ಅಯ್ಯಬ್ಬ, ಜಮದಗ್ನಿಯಂತೆ ಕೋಪಿಸಿಕೊಳ್ಳುತ್ತೀರಾ: ಬಿಡಲು ಇಲ್ಲಿವೆ ವಾಸ್ತು ಟಿಪ್ಸ್
ಕೋಪ ಎಲ್ಲಾ ಮನುಷ್ಯನಿಗೂ ಒಂದಲ್ಲಾ ಒಂದು ವಿಷ್ಯಕ್ಕೆ ಬಂದ್ದೇ ಬರುತ್ತೆ. ಅದು ಕೆಲವೊಮ್ಮೆ ವಿಪರೀತಕ್ಕೆ ಹೋಗಿ ನಮ್ಮ ಜೀವನವನ್ನೇ ಹಾಳು ಮಾಡಬಹುದು. ಹಾಗಾಗಿ ಅಂತಹ ಕೋಪವನ್ನು ಕಡಿಮೆ ಮಾಡಲು ಇಲ್ಲಿ ಕೆಲವು ವಾಸ್ತು ಕ್ರಮಗಳನ್ನು ಹೇಳಲಾಗಿದೆ. ನೀವು ಇವುಗಳನ್ನು ಟ್ರೈ ಮಾಡಿ ನೋಡಿ.
ಮನೆಯಲ್ಲಿರುವ ವಾಸ್ತು ದೋಷಗಳಿಂದಾಗಿ ನಕಾರಾತ್ಮಕತೆಯೂ ಹೆಚ್ಚಾಗುತ್ತೆ. ಇದು ಕುಟುಂಬ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಕೋಪದ (Anger) ವಿಷಯದಲ್ಲೂ ಇದೇ ರೀತಿಯಾಗುತ್ತೆ. ಮನೆಯಲ್ಲಿರುವ ವಾಸ್ತು ದೋಷಗಳಿಂದಾಗಿ ಕೋಪ ಬರುತ್ತೆ. ವಾಸ್ತು ತಜ್ಞರಿಂದ ಕೋಪ ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.
ಬೆಳಿಗ್ಗೆ ಎದ್ದು ಈ ಕೆಲಸ ಮಾಡಿ
ಬೆಳಿಗ್ಗೆ ನಿಮ್ಮ ಕಣ್ಣುಗಳನ್ನು ತೆರೆದ ನಂತರ, ಮೊದಲನೆಯದಾಗಿ, ನಿಮ್ಮ ಅಂಗೈಗಳನ್ನು ನೋಡುವಾಗ ನಿಮ್ಮ ಹೃದಯದಲ್ಲಿ ದೇವರನ್ನು ಪ್ರಾರ್ಥಿಸಿ. ಇದರ ನಂತರ, ಭೂಮಿ ತಾಯಿಗೆ ನಮಸ್ಕರಿಸಿ. ಇದನ್ನು ಮಾಡೋದ್ರಿಂದ ಮನಸ್ಸಿನಲ್ಲಿ ಒಂದು ಪಾಸಿಟಿವ್ ಎನರ್ಜಿ(Positive energy) ಸೃಷ್ಟಿಯಾಗುತ್ತೆ.
ಶುಚಿತ್ವ(Cleanliness)
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ಕೊಳೆಯಿಂದ ಕೋಪವೂ ಹೆಚ್ಚಾಗುತ್ತೆ. ಹಾಗಾಗಿ, ಮನೆಯ ಪ್ರತಿಯೊಂದು ಮೂಲೆಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡೋದ್ರಿಂದ ಮನಸ್ಸು ಶಾಂತಿಯಿಂದ ಕೂಡಿರುತ್ತೆ. ಆಗ ಕೋಪ ತಾನೇ ತಾನಾಗಿ ಕಡಿಮೆಯಾಗುತ್ತೆ.
