ಒಂದು.
ದ್ರಾವಿಡ ಶೈಲಿಯ ಮಂದಿರಗಳು : ಕೃಷ್ಣಾ ನದಿಯಿಂದ ಕನ್ಯಾಕುಮಾರಿಯವರೆಗಿನ ಹೆಚ್ಚಿನ ದೇವಸ್ಥಾನಗಳಲ್ಲಿ ದ್ರಾವಿಡ ಶೈಲಿಯು ಕಾಣಸಿಗುತ್ತದೆ. ದ್ರಾವಿಡ ಶೈಲಿಯ ದೇವಸ್ಥಾನಗಳಲ್ಲಿ ಗಡಿ ಗೋಡೆ, ಪ್ರವೇಶ ದ್ವಾರ, ಚೌಕ ಅಥವಾ ಅಷ್ಟಭುಜಾಕೃತಿಯ ಗರ್ಭಗುಡಿ, ಪಿರಮಿಡ್ ಶಿಖರ, ಮಂಟಪ ಮತ್ತು ಅಷ್ಟಭುಜಾಕೃತಿಯ ರಚನೆಗಳನ್ನು ಕಾಣಬಹುದು. ಈ ಶೈಲಿಯನ್ನು ಪಲ್ಲವ ವಂಶದವರು ಆರಂಭಿಸಿದರು. ಮಧುರೆ ಮೀನಾಕ್ಷಿ, ತಮಿಳುನಾಡಿನ ರಾಮೇಶ್ವರ ಮುಂತಾದವು ದ್ರಾವಿಡ ಶೈಲಿಯ ದೇವಾಲಯಗಳಾಗಿವೆ. ದಕ್ಷಿಣ ಭಾರತದ ಎಲ್ಲ ಮಂದಿರಗಳ ಶೈಲಿಯೂ ದ್ರಾವಿಡ ಶೈಲಿಯಲ್ಲಿಯೇ ಇರುವುದರಿಂದ ಪರಸ್ಪರ ಒಂದನ್ನೊಂದು ಹೋಲುತ್ತವೆ.
ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಮಂದಿರಗಳು ಅವುಗಳ ಶೈಲಿ ಮತ್ತು ರಚನೆಯಿಂದಲೇ ಭಿನ್ನವಾಗಿ ಕಾಣುತ್ತವೆ. ನಾಗರ ಮತ್ತು ದ್ರಾವಿಡ ಎರಡೂ ಶೈಲಿಗಳು ಗಮನಾರ್ಹವಾಗಿವೆ ಮತ್ತು ಭಾರತದ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಬೆನ್ನೆಲುಬಾಗಿ ಅದರ ಹಿರಿಮೆಯನ್ನು ಜಗತ್ತಿಗೆ ಎತ್ತಿಹಿಡಿಯುತ್ತದೆ.