ಕಲ್ಲು ಉಪ್ಪು(Rock salt)
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ಮೂಲೆಯಲ್ಲಿ ಬಟ್ಟಲಿನೊಳಗೆ ಕಲ್ಲು ಉಪ್ಪನ್ನು ಇರಿಸಿ ಅಥವಾ ಮನೆಯನ್ನು ಕಲ್ಲು ಉಪ್ಪಿನಿಂದ ಒರೆಸಿ. ಇದು ವಾತಾವರಣವನ್ನು ಶಾಂತವಾಗಿರಿಸುತ್ತೆ . ಇದರಿಂದ ಮನಸ್ಸು ಸಹ ಶಾಂತವಾಗುತ್ತೆ.
ಗೋಡೆಗಳ ಬಣ್ಣ(Wall colour)
ಮಲಗುವ ಕೋಣೆಯ ಗೋಡೆಗಳಿಗೆ ಎಂದಿಗೂ ಕೆಂಪು ಅಥವಾ ಯಾವುದೇ ಗಾಢ ಬಣ್ಣ ಬಳಿಯಬಾರದು. ಗಾಢ ಬಣ್ಣವು ಮನಸ್ಸಿನಲ್ಲಿ ಕಿರಿಕಿರಿ ಮತ್ತು ಕೋಪವನ್ನು ಉಂಟುಮಾಡುತ್ತೆ. ಹಾಗಾಗಿ ತಿಳಿ ಬಣ್ಣಗಳನ್ನು ಆಯ್ಕೆಮಾಡಿ, ಅದರಲ್ಲೂ ಬಿಳಿ ಬಣ್ಣ ಬೆಸ್ಟ್.
ದೀಪ ಬೆಳಗಿಸಿ(Light a lamp)
ಬೆಳಿಗ್ಗೆ ಮತ್ತು ಸಂಜೆ ಮನೆಯ ಪೂರ್ವ ದಿಕ್ಕಿನಲ್ಲಿ ದೀಪ ಬೆಳಗಿಸಿ. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತೆ ಮತ್ತು ವಾತಾವರಣವನ್ನು ಶಾಂತವಾಗಿರಿಸುತ್ತೆ. ಆದ್ದರಿಂದ ಕೋಪ ಖಂಡಿತವಾಗಿಯೂ ಕಡಿಮೆ ಆಗೇ ಆಗುತ್ತೆ.
ಮಲಗುವ ದಿಕ್ಕು(Sleeping direction)
ಆಗ್ನೇಯ ದಿಕ್ಕಿನಲ್ಲಿ ನಿಮ್ಮ ತಲೆಯನ್ನು ಇಟ್ಟುಕೊಂಡು ಮಲಗೋದು ಕೋಪವನ್ನು ಹೆಚ್ಚಿಸುತ್ತೆ. ಆದ್ದರಿಂದ, ಈ ದಿಕ್ಕಿನಲ್ಲಿ ನಿಮ್ಮ ತಲೆಯನ್ನು ಇಟ್ಟುಕೊಂಡು ಮಲಗಬೇಡಿ.
ಚಂದ್ರನಿಗೆ(Moon) ಅರ್ಘ್ಯವನ್ನು ನೀಡಿ
ನೀವು ತುಂಬಾ ಕೋಪಗೊಂಡಿದ್ದರೆ, ಪ್ರತಿದಿನ ರಾತ್ರಿ ಚಂದ್ರನಿಗೆ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿ. ಚಂದ್ರನಿಗೆ ಅರ್ಘ್ಯವನ್ನು ನೀಡಿ. ಇದನ್ನು ಮಾಡೋದರಿಂದ, ನಿಮ್ಮ ಮನಸ್ಸು ಶಾಂತವಾಗಿರುತ್ತೆ. ನೀವು ತುಂಬಾ ಕೋಪಗೊಂಡರೆ, ಖಂಡಿತವಾಗಿಯೂ ಈ ವಾಸ್ತು ಪರಿಹಾರಗಳನ್ನು ಪ್ರಯತ್ನಿಸಿ ನೋಡಿ .